• Home
  • »
  • News
  • »
  • tech
  • »
  • Airtel Xstream: ಏರ್​ಟೆಲ್​ನ ಈ ಸಾಧನ ಖರೀದಿಸಿದರೆ ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್​ಸ್ಟಾರ್​​ ಉಚಿತ!

Airtel Xstream: ಏರ್​ಟೆಲ್​ನ ಈ ಸಾಧನ ಖರೀದಿಸಿದರೆ ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್​ಸ್ಟಾರ್​​ ಉಚಿತ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರಮುಖ ಟೆಲಿಕಾಂ ದೈತ್ಯ ಏರ್‌ಟೆಲ್ ಸಂಸ್ಥೆಯು ಎಕ್ಸ್‌ಸ್ಟ್ರೀಮ್ ಫೈಬರ್ ಮಾಸಿಕ ಯೋಜನೆಗಳಲ್ಲಿ ಭಾರಿ ಕೊಡುಗೆಗಳನ್ನು ಪ್ರಕಟಿಸಿದೆ. ಏರ್​ಟೆಲ್ ನೀಡುವ ಮಾಸಿಕ ಬ್ರಾಡ್‌ಬ್ಯಾಂಡ್ ಯೋಜನೆಗಳಿಗೆ ಕಾಯ್ತಾ ಇದೀರಾ? ಹಾಗಿದ್ರೆ ಅದ್ಕೆ ಇದು ಸೂಕ್ತ ಸಮಯ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಮಾಸಿಕ ಯೋಜನೆಗಳಲ್ಲಿ ಭಾರೀ ಕೊಡುಗೆಗಳನ್ನು ನೀಡುತ್ತಿದೆ.

ಮುಂದೆ ಓದಿ ...
  • Share this:

    ಇಂಟರ್ನೆಟ್ ಸೇವೆಗಳು (Internet), ಡಿಟಿಹೆಚ್ (DTH) ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಏನಾದರೊಂದು ಆಫರ್ (Offer) ಗಳನ್ನು ಕೊಡುತ್ತಲೇ ಇರುತ್ತವೆ. ಈಗ ಏರ್​​​ಟೆಲ್​​ ಎಕ್ಸ್ ಟ್ರೀಮ್ (Aiertel Xstream) ಸಹ ತನ್ನ ಕೆಲವು ಕೊಡುಗೆಗಳನ್ನು ಗ್ರಾಹಕರಿಗಾಗಿ ಹೊರತಂದಿದೆ. ಈ ಕೊಡುಗೆಯಿಂದ ಬಳಕೆದಾರರು ಇನ್ನಷ್ಟು ಪ್ರಯೋಜನವನ್ನು ಪಡೆಯಲಿದ್ದಾರೆ. ಹಾಗಾದರೆ, ಅದು ನೀಡುತ್ತಿರುವ ಆಫರ್ ಗಳ ಪೂರ್ಣ ಮಾಹಿತಿ ನಿಮಗಾಗಿ. ಏರ್​ಟೆಲ್​ ದಿನದಿಂದ ದಿನಕ್ಕೆ ಏನದರೂ ಹೊಸ ವಿಶೇಷತೆಯನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಇದೆ. ಅದೇ ಸಾಲಿಗೆ ಇದೀಗ ಏರ್​ಟೆಲ್​ನ ಎಕ್ಸ್​​ಸ್ಟ್ರೀಮ್​ ಸೇವೆಯು ಸೇರುತ್ತಿದೆ.


    ಪ್ರಮುಖ ಟೆಲಿಕಾಂ ದೈತ್ಯ ಏರ್‌ಟೆಲ್ ಸಂಸ್ಥೆಯು ಎಕ್ಸ್‌ಸ್ಟ್ರೀಮ್ ಫೈಬರ್ ಮಾಸಿಕ ಯೋಜನೆಗಳಲ್ಲಿ ಭಾರಿ ಕೊಡುಗೆಗಳನ್ನು ಪ್ರಕಟಿಸಿದೆ. ಏರ್​ಟೆಲ್ ನೀಡುವ ಮಾಸಿಕ ಬ್ರಾಡ್‌ಬ್ಯಾಂಡ್ ಯೋಜನೆಗಳಿಗೆ ಕಾಯ್ತಾ ಇದೀರಾ? ಹಾಗಿದ್ರೆ ಅದ್ಕೆ ಇದು ಸೂಕ್ತ ಸಮಯ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಮಾಸಿಕ ಯೋಜನೆಗಳಲ್ಲಿ ಭಾರೀ ಕೊಡುಗೆಗಳನ್ನು ನೀಡುತ್ತಿದೆ.


    Airtel Xstream Fiber: ಹೊಸ ಕನೆಕ್ಷನ್‌, ಪ್ಲಾನ್‌ಗಳು, ಡೇಟಾ ಪ್ರಯೋಜನಗಳು


    ಇದು 150Mbps ಗಿಂತ ಹೆಚ್ಚು ಇಂಟರ್ನೆಟ್ ಸ್ಪೀಡ್‌ ಜೊತೆಗೆ OTT ಪ್ರಯೋಜನಗಳನ್ನು ಸಹ ನೀಡುತ್ತದೆ. ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ ನ ಕನೆಕ್ಷನ್‌ ಪಡೆಯೋದು ಹೇಗೆ? ಇದರ ಪ್ಲಾನ್‌ ಬೆಲೆಗಳು ಹೇಗಿವೆ? ಡೇಟಾ ಪ್ರಯೋಜನಗಳೇನು? ಎಂಬಂತಹ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಪಡೆಯೋಣ.


    ಇದನ್ನೂ ಓದಿ: ಐಫೋನ್​ನಲ್ಲಿ ಸರ್ಕಾರಿ ಆ್ಯಪ್​ಗಳ ಬಳಕೆ ನಿಷೇಧ! ಯಾವೆಲ್ಲಾ ಅಪ್ಲಿಕೇಶನ್​ಗಳು?


    ಹೊಸ Airtel Xstream Fiber ನ ಕನೆಕ್ಷನ್‌ ಅನ್ನು ಖರೀದಿ ಮಾಡೋದು ಹೇಗೆ?


    ನೀವು ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ ಫೈಬರ್‌ ಖರೀದಿಸಬೇಕೆಂದು ಅಂದುಕೊಂಡಿರುವಿರಾ? ಅದಕ್ಕಾಗಿ ಇದು ಒಳ್ಳೆಯ ಸಮಯ. ಏರ್‌ಟೆಲ್‌ ಭಾರತದಲ್ಲಿ ತನ್ನ ವಿಸ್ತರಣೆಯ ಯೋಜನೆಗಳನ್ನು ಘೋಷಿಸಿದೆ ಆದ್ದರಿಂದ ಹೊಸ ಕನೆಕ್ಷನ್‌ ಪಡೆಯಲು ಸಿದ್ಧರಾಗಿ.


    ಸಾಂಕೇತಿಕ ಚಿತ್ರ


    Airtel Xstream Fiber ನ ಖರೀದಿ ಮಾಡುವ ವಿಧಾನ


    • ಏರ್‌ಟೆಲ್ ಬ್ರಾಡ್‌ಬ್ಯಾಂಡ್ ವೆಬ್‌ಪುಟಕ್ಕೆ ಭೇಟಿ ನೀಡಿ.

    • ಅತ್ಯುತ್ತಮ ಇಂಟರ್ನೆಟ್ ಯೋಜನೆಯನ್ನು ಆಯ್ಕೆಮಾಡಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.

    • ನಿಮ್ಮ ಆದ್ಯತೆಯ ವಿಳಾಸದಲ್ಲಿ ನೀವು ಹೊಸ ಬ್ರಾಡ್‌ಬ್ಯಾಂಡ್ ಕನೆಕ್ಷನ್‌ ಅನ್ನು ಪಡೆಯಬಹುದು.

    • 48 ಗಂಟೆಗಳ ಒಳಗೆ ಹೊಸ ಯೋಜನೆಯನ್ನು ಸಕ್ರಿಯಗೊಳಿಸಲಾಗುತ್ತದೆ.


    ಇದರ ಜೊತೆಗೆ, ಚೆಕ್ ಔಟ್ ಮೆನುವಿನಿಂದ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಚಂದಾದಾರಿಕೆಯನ್ನು ಸಹ ಆಯ್ಕೆ ಮಾಡಬಹುದು. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಲು ಬಳಕೆದಾರರು ಅದೇ ಪ್ರಕ್ರಿಯೆಯನ್ನು ಅನುಸರಿಸಬಹುದು.


    ಇನ್‌ಸ್ಟಾಲೇಷನ್‌ ಶುಲ್ಕಕ್ಕೆ ಸಂಬಂಧಿಸಿದಂತೆ, ಬ್ರಾಡ್‌ಬ್ಯಾಂಡ್ ಕನೆಕ್ಷನ್‌ ಅನ್ನು ಪಡೆಯಲು ನೀವು ರೂ 1,000 ಪಾವತಿಸಬೇಕಾಗುತ್ತದೆ. ಎಕ್ಸ್‌ಸ್ಟ್ರೀಮ್ ಬಾಕ್ಸ್‌ಗಾಗಿ, ಬಳಕೆದಾರರು ಮರುಪಾವತಿಸಬಹುದಾದ ಭದ್ರತಾ ಠೇವಣಿ 1,500 ಅನ್ನು ಪಾವತಿಸಬೇಕಾಗುತ್ತದೆ.


    ಇದಲ್ಲದೆ, ಆಯ್ಕೆಮಾಡಿದ ಬ್ರಾಡ್‌ಬ್ಯಾಂಡ್ ಯೋಜನೆಗಾಗಿ 3 ತಿಂಗಳುಗಳು, 6 ತಿಂಗಳುಗಳು ಮತ್ತು ವಾರ್ಷಿಕ ಪಾವತಿ ಆಯ್ಕೆಯನ್ನು ಆರಿಸುವ ಮೂಲಕ ಇನ್‌ಸ್ಟಾಲೇಷನ್‌ ಶುಲ್ಕಗಳನ್ನು ವೇವ್ ಮಾಡಬಹುದು.


    Airtel Xstream Fiber ನ ಬ್ರಾಡ್‌ಬ್ಯಾಂಡ್ ಯೋಜನೆಗಳು ಮತ್ತು ಡೇಟಾ ಪ್ರಯೋಜನಗಳು


    ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ ನ ಆರಂಭಿಕ ಯೋಜನೆಗಳು ರೂ 499 ದಿಂದ ರೂ 799, ರೂ 999 ರವರೆಗಿನ ಚಂದಾದಾರಿಕೆಗಳನ್ನು ಒಳಗೊಂಡಿವೆ. ಇದರ ಜೊತೆಗೆ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಕರೆಗಳನ್ನು ಸಹ ಒಳಗೊಂಡಿವೆ. ಹಾಗೆಯೇ ಅಮೆಜಾನ್ ಪ್ರೈಮ್​ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್​​ಸ್ಟಾರ್​ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಕೂಡ ಉಚಿತವಾಗಿ ದೊರೆಯುತ್ತವೆ.


    ಟೆಲಿಕಾಂ ಆಪರೇಟರ್ ಕನಿಷ್ಠ 200Mbps ವೇಗ, OTT ಚಾನೆಲ್‌ಗಳೊಂದಿಗೆ ಆಯ್ಕೆಯ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳೊಂದಿಗೆ, ನೀವು ಯಾವುದೇ ಅಡೆತಡೆಯಿಲ್ಲದೆ ಇಂಟರ್ನೆಟ್ ವೇಗ, ಗೇಮ್ ಪ್ಲೇ, ವಿವಿಧ ಸಾಧನಗಳಲ್ಲಿ ಸ್ಟ್ರೀಮಿಂಗ್‌ನಂತಹ ಪ್ರಯೋಜನಗಳನ್ನು ಪಡೆಯಬಹುದು.


    Airtel Xstream Fiber ನ ಬ್ರಾಡ್‌ಬ್ಯಾಂಡ್ ಸೇವೆಯ ಲಭ್ಯತೆ


    ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳು ಪ್ರಸ್ತುತ Airtel Xstream Fiber ನ ಲಭ್ಯತೆಯನ್ನು ಹೊಂದಿವೆ. ದೆಹಲಿ, ಗುರ್ಗಾಂವ್, ನೋಯ್ಡಾ, ಫರಿದಾಬಾದ್, ಗಾಜಿಯಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ, ಆಗ್ರಾ, ಅಹಮದಾಬಾದ್, ಅಂಬಾಲಾ, ಅಮೃತಸರ, ಭೋಪಾಲ್, ಭುವನೇಶ್ವರ, ಚಂಡೀಗಢ, ಕೊಚ್ಚಿನ್, ಕೊಯಮತ್ತೂರು, ಡೆಹ್ರಾಡೂನ್, ಹಿಸಾರ್, ಇಂದೋರ್, ಜೈಪುರ, ಜಮ್ಮು, ಜಮ್ಶೆಡ್‌ಪುರ ಕಾನ್ಪುರ್, ಗುಂಟೂರು, ವಿಶಾಖಪಟ್ಟಣಂ ಮತ್ತು ಹಲವಾರು ನಗರಗಳಲ್ಲಿ ಲಭ್ಯವಿದೆ.


    Airtel Xstream Fiber ನ ಬ್ರಾಡ್‌ಬ್ಯಾಂಡ್ ನ ಅನೇಕ ಸೇವೆಗಳ ಬಗ್ಗೆ ತಿಳ್ಕೊಂಡಿದ್ದೀರಿ ಅಲ್ವಾ. ನಿಮಗೂ ಇದರ ಅಗತ್ಯ ಇದ್ರೆ ನೀವು Airtel Xstream Fiber ನ ಹೊಸ ಯೋಜನೆಗಳ ಲಾಭವನ್ನು ಪಡೆಯಿರಿ.

    Published by:Prajwal B
    First published: