Instagram Bug: ಇನ್‌ಸ್ಟಾಮ್​ನಲ್ಲಿ ‘ಬಗ್’, ಪತ್ತೆ ಹಚ್ಚಿದ ಭಾರತೀಯ ವಿದ್ಯಾರ್ಥಿಗೆ 38 ಲಕ್ಷ ರೂಪಾಯಿ ಬಹುಮಾನ

ಕೋಟ್ಯಾಂತರ ಜನರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡದಂತೆ ಉಳಿಸಿದ್ದಕ್ಕಾಗಿ ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ ಅವರಿಗೆ ಇನ್‌ಸ್ಟಾಗ್ರಾಮ್ ಅವರು 38 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಬಹುಮಾನವನ್ನು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.

ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ

ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ

  • Share this:
ಈಗಂತೂ ಎಲ್ಲಿ ನೋಡಿದರೂ ಈ ಸಾಮಾಜಿಕ ಮಾಧ್ಯಮಗಳದ್ದೆ (Social media) ಹವಾ, ಏಕೆಂದರೆ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಂದ ಹಿಡಿದು, ಮನೆಯಲ್ಲಿರುವ ಗೃಹಿಣಿಯರು ಮತ್ತು ವಯಸ್ಸಾದ ಅಜ್ಜ ಅಜ್ಜಿಯರ ತನಕ ಎಲ್ಲರೂ ತಮ್ಮ ಮೊಬೈಲ್ ಫೋನ್ ಗಳಲ್ಲಿ (Mobile Phone) ಒಂದಲ್ಲ ಒಂದು ಸಾಮಾಜಿಕ ಮಾಧ್ಯಮವನ್ನು ಬಳಸೇ ಬಳಸುತ್ತಿರುತ್ತಾರೆ. ಕೆಲವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಈ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು (Instagram) ಬಳಸಿದರೆ, ಇನ್ನೂ ಕೆಲವರು ಮೆಸೇಜಿಂಗ್ ಅಪ್ಲಿಕೇಷನ್ ಗಳಾದ ವಾಟ್ಸಪ್ ಅನ್ನು (WhatsApp) ಬಿಟ್ಟು ಬಿಡದೆ ದಿನವಿಡೀ ಹೆಚ್ಚಾಗಿ ಬಳಸುತ್ತಾರೆ ಮತ್ತು ಅದರಲ್ಲಿಯೇ ಹೆಚ್ಚಿನ ಸಮಯವನ್ನು ಅವರು ಕಳೆಯುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿರುವ ದೋಷಗಳನ್ನು ಕಂಡು ಹಿಡಿದ್ರೆ ದೊಡ್ಡ ಮೊತ್ತದ ಹಣ ಸಿಗುತ್ತೆ
ಹೀಗೆ ಕೋಟ್ಯಾಂತರ ಜನರು ಬಳಸುವ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ಅನೇಕ ಮಾಹಿತಿಯನ್ನು ಹಾಕಿರುತ್ತಾರೆ. ತಮ್ಮ ಫೋಟೋ, ವಿವರ, ತಮ್ಮ ಮನೆಯವರ ಫೋಟೋಗಳು ಹೀಗೆ ಒಂದೇ ಎರಡೇ.. ಅನೇಕ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುತ್ತಾರೆ. ಹೀಗಾದಾಗ ಕೆಲವೊಮ್ಮೆ ಈ ಸಾಮಾಜಿಕ ಮಾಧ್ಯಮಗಳನ್ನು ಯಾರಾದರೂ ಸೈಬರ್ ಕಳ್ಳರು ಹ್ಯಾಕ್ ಮಾಡಿದರೆ ಹೇಗೆ ಅನ್ನೋ ಚಿಂತೆ ಸಹ ನಮಗಿರುತ್ತದೆ. ಆದರೆ, ಈ ಜನಪ್ರಿಯ ಸಾಮಾಜಿಕ ಮಾಧ್ಯಮಗಳು ಸಹ ಹೀಗೆ ಹ್ಯಾಕರ್ ಗಳಿಗೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳದಿರಲು ಅನೇಕ ರೀತಿಯ ಸುರಕ್ಷತಾ ಕ್ರಮಗಳನ್ನು ಪ್ರತಿ ಅಪ್ಡೇಟ್ ನಲ್ಲಿಯೂ ಸಹ ನೀಡುತ್ತಿರುತ್ತಾರೆ.

ಇಷ್ಟೇ ಅಲ್ಲದೆ, ಅನೇಕ ಕಂಪನಿಗಳು ಜನರಿಗೆ ಮುಕ್ತವಾಗಿ ಈ ಸಾಮಾಜಿಕ ಮಾಧ್ಯಮಗಳಲ್ಲಿರುವ ದೋಷಗಳನ್ನು ಕಂಡು ಹಿಡಿಯಲು ಅಥವಾ ಯಾರಾದರೂ ಕಂಡು ಹಿಡಿದು ಕಂಪನಿಯವರಿಗೆ ತಿಳಿಸಿದರೆ ಮತ್ತು ಆ ದೋಷವು ಸರಿಯಾಗಿದ್ದರೆ, ಅವರಿಗೆ ಬಹುಮಾನವಾಗಿ ದೊಡ್ಡ ಮೊತ್ತದ ಹಣವನ್ನು ನೀಡುತ್ತಿರುತ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ‘ಬಗ್’ ಕಂಡುಹಿಡಿದ ನೀರಜ್
ಹೀಗೆ ಕೋಟ್ಯಾಂತರ ಜನರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡದಂತೆ ಉಳಿಸಿದ್ದಕ್ಕಾಗಿ ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ ಅವರಿಗೆ ಇನ್‌ಸ್ಟಾಗ್ರಾಮ್ ಅವರು 38 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಬಹುಮಾನವನ್ನು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.

ಇದನ್ನೂ ಓದಿ:  UMANG App ಬಳಸುತ್ತಿದ್ದೀರಾ? ಹೊಸ ಆಧಾರ್ ಸಂಬಂಧಿತ ಸೇವೆಗಳು ಇದರಲ್ಲೂ ಲಭ್ಯ

ಶರ್ಮಾ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಒಂದು ದೋಷವನ್ನು ಕಂಡುಕೊಂಡಿದ್ದಾರೆ, ಇದರಿಂದಾಗಿ ಲಾಗಿನ್ ಮತ್ತು ಪಾಸ್ವರ್ಡ್ ಇಲ್ಲದೆ ಯಾವುದೇ ಬಳಕೆದಾರರ ಖಾತೆಯಲ್ಲಿ ಥಂಬ್‌ನೇಲ್ ಗಳನ್ನು ಬದಲಾಯಿಸಬಹುದು ಎಂದು ವರದಿ ತಿಳಿಸಿದೆ. ಶರ್ಮಾ ಈ ದೋಷದ ಬಗ್ಗೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಗೆ ಮಾಹಿತಿ ನೀಡಿದರು ಮತ್ತು ಇದು ಅಧಿಕೃತವೆಂದು ಕಂಡುಕೊಂಡ ನಂತರ, ಈ ದೋಷವನ್ನು ಕಂಡು ಹಿಡಿದುದ್ದಕ್ಕಾಗಿ ಅವರಿಗೆ 38 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿದ್ದ ‘ಬಗ್’ ಬಗ್ಗೆ ನೀರಜ್ ಹೇಳಿದ್ದೇನು?
"ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಒಂದು ದೊಡ್ಡ ದೋಷವಿತ್ತು, ಅದರ ಮೂಲಕ ರೀಲ್ ನ ಮೂಲಕ ಯಾವುದೇ ಖಾತೆಯ ಥಂಬ್‌ನೇಲ್ ಅನ್ನು ಬದಲಾಯಿಸಬಹುದಾಗಿತ್ತು. ಇನ್‌ಸ್ಟಾಗ್ರಾಮ್ ಖಾತೆದಾರನ ಪಾಸ್‌ವರ್ಡ್ ಎಷ್ಟೇ ಪ್ರಬಲವಾಗಿದ್ದರೂ, ಅದನ್ನು ಬದಲಾಯಿಸಲು ಖಾತೆಯ ಮಾಧ್ಯಮ ಐಡಿ ಮಾತ್ರ ಬೇಕಾಗಿತ್ತು” ಎಂದು ನೀರಜ್ ಹೇಳಿದರು.

"ಕಳೆದ ವರ್ಷದ ಡಿಸೆಂಬರ್ ನಲ್ಲಿ ನಾನು ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ದೋಷವನ್ನು ಹುಡುಕಲು ಪ್ರಾರಂಭಿಸಿದೆ. ಸಾಕಷ್ಟು ಕಠಿಣ ಪರಿಶ್ರಮದ ನಂತರ, ಜನವರಿ 31 ರ ಬೆಳಿಗ್ಗೆ, ಇನ್‌ಸ್ಟಾಗ್ರಾಮ್ ನ ಈ ದೋಷದ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತು. ಇದರ ನಂತರ, ನಾನು ಅದೇ ದಿನ ರಾತ್ರಿ ಇನ್‌ಸ್ಟಾಗ್ರಾಮ್ ನಲ್ಲಿ ಕಂಡುಕೊಂಡ ಈ ತಪ್ಪಿನ ಬಗ್ಗೆ ಫೇಸ್‌ಬುಕ್ ಗೆ ವರದಿ ಕಳುಹಿಸಿದೆ ಮತ್ತು ಮೂರು ದಿನಗಳ ನಂತರ ಅವರಿಂದ ಉತ್ತರವನ್ನು ಸ್ವೀಕರಿಸಿದೆ. ಅವರು ಮೊದಲು ನನಗೆ ಡೆಮೊ ಹಂಚಿಕೊಳ್ಳಲು ಕೇಳಿದರು" ಎಂದು ಅವರು ಹೇಳಿದರು.

ಇದನ್ನೂ ಓದಿ:  Smartphoneನಿಂದ ಎಂಎಂಎಸ್​ ಅಥವಾ ಖಾಸಗಿ ವಿಡಿಯೋ ಲೀಕ್​ ಆಗೋದು ಹೇಗೆ? ಈ ತಪ್ಪು ಯಾವತ್ತೂ ಮಾಡಬೇಡಿ!

ಶರ್ಮಾ 5 ನಿಮಿಷಗಳಲ್ಲಿ ಆ ಥಂಬ್‌ನೇಲ್ ಅನ್ನು ಬದಲಾಯಿಸುವ ಮೂಲಕ ಡೆಮೊ ತೋರಿಸಿದರು. ತದನಂತರ ನೀರಜ್ ಅವರು ಮೇ 11 ರ ರಾತ್ರಿ
ಯಂದು ಫೇಸ್‌ಬುಕ್ ನಿಂದ ಒಂದು ಇ-ಮೇಲ್ ಪಡೆದರು, ಅದರಲ್ಲಿ ಅವರು ಅವರಿಗೆ 45,000 ಡಾಲರ್ ಎಂದರೆ ಸುಮಾರು 35 ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗಿದೆ ಎಂದು ಮಾಹಿತಿ ಇತ್ತು. ಬಹುಮಾನವನ್ನು ನೀಡುವಲ್ಲಿ ನಾಲ್ಕು ತಿಂಗಳ ವಿಳಂಬಕ್ಕೆ ಪ್ರತಿಯಾಗಿ, ಫೇಸ್‌ಬುಕ್ ಕಂಪನಿಯವರು 4500 ಡಾಲರ್ ಎಂದರೆ ಸುಮಾರು 3 ಲಕ್ಷ ರೂಪಾಯಿ ಬೋನಸ್ ಆಗಿ ನೀಡಿದರು ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: