iPhone 14 Pro: ಕಡಿಮೆ ಬೆಲೆಗೆ ಐಫೋನ್ ಖರೀದಿಸಲು ದುಬೈಗೆ ತೆರಳಿದ ಕೊಚ್ಚಿಯ ಯುವಕ!

ಕೊಚ್ಚಿಯ ಆ್ಯಪಲ್‌ನ ತೀವ್ರ ಅಭಿಮಾನಿ ಧೀರಜ್ ಪಲ್ಲಿಯಿಲ್ ಐಫೋನ್ 14 ಪ್ರೊ ಬಗ್ಗೆ ತುಂಬಾ ಆಸಕ್ತರಾಗಿದ್ದರು. ಭಾರತದಲ್ಲಿ ಹೊಸ ಐಫೋನ್ ಮಾದರಿಯನ್ನು ಖರೀದಿಸಿದವರಲ್ಲಿ ತಾವೇ ಮೊದಲಿಗರಾಗಿರಬೇಕೆಂದು ಬಯಸಿ ಫೋನ್ ಪಡೆಯಲು ಧೀರಜ್ ದುಬೈಗೆ ಪ್ರಯಾಣಿಸಿದ್ದಾಗಿ ಧೀರಜ್ ತಿಳಿಸಿದ್ದಾರೆ.

ಐಫೋನ್ ಖರೀದಿಸಲು ದುಬೈಗೆ ತೆರಳಿದ ಕೊಚ್ಚಿಯ ವ್ಯಕ್ತಿ

ಐಫೋನ್ ಖರೀದಿಸಲು ದುಬೈಗೆ ತೆರಳಿದ ಕೊಚ್ಚಿಯ ವ್ಯಕ್ತಿ

  • Share this:
ಹೊಸ ಐಫೋನ್‌ಗಳ (iPhone) ನಾಲ್ಕು ಮಾದರಿಗಳು ಬಿಡುಗಡೆಗೊಂಡಿವೆ. ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್‌ಗಳಾಗಿವೆ. ವಿಶೇಷತೆಗಳನ್ನು ಪರಿಗಣಿಸುವಾಗ ಐಫೋನ್ 14 ಪ್ರೊ ಆಕರ್ಷಕ ನೋಟವನ್ನು ಹೊಂದಿದ್ದು ಪ್ರೊ ಮ್ಯಾಕ್ಸ್‌ ಒಳಗೊಂಡಿರುವ ಅತ್ಯುತ್ತಮ ಫೀಚರ್ ಅನ್ನು ಕಡಿಮೆ ಬೆಲೆಯಲ್ಲಿ ಒದಗಿಸುತ್ತಿದೆ. ಕೊಚ್ಚಿಯ (Kochi) ಆ್ಯಪಲ್‌ನ ತೀವ್ರ ಅಭಿಮಾನಿ (Fans) ಧೀರಜ್ ಪಲ್ಲಿಯಿಲ್ ಐಫೋನ್ 14 ಪ್ರೊ ಬಗ್ಗೆ ತುಂಬಾ ಆಸಕ್ತರಾಗಿದ್ದರು. ಭಾರತದಲ್ಲಿ ಹೊಸ ಐಫೋನ್ ಮಾದರಿಯನ್ನು ಖರೀದಿಸಿದವರಲ್ಲಿ ತಾವೇ ಮೊದಲಿಗರಾಗಿರಬೇಕೆಂದು ಬಯಸಿ ಫೋನ್ ಪಡೆಯಲು ಧೀರಜ್ ದುಬೈಗೆ (Dubai) ಪ್ರಯಾಣಿಸಿದ್ದಾಗಿ ಧೀರಜ್ ತಿಳಿಸಿದ್ದಾರೆ.

ಐಫೋನ್ 14 ಪ್ರೊ ಖರೀದಿಸಲು ದುಬೈಗೆ ತೆರಳಿದ ಭೂಪ
ಐಫೋನ್ ಪ್ರೊ 512 ಜಿಬಿ ಆವೃತ್ತಿಯನ್ನು ತಮ್ಮದಾಗಿಸಿಕೊಳ್ಳಲು ದುಬೈಗೆ ತೆರಳುತ್ತಿರುವುದಾಗಿ ಧೀರಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಭಾರತದಲ್ಲಿ ಪ್ರೊ ಬೆಲೆ 1,59,900 ಆಗಿದ್ದು, ದುಬೈನಲ್ಲಿ ಅತಿ ಕಡಿಮೆ ಬೆಲೆಗೆ ದೊರೆಯುತ್ತದೆ.

ಪಲ್ಲಿಯಿಲ್ ಅವರು ಐಫೋನ್ ಮಾದರಿಯನ್ನು 5,949 AED ಗೆ ಖರೀದಿಸಿದ್ದು ಭಾರತೀಯ ಬೆಲೆ ರೂ 1,29,000 ಆಗಿದೆ. ಹೆಚ್ಚಿನವರಿಗೆ ಇದೊಂದು ದೊಡ್ಡ ವಿಷಯ ಎಂಬುದಾಗಿ ಕಾಣುತ್ತದೆಯಾದರೂ ದುರಾದೃಷ್ಟವಶಾತ್, ಪಲ್ಲಿಯಿಲ್ ಹೆಚ್ಚುವರಿ ಹಣ (ರೂ 10,000) ಪಾವತಿಸುವುದರ ಮೂಲಕ ನಷ್ಟಕ್ಕೊಳಗಾದರು. ಇದು ಹೇಗಾಯಿತು ಎಂಬುದನ್ನ ಈ ಲೇಖನದಿಂದಲೇ ತಿಳಿದುಕೊಳ್ಳೋಣ

ಹೆಚ್ಚುವರಿ ರೂ 10,000 ಖರ್ಚು
ಬೇರೆಯವರಿಗಿಂತ ಭಿನ್ನವಾಗಿ ಐಫೋನ್ ಪ್ರೊ ಮಾದರಿಯನ್ನು ಖರೀದಿಸಲು ಧೀರಜ್ ಪಲ್ಲಿಯಿಲ್ ದುಬೈಗೆ ಪ್ರಯಾಣಿಸಿದರು. ಎರಡೂ ಕಡೆಯ ಪ್ರಯಾಣಕ್ಕಾಗಿ ಧೀರಜ್ ರೂ 40,000 ಪಾವತಿಸಿದ್ದಾರೆ. ಅಗ್ಗದ ಬೆಲೆಯಲ್ಲಿ ಐಫೋನ್ ಖರೀದಿಸಲು ವಿದೇಶಕ್ಕೆ ಪ್ರಯಾಣಿಸಿದ ಧೀರಜ್ ಏಕೈಕ ವ್ಯಕ್ತಿಯೇನಲ್ಲ, ಫೋನ್ ಖರೀದಿಸಲು ವಿದೇಶಕ್ಕೆ ಪ್ರಯಾಣಿಸುವ ಕೆಲವೇ ಜನರಲ್ಲಿ ಒಬ್ಬರಾಗಿದ್ದಾರೆ ಅಷ್ಟೇ.

ಇದನ್ನೂ ಓದಿ: WhatsApp Features: ಹೀಗೆ ಮಾಡಿದ್ರೆ ನೀವು ವಾಟ್ಸಾಪ್‌ ಆನ್‌ಲೈನ್‌ನಲ್ಲಿದ್ದೀರಾ? ಆಫ್‌ಲೈನ್‌ನಲ್ಲಿದ್ದೀರಾ ಅಂತ ಗೊತ್ತಾಗೋದಿಲ್ಲ!

ಸಾಮಾನ್ಯವಾಗಿ ಹೊಸ ಐಫೋನ್ ಖರೀದಿಸಲು ಬಯಸುವ ಜನರು ರಜಾದಿನವನ್ನು ಇದಕ್ಕಾಗಿ ಆಯ್ಕೆಮಾಡುತ್ತಾರೆ. ಇದೊಂದು ನ್ಯಾಯೋಚಿತ ಕಾರಣವಾಗಿಯೇ ಕಾಣುತ್ತದೆ. ಆದರೆ ಧೀರಜ್ ಕೊಂಚ ದುಂದುವೆಚ್ಚವನ್ನೇ ಮಾಡಿದ್ದಾರೆ ಎಂದೆನಿಸುತ್ತದೆ. ಒಟ್ಟಾರೆಯಾಗಿ ನಾವು ಲೆಕ್ಕಹಾಕಿದಾಗ ಪಲ್ಲಿಯಿಲ್ ಐಫೋನ್ 14 ಪ್ರೊ 512 ಜಿಬಿ ಆವೃತ್ತಿಗೆ ರೂ 1,69,000 ಖರ್ಚುಮಾಡಿದ್ದು ಸರಿಸುಮಾರು ರೂ 10,000 ಹೆಚ್ಚಾಗಿಯೇ ವಿನಿಯೋಗಿಸಿದ್ದಾರೆ ಎಂದಾಯಿತು.

ಈ ಬಗ್ಗೆ ಪತ್ರಿಕೆಗಳು ಪಲ್ಲಿಯಿಲ್ ಬಳಿ ಮಾತನಾಡಿದಾಗ ನಾನು ಐಫೋನ್‌ನ ಅಪ್ಪಟ ಅಭಿಮಾನಿಯಾಗಿದ್ದು, ಹೊಸ ಐಫೋನ್ ಬಿಡುಗಡೆಯಾದಾಗಲೆಲ್ಲಾ ನಾನು ದುಬೈಗೆ ತೆರಳಿ ಖರೀದಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ವರ್ಷದ ಖರೀದಿಯ ಕುರಿತು ಅನಿಸಿಕೆ ಹಂಚಿಕೊಂಡ ಪಲ್ಲಿಯಿಲ್, ಐಫೋನ್ 14 ಪ್ರೊ ಖರೀದಿಸಲು ತಾವು ನಾಲ್ಕು ದಿನಗಳ ಸರತಿ ಸಾಲಿನಲ್ಲಿ ಕಾದಿರುವುದಾಗಿ ಬಹಿರಂಗಪಡಿಸಿದ್ದಾರೆ. ದುಬೈನ ಮಿರ್ಡಿಫ್ ಸಿಟಿ ಸೆಂಟರ್‌ನಲ್ಲಿರುವ ಪ್ರೀಮಿಯಂ ಆ್ಯಪಲ್ ರಿಸೆಲ್ಲರ್‌ನಿಂದ ಫೋನ್ ಅನ್ನು ಖರೀದಿಸಿದ್ದಾರೆ.

ಐಫೋನ್‌ನ ಅಪ್ಪಟ ಅಭಿಮಾನಿ
2017 ರಲ್ಲಿ ಐಫೋನ್ 8 ಬಿಡುಗಡೆಯ ಸಮಯದಲ್ಲಿ ಕೂಡ ಪಲ್ಲಿಯಿಲ್ ಐಫೋನ್ ಖರೀದಿಗೆ ದುಬೈಗೆ ತೆರಳಿದ್ದರು ಎಂದು ತಿಳಿಸಿದ್ದಾರೆ. ಭಾರತದಲ್ಲಿ ಐಫೋನ್ 11 ಪ್ರೊ ಮ್ಯಾಕ್ಸ್ ಮಾರಾಟ ಪ್ರಾರಂಭವಾದ ವಾರಗಳ ಮುಂಚೆಯೇ ದೀಪಕ್ ಅವರು ಮಿರ್ಡಿಫ್ ಸಿಟಿ ಸೆಂಟರ್‌ನಲ್ಲಿ ಅದೇ ಮಾರಾಟಗಾರರಿಂದ ಐಫೋನ್ 11 ಪ್ರೊ ಮ್ಯಾಕ್ಸ್ ಅನ್ನು ಖರೀದಿಸಿದ್ದಾರೆ.

ಇದನ್ನೂ ಓದಿ: Instagram Bug: ಇನ್‌ಸ್ಟಾಮ್​ನಲ್ಲಿ ‘ಬಗ್’, ಪತ್ತೆ ಹಚ್ಚಿದ ಭಾರತೀಯ ವಿದ್ಯಾರ್ಥಿಗೆ 38 ಲಕ್ಷ ರೂಪಾಯಿ ಬಹುಮಾನ

ದುಬೈನಲ್ಲಿ ಐಫೋನ್ 12 ಮತ್ತು ಐಫೋನ್ 13 ಮಾರಾಟ ಪ್ರಾರಂಭವಾದಾಗ ನಾನೇ ಮೊದಲ ಗ್ರಾಹಕನಾಗಿದ್ದೆ ಎಂದು ಪಲ್ಲಿಯಿಲ್ ತಿಳಿಸಿದ್ದಾರೆ. ಭಾರತದಲ್ಲಿ ಐಫೋನ್ 14 ಪ್ರೊ ಆನ್‌ಲೈನ್ ಹಾಗೂ ಆಫ್‌ಲೈನ್ ಸೇರಿದಂತೆ ಎಲ್ಲಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಐಫೋನ್ ನಾಲ್ಕು ಆವೃತ್ತಿಗಳಾದ 128 ಜಿಬಿ, 256 ಜಿಬಿ, 512 ಜಿಬಿ ಹಾಗೂ 1 ಟಿಬಿಯಲ್ಲಿ ದೊರೆಯುತ್ತದೆ. ಆರಂಭ ಬೆಲೆ ರೂ 1,29,000 ಆಗಿದೆ.
Published by:Ashwini Prabhu
First published: