ಇ-ಕಾಮರ್ಸ್ (E -Commerce) ದೈತ್ಯ ಅಮೆಜಾನ್ ಜಗತ್ತಿನಾದ್ಯಂತ ಸುಮಾರು 18,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಕಂಪನಿಯು ಭಾರತದಲ್ಲಿ ಕೂಡ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದೆ. ಉದ್ಯೋಗ ಕಡಿತದ ಪರಿಣಾಮ, ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಐಐಟಿ ಪದವೀಧರನೋರ್ವ ವಜಾಗೊಂಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮೆಜಾನ್ನಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ (Engineering) ಆಗಿ ಕೆಲಸ ಮಾಡುತ್ತಿದ್ದ ಹರ್ಷ್ ಎಂಬುವವರು ವಜಾಗೊಂಡಿರುವ ಬಗ್ಗೆ ಲಿಂಕ್ಡ್ ಇನ್ ಪೋಸ್ಟ್ನಲ್ಲಿ (Instagram) ಹಂಚಿಕೊಂಡಿದ್ದಾರೆ. ಅಂದಹಾಗೆ ಹರ್ಷ್ ಅವರು ಸುಮಾರು ಆರು ತಿಂಗಳ ಹಿಂದೆ ಅಮೆಜಾನ್ ಸೇರಿಕೊಂಡಿದ್ದು ಕೆಲ ದಿನಗಳ ಹಿಂದೆ ವಜಾಗೊಳಿಸುವ ಬಗ್ಗೆ ಅವರಿಗೆ ಹೇಳಲಾಗಿತ್ತು. ತಮ್ಮ ಪೋಸ್ಟ್ನಲ್ಲಿ, "ನನ್ನ 2023ಅನ್ನು ಹೀಗೆ ಆರಂಭಿಸಲು ಎಂದಿಗೂ ಬಯಸಲಿಲ್ಲ. ಆದರೆ ಅಮೆಜಾನ್ ನಿಂದ ನನ್ನನ್ನು ಇತ್ತೀಚಿಗೆ ಕೆಲಸದಿಂದ ವಜಾಗೊಳಿಡಲಾಗಿದೆ” ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
“ಸೂಕ್ತ ಅವಕಾಶಗಳಿದ್ದರೆ ತಿಳಿಸಿ”
ಹರ್ಷ್ ಅವರು ತಮ್ಮ ಪೋಸ್ಟ್ನಲ್ಲಿ "ಐಐಟಿ ಮಂಡಿಯಿಂದ ಬಿಟೆಕ್ ಸಿಎಸ್ಇ ಮೇಜರ್ ಆಗಿ ಪದವಿ ಪಡೆದಿದ್ದೇನೆ. ಅಮೆಜಾನ್ನಲ್ಲಿ ನಾನು ಕಡಿಮೆ ಸಮಯ ಇದ್ದರೂ ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಸಾಫ್ಟ್ವೇರ್ ಇಂಜಿನಿಯರ್ ಆಗಿ ಬೆಳೆಯಲು ನನಗೆ ಸಿಕ್ಕ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.
ಈ 6 ತಿಂಗಳಲ್ಲಿ ನಾನು ಜಾವಾದಲ್ಲಿ ಕೆಲಸ ಮಾಡಿದ್ದೇನೆ. ReactJS, AWS ಲ್ಯಾಂಬ್ಡಾ, EC2, VPC, API ಗೇಟ್ವೇ, ವರ್ಕ್ಫ್ಲೋ ಆರ್ಕೆಸ್ಟ್ರೇಟರ್ಗಳು ಮತ್ತು ಪರ್ಫಾರ್ಮೆನ್ಸ್ ಅಲಾರಮ್ಗಳೊಂದಿಗೆ ಪ್ರಾಯೋಗಿಕ ಅನುಭವವನ್ನು ಪಡೆಯುವಾಗ ಸಂಪೂರ್ಣ AWS ಆರ್ಕಿಟೆಕ್ಚರ್ನಲ್ಲಿ ಆಧಾರಿತ ಟೆಕ್ ಸ್ಟಾಕ್ ಅನುಭವ ಹೊಂದಿದ್ದೇನೆ” ಎಂದಿದ್ದಾರೆ.
"ನಾನು ಪೂರ್ಣ ಸ್ಟಾಕ್ / ಬ್ಯಾಕೆಂಡ್ / ಮುಂಭಾಗದ ಅಭಿವೃದ್ಧಿಯಲ್ಲಿ ಉದ್ಯೋಗ ಅವಕಾಶವನ್ನು ಹುಡುಕುತ್ತಿದ್ದೇನೆ. ಸ್ಥಳಾಂತರಗೊಳ್ಳಲು ನಾನು ಸಿದ್ಧನಿದ್ದೇನೆ ಮತ್ತು ಫೆಬ್ರವರಿ ಮೊದಲ ವಾರದಿಂದ ಸೇರಿಕೊಳ್ಳಬಹುದು.
ನೀವು ಸೂಕ್ತವಾದ ಉದ್ಯೋಗಾವಕಾಶವನ್ನು ಕಂಡರೆ, ದಯವಿಟ್ಟು ನನಗೆ ತಿಳಿಸಿ" ಎಂಬುದಾಗಿ ಹರ್ಷ್ ಬರೆದುಕೊಂಡಿದ್ದಾರೆ. ಈ ಮಧ್ಯೆ ಹರ್ಷ್ 2021 ರಲ್ಲಿ ಮೂರು ತಿಂಗಳ ಕಾಲ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದರು.
ಭಾರತದಲ್ಲಿ 1 ಸಾವಿರ ಉದ್ಯೋಗಿಗಳು ವಜಾ!
ಅಂದಹಾಗೆ ಇತ್ತೀಚಿಗಷ್ಟೇ ಸಾಮೂಹಿಕ ವಜಾಗೊಳಿಸುವಿಕೆಯ ಬಗ್ಗೆ ಅಮೆಜಾನ್ ಘೋಷಿಸಿತ್ತು. ಕಂಪನಿಯು ಜಾಗತಿಕವಾಗಿ 18 ಸಾವಿರ ಉದ್ಯೋಗ ಕಡಿತ ಮಾಡಲು ನಿರ್ಧರಿಸಿರುವುದಾಗಿ ಸಿಇಒ ಆಂಡಿ ಜಾಸ್ಸಿ ಹೇಳಿಕೆ ನೀಡಿದ್ದರು.
ಈಗಾಗಲೇ ಭಾರತದಲ್ಲೂ ವಜಾಗೊಳಿಸುವಿಕೆ ಆರಂಭವಾಗಿದ್ದು ಸಾಕಷ್ಟು ಜನರು ಏಕಾಏಕಿ ಉದ್ಯೋಗ ಕಳೆದುಕೊಂಡಿದ್ದಾರೆ. ತಮ್ಮ ಹೇಳಿಕೆಯಲ್ಲಿ "ಈ ಉದ್ಯೋಗ ಕಡಿತದಿಂದಾಗಿ ಜನರಿಗೆ ಆಗುವ ಕಷ್ಟದ ಬಗ್ಗೆ ನಮಗೆ ಅರಿವಿದೆ ಎಂದಿರುವ ಜಾಸ್ಸಿ, ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದ್ದರು.
ಅಲ್ಲದೇ "ನಾವು ವಜಾಗೊಂಡವರನ್ನು ಬೆಂಬಲಿಸಲು ಪರಿಹಾರಗಳನ್ನೂ ನೀಡುತ್ತಿದ್ದೇವೆ. 5 ತಿಂಗಳ ವೇತನ, ಪರಿವರ್ತನೆಯ ಆರೋಗ್ಯ ವಿಮೆ ಪ್ರಯೋಜನಗಳು ಮತ್ತು ಬಾಹ್ಯ ಉದ್ಯೋಗ ನಿಯೋಜನೆ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್ಗಳನ್ನು ಒದಗಿಸುತ್ತಿದ್ದೇವೆ" ಎಂದು ಹೇಳಿದ್ದರು.
ಇದನ್ನೂ ಓದಿ: ಕೇವಲ 225 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ ಲೈಫ್ಟೈಮ್ ವ್ಯಾಲಿಡಿಟಿ ಪ್ರಯೋಜನ!
ಈ ಮಧ್ಯೆ, ತಂತ್ರಜ್ಞಾನ, ಮಾನವ ಸಂಪನ್ಮೂಲ ಮತ್ತು ಇನ್ನೂ ಕೆಲವು ವಿಭಾಗಗಳೂ ಸೇರಿದಂತೆ ಅಮೆಜಾನ್ ಇಂಡಿಯಾದಲ್ಲಿನ ಸುಮಾರು 1000 ಉದ್ಯೋಗಿಗಳನ್ನು ವಜಾ ಮಾಡಬಹುದೆಂದು ಹೇಳಲಾಗಿದೆ.
ಅಮೆಜಾನ್ ಉದ್ಯೋಗಿಗಳಿಗೆ ಈಗಾಗಲೇ ವಜಾಗೊಳಿಸುವಿಕೆ ಇಮೇಲ್ ಕಳುಹಿಸುತ್ತಿದೆ. ಅವರನ್ನು ವಜಾಗೊಳಿಸಲಾಗಿದೆ ಎಂದು ಇಮೇಲ್ನಲ್ಲಿ ತಿಳಿಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ವಿವರಣೆಗಾಗಿ ಲೀಡರ್ಶಿಪ್ ಟೀಂ ಭೇಟಿಯಾಗುವಂತೆ ಹೇಳಲಾಗುತ್ತಿದೆ.
ಅಲ್ಲದೇ ಅದೇ ಇಮೇಲ್ನಲ್ಲಿ, ಕಂಪನಿಯು 5 ತಿಂಗಳ ಬೇರ್ಪಡಿಕೆ ವೇತನವನ್ನು ನೀಡುವುದಾಗಿ ಭರವಸೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ