Amazon Summer Sale 2022: ಸ್ಮಾರ್ಟ್‌ಫೋನ್‌, ಟಿವಿ, ಇಯರ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

Amazon: ಗ್ರಾಹಕರು ಬಟ್ಟೆ, ಚಪ್ಪಲಿಯಿಂದ ಹಿಡಿದು ಹಲವಾರು ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಭರ್ಜರಿ ಆಫರ್ ಪಡೆಯಬಹುದು.ಶಾಪಿಂಗ್ ಪ್ರಿಯರು ಈ ಉತ್ತಮ ಕೊಡುಗೆಗಳನ್ನು ಆನಂದಿಸಲು ಬೇಗ ಬೇಗ ಶಾಪಿಂಗ್ ಪಟ್ಟಿಯನ್ನು ತಯಾರಿಸಿಕೊಳ್ಳಬಹುದು

ಅಮೆಜಾನ್

ಅಮೆಜಾನ್

  • Share this:
    ಹಲವು ದಿನಗಳಿಂದ ನಿಮ್ಮಿಷ್ಟದ ಗ್ಯಾಜೆಟ್‌ಗಳನ್ನು ಅಮೆಜಾನ್ ಕಾರ್ಟ್‌ನಲ್ಲಿ (Amazon Cart) ಇರಿಸಿದ್ದರೆ, ಅವುಗಳನ್ನು ಕೊಳ್ಳಲು ಇದು ಉತ್ತಮ ಸಮಯ. ಏಕೆಂದರೆ ಇ-ಕಾಮರ್ಸ್ (E-commerce) ಸೈಟ್ ಅಮೆಜಾನ್ ತನ್ನ ಗ್ರಾಹಕರಿಗಾಗಿ ಮೇ 4 ಅಂದರೆ ಇಂದಿನಿಂದ ಸಮ್ಮರ್ ಸೇಲ್ (Summer Sale) ಆರಂಭಿಸಿದೆ. ಇಲ್ಲಿ ಗ್ರಾಹಕರು ಬಟ್ಟೆ (Dress), ಚಪ್ಪಲಿಯಿಂದ (Slipper) ಹಿಡಿದು ಹಲವಾರು ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಭರ್ಜರಿ ಆಫರ್ (Offer) ಪಡೆಯಬಹುದು.ಶಾಪಿಂಗ್ ಪ್ರಿಯರು ಈ ಉತ್ತಮ ಕೊಡುಗೆಗಳನ್ನು ಆನಂದಿಸಲು ಬೇಗ ಬೇಗ ಶಾಪಿಂಗ್ ಪಟ್ಟಿಯನ್ನು ತಯಾರಿಸಿಕೊಳ್ಳಬಹುದು. ಯಾವೆಲ್ಲಾ ವಸ್ತುಗಳ ಮೇಲೆ ಏನೆಲ್ಲಾ ಕೊಡುಗೆಗಳು ಮತ್ತು ರಿಯಾಯಿತಿಗಳಿವೆ ಎಂಬುದರ ಬಗ್ಗೆ ಕಂಪನಿ ಕೆಲವು ಡೀಲ್‌ಗಳನ್ನು (Deal) ಮುಂಚಿತವಾಗಿ ಘೋಷಿಸಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

    ಬೆಲೆ ಕಡಿತದ ಹೊರತಾಗಿಯೂ, ICICI ಬ್ಯಾಂಕ್, ಕೋಟಕ್ ಬ್ಯಾಂಕ್, RBL ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ಆಯ್ದ ವಸ್ತುಗಳ ಮೇಲೆ 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು. ಎಂದಿನಂತೆ, ಅಮೆಜಾನ್ ಪ್ರೈಮ್ ಗ್ರಾಹಕರು ಅರ್ಹ ವಸ್ತುಗಳ ಮೇಲೆ ಫ್ರೀ ಡೆಲಿವರಿಯನ್ನು ಆನಂದಿಸಬಹುದು. ಅಲ್ಲದೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ಗ್ರಾಹಕರು ಪಡೆದುಕೊಳ್ಳಬಹುದು.

    ಇಂದಿನಿಂದ ಆರಂಭವಾಗಿರುವ ಅಮೆಜಾನ್ ಸಮ್ಮರ್ ಸೇಲ್‌ನ ಮುಕ್ತಾಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ನೀವು ಹೊಸ ಸ್ಮಾರ್ಟ್‌ಫೋನ್, TWS ಇಯರ್‌ಬಡ್‌ಗಳು ಮತ್ತು ಇತರ ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಪರಿಗಣಿಸಬಹುದಾದ ಪಟ್ಟಿ ಇಲ್ಲಿದೆ.

    1) ಸ್ಮಾರ್ಟ್‌ಫೋನ್‌ಗಳು

    ಆ್ಯಪಲ್, ಒನ್‌ಪ್ಲಸ್, ಶಿಯೋಮಿ ಮತ್ತು ಸ್ಯಾಮ್‌ಸಂಗ್‌ನಂತಹ ದೊಡ್ಡ ಬ್ರ್ಯಾಂಡ್‌ಗಳ ಮೇಲೆ ಶೇಕಡಾ 40ರಷ್ಟು ರಿಯಾಯಿತಿ ಇರಲಿದೆ ಎಂದು ಅಮೆಜಾನ್ ಹೇಳಿದೆ. ನೀವು ಹೊಸ ಫೋನ್ ಪಡೆಯಲು ಯೋಜಿಸುತ್ತಿದ್ದರೆ, ರಿಯಾಯಿತಿಯೊಂದಿಗೆ ಲಭ್ಯವಿರುವ ಕೆಲವು ಸಾಧನಗಳು ಇಲ್ಲಿವೆ.

    ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳು (ರೂ. 20,000 ಅಡಿಯಲ್ಲಿ)
    - ಸ್ಯಾಮ್ಸಂಗ್ ಗ್ಯಾಲಕ್ಸಿ M33: ರೂ 17,999

    - iQoo Z6 5G: ರೂ 13,999

    - ರೆಡ್ ಮಿ ನೋಟ್ 11T 5G: ರೂ 15,999

    - ರೆಡ್ ಮಿ ನೋಟ್ 11S: ರೂ 16,499

    ಇದನ್ನೂ ಓದಿ: BSNL Prepaid Plans: ಬಳಕೆದಾರರ ಮನಗೆದ್ದ ಕಡಿಮೆ ಬೆಲೆಯ 5 ಪ್ರಿಪೇಯ್ಡ್​ ಪ್ಲಾನ್​ಗಳಿವು!

    ಮಧ್ಯಮ-ಬಜೆಟ್ ಸ್ಮಾರ್ಟ್ ಫೋನ್
    - ಒನ್ ಪ್ಲಸ್ ನಾರ್ಡ್ CE 2 5G: ರೂ 22,499 (ಬ್ಯಾಂಕ್ ಆಫರ್ಸ್ ಸೇರಿದಂತೆ)

    - ವಿವೋ V21 5G: ರೂ 25,990

    - ಒಪ್ಪೋ F21 Pro: ರೂ 22,999

    - ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G: ರೂ 23,999

    ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು

    - Mi 11X Pro: ರೂ 34,999

    - iQoo 9 SE 5G: ರೂ 33,990

    - ಸ್ಯಾಮ್‌ಸಂಗ್ ಗ್ಯಾಲಕ್ಸಿ A52s: ರೂ. 32,499

    ಆ್ಯಪಲ್ ಐಫೋನ್‌ಗಳು

    - ಆ್ಯಪಲ್ ಐಫೋನ್ SE 3 (64GB): 43,900 ರೂ

    - ಆ್ಯಪಲ್ ಐಫೋನ್ 13 (128GB): 66,900 ರೂ

    - ಆ್ಯಪಲ್ ಐಫೋನ್ 13 ಪ್ರೋ (128GB): 1,19,900 ರೂ

    ಇದನ್ನೂ ಓದಿ: Jio: ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರ್ಧಿತ ನೈಜ 4G ಡಿಜಿಟಲ್ ಲೈಫ್

    ವೈರ್‌ಲೆಸ್ ಮತ್ತು ಟ್ರೂ ವೈರ್‌ಲೆಸ್ ಇಯರ್‌ಫೋನ್‌ಗಳು

    ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಪರಿಕರಗಳು ಮತ್ತು ಇಯರ್‌ಫೋನ್‌ಗಳ ಮೇಲೂ ಸಹ ರಿಯಾಯಿತಿ ಇದೆ. ವೈರ್‌ಲೆಸ್ ಇಯರ್‌ಫೋನ್‌ಗಳು ಶೇಕಡಾ 78ರಷ್ಟು ರಿಯಾಯಿತಿ ಲಭ್ಯವಿರಲಿದೆ.

    - ಒನ್‌ಪ್ಲಸ್ ಬುಲೆಟ್ ವೈರ್‌ಲೆಸ್ Z2: ರೂ 1,899

    - ರೀಲ್ ಮಿ ಬಡ್ಸ್ Q2: 1,999 ರೂ

    - ಒನ್ ಪ್ಲಸ್ ಬಡ್ಸ್ Z2: 4,599 ರೂ

    - ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಪ್ರೋ: 6,990 ರೂ

    - ಆ್ಯಪಲ್ ಏರ್ ಪಾಡ್ಸ್ (2ನೇ ಜನರೇಷನ್): 8,990 ರೂ

    - ಆ್ಯಪಲ್ ಏರ್ ಪಾಡ್ಸ್ (3ನೇ ಜನರೇಷನ್): 16,499 ರೂ

    ಅಮೆಜಾನ್ ಉತ್ಪನ್ನಗಳು
    ಸೇಲ್‌ನಲ್ಲಿ ಗ್ರಾಹಕರು ಅಲೆಕ್ಸಾ ಸಕ್ರಿಯಗೊಳಿಸಿದ ಸಾಧನಗಳನ್ನು ಸಹ ಖರೀದಿಸಬಹುದು.

    - ಅಮೆಜಾನ್ ಸ್ಮಾರ್ಟ್ ಪ್ಲಗ್: 999 ರೂ.

    - ಫೈರ್ ಟಿವಿ ಸ್ಟಿಕ್ (3ನೇ ಜನರೇಷನ್, 2021): 2,899 ರೂ.

    - ಒಒಎಕೋ ಡಾಟ್ (3ನೇ ಜನರೇಷನ್): 2,249 ರೂ.

    - ಎಕೋ ಡಾಟ್ (3ನೇ ಜನರೇಷನ್ ಕಪ್ಪು) + ವಿಪ್ರೋ 9W LED ಸ್ಮಾರ್ಟ್ ಕಲರ್ ಬಲ್ಬ್ ಕಾಂಬೋ: 2,299 ರೂ.

    - ಕಿಂಡಲ್ ಪೇಪರ್ ವೈಟ್ (8 ಜಿಬಿ): 11,299 ರೂ.

    ಸ್ಮಾರ್ಟ್ ಟಿವಿಗಳು
    ಅಮೆಜಾನ್ ಸಮ್ಮರ್ ಸೇಲ್ ಫೆಸ್ಟ್‌ನಲ್ಲಿ ಗ್ರಾಹಕರು 4K ಸ್ಮಾರ್ಟ್-ಟಿವಿಗಳನ್ನು ಪರಿಶೀಲಿಸಬಹುದು. ಬೆಲೆಯನ್ನು ಕಡಿಮೆ ಮಾಡಲು ಕೆಲವು ಟಿವಿಗಳು ಅಮೆಜಾನ್ ಕೂಪನ್‌ನೊಂದಿಗೆ ಲಭ್ಯವಿವೆ.

    - Mi (50-ಇಂಚಿನ) 4K ಅಲ್ಟ್ರಾ HD ಆ್ಯಂಡ್ರಾಯ್ಡ್ ಸ್ಮಾರ್ಟ್ LED TV 4X: ರೂ 29,999

    - ಒನ್ ಪ್ಲಸ್ (43-ಇಂಚಿನ) Y ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆ್ಯಂಡ್ರಾಯ್ಡ್ LED ಟಿವಿ: ರೂ 29,999

    - ರೆಡ್ ಮಿ (50-ಇಂಚಿನ) 4K ಅಲ್ಟ್ರಾ HD ಆ್ಯಂಡ್ರಾಯ್ಡ್ ಸ್ಮಾರ್ಟ್ LED TV X50: ರೂ 32,999

    - ಸೋನಿ ಬ್ರಾವಿಯಾ (43-ಇಂಚು) 4K ಅಲ್ಟ್ರಾ HD ಸ್ಮಾರ್ಟ್ ಆ್ಯಂಡ್ರಾಯ್ಡ್ LED TV KD-43X74: ರೂ 46,990
    Published by:Harshith AS
    First published: