Amazon Prime Day Sale: ಡಿಸ್ಕೌಂಟ್ ಬೆಲೆಗೆ ಎಕೊ, ಫೈರ್ ಟಿವಿ, ಎಕೊ ಡಾಟ್ ಡಿವೈಸ್!

ಒನ್​ಪ್ಲಸ್​​ ಟಿವಿ ಯು ಸಿರೀಸ್​​ ಜತೆಗೆ ಎಕೊ ಡಾಟ್​ (3rd ಜನರೇಶನ್​) ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಡೆಯಬಹುದಾಗಿದೆ. ಸ್ಮಾರ್ಟ್​ಟಿವಿ 50, 55 ಮತ್ತು 65 ಇಂಚಿನ ಮಾಡೆಲ್​ಗಳು 46,999 ರೂ.ಗೆ ಖರೀದಿಗೆ ಸಿಗಲಿದೆ.

Amazon Prime Day Sale

Amazon Prime Day Sale

  • Share this:
    ಅಮೆಜಾನ್ ಪ್ರೈಮ್​ ಡೇ ಸೇಲ್​ ಆಯೋಜಿಸಿದೆ, ಜುಲೈ 26 ಮತ್ತು 27ರಂದು ಹಮ್ಮಿಕೊಂಡಿದೆ. ಎಕೊ, ಫೈರ್​​ ಟಿವಿ, ಕಿಂಡಲ್​ ಅಲೆಕ್ಸಾ ಸ್ಮಾರ್ಟ್​ಹೋಮ್​ ಡಿವೈಸ್​ಗಳ ಮೇಲೆ ಡಿಸ್ಕೌಂಟ್​ ನೀಡಿದೆ. ಎರಡು ದಿನಗಳ ಸೇಲ್​ನಲ್ಲಿ ಕಡಿಮೆ ಮತ್ತು ಡಿಸ್ಕೌಂಟ್​ ಬೆಲೆಗೆ ಪ್ರಾಡೆಕ್ಟ್​​ಗಳನ್ನು ಮಾರಾಟ ಮಾಡುತ್ತಿದೆ.

    ಅಮೆಜಾನ್​ ​ಪ್ರೈಮ್​ ಡೇ ಸೇಲ್​ ಮೂಲಕ ಕೊ ಡಾಟ್​​ (3rd ಜನರೇಶನ್​) ಜತೆಗೆ ಸ್ಮಾರ್ಟ್​ ಕಲರ್ ಬಲ್ಬ್​ 2,299 ರೂ.ಗೆ ಸೇಲ್​​ ಮಾಡುತ್ತಿದೆ. ಇನ್ನು ಸ್ಪೀಕರ್​ ಅನ್ನು 3,499 ರೂ.ಗೆ ಮಾರಾಟ ಮಾಡುತ್ತಿದೆ.

    ಒನ್​ಪ್ಲಸ್​​ ಟಿವಿ ಯು ಸಿರೀಸ್​​ ಜತೆಗೆ ಎಕೊ ಡಾಟ್​ (3rd ಜನರೇಶನ್​) ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಡೆಯಬಹುದಾಗಿದೆ. ಸ್ಮಾರ್ಟ್​ಟಿವಿ 50, 55 ಮತ್ತು 65 ಇಂಚಿನ ಮಾಡೆಲ್​ಗಳು 46,999 ರೂ.ಗೆ ಖರೀದಿಗೆ ಸಿಗಲಿದೆ.

    ಪ್ರೈಮ್​ ಡೇ ಸೇಲ್​ನಲ್ಲಿ 999 ರೂ ಡಿಸ್ಕೌಂಟ್​ ಬೆಲೆಗೆ ಎಕೊ ಡಾಟ್​​ ಸೇಲ್​ ಮಾಡುತ್ತಿದೆ. ಜತೆಗೆ ಅಮೆಜಾನ್​ ಬೇಸಿಕ್​ ಫೈರ್​ ಟಿವಿ ಎಡಿಷನ್​ 4ಕೆ ಸ್ಮಾರ್ಟ್​ ಎಲ್​ಇಡಿ ಟಿವಿ 34,999 ರೂ.ಗೆ ಸಿಗಲಿದೆ. 4ಕೆ ಸ್ಮಾರ್ಟ್​ಟಿವಿ 55 ಇಂಚಿನ ವರ್ಷನ್​ನಲ್ಲಿ ಸಿಗಲಿದೆ. ಇನ್ನು ಪ್ರೈಮ್​ ಡೇ ಸೇಲ್ ಇತರೆ ಸ್ಮಾರ್ಟ್​ಟಿವಿ ಖರೀದಿಸಿದರೆ ಎಕೊ ಡಾಟ್​ (3rd ಜನರೇಶನ್​) 1,499 ರೂ.ಗೆ ಸಿಗುತ್ತದೆ.

    ಎಕೊ ಸ್ಮಾರ್ಟ್​ ಸ್ಪೀಕರ್​ ಮತ್ತು ಸ್ಮಾರ್ಟ್​ಡಿಸ್​ಪ್ಲೇ ಮೇಲೆ ಶೇ.50ರಷ್ಟು  ಆಫರ್​​ ನೀಡಿದೆ. ಇನ್ನು ಫೈರ್​​ ಟಿವಿ ಮತ್ತು ಫೈರ್​ ಟಿವಿ ಕ್ಯೂಬ್​ ಮೇಲೆ ಶೇ. 50 ರಷ್ಟು ಡಿಸ್ಕೌಂಟ್​ ನೀಡಿದೆ.

    ಫೈರ್​ ಟಿವಿ ಸ್ಟಿಕ್​ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಶೇ.55 ರಷ್ಟು ಡಿಸ್ಕೌಂಟ್​​ ಜತೆಗೆ ಮೀಡಿಯಾ ಸ್ಟ್ರೀಮಿಂಗ್​​ ಡಿವೈಸ್​ಗಳ ಜತೆಗೆ ಝೀ5, ಸೋನಿ ಲೈವ್​ ಮತ್ತು ವೂಟ್​ ಮೇಲೆ ವಾರ್ಷಿಕ ಚಂದಾದಾರಿಕೆ ನೀಡುತ್ತಿದೆ. ಕಿಂಡಲ್ ಇ-ರೀಡರ್​ ಮೇಲೆ  4 ಸಾವಿರ ಡಿಸ್ಕೌಂಟ್​ ನೀಡಿದೆ.
    Published by:Harshith AS
    First published: