• Home
 • »
 • News
 • »
 • tech
 • »
 • Amazon Offers: ಅಮೆಜಾನ್​ ಅಪ್​​ಗ್ರೇಡ್​ ಡೇಸ್​ ಸೇಲ್; ಈ 5 ಸ್ಮಾರ್ಟ್​ಫೋನ್ಸ್​ ಮೇಲೆ ಭರ್ಜರಿ ಆಫರ್ಸ್​

Amazon Offers: ಅಮೆಜಾನ್​ ಅಪ್​​ಗ್ರೇಡ್​ ಡೇಸ್​ ಸೇಲ್; ಈ 5 ಸ್ಮಾರ್ಟ್​ಫೋನ್ಸ್​ ಮೇಲೆ ಭರ್ಜರಿ ಆಫರ್ಸ್​

ಅಮೆಜಾನ್​ ಆಫರ್ಸ್​

ಅಮೆಜಾನ್​ ಆಫರ್ಸ್​

ಅಮೆಜಾನ್ ಸ್ಮಾರ್ಟ್​ಫೋನ್​ ಅಪ್​ಗ್ರೇಡ್​ ಡೇಸ್ ಸೇಲ್​ ಆರಂಭವಾಗಿದ್ದು ಇದು ಡಿಸೆಂಬರ್​ 10 ರಿಂದ ಪ್ರಾರಂಭವಾಗಿ ಡಿಸೆಂಬರ್ 14ರವರೆಗ ಲಭ್ಯವಿರುತ್ತದೆ. ಈ ಸೇಲ್​ನಲ್ಲಿ ಕೆಲವು ಸ್ಮಾರ್ಟ್​ಫೋನ್​​ಗಳನ್ನು ಭರ್ಜರಿ ಆಫರ್ಸ್​ನೊಂದಿಗೆ ಮಾರಾಟವಾಗುತ್ತಿದೆ. ಆ ಸ್ಮಾರ್ಟ್​ಫೋನ್ಸ್​ ಯಾವುದೆಲ್ಲಾ ಎಂಬುದನ್ನು ಈ ಕೆಳಗೆ ನೋಡಿ.

ಮುಂದೆ ಓದಿ ...
 • Share this:

  ಇಕಾಮರ್ಸ್​ ವೆಬ್​ಸೈಟ್​ಗಳಲ್ಲಿ (E-Commerse Website) ಪ್ರಸಿದ್ಧಿಯನ್ನು ಪಡೆದಿರುವ ಅಮೆಜಾನ್ (Amazon) ಪ್ರತಿ ವರ್ಷಾಂತ್ಯದಲ್ಲಿ ಸ್ಮಾರ್ಟ್​ಫೋನ್​ಗಳನ್ನು ಬಾರೀ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತದೆ. ಈ ಬಾರಿ ಅಮೆಜಾನ್ ಸ್ಮಾರ್ಟ್​ಫೋನ್​ ಅಪ್​ಗ್ರೇಡ್​ ಡೇಸ್ ಸೇಲ್​ನಲ್ಲಿ (Amazon Smartphone Upgrade Days Sale) ಕೆಲವು ಸ್ಮಾರ್ಟ್​ಫೋನ್​ಗಳ ಮೇಲೆ ಬಂಪರ್ ಆಫರ್​​ ನೀಡಿದೆ. ಇತ್ತೀಚಿನ ಸ್ಮಾರ್ಟ್​ಫೋನ್​ಗಳು ಎಲ್ಲವೂ ಕೂಡ ಗುಣಮಟ್ಟದ ಫೀಚರ್ಸ್ ಅನ್ನು ಹೊಂದಿದ್ದು ದುಬಾರಿ ಬೆಲೆಯದ್ದಾಗಿರುತ್ತದೆ. ಆದರೆ ಅಮೆಜಾನ್ ಈ ರೀತಿಯ ಆಫರ್ಸ್​ಗಳನ್ನು ನೀಡುವ ಮೂಲಕ ಸ್ಮಾರ್ಟ್​ಫೋನ್​​ಗಳ ಹೆಚ್ಚು ಬೇಡಿಕೆ ಬರುವಂತೆ ಇದು ಮಾಡುತ್ತದೆ. ಹಾಗಿದ್ರೆ ಈ ಬಾರಿಯ ಅಮೆಜಾನ್ ಸೇಲ್​ನ ಆಫರ್ಸ್​ನಲ್ಲಿರುವ ಸಾಧನಗಳು ಯಾವುದೆಂಬುದನ್ನು ನೋಡೋಣ.


  ಹೌದು, ಅಮೆಜಾನ್ ಸ್ಮಾರ್ಟ್​ಫೋನ್​ ಅಪ್​ಗ್ರೇಡ್​ ಡೇಸ್ ಸೇಲ್​ ಆರಂಭವಾಗಿದ್ದು ಇದು ಡಿಸೆಂಬರ್​ 10 ರಿಂದ ಪ್ರಾರಂಭವಾಗಿ ಡಿಸೆಂಬರ್ 14ರವರೆಗ ಲಭ್ಯವಿರುತ್ತದೆ. ಈ ಸೇಲ್​ನಲ್ಲಿ ಕೆಲವು ಸ್ಮಾರ್ಟ್​ಫೋನ್​​ಗಳನ್ನು ಭರ್ಜರಿ ಆಫರ್ಸ್​ನೊಂದಿಗೆ ಮಾರಾಟವಾಗುತ್ತಿದೆ. ಆ ಸ್ಮಾರ್ಟ್​ಫೋನ್ಸ್​ ಯಾವುದೆಲ್ಲಾ ಎಂಬುದನ್ನು ಈ ಕೆಳಗೆ ನೋಡಿ.


  ಈ ಸ್ಮಾರ್ಟ್​ಫೋನ್​ಗಳ ಮೇಲೆ ಬ್ಯಾಂಕ್ ಆಫರ್ಸ್


  ಅಮೆಜಾನ್​ ನೀಡಿರುವಂತಹ ಈ ಆಫರ್ಸ್​ನಲ್ಲಿ ಹೆಚ್​​ಡಿಎಫ್​​ಸಿ ಕ್ರೆಡಿಟ್​ ಕಾರ್ಡ್​​ ಮತ್ತು ಡೆಬಿಟ್​ ಕಾರ್ಡ್​ ಮೂಲಕ 1 ಸಾವಿರದಿಂದ 5 ಸಾವಿರದವರೆಗೆ ಖರೀದಿ ಮಾಡುವುದಾದರೆ ಶೇಕಡಾ 10% ರಷ್ಟು ರಿಯಾಯಿತಿ ಸಿಗುತ್ತದೆ. ಇನ್ನು ಫೆಡರಲ್​ ಬ್ಯಾಂಕ್​ ಕ್ರೆಡಿಟ್​​ ಕಾರ್ಡ್​​ ಮೂಲಕ 5 ಸಾವಿರ ರೂಪಾಯಿವರೆಗೆ ಖರೀದಿ ಮಾಡಿದರೆ  ಅದ್ರಲ್ಲೂ ಸಹ ಶೇಕಡಾ 10% ರಷ್ಟು ರಿಯಾಯಿತಿ ಲಭ್ಯವಿದೆ.


  ಇದನ್ನೂ ಓದಿ: ವಿವೋದಿಂದ ಬಿಡುಗಡೆಯಾಗುತ್ತಿದೆ ಹೊಸ ಸ್ಮಾರ್ಟ್​ಫೋನ್! ಬೆಲೆ, ಫೀಚರ್ಸ್​ ಮಾಹಿತಿ ಇಲ್ಲಿದೆ


  ಶಿಯೋಮಿ ಸ್ಮಾರ್ಟ್​ಫೋನ್ಸ್​


  ಅಮೆಜಾನ್‌ನ ಅಪ್‌ಗ್ರೇಡ್ ಡೇಸ್‌ ಸೇಲ್‌ನಲ್ಲಿ ರೆಡ್ಮಿ A1 ಅನ್ನು 5,579 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ರೆಡ್ಮಿ 10A 7,469 ರೂಪಾಯಿಗೆ, ರೆಡ್ಮಿ 11 ಪ್ರೈಮ್‌ 5G 11,999 ರೂಪಾಯಿಗೆ ಹಾಗೂ ರೆಡ್ಮಿ ನೋಟ್‌ ಅನ್ನು 10,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಖರೀದಿ ಮಾಡುವ ಜೊತೆಗೆ ವಿಶೇಷ ಆಫರ್ಸ್​ಗಳ ಜೊತೆ ಖರೀದಿ ಮಾಡಬಹುದು.


  ಅಮೆಜಾನ್​ ಆಫರ್ಸ್​


  ಐಕ್ಯೂ ಸ್ಮಾರ್ಟ್​ಫೋನ್ಸ್​


  ಐಕ್ಯೂ ಸ್ಮಾರ್ಟ್‌ಫೋನ್‌ಗಳಲ್ಲಿ ಐಕ್ಯೂ ನಿಯೋ ಫೋನ್‌ 6 ಅನ್ನು 26,999 ರೂಪಾಯಿಗೆ ಐಕ್ಯೂ Z6 ಪ್ರೊ ಸ್ಮಾರ್ಟ್​​ಫೋನ್‌ ಅನ್ನು 19,999 ರೂಪಾಯಿಗೆ ಮತ್ತು ಐಕ್ಯೂ Z6 ಲೈಟ್‌ ಸ್ಮಾರ್ಟ್‌ಫೋನ್‌ ಅನ್ನು 12,499 ರೂಪಾಯಿಗಳ ಆಫರ್‌ನೊಂದಿಗೆ ಈ ಐಕ್ಯೂ ಕಂಪನಿಯ ಸ್ಮಾರ್ಟ್​ಫೋನ್​​ಗಳನ್ನು ಪಡೆಯಬಹುದು.


  ಟೆಕ್ನೋ ಕಂಪನಿ ಸ್ಮಾರ್ಟ್​ಫೋನ್ಸ್​


  ಟೆಕ್ನೋ ಕಂಪನಿಯ ಅಡಿಯಲ್ಲಿ ಬಿಡುಗಡೆಯಾದ ಟೆಕ್ನೋ ಪಾಪ್ 6 ಪ್ರೋ ಸ್ಮಾರ್ಟ್​​ಫೋನ್​ ಅನ್ನು 5,579 ರೂಪಾಯಿಗಳಿಗೆ ಖರೀದಿ ಮಾಡಬಹುದು. ಇವುಗಳ ಜೊತೆಗೆ ಟೆಕ್ನೋ ಸ್ಪಾರ್ಕ್​ 9 ಸ್ಮಾರ್ಟ್​ಫೋನ್​ ಅನ್ನು 7,649 ರೂಪಾಯಿಗೆ, ಟೆಕ್ನೋ ಪೋವಾ 5ಜಿ ಸ್ಮಾರ್ಟ್​ಫೋನ್​ ಅನ್ನು 14, 299 ರೂಪಾಯಿಗೆ ಮತ್ತು ಟೆಕ್ನೋ ಕ್ಯಾಮನ್ 19 ಸ್ಮಾರ್ಟ್​ಫೋನ್​​ 16,999 ರೂಪಾಯಿಗೆ ಖರೀದಿ ಮಾಡುವ ಅವಕಾಶಗಳಿವೆ.


  ಅಮೆಜಾನ್​ ಆಫರ್ಸ್​


  ರಿಯಲ್​ಮಿ ಸ್ಮಾರ್ಟ್​​ಫೋನ್ಸ್​


  ರಿಯಲ್​ಮಿ ಸ್ಮಾರ್ಟ್​ಫೋನ್​ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ತನ್ನ ಫೀಚರ್ಸ್​ ಜೊತೆಗೆ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ. ಈ ಕಂಪನಿಯಲ್ಲಿ ಬಿಡುಗಡೆಯಾದ ರಿಯಲ್​ಮಿ ನಾರ್ಜೊ 5,499 ರೂಪಾಯಿಗೆ ಹಾಗೂ ರಿಯಲ್​ಮಿ ನಾರ್ಜೊ 50ಎ ಪ್ರೈಮ್​ ಸ್ಮಾರ್ಟ್​ಫೋನ್​ ಅನ್ನು 8,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.


  ಒಪ್ಪೋ ಸ್ಮಾರ್ಟ್​ಫೋನ್ಸ್​ ಆಫರ್ಸ್​


  ಒಪ್ಪೋ ಸ್ಮಾರ್ಟ್​ಫೋನ್ಸ್​ನ ಆಫರ್ಸ್​ ಬಗ್ಗೆ ತಿಳಿಸುವುದಾದರೆ ಒಪ್ಪೋ ಎಫ್21s ಪ್ರೊ 5ಜಿ ಸ್ಮಾರ್ಟ್‌ಫೋನ್‌ಗೆ 24,499 ರೂಪಾಯಿಗಳ ಬೆಲೆ ಇರಲಿದ್ದು, ಒಪ್ಪೋ A76 ಫೋನ್​ ಅನ್ನು 15,490 ರೂಪಾಯಿ ಹಾಗೂ ಒಪ್ಪೋ A77 ಸ್ಮಾರ್ಟ್‌ಫೋನ್‌ 16, 99ರೂಪಾಯಿಗಳಲ್ಲಿ ಖರೀದಿಸಬಹುದು.


  ಲಾವಾ ಸ್ಮಾರ್ಟ್​ಫೋನ್ಸ್​ನ ಆಫರ್ಸ್​


  ಹಾಗೆಯೇ, ಲಾವಾ ಬ್ಲೇಜ್ ಎನ್​ಎಕ್ಸ್​ಟಿ ಸ್ಮಾರ್ಟ್‌ಫೋನ್ ಅನ್ನು 8,369 ರೂಪಾಯಿಗಳಲ್ಲಿ ಖರೀದಿಸಬಹುದಾಗಿದ್ದು, ಲಾವಾ Z3 ಸ್ಮಾರ್ಟ್​​ಫೋನ್‌ ಅನ್ನು ನೀವು 6,299 ರೂಪಾಯಿ ಆಫರ್​​ನಲ್ಲಿ ಖರೀದಿ ಮಾಡಬಹುದಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು