• Home
  • »
  • News
  • »
  • tech
  • »
  • Anand Mahindra: ಇಂಟರ್‌ನೆಟ್ ನಿಮ್ಮನ್ನು ಗಮನಿಸುತ್ತಿದೆ ಹುಷಾರ್! ಹೀಗಂದಿದ್ದೇಕೆ ಆನಂದ್ ಮಹೀಂದ್ರಾ?

Anand Mahindra: ಇಂಟರ್‌ನೆಟ್ ನಿಮ್ಮನ್ನು ಗಮನಿಸುತ್ತಿದೆ ಹುಷಾರ್! ಹೀಗಂದಿದ್ದೇಕೆ ಆನಂದ್ ಮಹೀಂದ್ರಾ?

ಉದ್ಯಮಿ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ

ಹೊಸ ವೀಡಿಯೋವೊಂದನ್ನು ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಈಗಿನ ತಂತ್ರಜ್ಞಾನ ನಮಗೆ ಹೇಗೆ ಅನುಕೂಲಕರವಾಗಿದೆಯೋ, ಅದೇ ರೀತಿಯಲ್ಲಿ ಅನಾನುಕೂಲತೆಗಳು ಸಹ ಇವೆ ಅಂತ ವಿಡಿಯೋದಲ್ಲಿ ಹೇಳಿದ್ದಾರೆ.

  • Share this:

    ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಒಂದಲ್ಲ ಒಂದು ಪ್ರೇರಣೆ (Motivation) ನೀಡುವಂತಹ ಮತ್ತು ಸ್ವಾರಸ್ಯಕರವಾದ ವಿಷಯವನ್ನು ಹಂಚಿಕೊಳ್ಳುತ್ತಾ ತುಂಬಾನೇ ಸಕ್ರಿಯವಾಗಿರುವ ಪ್ರಭಾವಿ ವ್ಯಕ್ತಿಗಳಲ್ಲಿ (An influential person) ಮಹೀಂದ್ರಾ ಕಂಪನಿಯ (Mahindra company) ಚೇರ್ಮನ್ ಆದ ಆನಂದ್ ಮಹೀಂದ್ರಾ ಅವರು ಒಬ್ಬರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬರೀ ಸ್ವಾರಸ್ಯಕರವಾದ ಪೋಸ್ಟ್ ಗಳನ್ನು (Post) ಹಂಚಿಕೊಳ್ಳುವುದಷ್ಟೇ ಅಲ್ಲದೆ, ಆನಂದ್ ಮಹೀಂದ್ರಾ ಅವರು ತಮ್ಮನ್ನು ಟ್ಯಾಗ್ (tag) ಮಾಡಿ ಯಾರಾದರೂ ಹೊಸ ವಿಷಯವನ್ನು ಹೇಳಿದರೆ ಅಥವಾ ಅವರು ಮಹೀಂದ್ರಾ ಅವರ ವಾಹನಗಳನ್ನು ಖರೀದಿಸಿದರೂ ಸಹ ಅವರಿಗೆ ಒಂದೊಳ್ಳೆ ಮಾತಿನೊಂದಿಗೆ ಅಭಿನಂದನೆ ಸಹ ಹೇಳ್ತಾರೆ.


    ಅನುಕೂಲ ಮತ್ತು ಅನಾನುಕೂಲ


    ಈಗ ಮತ್ತೊಂದು ಹೊಸ ವೀಡಿಯೋವೊಂದನ್ನು ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದರಲ್ಲಿನ ವೀಡಿಯೋ ಈಗಿನ ತಂತ್ರಜ್ಞಾನ ನಮಗೆ ಹೇಗೆ ಅನೇಕ ವಿಧಗಳಲ್ಲಿ ಅನುಕೂಲಕರವಾಗಿದೆಯೋ, ಅದೇ ರೀತಿಯಲ್ಲಿ ಇದರಿಂದ ಕೆಲವು ಅನಾನುಕೂಲತೆಗಳು ಸಹ ಇವೆ. ಅದಕ್ಕೆ ಸ್ವಲ್ಪ ಹುಷಾರಾಗಿರಿ ಅಂತ ಎಚ್ಚರಿಸುವ ಸಂದೇಶವನ್ನು ಒಳಗೊಂಡಿದೆ ಅಂತ ಹೇಳಬಹುದು. ನಿಜಕ್ಕೂ ತಂತ್ರಜ್ಞಾನ ಜನರಿಗೆ ಎಷ್ಟೊಂದು ಅನುಕೂಲ ಮಾಡಿಕೊಟ್ಟಿದೆ ಅಂತ ಹೇಳಿದರೆ ಪ್ರತಿಯೊಂದು ಕೆಲಸವನ್ನು ಮೊಬೈಲ್ ನಲ್ಲಿಯೇ ಮಾಡಿಕೊಳ್ಳಬಹುದು.


    ಹಾಗಂತ ಬರೀ ಅನುಕೂಲತೆಗಳೆ ಇವೆ ಅಂತ ಹೇಳಿದರೆ ತಪ್ಪಾಗುತ್ತದೆ. ನಾವು ಈ ಇಂಟರ್ನೆಟ್ ನಲ್ಲಿ ಹುಡುಕಲು ಹಾಕುವ ವಿಷಯದಿಂದ ಹಿಡಿದು ನೆಟ್ ಬ್ಯಾಂಕಿಂಗ್ ವರೆಗೂ ಎಲ್ಲಾ ಬ್ರೌಸಿಂಗ್ ನಿಂದಲೂ ನಮ್ಮ ವೈಯುಕ್ತಿಕ ಮಾಹಿತಿಯನ್ನು ಸಹ ಈ ಇಂಟರ್ನೆಟ್ ಪಡೆಯಬಹುದು ಅಂತ ಹೇಳಲಾಗುತ್ತದೆ. ಇಷ್ಟೇ ಅಲ್ಲದೆ ನಾವು ಅಲ್ಲಿ ಹಾಕುವ ಮೊಬೈಲ್ ಸಂಖ್ಯೆಯಿಂದ ಸಹ ನಮ್ಮ ಬಗ್ಗೆ ತುಂಬಾ ಮಾಹಿತಿಯನ್ನು ಇವರು ಪಡೆಯಬಹುದಾಗಿದೆ. ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ವೀಡಿಯೋ ಈ ತಂತ್ರಜ್ಞಾನದ ಇನ್ನೊಂದು ಮುಖವನ್ನು ತೋರಿಸುತ್ತದೆ ಅಂತ ಹೇಳಬಹುದು.


    ಮಹೀಂದ್ರಾ ಅವರು ಹಂಚಿಕೊಂಡ ವೀಡಿಯೋದಲ್ಲಿ ಅವರ ಮಾತುಗಳು ಹೀಗಿತ್ತು


    "ಗೂಗಲ್ ಪಿಜ್ಜಾ" ಮೂಲಕ ಪಿಜ್ಜಾ ಆರ್ಡರ್ ಮಾಡುವ ವ್ಯಕ್ತಿಯೊಂದಿಗೆ ಈ ವೀಡಿಯೋ ಶುರುವಾಗುತ್ತದೆ. ಅವರು "ಗೂಗಲ್ ಪಿಜ್ಜಾ" ಪ್ರತಿನಿಧಿಯೊಂದಿಗೆ ತಮ್ಮ ಸಂಭಾಷಣೆಯನ್ನು ಮುಂದುವರಿಸುತ್ತಿದ್ದಂತೆ, ಸರ್ಚ್ ಇಂಜಿನ್ ಗೆ ಅವರ ಆರೋಗ್ಯ ಸಮಸ್ಯೆಗಳು ಮತ್ತು ಬ್ಯಾಂಕ್ ಹೇಳಿಕೆಗಳು ಸೇರಿದಂತೆ ಅವರ ವೈಯಕ್ತಿಕ ವಿವರಗಳ ಬಗ್ಗೆ ತಿಳಿದಿದೆ ಎಂದು ಅವರು ಅರಿತುಕೊಳ್ಳುತ್ತಾರೆ.


    ನಿಜವಾಗಿಯೂ ಯೋಚನೆ ಮಾಡಲು ಪ್ರೇರೇಪಿಸುವ ಈ ವೀಡಿಯೋಗೆ "ದೊಡ್ಡಣ್ಣ ಯಾವಾಗಲೂ ನೋಡುತ್ತಿರುತ್ತಾನೆ. 21ನೇ ಶತಮಾನದ ವ್ಯಾಖ್ಯಾನಿಸುವ ಭಾವನೆಯು ಕ್ಲಾಸ್ಟ್ರೋಫೋಬಿಯಾ (ಒಂದು ರೀತಿಯ ಭಯ) ಆಗಿರುತ್ತದೆ" ಎಂದು ಹೇಳಿದ್ದಾರೆ.


    ಈ ವೀಡಿಯೋ ಟ್ವಿಟ್ಟರ್ ನಲ್ಲಿ ಸಾಕಷ್ಟು ಜನರ ಗಮನವನ್ನು ಸೆಳೆಯಿತು. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋದೊಂದಿಗೆ ಸಂಬಂಧ ಹೊಂದಿರಬಹುದಾದಂತಹ ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.


    "ಇದು ನಿಜ, ಅವರಿಗೆ ನಮ್ಮ ಬಗ್ಗೆ ತುಂಬಾ ತಿಳಿದಿದೆ. ಈ ಕಾರಣಕ್ಕಾಗಿಯೇ ನಾನು ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ನಲ್ಲಿ ಲಭ್ಯವಿದ್ದೇನೆ ಆದರೆ ಗೂಗಲ್ ಅನ್ನು ಬಳಸುವಾಗ ಸಹ ಸಾರ್ವಜನಿಕವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ, ನಾನು ಅದನ್ನು ಅಜ್ಞಾತ ಮೋಡ್ ಗೆ ಹಾಕಿಕೊಂಡು ಬಳಸುತ್ತೇನೆ" ಎಂದು ಬಳಕೆದಾರರೊಬ್ಬರು ಹೇಳಿದರು.


    ಏನ್ ಹೇಳ್ತಿದ್ದಾರೆ ನೆಟ್ಟಿಗರು ಇದರ ಬಗ್ಗೆ?


    ಇನ್ನೊಬ್ಬರು "ಗೂಗಲ್ ಮಾನವರ ಗೌಪ್ಯತೆಯನ್ನು ಆಕ್ರಮಿಸುವ ಚೌಕಟ್ಟನ್ನು ರಚಿಸಿದೆ. ಅವರು ಹಣ ಗಳಿಸುವುದರ ಹೊರತಾಗಿ ಅನೇಕ ಕಾರಣಗಳಿಗಾಗಿ ದಶಕಗಳಿಂದ ಇದನ್ನು ಮಾಡುತ್ತಿದ್ದಾರೆ. ಅನೇಕ ಕಂಪನಿಗಳು ಸಹ ಹೀಗೆ ಮಾಡಲು ಶುರುಮಾಡಿವೆ" ಅಂತ ಕಾಮೆಂಟ್ ಮಾಡಿದ್ದಾರೆ.


    ಮೂರನೇ ವ್ಯಕ್ತಿ "ಹೌದು, ಡೇಟಾದ ರೂಪದಲ್ಲಿ ಎಲ್ಲವೂ ಎಐ ಉಪಕರಣಗಳು ಅವುಗಳನ್ನು ಬಳಸುವ ಡೇಟಾಬೇಸ್ ಗೆ ಹೋಗುತ್ತದೆ" ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರಂತೂ ಈ ಸಾಮಾಜಿಕ ಮಾಧ್ಯಮಗಳನ್ನು ಮೊದಲು ತೊರೆಯಲಿದ್ದಾರೆ ಎಂದು ಹೇಳಿದರು. ವೈರಲ್ ಆಗಿರುವ ಈ ವೀಡಿಯೋವನ್ನು ಲಕ್ಷಾಂತರ ಜನರು ನೋಡಿದ್ದಾರೆ.

    First published: