ಚೀನಾ ಮೂಲಕ ಜನಪ್ರಿಯ ಟಿಕ್ಟಾಕ್ ಆ್ಯಪ್ ಭಾರತದಲ್ಲಿ ಬ್ಯಾನ್ ಆಗಿದೆ. ಅನೇಕ ಭಾರತೀಯ ಬಳಕೆದಾರರನ್ನು ಟಿಕ್ಟಾಕ್ ಕಳೆದುಕೊಂಡಿದೆ. ಈ ವಿಚಾರ ವಿಶ್ವದಾದ್ಯಂತ ಸುದ್ದಿಯಾದಂತೆ ಅಮೆರಿಕ ಮತ್ತು ಆಸ್ಟ್ರೇಲಿಯ ಕೂಡ ತಮ್ಮ ದೇಶದಲ್ಲಿ ಬ್ಯಾನ್ ಮಾಡಲು ಮುಂದಾಗಿದೆ. ಆದರೀಗ ಜನಪ್ರಿಯ ಆನ್ಲೈನ್ ಮಳಿಗೆಯಾದ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಟಿಕ್ಟಾಕ್ ಆ್ಯಪ್ ಅನ್ನು ಬಳಸಬಾರದೆಂದು ಹೇಳಿ ಕೆಲವೇ ಗಂಟೆಗಳಲ್ಲಿ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಅಮೆಜಾನ್ ಸಂಸ್ಥೆ ಶುಕ್ರವಾರದಂದು ತನ್ನ ಉದ್ಯೋಗಿಗಳಿಗೆ ಟಿಕ್ಟಾಕ್ ಆ್ಯಪ್ ಬಳಸದಂತೆ ಮಾತ್ರವಲ್ಲದೆ, ಕೂಡಲೇ ಡಿಲೀಟ್ ಮಾಡುವಂತೆ ಇ-ಮೇಲ್ ಮೂಲಕ ಸೂಚನೆ ನೀಡಿತ್ತು. ತದನಂತರ ಕೆಲವೇ ಹೊತ್ತಿನಲ್ಲಿ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಅಷ್ಟು ಮಾತ್ರವಲ್ಲದೆ, ಕಣ್ತಪ್ಪಿನಿಂದಾಗಿ ಮೇಲ್ ಕಳುಹಿಸಲಾಗಿದೆ ಎಂದು ತಿಳಿಸಿದೆ.
ಅಮೆಜಾನ್ ವಿಶ್ವದಾದ್ಯಂತ 8 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ, ಭಾರತ ಸೇರಿದಂತೆ ಹಲವು ದೇಶದಲ್ಲಿ ಅಮೆಜಾನ್ ಕಾರ್ಯನಿರ್ವಹಿಸುತ್ತಿದೆ. ಆದರೀಗ ಅಮೆಜಾನ್ ಮೊದಲಿಗೆ ಟಿಕ್ಟಾಕ್ ಬಳಸದಂತೆ ತನ್ನ ಉದ್ಯೋಗಿಗಳಿಗೆ ಹೇಳಿರುವ ಕಾರಣ ಮಾತ್ರ ಸ್ಪಷವಾಗಿಲ್ಲ.
ಇತ್ತೀಚೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೋಪಿಂಯೋ ಟಿಕ್ಟಾಕ್ ನಿಷೇಧ ಮಾಡುವುದರ ಕುರಿತು ಚಿಂತಿಸುವುದಾಗಿ ಹೇಳಿತ್ತು. ಮಾತ್ರವಲ್ಲದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಳೆದ ಮಂಗಳವಾರದಂದು ಮಾತನಾಡಿ ಟಿಕ್ಟಾಕ್ ಆ್ಯಪ್ ನಿಷೇಧಿಸುವುದನ್ನು ಆಡಳಿತವು ನಿರ್ಣಯಿಸುತ್ತದೆ ಎಂದು ಹೇಳಿದ್ದರು.
ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್ ರೋಲ್ನಲ್ಲಿ ಸೈಕೋ ಸುಂದರಿ
Happy Birthday Shiva Rajkumar: ಸ್ಟಿಲ್ ಯಂಗ್ ಮಾ; ಶಿವಣ್ಣನ ಹುಟ್ಟುಹಬ್ಬಕ್ಕೆ ಅಪ್ಪು ಬಿಡುಗಡೆ ಮಾಡುತ್ತಿದ್ದಾರೆ ಸ್ಪೆಷಲ್ ಹಾಡು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ