Amazonನಲ್ಲಿ ನಕಲಿ ವಿಮರ್ಶಕರ ಹಾವಳಿ! ಕಂಪನಿ ಈ ಸಮಸ್ಯೆಗಾಗಿ ಏನು ಮಾಡಿದೆ ಗೊತ್ತಾ?

Amazon: ಯಾವುದೇ ಸೈಟ್​ನಲ್ಲಿ ಆನ್​ಲೈನ್ ಶಾಪಿಂಗ್ ಮಾಡುವಾಗ ಜನರು ಕೊಳ್ಳಬೇಕಾದ ಉತ್ಪನ್ನಗಳನ್ನು ಕಾರ್ಟ್ ಗೆ ಹಾಕುವ ಮೊದಲು ಅಲ್ಲಿ ಗ್ರಾಹಕರು ನೀಡಿರುವ ರಿವ್ಯೂಗಳನ್ನು ಮೊದಲು ಪರೀಕ್ಷಿಸಿ ಅನಂತರ ವಸ್ತುಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ.

ಅಮೆಜಾನ್

ಅಮೆಜಾನ್

  • Share this:
    ಆನ್​ಲೈನ್ ಶಾಪಿಂಗ್ (Online Shoping) ಜಾಲತಾಣವಾದ ಅಮೆಜಾನ್ (Amazon) ನಕಲಿ ವಿಮರ್ಶೆ ಬ್ರೋಕರ್‌ಗಳ ವಿರುದ್ಧ ಮೊಕದ್ದಮೆ (Lawsuit) ಹೂಡಿದೆ. ಈ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುವ ಕೆಲವು ಅನ್ಯಾಯದ ಮಾರ್ಗಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. 

    ಯಾವುದೇ ಸೈಟ್​ನಲ್ಲಿ ಆನ್​ಲೈನ್ ಶಾಪಿಂಗ್ ಮಾಡುವಾಗ ಜನರು ಕೊಳ್ಳಬೇಕಾದ ಉತ್ಪನ್ನಗಳನ್ನು ಕಾರ್ಟ್ ಗೆ ಹಾಕುವ ಮೊದಲು ಅಲ್ಲಿ ಗ್ರಾಹಕರು ನೀಡಿರುವ ರಿವ್ಯೂಗಳನ್ನು ಮೊದಲು ಪರೀಕ್ಷಿಸಿ ಅನಂತರ ವಸ್ತುಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ.

    ಆನ್ಲೈನ್ ಶಾಪಿಂಗ್ ಆ್ಯಪ್ನಲ್ಲಿ ಈ ಮೊದಲು ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರು ನೀಡಿರುವ ರಿವ್ಯೂಗಳು ನಮಗೆ ಆ ವಸ್ತು ಹೇಗೆ ಬಾಳಿಕೆ ಬರುತ್ತೆ, ಹೇಗಿದೆ, ಕ್ವಾಲಿಟಿ ಎಂಬ ಇತ್ಯಾದಿ ಮಾಹಿತಿಗಳನ್ನು ನೀಡುತ್ತದೆ. ವಸ್ತುವಿನ ವಿಮರ್ಶೆ ಚೆನ್ನಾಗಿದ್ದರೆ ನಾವು ಆ ವಸ್ತುವನ್ನು ಕೊಳ್ಳಲು ಮುಂದಾಗುತ್ತೇವೆ. ಅಮೇಜಾನ್, ಪ್ಲಿಪ್ ಕಾರ್ಟ್, ಮಿಂತ್ರ ಸೇರಿ ಎಲ್ಲಾ ಆನ್ಲೈನ್ ಶಾಪಿಂಗ್ ಸೈಟ್ ಗಳು ಈ ರಿವ್ಯೂ ವ್ಯವಸ್ಥೆಯನ್ನು ಗ್ರಾಹಕರಿಗೆ ನೀಡುತ್ತವೆ.

    ಹೀಗೆ ರಿವ್ಯೂ ಆಧಾರದ ಮೇಲೆ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಅಲ್ಲಿರುವ ವಿಮರ್ಶೆಗಳೇ ನಕಲಿಯಾದರೇ ಹೇಗೆ..?

    ಹೌದು ಮಾರುಕಟ್ಟೆಯಲ್ಲಿ ಪ್ರಮುಖ ಆನ್ಲೈನ್ ಶಾಪಿಂಗ್ ಜಾಲತಾಣ ಅಮೇಜಾನ್ ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಮೊಕದ್ದಮೆ ಹೂಡಲಾಗಿದೆ. ನಕಲಿ ರಿವ್ಯೂ ನೀಡುತ್ತಿರುವ 2 ಪ್ರಮುಖ ಬ್ರೋಕರ್ ಗಳ ವಿರುದ್ಧ ಸ್ವತಹಃ ಅಮೇಜಾನ್ ಕ್ರಮಕ್ಕೆ ಮುಂದಾಗಿದೆ.

    ಆಪ್‌ಸಾಲಿ ಮತ್ತು ರಿಬೇಟೆಸ್ಟ್ ಎಂಬ ಬ್ರೋಕರ್ ಸಂಸ್ಥೆಗಳು Amazon, eBay, Walmart ಮತ್ತು Etsy ನಂತಹ ಅಂಗಡಿಗಳಲ್ಲಿ ನಕಲಿ ವಿಮರ್ಶೆಗಳನ್ನು ಪೋಸ್ಟ್ ಮಾಡುತ್ತಾ ಗ್ರಾಹಕರನ್ನು ದಾರಿತಪ್ಪಿಸುವ ಕೆಲಸ ಮಾಡುತಿತ್ತು. ಈ ನಕಲಿ ರಿವ್ಯೂ ನಂಬಿ ಅನೇಕ ಗ್ರಾಹಕರು ಮೋಸ ಹೋಗಿದ್ದಾರೆ.

    ಅಮೇಜಾನ್ ನಲ್ಲಿ ನಮ್ಮ ಉತ್ಪನ್ನಗಳ ಬಗ್ಗೆ ನಕಲಿ ರಿವ್ಯೂ ಪೋಸ್ಟ್ ಮಾಡುವ ಬ್ರೋಕರ್‌ಗಳ ವಿರುದ್ಧ ಮೊಕದ್ದಮೆ ಹೂಡಿರುವುದಾಗಿ ಅಮೇಜಾನ್ ಘೋಷಿಸಿದೆ.

    ಅಮೇಜಾನ್, ಇಬೇ, ವಾಲ್‌ಮಾರ್ಟ್ ಮತ್ತು ಇಟ್ಸಿಯಂತಹ ಅಂಗಡಿಗಳಲ್ಲಿ ನಕಲಿ ವಿಮರ್ಶೆಗಳನ್ನು ಪೋಸ್ಟ್ ಮಾಡಲು ತಮ್ಮ ಸದಸ್ಯರು ಪ್ರಯತ್ನಿಸುವ ಮೂಲಕ ಶಾಪರ್‌ಗಳನ್ನು ದಾರಿತಪ್ಪಿಸಲು ಸಹಾಯ ಮಾಡಿದ ಆಪ್‌ಸಾಲಿ ಮತ್ತು ರಿಬೇಟೆಸ್ಟ್ ಎಂಬ ಎರಡು ಪ್ರಮುಖ ನಕಲಿ ವಿಮರ್ಶೆ ಬ್ರೋಕರ್ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಮೇಜಾನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    900,000ಕ್ಕೂ ಹೆಚ್ಚು ಸದಸ್ಯರು ನಕಲಿ ವಿಮರ್ಶೆಗಳನ್ನು ನೀಡುತ್ತಿದ್ದಾರೆ ಎಂದು ಈ ರಿವ್ಯೂ ಬ್ರೋಕರ್‌ಗಳು ಕಾನೂನು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

    ಇದನ್ನೂ ಓದಿ:  Google Chrome ಹೊಸ ಆವೃತ್ತಿ ಬಿಡುಗಡೆ ಸಾಧ್ಯತೆ ಸೃಷ್ಟಿಸಿರುವ ಆತಂಕ!

    ಗ್ರಾಹಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಶಾಪಿಂಗ್ ಮಾಡಲು ಅಮೆಜಾನ್‌ನ ಸಮಗ್ರ ಮತ್ತು ಪೂರ್ವಭಾವಿ ಪ್ರಯತ್ನಗಳ ಭಾಗವಾಗಿದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರಗಳನ್ನು ರಚಿಸಲು ವ್ಯಾಪಕ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    "ನಕಲಿ ರಿವ್ಯೂ ಬ್ರೋಕರ್‌ಗಳು ಗ್ರಾಹಕರನ್ನು ವಂಚಿಸುವ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಾರೆ ಮತ್ತು ನಮ್ಮ ಮಾರಾಟ ಪಾಲುದಾರರಿಗೆ ಹಾನಿ ಮಾಡುವ ಅಕ್ರಮ ಸ್ಪರ್ಧಾತ್ಮಕ ಪ್ರಯೋಜನವನ್ನು ಸೃಷ್ಟಿಸುತ್ತಾರೆ" ಎಂದು Amazon ನಲ್ಲಿನ ವರ್ಲ್ಡ್‌ವೈಡ್ ಗ್ರಾಹಕ ಟ್ರಸ್ಟ್ ಮತ್ತು ಪಾಲುದಾರರ ಬೆಂಬಲದ ಉಪಾಧ್ಯಕ್ಷ ಧರ್ಮೇಶ್ ಮೆಹ್ತಾ ಹೇಳಿದರು.

    ಇದನ್ನೂ ಓದಿ: Twitter ಸದ್ಯದಲ್ಲೇ ಪರಿಚಯಿಸಲಿದೆ ಹೊಸ ಬಟನ್! ನಿಮಗೆ conversation ಇಷ್ಟವಿಲ್ಲದಿದ್ದರೆ, ನೀವು ಹೊರ ಬರಬಹುದು!

    "ನಮ್ಮ ಗ್ರಾಹಕರಿಗೆ ವಿಶ್ವಾಸಾರ್ಹ ವಿಮರ್ಶೆಗಳು ಎಷ್ಟು ಮೌಲ್ಯಯುತವಾಗಿವೆ ಎಂದು ನಮಗೆ ತಿಳಿದಿದೆ. ಅದಕ್ಕಾಗಿಯೇ ನಾವು ಈ ವಿಮರ್ಶೆ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದೇವೆ ಎಂದು ಹೇಳಿದ್ದಾರೆ.

    ಅಮೇಜಾನ್ ಒಂದು ಆನ್ಲೈನ್ ಶಾಪಿಂಗ್ ಸೈಟ್ ಆಗಿದ್ದು, ಇಲ್ಲಿ ಬಟ್ಟೆ, ಗ್ರಾಸರಿ, ಇಲೆಕ್ಟ್ರಾನಿಕ್ ವಸ್ತುಗಳು, ಟಿವಿ, ಮೊಬೈಲ್ ಸೇರಿ ಲಕ್ಷಾಂತರ ಉತ್ಪನ್ನಗಳನ್ನು ಮಾರುವ ಅಂಗಡಿಯಾಗಿದೆ. ಅಮೇಜಾನ್ ಆನ್ಲೈನ್ ಶಾಪಿ೦ಗ್ ಅನ್ನು ಮೈಕಲ್ ಆಲ್ಡ್ರಿಚ್ ಎಂಬುವವರು 1980 ರಲ್ಲಿ ಪ್ರಾರಂಭಿಸಿದರು. ಈ ಅಂಗಡಿ ಸದ್ಯ ಹೆಮ್ಮರವಾಗಿ ಬೆಳೆದಿದ್ದು ಇ-ಕಾಮರ್ಸ್ ವ್ಯವಹಾರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.
    Published by:Harshith AS
    First published: