2023ರ ಹೊಸ ವರ್ಷ ಬರುವಾಗ ಇಕಾಮರ್ಸ್ ವೆಬ್ಸೈಟ್ಗಳ (E-Commerse Websites) ಮೇಲೆಯೇ ಎಲ್ಲರ ಕಣ್ಣಿತ್ತು ಎಂದರೆ ತಪ್ಪಾಗಲಾರದು. ಯಾಕೆಂದರೆ ಇತ್ತೀಚಿನ ಜನರು ಯಾವುದೇ ಪ್ರೊಡಕ್ಟ್ ಅನ್ನು ಖರೀದಿಸಬೇಕಾದರು ಅದರಲ್ಲಿ ರಿಯಾಯಿತಿಯನ್ನು ಕೇಳೇ ಕೇಳುತ್ತಾರೆ. ಇದೀಗ ಅಮೆಜಾನ್ ಗಣರಾಜ್ಯೋತ್ಸವದ ಪ್ರಯುಕ್ತ ದೊಡ್ಡ ಮಟ್ಟಿನ ಮಾರಾಟ ಮೇಳವೊಂದನ್ನು ಆಯೋಜಿಸಿದೆ. ಈ ಸೇಲ್ ಇದೇ ಜನವರಿ 15ರಂದು ಪ್ರಾರಂಭವಾಗಿದ್ದು ಇನ್ನೇನು ನಾಲ್ಕು ದಿನಗಳಲ್ಲಿ ಅಂದರೆ ಜನವರಿ 20ರಂದು ಮುಗಿಯುತ್ತದೆ. ಈ ಸೇಲ್ನಲ್ಲಿ ಅಮೆಜಾನ್ ಸ್ಮಾರ್ಟ್ಫೋನ್ (Smartphones)ಗಳ, ಗ್ಯಾಜೆಟ್ಸ್ (Gadgets), ಎಲೆಕ್ಟ್ರಾನಿಕ್ಸ್ ಐಟಮ್ಸ್ ಈ ಎಲ್ಲಾ ಸಾಧನಗಳನ್ನು ಬಂಪರ್ ಆಫರ್ನೊಂದಿಗೆ ಮಾರಾಟ ಮಾಡುತ್ತಿದೆ. ಇದೀಗ ಸ್ಮಾರ್ಟ್ಹೋಮ್ ಡಿವೈಸ್ಗಳ ಮೇಲೂ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.
ಅಮೆಜಾನ್ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅನ್ನು ಆಯೋಜಿಸಿದ್ದು, ಇದು 2023ರ ಮೊದಲನೇ ದೊಡ್ಡ ಸೇಲ್ ಅಂತಾನೇ ಹೇಳ್ಬಹುದು.ಇದೀಗ ಈ ಸೇಲ್ನಲ್ಲಿ ಸ್ಮಾರ್ಟ್ಹೋಮ್ ಡಿವೈಸ್ಗಳನ್ನು ಭಾರೀ ಆಫರ್ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. 10 ಸಾವಿರದ ಒಳಗಿನ ಟೆಕ್ ಡಿವೈಸ್ಗಳನ್ನು ಖರೀದಿ ಮಾಡಬೇಕೆಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಎಕೋ ಡಾಟ್ 4th ಜೆನ್ ವಿಥ್ ಕ್ಲಾಕ್
ಎಕೋ ಡಾಟ್ 4ನೇ ಜೆನ್ ವಿಥ್ ಕ್ಲಾಕ್ಗೆ ಅಮೆಜಾನ್ನಲ್ಲಿ 494 ರೂಪಾಯಿಗಳ ರಿಯಾಯಿತಿ ನೀಡಲಾಗಿದೆ. ಈ ಮೂಲಕ ಎಕೋ ಡಾಟ್ 4ನೇ ಜೆನ್ ವಿಥ್ ಕ್ಲಾಕ್ ಅನ್ನು ಕೇವ 4,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ.
ಹಾಗೆಯೇ ಹೊಸ ಗೋಳಾಕಾರದ ವಿನ್ಯಾಸ ಮತ್ತು ಸುಧಾರಿತ ಕಾರ್ಯಕ್ಷಮತೆಯನ್ನು ಇದು ಹೊಂದಿದೆ. ಹಾಗೆಯೇ ದೂರದಿಂದಲೂ ವಾಯ್ಸ್ ಮೂಲಕ ಕಾರ್ಯ ನಿರ್ವಹಿಸಬಹುದಾಗಿದ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಲೆಕ್ಸಾ ಬೆಂಬಲಿಸಲಿದೆ.
ಎಕೋ ಬಡ್ಸ್ 2ನೇ ಜೆನ್ ಟಿಡಬ್ಲ್ಯೂಎಸ್
ಎಕೋ ಬಡ್ಸ್ 2ನೇ ಜೆನ್ ಟಿಡಬ್ಲ್ಯೂಎಸ್ 6,000 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 5,999 ರೂ. ಗಳಲ್ಲಿ ಲಭ್ಯವಿದೆ. ಹಾಗಿದ್ರೆ ಈ ಸಾಧನದ ಒಟ್ಟು ಬೆಲೆ 12 ಸಾವಿರ ರೂಪಾಯಿ ಆಗಿದೆ. ಈ ಮೂಲಕ ಈ ಇಯರ್ಬಡ್ಸ್ ಅನ್ನು ಖರೀದಿ ಮಾಡುವವರಿಗೆ ಅರ್ಧದಷ್ಟು ಬೆಲೆ ಕಡಿತವಾಗುತ್ತದೆ.
ಎಕೋ ಬಡ್ಸ್ TWS ಇಯರ್ಬಡ್ಗಳು 5.7mm ಆಡಿಯೋ ಡ್ರೈವರ್ ಯೂನಿಟ್ ಮತ್ತು ಮೂರು ಮೈಕ್ರೊಫೋನ್ಗಳನ್ನು ಹೊಂದಿದ್ದು, ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ ಅನ್ನು ಸಹ ಇದು ಹೊಂದಿದೆ.
ಅಮೆಜಾನ್ ಸ್ಮಾರ್ಟ್ ಪ್ಲಗ್
ಅಮೆಜಾನ್ ಸ್ಮಾರ್ಟ್ ಪ್ಲಗ್ ಅನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡುವುದಾದರೆ ಇದರನ= ಬೆಲೆ 2 ಸಾವಿರ ರೂಪಾಯಿಯಾಗಿದೆ. ಆದರೆ ಅಮೆಜಾನ್ನಲ್ಲಿ ಈ ಡಿವೈಸ್ನ ಮೇಲೆ ಈ 100 ರೂಪಾಯಿಗಳ ರಿಯಾಯಿತಿಯನ್ನು ಹೊಂದಿದೆ.
ಈ ಮೂಲಕ 1,899 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಈ ಪ್ಲಗ್ ಯಾವುದೇ ಗೃಹೋಪಯೋಗಿ ಉಪಕರಣಗಳಿಗೆ ವಾಯ್ಸ್ ಕಂಟ್ರೋಲ್ ಫೀಚರ್ಸ್ ನೀಡಲಿದೆ. ಯಾವುದೇ ಸಾಕೆಟ್ಗೆ ವಾಯ್ಸ್ ಕಂಟ್ರೋಲ್ ಆ್ಯಡ್ ಮಾಡಲು ಇದು ಅಲೆಕ್ಸಾದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಎಕೋ 4ನೇ ಜೆನ್ ಸ್ಮಾರ್ಟ್ ಡಿವೈಸ್
ಎಕೋ 4ನೇ ಜೆನ್ ಸ್ಮಾರ್ಟ್ ಡಿವೈಸ್ 1,499 ರೂಪಾಯಿಗಳಷ್ಟು ಅಮೆಜಾನ್ನಲ್ಲಿ ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ ಈ ಡಿವೈಸ್ ಅನ್ನು 8,499 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಡಾಲ್ಬಿ ಫೀಚರ್ಸ್ ಹೊಂದಿದ್ದು, ಡೀಪ್ ಬೇಸ್ ಸಂಗೀತ ಅನುಭವ ನೀಡಲಿದೆ.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿದೆ ‘ಐಕ್ಯೂ ನಿಯೋ 7‘ ಸ್ಮಾರ್ಟ್ಫೋನ್! ಬೆಲೆ ಎಷ್ಟು?
ಹಾಗೆಯೇ ಹ್ಯಾಂಡ್ಸ್-ಫ್ರೀ ಮ್ಯೂಸಿಕ್ ಕಂಟ್ರೋಲ್ ಅನ್ನು ಸಹ ಇದು ನೀಡಲಿದೆ. ಇದರೊಂದಿಗೆ ಬಳಕೆದಾರರು ಅಮೆಜಾನ್ ಪ್ರೈಮ್ ಮ್ಯೂಸಿಕ್, ಸ್ಪಾಟಿಫೈ, ಜಿಯೋಸವಾನ್, ಗಾನ ಅಥವಾ ಆ್ಯಪಲ್ ಮ್ಯೂಸಿಕ್ ಮೂಲಕ ನೆಚ್ಚಿನ ಭಾಷೆಯಲ್ಲಿ ಸಂಗೀತ ಆಲಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ