ಫೋನ್ ಪೇ, ಗೂಗಲ್​ ಪೇ, ಪೇಟಿಎಂ ಜೊತೆ ಪೈಪೋಟಿ: ಇನ್ಮುಂದೆ ಅಮೇಜಾನ್​ನಲ್ಲಿ ಸಿಗಲಿದೆ ಯುಪಿಐ ಸೇವೆ

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯವನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದೆ. ಸ್ಮಾರ್ಟ್​ಫೋನ್​ಗಳನ್ನು ಬಳಸಿ ಯಾವುದೇ ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾವಣೆ ಮಾಡುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಯುಪಿಐ ಎನ್ನಲಾಗುತ್ತದೆ.

zahir | news18
Updated:February 11, 2019, 6:12 PM IST
ಫೋನ್ ಪೇ, ಗೂಗಲ್​ ಪೇ, ಪೇಟಿಎಂ ಜೊತೆ ಪೈಪೋಟಿ: ಇನ್ಮುಂದೆ ಅಮೇಜಾನ್​ನಲ್ಲಿ ಸಿಗಲಿದೆ ಯುಪಿಐ ಸೇವೆ
ಸಾಂದರ್ಭಿಕ ಚಿತ್ರ
zahir | news18
Updated: February 11, 2019, 6:12 PM IST
ಅಮೆರಿಕದ ಇ-ಕಾಮರ್ಸ್​ ಕಂಪೆನಿ ಅಮೇಜಾನ್ ತನ್ನ ಗ್ರಾಹಕರಿಗೆ ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ಭಾರತದಲ್ಲಿ ಅಮೇಜಾನ್ ​ತನ್ನ ವೆಬ್​ಸೈಟ್​ನಲ್ಲೇ ಯುನಿಫೈಡ್​ ಪೇಮೆಂಟ್​ ಇಂಟರ್ಫೇಸ್​(UPI) ಸೇವೆಯನ್ನು ಪ್ರಾರಂಭಿಸಿದೆ. ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕಂಪೆನಿಯು ಈ ಸೌಲಭ್ಯವನ್ನು ನೀಡಲಿದ್ದು, ಇದರಿಂದ ಇನ್ನು ಮುಂದೆ ಅಮೇಜಾನ್ ಉತ್ಪನ್ನಗಳ​ ಪಾವತಿ ಮತ್ತಷ್ಟು ಸುಲಭವಾಗಲಿದೆ.

ವರದಿ ಪ್ರಕಾರ, ಅಮೇಜಾನ್ ಪೇ ತನ್ನದೇಯಾದ ಯುನಿಫೈಡ್​ ಪೇಮೆಂಟ್​ ಇಂಟರ್ಫೇಸ್​(UPI) ಅನ್ನು ಭಾರತದಲ್ಲಿ ಪ್ರಾರಂಭಿಸಿದೆ.  ಇದಕ್ಕಾಗಿ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಅಮೇಜಾನ್​ ಯುಪಿಐ ಅಪ್ಲಿಕೇಶನ್​ನೊಂದಿಗೆ ಲಿಂಕ್ ಮಾಡಬೇಕು. ಈ ಮೂಲಕ ನೀವು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಕಂಪೆನಿಯು @apl ಹ್ಯಾಂಡಲ್​ ಪ್ರಸ್ತುತಪಡಿಸಿದ್ದು, ಇನ್ನು ಮುಂದೆ ಅಮೇಜಾನ್​ ಆ್ಯಪ್​ನಲ್ಲಿ ಖರೀದಿ ನಡೆಸುವ ಗ್ರಾಹಕರಿಗೆ ಹಣ ಪಾವತಿಸಲು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೊದಲಾದ ಪಾವತಿಯ ವಿಧಾನಗಳೊಂದಿಗೆ ತಮ್ಮ ಯುಪಿಐ ಐಡಿ ಮೂಲಕ ಹಣ ಪಾವತಿಸುವ ಆಯ್ಕೆಯೂ ಲಭ್ಯವಿರಲಿದೆ.

ಅಮೇಜಾನ್ ಯುಪಿಐ ಸೇವೆಯಿಂದ ನೀವು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳುಹಿಸಲು ಖಾತೆಯ ಸಂಖ್ಯೆಯನ್ನು ಮತ್ತು IFSC ಕೋಡ್ ನೀಡುವ ಅಗತ್ಯವಿರುವುದಿಲ್ಲ. ಬದಲಾಗಿ ಯಾವುದಾದರೂ ಯುಪಿಐ ಆ್ಯಪ್​ನ ವರ್ಚುಲ್ ಪೇಮಂಟ್ ಅಡ್ರೆಸ್ ಇದ್ದರೆ ಸಾಕು. ಉದಾ: ಮೊಬೈಲ್ ನಂಬರ್ ಮತ್ತು ಯುಪಿಐ  ಹ್ಯಾಂಡಲ್​ ನಮೂದಿಸಿ ಪಾವತಿಸಬಹುದು. (9350...@ybl, 9350...@sbi ಇತ್ಯಾದಿ). ಈ ಮೂಲಕ ನಿಮ್ಮ ಖಾತೆಯಿಂದ ಹಣ ಕಳುಹಿಸಲು ಮತ್ತು ಸ್ವೀಕರಿದುವುದು ಸುಲಭವಾಗಲಿದೆ.

ಮೊಬೈಲ್ ವಾಲೆಟ್ ಕಂಪನಿ ಮತ್ತು ಯುಪಿಐ ಹ್ಯಾಂಡಲ್

Paytm- @aytm

PhonePe- @Ybl
Loading...

Amazon Pay- @apl

Mobikwik- @ikwik

Freecharge- @freecharge

ಏನಿದು ಯುಪಿಐ?
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯವನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದೆ. ಸ್ಮಾರ್ಟ್​ಫೋನ್​ಗಳನ್ನು ಬಳಸಿ ಯಾವುದೇ ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾವಣೆ ಮಾಡುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಯುಪಿಐ ಎನ್ನಲಾಗುತ್ತದೆ. ಈ ವ್ಯವಸ್ಥೆಯ ಮೂಲಕ ಖಾತೆದಾರರು ಯಾವುದೇ ಸಮಯದಲ್ಲೂ ಬೇಕಾದರೂ ಹಣ ಪಾವತಿಸಬಹುದಾಗಿದೆ. ಸಾಮಾನ್ಯವಾಗಿ ಇಂಟರ್​ನೆಟ್ ಬ್ಯಾಕಿಂಗ್​ನಲ್ಲಿರುವ ಹಾಗೆ ಕ್ರೆಡಿಟ್ ಕಾರ್ಡ್, ಡೆಬಿಟ್​ ಕಾರ್ಡ್ ವಿವರ, ಐಎಫ್ಎಸ್ಸಿ ಕೋಡ್ ಅಥವಾ ಪಾಸ್​ವರ್ಡ್​ಗಳನ್ನು ನಮೂದಿಸದೇ ಯುಪಿಐ ಐಡಿಯನ್ನು ನೀಡಿ ಹಣ ವರ್ಗಾವಣೆ ಮಾಡಬಹುದು.

 

 
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...