ಇ-ಕಾಮರ್ಸ್ (E- Commerce) ದೈತ್ಯ ಅಮೆಜಾನ್ ತನ್ನ ವೇದಿಕೆ ಅಡಿ ಓಟಿಟಿ ಸೇವೆಯನ್ನೂ ಸಹ ಗ್ರಾಹಕರಿಗೆ ಪರಿಚಯಿಸಿದೆ. ಓಟಿಟಿ ಈಗ ಜನರಿಗೆ ಮನರಂಜನೆಯ ದೊಡ್ಡ ವೇದಿಕೆ ಆಗಿದೆ. ಜನ ಥೀಯೇಟರ್‌ಗಿಂತ ಹೆಚ್ಚಾಗಿ ಓಟಿಟಿಯಲ್ಲಿಯೇ ಸಿನಿಮಾ, ವೆಬ್ ಸೀರಿಸ್ ಅಂತಾ ನೋಡುತ್ತಿದ್ದಾರೆ. ನೆಟ್‌ಫ್ಲಿಕ್ಸ್, ಜೀ 5, ವೂಟ್ ಅಂತಾ ಹಲವು ವೇದಿಕೆಗಳಿವೆ. ಅದರಲ್ಲಿ ಪ್ರಮುಖವಾದದ್ದು, ಅಮೆಜಾನ್ ಪ್ರೈಮ್ (Amazon Prime) . ಅಮೆಜಾನ್ ಪ್ರೈಮ್ ಸದ್ಯದ ಜನಪ್ರಿಯ ಓಟಿಟಿ ವೇದಿಕೆ. ಕೋಟ್ಯಾಂತರ ಗ್ರಾಹಕರನ್ನು ಸೆಳೆದುಕೊಂಡಿರುವ ಪ್ರೈಮ್ ಈಗ ತನ್ನ ಗ್ರಾಹಕರಿಗೆ ಬಿಗ್ ಶಾಕ್ (Big Shock) ಒಂದನ್ನು ನೀಡಿದೆ.
ಪ್ರೈಮ್ ಚಂದಾದಾರಿಕೆಯಲ್ಲಿ ಭಾರಿ ಏರಿಕೆ
ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ, ಸಿರೀಸ್ ಏನೇ ವೀಕ್ಷಣೆ ಮಾಡಬೇಕೆಂದರು ಮೊದಲಿಗೆ ಅದರ ಚಂದಾದಾರಿಕೆ ಪಡೆದುಕೊಳ್ಳಬೇಕು. ಇಂತಿಷ್ಟು ಅವಧಿಗೆ ನಿಗದಿ ಪಡಿಸಿದ ಪ್ಯಾಕ್‌ಗಳನ್ನು ಪಡೆದುಕೊಂಡು ರೀಚಾರ್ಜ್ ಮಾಡಿಸಿಕೊಳ್ಳಬೇಕು.
ಈ ಪ್ಯಾಕ್ ಇದ್ದರೆ ಮಾತ್ರ ನಿಮ್ಮ ಪ್ರೈಮ್ ಅಕೌಂಟ್‌ನಲ್ಲಿ ಸಿನಿಮಾಗಳನ್ನು ನೋಡಬಹುದು. ಈಗ ಪ್ರೈಮ್ ತನ್ನ ಬೆಲೆಯನ್ನು ಮತ್ತೆ ಹೆಚ್ಚಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಅಮೆಜಾನ್ ಇತ್ತೀಚಿಗಷ್ಟೆ ತನ್ನ ಚಂದಾದಾರಿಕೆಯಲ್ಲಿ ರಿಯಾಯಿತಿ ಬೆಲೆಗಳನ್ನು ಘೋಷಿಸಿ ಗಮನ ಸೆಳೆದಿತ್ತು. ಆದ್ರೆ, ಈಗ ಮತ್ತೆ ಚಂದಾದಾರಿಕೆ ಶುಲ್ಕದಲ್ಲಿ ಏರಿಕೆ ಮಾಡಿದೆ. ಹಳೆಯ ಬೆಲೆಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ.
ನೀವೂ ಕೂಡ ಹೊಸದಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅಮೆಜಾನ್ ಹೆಚ್ಚಿಸಿರುವ ಬೆಲೆಯನ್ನು ತಿಳಿದುಕೊಳ್ಳಿ.
ಭಾರತದಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದ ಹೊಸ ಮತ್ತು ಹಳೆಯ ಬೆಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
* ಮಾಸಿಕ ಯೋಜನೆ (1 ತಿಂಗಳು)
ಹಳೆಯ ಬೆಲೆ: 179 ರೂ, ಹೊಸ ಬೆಲೆ: 299 ರೂ
ಭಾರತದಲ್ಲಿ ಅಮೆಜಾನ್ ಪ್ರೈಮ್ ಚಂದಾದಾರಿಕೆ ಬೆಲೆ ಏರಿಕೆಯಿಂದಾಗಿ ಒಂದು ತಿಂಗಳ ಆರಂಭಿಕ ಯೋಜನೆಯ ಬೆಲೆ ಈಗ 299ರೂ. ರಿಂದ ಪ್ರಾರಂಭವಾಗುತ್ತದೆ. ಒಂದು ತಿಂಗಳ ಆರಂಭಿಕ ಯೋಜನೆಯ ಈ ಹಿಂದಿನ ಶುಲ್ಕ 179ರೂ. ಆಗಿತ್ತು.
ಇದನ್ನೂ ಓದಿ: ಭೂಮಿಗೆ ಅಪ್ಪಳಿಸಲಿದೆ ಇನ್ನೊಂದು ಸೌರ ಬಿರುಗಾಳಿ! ನಾಸಾ ಈ ಬಗ್ಗೆ ನೀಡಿರುವ ಮಾಹಿತಿ ಏನು?
* ತ್ರೈಮಾಸಿಕ ಯೋಜನೆ (3 ತಿಂಗಳು)
ಹಳೆಯ ಬೆಲೆ: 459 ರೂ, ಹೊಸ ಬೆಲೆ: 599 ರೂ
ತ್ರೈಮಾಸಿಕ ಅಮೆಜಾನ್ ಪ್ರೈಮ್ ಯೋಜನೆಯ ಬೆಲೆ ಈಗ 599 ರೂ. ಶುಲ್ಕ. ತ್ರೈಮಾಸಿಕ ಯೋಜನೆಯ ಈ ಹಿಂದಿನ ದರ 459ರೂ. ಆಗಿತ್ತು.
* ವಾರ್ಷಿಕ ಯೋಜನೆ (1 ವರ್ಷ)
ವಾರ್ಷಿಕ ಯೋಜನೆಗಳಿಗೆ ಬೆಲೆಗಳು ಬದಲಾಗದೆ ಉಳಿದಿವೆ. ವಾರ್ಷಿಕ ಪ್ರಧಾನ ಯೋಜನೆಯು ಇನ್ನೂ ರೂ 1,499 ಮತ್ತು ವಾರ್ಷಿಕ ಪ್ರೈಮ್ ಲೈಟ್ ಯೋಜನೆಯ ಬೆಲೆ 999 ರೂ. ಆಗಿದೆ.
ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗಾಗಿ ಜಿಯೋದಿಂದ ಹೊಸ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ
ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಕೊನೆಯ ಬೆಲೆ ಏರಿಕೆಯನ್ನು ಡಿಸೆಂಬರ್ 2021 ರಲ್ಲಿ ಘೋಷಿಸಲಾಯಿತು, ಆಗ ಮಾಸಿಕ ಪ್ಲಾನ್ ಬೆಲೆಯನ್ನು ರೂ 120 ರಿಂದ ರೂ 179 ಕ್ಕೆ ಹೆಚ್ಚಿಸಲಾಯಿತು.
ಅಮೆಜಾನ್ ಪ್ರೈಮ್ ಸದಸ್ಯತ್ವದ ಪ್ರಯೋಜನಗಳು
ಅಮೆಜಾನ್ ಪ್ರೈಮ್ ಸದಸ್ಯತ್ವದ ಪ್ರಯೋಜನಗಳು ಆರ್ಡರ್‌ಗಳ ಆದ್ಯತೆಯ ಶಿಪ್ಪಿಂಗ್, ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಪ್ರೈಮ್ ಡೀಲ್‌ಗಳು, ಪ್ರೈಮ್ ರೀಡಿಂಗ್, ಪ್ರೈಮ್ ಗೇಮಿಂಗ್ ಮತ್ತು ಅಮೆಜಾನ್ ಫ್ಯಾಮಿಲಿಯಂತಹ ಸೇವೆಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.
ಅಮೆಜಾನ್ ಪ್ರೈಮ್‌ಗೆ ಸೈನ್ ಅಪ್ ಮಾಡುವುದು ಹೇಗೆ?
- ಮೊದಲು ಅಮೆಜಾನ್ ಪ್ರೈಮ್ ವೆಬ್‌ಸೈಟ್‌ಗೆ ಹೋಗಿ
- ʻಲಾಗಿನ್ ಟು ಜಾಯಿನ್ ಪ್ರೈಮ್ʼ ಅನ್ನು ಆಯ್ಕೆ ಮಾಡಿ
- ಬಳಿಕ ನಿಮ್ಮ ಆದ್ಯತೆಯ ಯೋಜನೆಯನ್ನು ಆರಿಸಿ
- ಪರದೆಯ ಮೇಲಿನ ಸೂಚನೆಗಳನ್ನು ಅನುಸರಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಪಾವತಿ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ