Amazon: ಸದ್ಯದಲ್ಲೇ ಅಮೆಜಾನ್ ಪ್ರೈಮ್ ಡೇ ಸೇಲ್ ಪ್ರಾರಂಭ; ಆಕರ್ಷಕ ಆಫರ್ ಬೆಲೆಗೆ ಸಿಗಲಿದೆ ಗ್ಯಾಜೆಟ್ಗಳು
Amazon Prime Day sale: ಅಮೆಜಾನ್ ಪ್ರೈಮ್ ಡೇಸ್ ಬಗ್ಗೆ ದಿನಾಂಕ ಸೂಚಿಸಿದರು ಅಧಿಕೃತ ಘೋಷಣೆಯಾಗುವವರೆಗೆ ಮಾಹಿತಿಯನ್ನು ಗೌಪ್ಯವಾಗಿಡಲು ತನ್ನ ನೌಕಕರಿಗೆ ಸೂಚಿಸಿದೆ. ಅಂದಹಾಗೆಯೇ ಜೂನ್ 21 ರಂದು ಸೇಲ್ ನಡೆಸುವ ಚಿಂತನೆಯಲ್ಲಿದೆ.
ಕಳೆದ ಬಾರಿ ಫ್ಲಿಪ್ಕಾರ್ಟ್ ಹೋಮ್ ಡೇಸ್ ಆಯೋಜಿಸಿ ಗ್ರಾಹಕರಿಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಗ್ಯಾಜೆಟ್ಗಳನ್ನು ಮಾರಾಟ ಮಾಡಿತ್ತು.
ಇದೀಗ ಅಮೆಜಾನ್ ತನ್ನ ಗ್ರಾಹರನ್ನು ಹೆಚ್ಚಿಸಿಕೊಳ್ಳಲು ಮತ್ತು ಅವರಿಗೆ ಸರಿಯಾದ ರೀತಿಯಲ್ಲಿ ವಸ್ತುಗಳನ್ನು ತಲುಪಿಸಲು ಪ್ರೈಮ್ ಡೇಸ್ ನಡೆಸಲು ಮುಂದಾಗಿದೆ. ಅದರ ಮೂಲಕ ಆಕರ್ಷಕ ಆಫರ್ ನೀಡಲಿದೆ.
ಕಳೆದ ವರ್ಷ ಕೊರೊನಾ ಅವಾಂತರದಿಂದ ಅಮೆಜಾನ್ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ ಈ ವರ್ಷ ಜೂನ್ ತಿಂಗಳಿನಲ್ಲಿ ಸೇಲ್ ನಡೆಸಲು ಮುಂದಾಗಿದೆ. ಇನ್ನು ಯಾವೆಲ್ಲಾ ವಸ್ತುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಿದೆ ಎಂದು ಕಾದುನೋಡಬೇಕಿದೆ.
ಮಹಾಮಾರಿ ಕೊರೊನಾ ಅಟ್ಟಹಾಸದಿಂದ ಬಸವಳಿದು ಅಮೆಜಾನ್ ಕೆನೆಡಾ ಮತ್ತು ಭಾರತದಲ್ಲಿ ಪ್ರೈಮ್ ಡೇಸ್ ಸೇಲ್ ನಡೆಸುವ ಕುರಿತು ತಟಸ್ಥವಾಗಿದೆ. ಆದರೂ ಇದೀಗ ಜೂನ್ ತಿಂಗಳಿನ 21ನೇ ತಾರೀಖು ಸೇಲ್ ನಡೆಸಲು ಚಿಂತಿಸಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ