ಲಾರಿ ಮುಷ್ಕರದಿಂದ ಅಮೆಜಾನ್​ಗೆ ಭಾರೀ ಹೊಡೆತ!


Updated:July 27, 2018, 2:33 PM IST
ಲಾರಿ ಮುಷ್ಕರದಿಂದ ಅಮೆಜಾನ್​ಗೆ ಭಾರೀ ಹೊಡೆತ!

Updated: July 27, 2018, 2:33 PM IST
ಇಂಧನ ದರ ಇಳಿಸಬೇಕು, ರಾಷ್ಟ್ರವ್ಯಾಪಿ ಏಕರೂಪ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಲಾರಿ ಏಜೆಂಟರು ಮತ್ತು ಮಾಲೀಕರು ನಡೆಸುತ್ತಿರುವ ಪ್ರತಿಭಟನೆಯಿಂದ ಖ್ಯಾತ ಇ-ಕಾಮರ್ಸ್​ ಕಂಪನಿಗಳಾದ ಅಮೆಜಾನ್​ ಹಾಗೂ ಫ್ಲಿಪ್​ಕಾರ್ಟ್​ಗಳ ಮೇಲೆ ಭಾರೀ ಪರಿಣಾಮ ಬೀರಿದೆ.

ಇಂದನ ಬೆಲೆ ಇಳಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಭಾರತ ಮೋಟಾರ್ ಸಾರಿಗೆ ಕಾಂಗ್ರೆಸ್ ಮುಷ್ಕರಕ್ಕೆ ಕರೆ ನೀಡಿತ್ತು. ಅಮೇಜಾನ್​ ಮತ್ತು ಫ್ಲಿಪ್​ಕಾರ್ಟ್​ನವರ ವಾರ್ಷಿಕ ಮಾರಾಟ ಆಫರ್​ ಮುಗಿದ ಕೆಲವೇ ದಿನಗಳಲ್ಲಿ ಈ ಪ್ರತಿಭಟನೆ ಕರೆ ಬಂದಿತ್ತು.

ಈ ಪ್ರತಿಭಟನೆಯಿಂದಾಗಿ ಅಮೆಜಾನ್​ನಲ್ಲಿ ಮಾರಾಟಗೊಂಡ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ತೊಂದರೆಯುಂಟಾಗುತ್ತಿದ್ದು, ಶೀಘ್ರದಲ್ಲೇ ಇದಕ್ಕಾಗಿ ನೂತನ ಕ್ರಮವನ್ನು ತೆಗೆದುಕೊಳ್ಳುವುದಾಗಿ ಅಮೆಜಾನ್​ ವಕ್ತಾರೆ ಹೇಳಿದ್ದಾರೆ.

ಇನ್ನು ಜಪಾನ್​ನ ಸಾಫ್ಟ್​ ಬ್ಯಾಂಕ್​ ಹೂಡಿಕೆದಾರರನ್ನು ಹೊಂದಿರುವ ಸ್ನಾಪ್​ಡೀಲ್​ ಸಂಸ್ಥೆಗೂ ಕೂಡಾ ಮುಷ್ಕರದ ಬಿಸಿ ತಾಗಿದ್ದು ಉತ್ತರ ಮತ್ತು ಪಶ್ಚಿಮ ಭಾರತದ ಹಲವು ಪ್ರದೇಶಗಳಿಗೆ ತಲುಪಬೇಕಿದ್ದ ವಸ್ತಗಳನ್ನು ತಲುಪಿಸಲು ಹೆಚ್ಚಿನ ಸಮಯ ತಗುಲುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಈ ಕುರಿತು ಗ್ರಾಹಕರಿಗೆ ಹಾಗು ಮಾರಾಟಗಾರರಿಗೂ ಮಾಹಿತಿಯನ್ನು ತಲುಪಿಸಲಾಗಿದೆ ಎಂದಿದ್ದಾರೆ.

ಪ್ರತಿಭಟನೆಯಿಂದಾಗಿ ಹತ್ತಿ ಉತ್ಪನ್ನಗಳ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ ಎಂದು ಕಾಟನ್​ ಅಸೋಸಿಯೇಷನ್​ ಸಂಘದ ಅಧ್ಯಕ್ಷ ಅತುಲ್​ ಗನಾತ್ರ ಹೇಳಿದ್ದಾರೆ. ಚೀನಾ, ಬಾಂಗ್ಲಾದೇಶ, ವಿಯೇಟ್ನಾಮ್​ ಮತ್ತು ಪಾಕಿಸ್ತಾನ ದೇಶಗಳಿಗೆ ಇಲ್ಲಿನ ಹೆತ್ತಿ ಉತ್ಪನ್ನಗಳು ಹೆಚ್ಚು ರಫ್ತಾಗುತ್ತದೆ.

ಇನ್ನು ತರಕಾರಿ ಮಾರುಕಟ್ಟೆಯಲ್ಲೂ ಲಾರಿ ಮುಷ್ಕರದ ಕರಿಛಾಯೆ ಮೂಡಿದೆ, ಬೇರೆ ಬೇರೆ ರಾಜ್ಯಗಳಿಂದ ತರಕಾರಿಗಳ ಸಾಗಾಟ ನಡೆಯುತ್ತದೆ, ಸದ್ಯ ಈ ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈರುಳ್ಳಿ, ಆಲೂಗಡ್ಡೆ ಸೇರಿ ಹಲವು ತರಕಾರಿಗಳ ಬೆಲೆ ಕೂಡಾ ಏರುವ ಸಂಭವವಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...