Android OS 10: ​ಆ್ಯಂಡ್ರಾಯ್ಡ್​​ 10 ಓಎಸ್​ ಬಿಡುಗಡೆ; ಯಾವ ಸ್ಮಾರ್ಟ್​ಫೋನಿಗೆ ಸಿಗಲಿದೆ ಈ ಫೀಚರ್​?

ಗೂಗಲ್​ ಬಿಡುಗಡೆ ಮಾಡಿದ ಆ್ಯಂಡ್ರಾಯ್ಡ್​ 10 ಓಎಸ್​ ಫೀಚರ್ಸ್​ ಬಗೆಗೆ ಸ್ಮಾರ್ಟ್​ಫೋನ್​ ಪ್ರಿಯರಲ್ಲಿ ಕುತೂಹಲತೆಯನ್ನು ಮೂಡಿಸಿದೆ. ಈ ಹಿಂದೆ ಜೆಲ್ಲಿಬಿನ್​, ಕಿಟ್​ಕ್ಯಾಟ್​, ಓರಿಯೋ ಮುಂತಾದ ಸಿಹಿ ತಿನಿಸುಗಳ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದವು. ಇದೀಗ ಅಂಕೆಗಳಲ್ಲಿ ಒಎಸ್​ ಆವೃತ್ತಿಯನ್ನು ಪರಿಚಯಿಸಿದೆ.

news18-kannada
Updated:September 5, 2019, 10:58 AM IST
Android OS 10: ​ಆ್ಯಂಡ್ರಾಯ್ಡ್​​ 10 ಓಎಸ್​ ಬಿಡುಗಡೆ; ಯಾವ ಸ್ಮಾರ್ಟ್​ಫೋನಿಗೆ ಸಿಗಲಿದೆ ಈ ಫೀಚರ್​?
​ಆ್ಯಂಡ್ರಾಯ್ಡ್​​ 10 ಓಎಸ್
news18-kannada
Updated: September 5, 2019, 10:58 AM IST
ಗೂಗಲ್​ ಆ್ಯಂಡ್ರಾಯ್ಡ್​ 10 ಓಎಸ್​ ಆಪರೇಟಿಂಗ್​ ಸಿಸ್ಟಂ​ ಅಧಿಕೃತವಾಗಿ ಬಿಡುಗಡೆಯಾಗಿದೆ. ಈಗಾಗಲೇ ಹಲವು ಅಪ್​ಡೇಟ್​ ಹಂತಗಳನ್ನು ಕಂಡಿರುವ ಆ್ಯಂಡ್ರಾಯ್ಡ್​ ಓಎಸ್​​ ಸ್ಮಾರ್ಟ್​ಫೋನ್​ಗಳಿಗೆ ಹೊಸ ಫೀಚರ್​ ಅನ್ನು ಪರಿಚಯಿಸಿದೆ. ಆದರೆ ಬಿಡುಗಡೆಯಾದ ಆ್ಯಂಡ್ರಾಯ್ಡ್​ ಓಎಸ್​​ನಲ್ಲಿ ಯಾವೆಲ್ಲಾ ಫೀಚರ್ಸ್​ ಇರಲಿದೆ? ಯಾವ ಸ್ಮಾರ್ಟ್​ಪೋನ್​ಗಳಲ್ಲಿ ಆ್ಯಂಡ್ರಾಯ್ಡ್​ 10 ಓಎಸ್​ ಕಾರ್ಯನಿರ್ವಹಿಸಲಿದೆ.? ಇಲ್ಲಿದೆ ಮಾಹಿತಿ.

ಗೂಗಲ್​ ಬಿಡುಗಡೆ ಮಾಡಿದ ಆ್ಯಂಡ್ರಾಯ್ಡ್​ 10 ಓಎಸ್​ ಫೀಚರ್ಸ್​ ಬಗೆಗೆ ಸ್ಮಾರ್ಟ್​ಫೋನ್​ ಪ್ರಿಯರಲ್ಲಿ ಕುತೂಹಲತೆಯನ್ನು ಮೂಡಿಸಿದೆ. ಈ ಹಿಂದೆ ಜೆಲ್ಲಿಬಿನ್​, ಕಿಟ್​ಕ್ಯಾಟ್​, ಓರಿಯೋ ಮುಂತಾದ ಸಿಹಿ ತಿನಿಸುಗಳ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದವು. ಇದೀಗ ಅಂಕೆಗಳಲ್ಲಿ ಒಎಸ್​ ಆವೃತ್ತಿಯನ್ನು ಪರಿಚಯಿಸಿದೆ.

ಲೊಕೇಶನ್​​ ಆಕ್ಸಸ್​ 

ಆ್ಯಂಡ್ರಾಯ್ಡ್​ 10 ಓಎಸ್​​ನಲ್ಲಿ ಲೊಕೇಶನ್​ ಆಕ್ಸಸ್​ ಆಯ್ಕೆಯನ್ನು ನೀಡಲಾಗಿದೆ.  ಬಹುತೇಕ ಸ್ಮಾರ್ಟ್​ಪೊನ್​ಗಳು ಲೊಕೇಶನ್​ ಆ್ಯಕ್ಸಸ್​ ಕೇಳುತ್ತವೆ. ಬಳಕೆದಾರರು ಕೂಡ ಆಕ್ಸಸ್​ ನೀಡಿರುತ್ತಾರೆ. ಆದರೆ ಆ್ಯಪ್​ ಬಳಕೆ ಮಾಡದೇ ಇದ್ದಾಗ ಬಳಕೆದಾರರ ಲೊಕೇಶನ್​​ ಟ್ರಾಕ್​ ಮಾಡುತ್ತಿರುತ್ತದೆ. ಹೊಸ ಆ್ಯಂಡ್ರಾಯ್ಡ್​  10 ಓಎಸ್​​ ಬಳಕೆದಾರರಿಗೆ ಲೊಕೇಶನ್​​ ಕಂಟ್ರೋಲ್​​ ಮಾಡುವ ಹೆಚ್ಚಿನ ಆಯ್ಕೆಯನ್ನು ಒದಗಿಸಲಿದ್ದು, ಆ್ಯಪ್​ ಬಳಸದೇ ಇದ್ದಾಗ ಲೊಕೇಶನ್​ ಟ್ರಾಕ್​ ಮಾಡುವುದಿಲ್ಲ.

ಗ್ಯಾಲರಿ ಆ್ಯಕ್ಸಸ್​

ಕೆಲ ಸ್ಮಾರ್ಟ್​ಫೋನ್​ಗಳಲ್ಲಿ ಕ್ವಾಂಟ್ಯಾಕ್ಟ್​​ ಮತ್ತು ಗ್ಯಾಲರಿಗಳ ಆಕ್ಸಸ್​ ಕೇಳುತ್ತವೆ. ಹಾಗೇಯೇ, ಬಳಕೆದಾರರ ಸ್ಮಾರ್ಟ್​ಫೋನಿನಲ್ಲಿ ಏನೇ ಬದಲಾವನೆ ಮಾಡಿದರೂ ಅನುಮತಿ ಕೇಳುವ ಆಯ್ಕೆ ಇರಲಿದೆ.

ಬಬಲ್ಸ್​ ನೋಟಿಫಿಕೇಶನ್​
Loading...

ಆ್ಯಂಡ್ರಾಯ್ಡ್​ 10 ಓಎಸ್​ ನಲ್ಲಿ ಹೊಸದಾದ ಬಬಲ್ಸ್​ ನೋಟಿಫಿಕೇಶನ್​ ಆಯ್ಕೆಯೊಂದು ಸೇರಿದೆ.  ಸ್ಮಾರ್ಟ್​ಫೋನ್​ ಬಳಸುವಾಗ ಬರುತ್ತಿರುವ ನೋಟಿಫಿಕೇಶನ್​ ನೋಡುವ ಆಯ್ಕೆಯನ್ನು ನೀಡಿದೆ.

ಇನ್ನು ಗೂಗಲ್ ಪಿಕ್ಸೆಲ್, ಪಿಕ್ಸೆಲ್ ಎಕ್ಸ್ಎಲ್ , ಪಿಕ್ಸೆಲ್ 2 ,  ಪಿಕ್ಸೆಲ್ 2 ಎಕ್ಸ್ಎಲ್, ಪಿಕ್ಸೆಲ್ 3, ಪಿಕ್ಸೆಲ್ 3 ಎಕ್ಸ್ಎಲ್, ಪಿಕ್ಸೆಲ್ 3 ಎ, ಪಿಕ್ಸೆಲ್ 3 ಎ ಎಕ್ಸ್ಎಲ್, ರೆಡ್ಮಿ ಕೆ 20 ಪ್ರೊ ಸ್ಮಾರ್ಟ್​ಫೋನ್​ನಲ್ಲಿ ಆ್ಯಂಡ್ರಾಯ್ಡ್​ 10 ಓಎಸ್​ ಕಾರ್ಯನಿರ್ವಹಿಸಲಿದೆ. ಅಂತೆಯೇ, ಮಾರುಕಟ್ಟೆಗೆ ಕಾಲಿರಿಸಲು ಸಜ್ಜಾದ ಸ್ಯಾಮ್​ಸಂಗ್​ , ಹುವಾವೆ ಮೇಟ್​ ಎಕ್ಸ್​ ಫೋಲ್ಡೇಬಲ್​ ಸ್ಮಾರ್ಟ್​ಫೋನ್​ಗಳಲ್ಲೂ ಆ್ಯಂಡ್ರಾಯ್ಡ್​ 10 ಓಎಸ್​ ಕಾರ್ಯ ನಿರ್ವಹಿಸಲಿದೆ.
First published:September 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...