ಮೊಬೈಲ್ ಮಾರುಕಟ್ಟೆಯಲ್ಲಿ (Mobile Market) ಎಂದಿಗೂ ನೆನಪಿನಲ್ಲಿ ಬರುವಂತಹ ಕಂಪೆನಿಯೆಂದರೆ ಅದು ನೋಕಿಯಾ (Nokia Company). ಈ ಕಂಪೆನಿ ಭಾರೀ ಹಿಂದಿನ ಕಾಲದಿಂದಲೂ ಜನಪ್ರಿಯತೆಯನ್ನು ಪಡೆಯುತ್ತಾ ಬಂದಿದೆ. ಈ ಕಂಪೆನಿ ಮೊದಲು ಫೀಚರ್ ಫೋನ್ಗಳನ್ನು (Feature Phones) ಬಿಡುಗಡೆ ಮಾಡುವ ಮೂಲಕ ಗ್ರಾಹಕರ ಕಣ್ಮನ ಸೆಳೆದಿತ್ತು. ಅದೂ ಕೂಡ ಆ ಸಂದರ್ಭದಲ್ಲಿ ವಿಧ ವಿಧವಾದ ಶೈಲಿಯಲ್ಲಿ ಫೀಚರ್ ಫೋನ್ಗ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಕಂಪೆನಿ ಮಾರುಕಟ್ಟೆಗೆ ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ಈ ಕಂಪೆನಿಯಿಂದ ನೋಕಿಯಾ ಸಿ12 (Noika C12 Smartphone) ಎಂಬ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ.
ನೋಕಿಯಾ ಸಿ12 ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಯ ಬಿಡುಗಡೆಯಾಗಿದೆ. ನೋಕಿಯಾ ಕಂಪೆನಿಯಿಂದ ಬಿಡುಗಡೆಯಾದ ಈ ಬಾರಿಯ ಮೊದಲ ಸ್ಮಾರ್ಟ್ಫೋನ್ ಇದಾಗಿದ್ದು, ಬಹಳಷ್ಟು ಫೀಚರ್ಸ್ಗಳನ್ನು ಇದು ಒಳಗೊಂಡಿದೆ.
ನೋಕಿಯಾ ಸಿ12 ಸ್ಮಾರ್ಟ್ಫೋನ್ ಫೀಚರ್ಸ್
ನೋಕಿಯಾ ಸಿ12 ಸ್ಮಾರ್ಟ್ಫೋನ್ 6.3 ಇಂಚಿನ ಹೆಚ್ಡಿ+ ಡಿಸ್ಪ್ಲೇ ಅನ್ನು ಹೊಂದಿದ್ದು, 20:9 ರ ಆಕಾರ ಅನುಪಾತವನ್ನು ಇದು ಪಡೆದಿದೆ. ಹಾಗೆಯೇ ಈ ಫೋನ್ 720 × 1600 ಪಿಕ್ಸೆಲ್ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು ಈ ಸ್ಮಾರ್ಟ್ಫೋನ್ ಆಕ್ಟಾ ಕೋರ್ ಯುನಿ ಎಸ್ಓಸಿ SC9863A ಪ್ರೊಸೆಸರ್ ನಿಂದ ರನ್ ಆಗುತ್ತದೆ.
ಕ್ಯಾಮೆರಾ ಫೀಚರ್ಸ್
ನೋಕಿಯಾ ಸಿ12 ಸ್ಮಾರ್ಟ್ಫೋನ್ ಸಿಂಗಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಾಗೆಯೇ ಈ ಸ್ಮಾರ್ಟ್ಫೋನ್ನ ಹಿಂಭಾಗದ ಕ್ಯಾಮೆರಾದ ಜೊತೆಗೆ ಎಲ್ಇಡಿ ಫ್ಲ್ಯಾಶ್ ಲೈಟ್ ಅನ್ನು ಸಹ ಆ್ಯಡ್ ಮಾಡಿದ್ದಾರೆ.
ಬ್ಯಾಟರಿ ಫೀಚರ್ಸ್
ನೋಕಿಯಾ ಸಿ12 ಸ್ಮಾರ್ಟ್ಫೋನ್ 3000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಬ್ಯಾಟರಿಯು 5W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ.
ಸ್ಟೋರೇಜ್ ಸಾಮರ್ಥ್ಯ
ನೋಕಿಯಾ ಸಿ12 ಸ್ಮಾರ್ಟ್ಫೋನ್ ಸಿಂಗಲ್ ವೇರಿಯಂಟ್ ಆಯ್ಕೆ ಪಡೆದಿದ್ದು, 2 ಜಿಬಿ ರ್ಯಾಮ್ ಮತ್ತು 64ಜಿಬಿ ಸಾಮರ್ಥ್ಯದಲ್ಲಿದೆ. ಇದನ್ನು ಬಳಕೆದಾರರು ಎಸ್ಡಿ ಕಾರ್ಡ್ ಮೂಲಕ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು 256ಜಿಬಿ ವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಇನ್ನು ಈ ಫೋನ್ ಗೂಗಲ್ ನ ಆಂಡ್ರಾಯ್ಡ್ 12 ಗೋ ಎಡಿಷನ್ ವರ್ಷನ್ನಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ನ ಸಪೋರ್ಟ್ ಪಡೆದಿದೆ.
ಕನೆಕ್ಟಿವಿಟಿ ಫೀಚರ್ಸ್
ನೋಕಿಯಾ ಸಿ12 ಸ್ಮಾರ್ಟ್ಫೋನ್ IP52 ರೇಟಿಂಗ್ ಸ್ಲ್ಯಾಶ್ ರೆಸಿಸ್ಟೆನ್ಸ್ ಸೌಲಭ್ಯ ಪಡೆದುಕೊಂಡಿದೆ. ಇದರ ಜೊತೆಗೆ ಈ ಸ್ಮಾರ್ಟ್ಫೋನ್ ಡ್ಯುಯಲ್ ಸಿಮ್, 4ಜಿ, ವೈಫೈ 802.11 b/g/n, ಬ್ಲೂಟೂತ್ 5.2, ಜಿಪಿಎಸ್ ಸೌಲಭ್ಯಗಳನ್ನೆಲ್ಲಾ ಒಳಗೊಂಡಿದೆ. ಹಾಗೆಯೇ ಈ ಫೋನ್ ಫೇಸ್ ಅನ್ಲಾಕ್ ಫೀಚರ್ ಅನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಒನ್ಪ್ಲಸ್ ಕಂಪೆನಿಯ ಹೊಸ ಸ್ಮಾರ್ಟ್ಫೋನ್! ಬೆಲೆ ಎಷ್ಟು?
ಬೆಲೆ ಮತ್ತು ಲಭ್ಯತೆ
ನೋಕಿಯಾ ಸಿ12 ಸ್ಮಾರ್ಟ್ಫೋನ್ ಡಾರ್ಕ್ ಸಯಾನ್, ಲೈಟ್ ಮಿಂಟ್ ಮತ್ತು ಚಾರ್ಕೋಲ್ ಕಲರ್ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಅಂದಹಾಗೆ ಯುರೋಪ್ನಲ್ಲಿ ಈ ಫೋನಿನ ಬೆಲೆಯು € 119 ಅಂದರೆ ಭಾರತದಲ್ಲಿ ಅಂದಾಜು 10,500 ರೂಪಾಯಿಗಳು ಎಂದು ಹೇಳಲಾಗಿದೆ.
ನೋಕಿಯಾ ಕಂಪೆನಿ ಈ ಹಿಂದೆಯೂ ತನ್ನ ಬ್ರಾಂಡ್ನ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ವರ್ಷದಲ್ಲಿ ಬಿಡುಗಡೆಯಾದ ನೋಕಿಯಾದ ಮೊದಲ ಫೋನ್ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ