Amazon Prime: ಅಮೇಜಾನ್ ಪ್ರೈಂ ಸದಸ್ಯತ್ವ ಪಡೆಯುವುದು ಹೇಗೆ?; ಇಲ್ಲಿದೆ ಮಾಹಿತಿ

Amazon Prime: ಒಂದು ತಿಂಗಳಿಗೆ ಅಮೇಜಾನ್ ಪ್ರೈಂ ಮೆಂಬರ್​ಶಿಪ್ ಪಡೆಯಲು 129 ರೂ. ರೀಚಾರ್ಜ್ ಮಾಡಬೇಕು. ಒಂದು ವರ್ಷಕ್ಕೆ ಪ್ರೈಂ ಮೆಂಬರ್​ಶಿಪ್ ಪಡೆಯುವುದಾದರೆ 999 ರೂ. ರೀಚಾರ್ಜ್ ಮಾಡಿಸಬೇಕು. ನಿಮಗೆ ಒಂದು ತಿಂಗಳ ಕಾಲ ಫ್ರೀ ಮೆಂಬರ್​ಶಿಪ್ ಆಯ್ಕೆ ಕೂಡ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾದಿಂದಾಗಿ ಭಾರತದಲ್ಲಿ ಲಾಕ್​ಡೌನ್ ಘೋಷಣೆಯಾದ ಬಳಿಕ ಚಿತ್ರಮಂದಿರಗಳನ್ನೂ ಬಂದ್ ಮಾಡಲಾಗಿತ್ತು. ಹೀಗಾಗಿ, ನೆಟ್​ಫ್ಲಿಕ್ಸ್​, ಅಮೇಜಾನ್, ಜೀ5, ಹಾಟ್​ಸ್ಟಾರ್​ನಲ್ಲಿ ಸಿನಿಮಾಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದಾಗಿ ಅನೇಕ ಹೊಸ ಸಿನಿಮಾಗಳು ಆನ್​ಲೈನ್​ನಲ್ಲೇ ಬಿಡುಗಡೆಯಾಗಿದ್ದವು. ನೀವೇನಾದರೂ ಅಮೇಜಾನ್​ ಪ್ರೈಂ ಸದಸ್ಯರಾಗಲು ಬಯಸಿದ್ದರೆ ಸಾಕಷ್ಟು ಉಪಯೋಗಗಳಿವೆ. ಅಮೇಜಾನ್ ಪ್ರೈಂ ಸದಸ್ಯರಾದರೆ ಕೇವಲ ಸಿನಿಮಾ, ವೆಬ್​ ಸೀರೀಸ್​ಗಳು ಮಾತ್ರವಲ್ಲದೆ ಅಮೇಜಾನ್ ಶಾಪಿಂಗ್​ನಲ್ಲೂ ಅನೇಕ ಆಫರ್​ಗಳು ಸಿಗಲಿವೆ. ಅಮೇಜಾನ್​ ಇಂಡಿಯನ್ ಫೆಸ್ಟಿವಲ್ ಸೇಲ್ ಶುರು ಆಗಿರುವುದರಿಂದ ಈ ಸಂದರ್ಭದಲ್ಲಿ ನೀವು ಅಮೇಜಾನ್ ಪ್ರೈಂ ಮೆಂಬರ್​ಶಿಪ್ ಪಡೆದರೆ ಅನುಕೂಲಗಳು ಹೆಚ್ಚು. ಅಮೇಜಾನ್ ಪ್ರೈಂ ಮೆಂಬರ್​ಶಿಪ್ ಹೊಂದಿರುವವರಿಗೆ ಪ್ರೈಂ ವಿಡಿಯೋ, ಮ್ಯೂಸಿಕ್, ಹಾಗೇ ಶಾಪಿಂಗ್ ಮಾಡಿದರೆ ಫ್ರೀ ಡೆಲಿವರಿ ಕೂಡ ಸಿಗುತ್ತದೆ.

  ಅಮೇಜಾನ್​ ಪ್ರೈಂನಲ್ಲಿ ಪ್ರತಿ ವಾರ ಸಾಕಷ್ಟು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದು ತಿಂಗಳಿಗೆ ಅಮೇಜಾನ್ ಪ್ರೈಂ ಮೆಂಬರ್​ಶಿಪ್ ಪಡೆಯಲು 129 ರೂ. ರೀಚಾರ್ಜ್ ಮಾಡಬೇಕು. ಒಂದು ವರ್ಷಕ್ಕೆ ಪ್ರೈಂ ಮೆಂಬರ್​ಶಿಪ್ ಪಡೆಯುವುದಾದರೆ 999 ರೂ. ರೀಚಾರ್ಜ್ ಮಾಡಿಸಬೇಕು. ನಿಮಗೆ ಒಂದು ತಿಂಗಳ ಕಾಲ ಫ್ರೀ ಮೆಂಬರ್​ಶಿಪ್ ಆಯ್ಕೆ ಕೂಡ ಇರುತ್ತದೆ. ನಂತರ ನಿಮಗೆ ಎಷ್ಟು ತಿಂಗಳ ಅಥವಾ ವರ್ಷದ ಮೆಂಬರ್​ಶಿಪ್ ಬೇಕೆಂಬುದನ್ನು ನಿರ್ಧರಿಸಿ, ಹಣ ಪಾವತಿಸಬಹುದು. ಹಾಗಿದ್ದರೆ ನೀವೇನಾದರೂ ಅಮೇಜಾನ್ ಪ್ರೈಂ ಮೆಂಬರ್​ಶಿಪ್ ಪಡೆಯಲು ಇಚ್ಛಿಸಿದ್ದರೆ ನೀವು ಮಾಡಬೇಕಾಗಿದ್ದು ಇಷ್ಟೇ...

  ಅಮೇಜಾನ್ ಪ್ರೈಂ ಸದಸ್ಯರಾಗಲು ಹೀಗೆ ಮಾಡಿ...

  ಸ್ಟೆಪ್ 1: ಗೂಗಲ್ ಪ್ಲೇಸ್ಟೋರ್​ನಲ್ಲಿ ಮೊಬೈಲ್​ಗೆ ಅಮೇಜಾನ್ ಆ್ಯಪ್ ಡೌನ್​ಲೋಡ್ ಮಾಡಿ. ಒಂದುವೇಳೆ ನೀವು ಈಗಾಗಲೇ ಅಮೇಜಾನ್​ ಬಳಸುತ್ತಿದ್ದರೆ ವೆಬ್​ಸೈಟ್ ಓಪನ್ ಮಾಡಿ.

  ಸ್ಟೆಪ್ 2: ಮೊಬೈಲ್ ಆ್ಯಪ್ ಬಳಕೆದಾರರಾದರೆ ಎಡ ಭಾಗದಲ್ಲಿರುವ ಮೆನುಗೆ ಹೋಗಿ, ಟ್ರೈ ಪ್ರೈಂ ಎಂಬಲ್ಲಿ ಕ್ಲಿಕ್ ಮಾಡಿ. ಅಮೇಜಾನ್ ವೆಬ್​ಸೈಟ್ ಬಳಕೆದಾರರಾದರೆ ಬಲಭಾಗದಲ್ಲಿರುವ ಟ್ರೈ ಪ್ರೈಂ ಎಂಬಲ್ಲಿ ಕ್ಲಿಕ್ ಮಾಡಿ.

  ಸ್ಟೆಪ್ 3: Join Prime at Rs 129 Per Month ಎಂಬಲ್ಲಿ ಕ್ಲಿಕ್ ಮಾಡಿ. ಅಥವಾ Join Prime at Rs 999 Per Year ಎಂಬಲ್ಲಿ ಕ್ಲಿಕ್ ಮಾಡಿ.

  ಸ್ಟೆಪ್ 4: ನಂತರ ಪೇಮೆಂಟ್ ಸೆಲೆಕ್ಟ್​ ಮಾಡಿ, ಹಣ ಪಾವತಿಸಿ.


  ಈಗ ನೀವು ಅಮೇಜಾನ್ ಪ್ರೈಂ ಮೆಂಬರ್ ಆಗುತ್ತೀರಿ. ಈಗ ನೀವು ಅಮೇಜಾನ್​ನ ಒರಿಜಿನಲ್ ಸೀರೀಸ್, ಸಿನಿಮಾಗಳು, ಮ್ಯೂಸಿಕ್, ವಿಡಿಯೋಗಳನ್ನು ಎಂಜಾಯ್ ಮಾಡಬಹುದು. ಅಮೇಜಾನ್ ಶಾಪಿಂಗ್​ನಲ್ಲಿಯೂ ಅನೇಕ ಆಫರ್​ಗಳನ್ನು ಪಡೆಯಬಹುದು.
  Published by:Sushma Chakre
  First published: