ಜೀ5 ಬಿಡುಗಡೆ ಮಾಡಿದೆ HiPi ಶಾರ್ಟ್​ ವಿಡಿಯೋ ಆ್ಯಪ್​​; ಹೇಗಿದೆ?

HiPi ಆ್ಯಪ್​ನಲ್ಲಿ ಒಂದು ನಿಮಿಷದವರೆಗೂ ಆಡಿಯೋಗೆ ಲಿಪ್​ಸಿಂಕ್​ ಮಾಡುವ ಆಯ್ಕೆಯನ್ನು ನೀಡಿದೆ. ಟಿಕ್​ಟಾಕ್​ನಲ್ಲಿ ಕೇವಲ 15 ಸೆಕೆಂಡ್​ಗಳ ಕಾಲ ಆಡಿಯೋ ಲಭ್ಯವಿತ್ತು.

news18-kannada
Updated:July 2, 2020, 2:09 PM IST
ಜೀ5 ಬಿಡುಗಡೆ ಮಾಡಿದೆ HiPi ಶಾರ್ಟ್​ ವಿಡಿಯೋ ಆ್ಯಪ್​​; ಹೇಗಿದೆ?
hipi
  • Share this:
ಇತ್ತೀಚೆಗೆ ಚೀನಾ ಮೂಲದ 59 ಆ್ಯಪ್​ಗಳನ್ನು ಭಾರತದ ಸರ್ಕಾರ ಬ್ಯಾನ್​ ಮಾಡಿದೆ. ಇದರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆಕೊಂಡಿದ್ದ ಟಿಕ್​ಟಾಕ್​ ಆ್ಯಪ್​  ಕೂಡ ನಿಷೇಧವಾಗಿದೆ. ಬೈಟೆಡ್ಯಾನ್ಸ್​​ ಒಡೆತನದ ಟಿಕ್​ಟಾಕ್​ ಭಾರತದಲ್ಲಿ ಅನೇಕ ಬಳಕೆದಾರರನ್ನು ಹೊಂದಿತ್ತು. ಆದರೆ ಚೀನಾ ಆ್ಯಪ್​ಗಳು ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ತೊಂದರೆಯುನ್ನುಂಟು ಮಾಡಬಹುದು ಎಂಬ ಕಾರಣಕ್ಕೆ ಚೀನಾದ 59 ಆ್ಯಪ್​​ಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ. ಇಂತಹ ಸಮಯದಲ್ಲಿ ದೇಶಿ ಆ್ಯಪ್​ಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಬೆಂಗಳೂರು ಮೂಲದ ಚಿಂಗಾರಿ ಆ್ಯಪ್​​, ಅಂತೆಯೇ ಮಿತ್ರೋ ಆ್ಯಪ್​ ಕೂಡ ಅತಿ ಹೆಚ್ಚು ಡೌನ್​ ಆಗುವ ಮೂಲಕ ಟಿಕ್​ಟಾಕ್​ ಜಾಗವನ್ನು ತುಂಬಿದೆ. ಅದರ ಜೊತೆಗೀಗ ಜೀ5 ಕಂಪೆನಿ ಸಿದ್ಧಪಡಿಸಿದ್ದ HiPi ಆ್ಯಪ್​​ ಕೂಡ ಜನಪ್ರಿಯತೆ ಪಡೆಯುತ್ತಿದೆ.

ಸಿನಿಮಾ ನಿರ್ಮಾಣ ಮತ್ತು ಕಿರುತೆರೆಯಲ್ಲಿ ಮುಂಚೂಣಿಯಲ್ಲಿರುವ ಜೀ5 ಕಂಪೆನಿ HiPi ಆ್ಯಪ್​​ ಅನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಆ್ಯಪ್​​​​ ಟಿಕ್​ಟಾಕ್​ನಂತೆಯೇ ಕಾರ್ಯನಿರ್ವಹಿಸುತ್ತಿದೆ, ಜೊತೆಗೆ ಶಾರ್ಟ್​ ವಿಡಿಯೋಗಳನ್ನು ರಚಿಸಿ ಅಪ್ಲೋಡ್​ ಮಾಡಬಹುದಾಗಿದೆ.

HiPi ಆ್ಯಪ್​ನಲ್ಲಿ ಒಂದು ನಿಮಿಷದವರೆಗೂ ಆಡಿಯೋಗೆ ಲಿಪ್​ಸಿಂಕ್​ ಮಾಡುವ ಆಯ್ಕೆಯನ್ನು ನೀಡಿದೆ. ಟಿಕ್​ಟಾಕ್​ನಲ್ಲಿ ಕೇವಲ 15 ಸೆಕೆಂಡ್​ಗಳ ಕಾಲ ಆಡಿಯೋ ಲಭ್ಯವಿತ್ತು.

zee5


ಟಿಕ್​ಟಾಕ್​ ಭಾರತದಲ್ಲಿ ನಿಷೇಧಗೊಂಡ ಬೆನ್ನಲ್ಲೇ ಹಲವಾರು ಶಾರ್ಟ್​ ವಿಡಿಯೋ ಆ್ಯಪ್​ಗಳು ಜನಪ್ರಿಯತೆ ಪಡೆಯುತ್ತಿದೆ. ಈಗಾಗಲೇ ಬೊಲೊ ಇಂಡ್ಯಾ, ಚಿಂಗಾರಿ, ಮಿತ್ರೋ, ರೆಪೊಸೋ ಆ್ಯಪ್​ಗಳು ಬಳಕೆಯಲ್ಲಿವೆ. ರೆಪೊಸೋ 50 ಮಿಲಿಯನ್​​ ಡೌನ್​ಲೋಡ್​ ಕಂಡಿದೆ. ಮಿತ್ರೋ 10 ಮಿಲಿಯನ್​​, ಚಿಂಗಾರಿ 3.5 ಮಿಲಿಯನ್​​ ಜನರು ಬಳಕೆ ಮಾಡುತ್ತಿದ್ದಾರೆ. ಇದೀಗ ಅದೇ ಸಾಲಿಗೆ ಜೀ5 ಕಂಪೆನಿ HiPi ಆ್ಯಪ್​ ಸೇರಿಕೊಂಡಿದೆ.
First published: July 2, 2020, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading