HOME » NEWS » Tech » AMAZON PRIME MEMBERSHIP NOW AVAILABLE WITH JIO FIBER PLANS HG

Jio Fiber: ಜಿಯೋ ಫೈಬರ್ ಪ್ರಕಟಿಸಿದೆ ವಾರ್ಷಿಕ ಅಮೆಜಾನ್ ಪ್ರೈಮ್ ಸದಸ್ಯತ್ವ; ಬೆಲೆ ಎಷ್ಟು ಗೊತ್ತಾ?

Amazon Prime: ಈಗಾಗಲೇ ಜಿಯೋ ಫೈಬರ್​ ಪ್ರಕಟಿಸಿದ ಬೇರೆ ಪ್ಲಾನ್​ಗಳನ್ನು ರೀಚಾರ್ಜ್​ ಮಾಡಿಕೊಂಡು ಬಳಸುತ್ತಿರುವ ಬಳಕೆದಾರರು ಈ ಕೊಡುಗೆಗೆ ಅರ್ಹರಾಗಿದ್ದಾರೆ ಎಂದು ಜಿಯೋ ತಿಳಿಸಿದೆ.

news18-kannada
Updated:June 12, 2020, 5:17 PM IST
Jio Fiber: ಜಿಯೋ ಫೈಬರ್ ಪ್ರಕಟಿಸಿದೆ ವಾರ್ಷಿಕ ಅಮೆಜಾನ್ ಪ್ರೈಮ್ ಸದಸ್ಯತ್ವ; ಬೆಲೆ ಎಷ್ಟು ಗೊತ್ತಾ?
ಜಿಯೋ ಫೈಬರ್​
  • Share this:
ಜಿಯೋ ಫೈಬರ್​ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯ ಒಂದು ವರ್ಷದ ಅಮೆಜಾನ್​ ಪ್ರೈಮ್​ ಸದಸ್ಯತ್ವವನ್ನು ಪ್ರಕಟಿಸಿದೆ. ಗ್ರಾಹಕರು 999 ರೂಪಾಯಿ ರೀಚಾರ್ಜ್​ ಮಾಡುವ ಮೂಲಕ ಈ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.

ಈಗಾಗಲೇ ಜಿಯೋ ಫೈಬರ್​ ಪ್ರಕಟಿಸಿದ ಬೇರೆ ಪ್ಲಾನ್​ಗಳನ್ನು ರೀಚಾರ್ಜ್​ ಮಾಡಿಕೊಂಡು ಬಳಸುತ್ತಿರುವ ಬಳಕೆದಾರರು ಈ ಕೊಡುಗೆಗೆ ಅರ್ಹರಾಗಿದ್ದಾರೆ ಎಂದು ಜಿಯೋ ತಿಳಿಸಿದೆ. ಗೋಲ್ಡ್​ ಅಥವಾ ಅದಕ್ಕಿಂತ ಹೆಚ್ಚಿನ ಪ್ಲಾನ್​​ಗಳನ್ನು ಅಳವಡಿಸಿಕೊಂಡಿರುವ ಬಳಕೆದಾರು ಜಿಯೋ ಪ್ರಯೋಜನವನ್ನು ಪಡೆಯಬಹುದಾಗಿದೆ. ಆ ಮೂಲಕ ಒಂದು ವರ್ಷದ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಸಿಲ್ವರ್​ ಮತ್ತು ಬ್ರೋನ್ಜ್​​​ ಪ್ಲಾನ್​​ ಅಳವಡಿಸಿಕೊಂಡಿರುವ ಬಳಕೆದಾರರು ಈ ಆಫರ್​ಗೆ ಅಪ್​ಗ್ರೇಡ್​ ಮಾಡುವ ಅವಕಾಶವನ್ನು ನೀಡಿದೆ. ಗೋಲ್ಡ್​ ಅಥವಾ ಅದರ ಮೇಲಿನ ಯೋಜನೆಗೆ ಅಪ್​ಗ್ರೇಡ್​ ಮಾಡುವ ಮೂಲಕ ಈ ಪ್ಲಾನ್​ ಪಡೆದುಕೊಳ್ಳಬಹುದಾಗಿದೆ.
Youtube Video

ಅಮೆಜಾನ್​​ ಪ್ರೈಮ್​​ ಸದಸ್ಯತ್ವ ಪಡೆಯುವುದು ಹೇಗೆ?

ಅಮೆಜಾನ್​ ಪ್ರೈಮ್​​ ಸದಸ್ಯತ್ವವನ್ನು ಪಡೆದುಕೊಳ್ಳಯವ ಗ್ರಾಹಕರು ಮೊದಲು ಮೈ ಜಿಯೋ ಅಥವಾ ಜಿಯೋ. ಕಾಮ್​​​ಗೆ ಭೇಟಿ ನೀಡಿ ಜಿಯೋ ಫೈಬರ್​ ಖಾತೆಗೆ ಲಾಗಿನ್​ ಮಾಡಬೇಕು. ನಂತರ 1 ವರ್ಷದ ಅಮೆಜಾನ್​​​​ ಪ್ರೈಮ್​​ ಮೆಂಬರ್​ಶಿಪ್​​ ಆಯ್ಕೆಯ ಮೇಲೆ ಕ್ಲಿಕ್​ ಮಾಡಬೇಕು. ಆನಂತರ ಅಮೆಜಾನ್​​ ಪ್ರೈಮ್​​​ ಖಾತೆಗೆ ಸೈನ್​ ಇನ್​ ಮಾಡಬೇಕು.
First published: June 12, 2020, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories