• Home
  • »
  • News
  • »
  • tech
  • »
  • Amazon Offer: ದೀಪಾವಳಿಗೆ ಅಮೆಜಾನ್‌ನ ಬಂಪರ್ ಆಫರ್!‌ ಒನ್‌ಪ್ಲಸ್‌ ಮೊಬೈಲ್‌ ಮೇಲೆ ಭಾರಿ ರಿಯಾಯಿತಿ

Amazon Offer: ದೀಪಾವಳಿಗೆ ಅಮೆಜಾನ್‌ನ ಬಂಪರ್ ಆಫರ್!‌ ಒನ್‌ಪ್ಲಸ್‌ ಮೊಬೈಲ್‌ ಮೇಲೆ ಭಾರಿ ರಿಯಾಯಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದು ಅಮೆಜಾನ್‌ ಗ್ರಾಹಕರಿಗಾಗಿ ನೀಡಿದ ವಿಶೇಷ ರಿಯಾಯಿತಿಯಾಗಿದೆ. ಗ್ರಾಹಕರು ಹೆಚ್ಚಾಗಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದಲ್ಲಿ ಮೊಬೈಲ್‌ ಅನ್ನು ಹುಡುಕುತ್ತಿರುತ್ತಾರೆ. ಈ ಹೊತ್ತಲ್ಲೇ ಅಮೆಜಾನ್‌ ಈ ಆಫರ್‌ ಬಿಟ್ಟಿದೆ

  • Share this:

    ಅಮೆಜಾನ್‌ ಈ ಬಾರಿ ತನ್ನ ಗ್ರಾಹಕರಿಗಾಗಿ ಹೊಸ ಆಫರ್‌ ಅನ್ನು ನೀಡುತ್ತಿದೆ. ಜನಪ್ರಿಯ -ಕಾಮರ್ಸ್ ವೆಬ್‌ಸೈಟ್‌ನಲ್ಲಿ ಅಮೆಜಾನ್ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ( Great Indian Festival) ಮಾರಾಟ ಮೇಳವನ್ನು ಮುಂದುವರೆಸಿದ್ದು, ಇದೀಗ ಭಾರೀ ಡಿಸ್ಕೌಂಟ್ (Discount) ಬೆಲೆಯಲ್ಲಿ oneplus 10R 5G ಸ್ಮಾರ್ಟ್ಫೋನನ್ನು ಮಾರಾಟಕ್ಕಿಟ್ಟಿದೆ. ಕಡಿಮೆ ಬೆಲೆಯನ್ನು ಹೊಂದಿರುವ ಸ್ಮಾರ್ಟ್ಫೋನ್ಗಳಲ್ಲಿ ಒಂದಾದ 'OnePlus 10R 5G' ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಲ್ಲಿ 6,000 ರೂಪಾಯಿಗಳ ರಿಯಾಯಿತಿ ನೀಡಿದೆ. ಇದು ಗ್ರಾಹಕರಿಗೆ ನೀಡಿದ ಉತ್ತಮ ರಿಯಾಯಿತಿಯಾಗಿದ್ದು, ಇದರಿಂದ ಗ್ರಾಹಕರು ಸಂತೋಷಗೊಂಡಿದ್ದಾರೆ.


    ಇದು ಅಮೆಜಾನ್‌ ಗ್ರಾಹಕರಿಗಾಗಿ ನೀಡಿದ ವಿಶೇಷ ರಿಯಾಯಿತಿಯಾಗಿದೆ. ಗ್ರಾಹಕರು ಹೆಚ್ಚಾಗಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದಲ್ಲಿ ಮೊಬೈಲ್‌ ಅನ್ನು ಹುಡುಕುತ್ತಿರುತ್ತಾರೆ. ಈ ಹೊತ್ತಲ್ಲೇ ಅಮೆಜಾನ್‌ ಈ ಆಫರ್‌ ಬಿಟ್ಟಿರುವುದರಿಂದ ಈಗ ಈ ಮೊಬೈಲ್‌ನ ಬೇಡಿಕೆಯ ಜೊತೆಗೆ ಅಮೆಜಾನ್‌ನ ಗ್ರಾಹಕರ ಸಂಖ್ಯೆಯು ಹೆಚ್ಚಾಗುತ್ತದೆ.


    ಹೇಗಿದೆ ಈ ಮೊಬೈಲ್‌ನ ರಿಯಾಯಿತಿಗಳು


    ದೇಶದಲ್ಲಿ Oneplus 10R 5G ಸ್ಮಾರ್ಟ್‌ಫೋನನ್ನು 38,999 ರೂ.ಗಳ  ಸ್ಟಾರ್ಟಿಂಗ್‌ ಪ್ರೈಸ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಇದೀಗ ರಿಯಾಯಿತಿ ಆಫರ್‌ನಿಂದಾಗಿ, Oneplus 10R 5G ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8GB RAM + 128GB ಮೋಡೆಲ್ 38,999 ರೂ.ಗಳ ಬದಲಾಗಿ ₹32,999 ಬೆಲೆಯಲ್ಲಿ, 12GB RAM ಮತ್ತು 256GB ಸ್ಟೋರೇಜ್‌ ಮೋಡೆಲ್ 43,999 ರೂ.ಗಳ ಬದಲಾಗಿ 36,999 ರೂ.ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದೆ. ಇಷ್ಟೇ ಅಲ್ಲದೇ, ಐಸಿಐಸಿಐ ಕ್ರೆಡಿಟ್ ಕಾರ್ಡ್ಇರುವ ಗ್ರಾಹಕರಿಗೆ 1250 ರೂ.ಗಳ ಹೆಚ್ಚು ರಿಯಾಯಿತಿಯಲ್ಲಿ ಲಭ್ಯವಿದೆ.


    Amazons bumper offer for Diwali Huge discount on OnePlus Mobile
    ಸಾಂದರ್ಭಿಕ ಚಿತ್ರ


    ಇದನ್ನೂ ಓದಿ: ಏರ್‌ಇಂಡಿಯಾ ಈಗ ಸಖತ್ ಪಾಶ್ ಆಗ್ತಿದೆ, ಏನೆಲ್ಲಾ ಹೊಸ ಫೆಸಿಲಿಟಿ ಇರುತ್ತೆ ನೋಡಿ


    OnePlus 10R 5G ಸ್ಮಾರ್ಟ್ಫೋನಿನ ಫೀಚರ್ಸ್


    • OnePlus 10R 5G ಸ್ಮಾರ್ಟ್‌ಫೋನಿನಲ್ಲಿ 20:9 ರೇಶಿಯೋದೊಂದಿಗೆ 6.7-ಇಂಚಿನ ಫುಲ್ HD+ (1,080x2,412 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ನೀಡಲಾಗಿದೆ.

    • ಇದು 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್ ಹೊಂದಿದೆ. ಡಿಸ್‌ಪ್ಲೇಗಾಗಿ 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಅಳವಡಿಸಲಾಗಿದೆ.

    • OnePlus 10R 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಅನ್ನು ಬೆಂಬಲಿಸುವ 50-ಮೆಗಾಪಿಕ್ಸೆಲ್ ಹಾಗೂ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 2-ಮೆಗಾಪಿಕ್ಸೆಲ್ಮ್ಯಾಕ್ರೋ ಶೂಟರ್ ಕ್ಯಾಮೆರಾಗಳನ್ನು ಹೊಂದಿದೆ.

    • ಇನ್ನು ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ, ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗೆ ಈ ಕ್ಯಾಮರಾಗಳು ಉತ್ತಮ ಸಪೋರ್ಟ್‌ ಮಾಡುತ್ತದೆ.


    Amazons bumper offer for Diwali Huge discount on OnePlus Mobile
    ಸಾಂದರ್ಭಿಕ ಚಿತ್ರ


    ರಿಯಾಯಿತಿಯಲ್ಲಿರುವ ಮೊಬೈಲ್‌ನ ಫೀಚರ್ಸ್


    • ನೂತನ OnePlus 10R 5G ಸ್ಮಾರ್ಟ್‌ಫೋನ್ 256GB ವರೆಗಿನ ಸ್ಟೋರೇಜ್‌ ಅನ್ನು ಹೊಂದಿದೆ.

    • OnePlus 10R 5G ಫೋನಿನ ನೆಟ್‌ವರ್ಕ್‌ 5G, 4G LTE ಅನ್ನು ಹೊಂದಿದೆ. Wi-Fi 6, ಬ್ಲೂಟೂತ್ v5, 2GPS, NFC, ಮತ್ತು USB ಟೈಪ್-C ಯನ್ನು ಹೊಂದಿದೆ.

    • ಇಲ್ಲಿ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಕೂಡಾ ಇವೆ.

    • ಇದು  4,500mAh ಬ್ಯಾಟರಿಯೊಂದಿಗೆ 150W ವೇಗದ ಚಾರ್ಜಿಂಗ್ ಆಯ್ಕೆ ಕೂಡ ಇದೆ. ಆದರೆ, 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ.


    ಇದನ್ನೂ ಓದಿ: ಭಾರತದಲ್ಲಿ ಮತ್ತೆ ಆರಂಭವಾಗಲಿದ್ಯಂತೆ Pubg, ಇನ್ಮುಂದೆ ಏನಿದ್ರು ವಿನ್ನರ್‌ ವಿನ್ನರ್‌ ಚಿಕನ್‌ ಡಿನ್ನರ್!

    • ಈ ಮೂರು ಫೋನ್‌ಗಳು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಉತ್ತಮ ಸೌಂಡ್ ಒಳಗೊಂಡಿರುವುದನ್ನು ನಾವು ಗಮನಿಸಬಹುದು.

    Published by:ವಾಸುದೇವ್ ಎಂ
    First published: