ಪ್ರಮುಖ ಇಕಾಮರ್ಸ್ ಕಂಪೆನಿಗಳು (E-Commerse Company) ತಮ್ಮ ಗ್ರಾಹಕರಿಗಾಗಿ ಪ್ರತೀ ಬಾರಿ ಏನಾದರೊಂದು ವಿಶೇಷ ಆಫರ್ಗಳನ್ನು ನೀಡುತ್ತಲೇ ಇರುತ್ತದೆ. ಅದೇ ರೀತಿ ಜನಪ್ರಿಯ ಇಕಾಮರ್ಸ್ ಕಂಪೆನಿಗಳಲ್ಲಿ ಒಂದಾದ ಅಮೆಜಾನ್ (Amazon) ಇದೀಗ ತನ್ನ ಗ್ರಾಹಕರಿಗಾಗಿ ವಿಶೇಷ ಸೇಲ್ ಒಂದನ್ನು ಪ್ರಾರಂಬಿಸಿದೆ. ಇಕಾಮರ್ಸ್ ಕಂಪೆನಿಗಳು ಯಾವುದೇ ಆಫರ್ ಸೇಲ್ಗಳನ್ನು ಆರಂಭಿಸಿದಾಗ ಅದರಲ್ಲಿ ಗ್ಯಾಜೆಟ್ಗಳ (Gadgets) ಮೇಲೆ, ಸ್ಮಾರ್ಟ್ಟಿವಿಗಳು, ಸ್ಮಾರ್ಟ್ಫೋನ್ಗಳನ್ನು ಭಾರೀ ಅಗ್ಗದಲ್ಲಿ ಮಾರಾಟ ಮಾಡುತ್ತದೆ. ಅಮೆಜಾನ್ ಇದೀಗ ಜನವರಿ 15 ರಂದು ರಿಪಬ್ಲಿಕ್ ಡೇ ಪ್ರಯುಕ್ತ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಜನಪ್ರಿಯ ಬ್ರಾಂಡ್ಗಳ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ.
ಹೌದು, ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳನ್ನು ಭರ್ಜರಿ ಡಿಸ್ಕೌಂಟ್ನಲ್ಲಿ ಖರೀದಿಸಬಹುದಾಗಿದೆ. ಹಾಗಿದ್ರೆ ಯಾವೆಲ್ಲಾ ಸ್ಮಾರ್ಟ್ಫೋನ್ಗಳು ಆಫರ್ನಲ್ಲಿ ಲಭ್ಯ ಇದೆ ಎಂಬುದನ್ನು ಇಲ್ಲಿ ನೋಡಿ
ಒನ್ಪ್ಲಸ್ ನಾರ್ಡ್ ಸಿಇ 2 ಲೈಟ್ 5ಜಿ
ಒನ್ಪ್ಲಸ್ ನಾರ್ಡ್ ಸಿಇ 2 ಲೈಟ್ 5ಜಿ ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ನಲ್ಲಿ ಖರೀದಿ ಮಾಡಿದ್ರೆ 10% ತ್ವರಿತ ಕ್ಯಾಶ್ಬ್ಯಾಕ್ ಲಭ್ಯವಾಗುತ್ತದೆ. ಇನ್ನು ಈ ಸ್ಮಾರ್ಟ್ಫೋನ್ ಅನ್ನು ಅಮೆಜಾನ್ ಆಫರ್ ಸೇಲ್ನಲ್ಲಿ 17,499 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 5ಜಿ ಎಸ್ಓಸಿ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಒಳಗೊಂಡಿದೆ.
ರೆಡ್ಮಿ ನೋಟ್ 12 5ಜಿ
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್ಫೋನ್ ಅನ್ನು ಈ ಅಮೆಜಾನ್ ಆಫರ್ನಲ್ಲಿ 16,499 ರೂಪಾಯಿಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಈ ಫೋನ್ ಸ್ನಾಪ್ಡ್ರಾಗನ್ 4 ಜೆನ್1 SoC ನಿಂದ ಕಾರ್ಯನಿರ್ವಹಿಸಲಿದೆ. ಇನ್ನು ಇದರ ಕ್ಯಾಮೆರಾ ಫೀಚರ್ಸ್ಗಳ ಬಗ್ಗೆ ಹೇಳುವುದಾದರೆ ಇದು 8ಎಮ್ಪಿ ಅಲ್ಟ್ರಾ ವೈಡ್ ಸೆನ್ಸಾರ್ ಮತ್ತು 2ಎಮ್ಪಿ ಮ್ಯಾಕ್ರೋ ಕ್ಯಾಮೆರಾದೊಂದಿಗೆ 48ಎಮ್ಪಿ ಎಐ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 5ಜಿ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 5ಜಿ ಸ್ಮಾರ್ಟ್ಫೋನ್ ಅನ್ನು ಕೇವಲ 28,749 ರೂಪಾಯಿಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಫೋನ್ನ ಪ್ರೊಸೆಸರ್ ಬಗ್ಗೆ ಹೇಳುವುದಾದರೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಎಸ್ಓಸಿ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸಾರ್ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ರೆಡ್ಮಿ 11 ಪ್ರೈಮ್ 5ಜಿ
ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್ ಅನ್ನು ಆಫರ್ ಬೆಲೆಯಲ್ಲಿ ಕೇವಲ 10,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನುಳಿದಂತೆ ಈ ಫೋನ್ ಫೀಚರ್ಸ್ ಹೇಗಿದೆ ಎಂದು ನೋಡುವುದಾದರೆ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ.
ರಿಯಲ್ಮಿ ನಾರ್ಜೋ 50 ಪ್ರೋ 5ಜಿ
ರಿಯಲ್ಮಿ ನಾರ್ಜೋ 50 ಪ್ರೋ 5ಜಿ ಸ್ಮಾರ್ಟ್ಫೋನ್ ಅನ್ನು 14,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 920 5ಜಿ SoC ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ: ಈ ರೀಚಾರ್ಜ್ ಪ್ಲ್ಯಾನ್ನಲ್ಲಿ 75 ಜಿಬಿ ಡೇಟಾ ಉಚಿತ! ಬೆಲೆ ಎಷ್ಟು ಗೊತ್ತಾ?
ಒನ್ಪ್ಲಸ್ 10ಆರ್ 5ಜಿ
ಒನ್ಪ್ಲಸ್ 10ಆರ್ 5ಜಿ ಸ್ಮಾರ್ಟ್ಫೋನ್ ಅನ್ನು ನೀವು 18,050 ರೂಪಾಯಿಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಸಾಮಾನ್ಯ ದರ 29,999 ರೂಪಾಯಿಗಳಾಗಿದೆ. ಹಾಗೆಯೇ ಎಸ್ಬಿಐ ಕಾರ್ಡ್ ಬಳಕೆ ಮೂಲಕ ಖರೀದಿ ಮಾಡಿದರೆ ಈ ಸ್ಮಾರ್ಟ್ಫೋನ್ ಅನ್ನು 10% ನಷ್ಟು ಹೆಚ್ಚುವರಿ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್ಫೋನ್ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ ನಿಂದ ಕಾರ್ಯನಿರ್ವಹಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ