Samsung Smartphone: 399 ರೂ.ಗೆ ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​​ ಖರೀದಿಸಿ! ಇಂಥಾ ಆಫರ್​ ಮತ್ತೆಂದೂ ಸಿಗದು..

Samsung Galaxy A12: ಅಂದಹಾಗೆಯೇ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ ಮೂಲ ಬೆಲೆ 15,999 ರೂ ಆಗಿರುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಿದರೆ, ಖಂಡಿತವಾಗಿಯೂ ಒಂದು ಸಾವಿರ ರೂಪಾಯಿ ರಿಯಾಯಿತಿ ಸಿಗುತ್ತದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ / Samsung Galaxy A12

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ / Samsung Galaxy A12

 • Share this:
  ಸ್ಮಾರ್ಟ್‌ಫೋನ್ (Smartphone) ಖರೀದಿಸಲು ಬಯಸಿದ್ದೀರಾ? ಸ್ಯಾಮ್​ಸಂಗ್​ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್ (Android Smartphone)​ ಖರೀದಿಸಬೇಕೆಂದು ಪ್ಲಾನ್​ ಮಾಡಿಕೊಂಡಿದ್ದೀರಾ? ಹಾಗಿದ್ದರೆ ತಡ ಮಾಡಬೇಡಿ ಆನ್​ಲೈನ್ ಮಾರಾಟ (Online Sale) ಮಳಿಗೆಯಾದ ಅಮೆಜಾನ್​ನಲ್ಲಿ (Amazon) ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ (Samsung Galaxy A12) ಅನ್ನು ಕೇವಲ 399 ರೂ.ಗೆ ಪಡೆಯಬಹುದು.

  ಅಂದಹಾಗೆಯೇ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ ಮೂಲ ಬೆಲೆ 15,999 ರೂ ಆಗಿರುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಿದರೆ, ಖಂಡಿತವಾಗಿಯೂ ಒಂದು ಸಾವಿರ ರೂಪಾಯಿ ರಿಯಾಯಿತಿ ಸಿಗುತ್ತದೆ.

  ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಿ

  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ (Samsung Galaxy A12) ಮಾರುಕಟ್ಟೆಯಲ್ಲಿ ರೂ 15,999 ಕ್ಕೆ ಲಭ್ಯವಿದೆ. ಈ ಫೋನ್ ಅನ್ನು ಅಮೆಜಾನ್​ನಲ್ಲಿ (Amazon) 13% ರಿಯಾಯಿತಿಗೆ ಸಿಗುತ್ತದೆ. ಅಂದರೆ 13,999 ರೂ.ಗೆ ಖರೀದಿಸಬಹುದಾಗಿದೆ. ಈ ಡೀಲ್‌ನಲ್ಲಿ ನಿಮಗೆ ಅನೇಕ ಬ್ಯಾಂಕ್ ಆಫರ್‌ಗಳನ್ನು ಸಹ ನೀಡಲಾಗುತ್ತಿದೆ, ಇವುಗಳಲ್ಲಿ ಅತ್ಯುತ್ತಮ ಬ್ಯಾಂಕ್ ಕೊಡುಗೆ Axis Miles & More ಕ್ರೆಡಿಟ್ ಕಾರ್ಡ್ ಬಳಕೆಯಾಗಿದೆ. ಇದರೊಂದಿಗೆ, ನೀವು ಒಂದು ಸಾವಿರ ರೂಪಾಯಿಗಳವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ, ಇದರಿಂದಾಗಿ ಈ ಫೋನ್‌ನ ಬೆಲೆ 12,999ರೂ.ಗೆ ಸಿಗುತ್ತದೆ.

  ವಿನಿಮಯ ಕೊಡುಗೆಯನ್ನು ಆನಂದಿಸಿ

  ಅಮೆಜಾನ್​ ಡೀಲ್‌ನಲ್ಲಿ ಲಭ್ಯವಿರುವ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಈ ಸ್ಮಾರ್ಟ್​ಫೋನನ್ನು  12,600 ರೂ.ವರೆಗೆ ಉಳಿಸಬಹುದಾಗಿದೆ. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅವಕಾಶವಿದೆ. ಅಂದರೆ ಹಳೆಯ ಫೋನ್​ ಮಾರಿ ಹೊಸ ಸ್ಮಾರ್ಟ್‌ಫೋನ್‌ನ ಖರೀದಿಸಬಹುದಾಗಿದೆ. ಒಂದು ವೇಳೆ ಸಂಪೂರ್ಣ ಆಫರ್​ಗೆ ಬದ್ದವಾಗಿದ್ದರೆ ಸ್ಮಾರ್ಟ್​ಫೋನ್​ ಕೇವಲ 399 ರೂ.ಗೆ ಖರೀಸಲು ಸಿಗುತ್ತದೆ. ಒಟ್ಟಿನಲ್ಲಿ ಈ ಡೀಲ್ ನಲ್ಲಿ ಗ್ರಾಹಕರು ಒಟ್ಟು 15,600 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು.

  Samsung Galaxy A12 ನ ವೈಶಿಷ್ಟ್ಯಗಳು

  4G ಸೇವೆಗಳನ್ನು ಹೊಂದಿರುವ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ ಇದನ್ನು ಮೈಕ್ರೋ SD ಕಾರ್ಡ್ ಸಹಾಯದಿಂದ 1TB ವರೆಗೆ ವಿಸ್ತರಿಸಬಹುದು. Android 11 ನಲ್ಲಿ ಈ ಸ್ಮಾರ್ಟ್​ಫೋನ್​ ಕಾರ್ಯನಿರ್ವಹಿಸುತ್ತದೆ.

  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ 6.5-ಇಂಚಿನ HD + TFT ಡಿಸ್ಪ್ಲೇ ಮತ್ತು 720 x 1,600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಈ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ ಅದು 48MP ಪ್ರಾಥಮಿಕ ಕ್ಯಾಮೆರಾ, 5MP ಅಲ್ಟ್ರಾ-ವೈಡ್ ಕ್ಯಾಮೆರಾ, 2MP ರಿಫೈನ್ಡ್ ಮ್ಯಾಕ್ರೋ ಕ್ಯಾಮೆರಾ ಮತ್ತು 2MP ಡೆಪ್ತ್ ಕ್ಯಾಮೆರಾವನ್ನು ಒಳಗೊಂಡಿದೆ. ಇದರಲ್ಲಿ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

  ಇದನ್ನು ಓದಿ: Electricity Bill: ವಿದ್ಯುತ್​​​​ ಬಿಲ್​ ಕಡಿಮೆ ಬರಬೇಕಾ? ಹಾಗಿದ್ರೆ ನೀವು ಮೊದಲೇನು ಮಾಡ್ಬೇಕು ಗೊತ್ತಾ?

  ಸ್ಯಾಮ್​ಸಂಗ್ ಜನಪ್ರಿಯ ಸ್ಮಾರ್ಟ್​ಫೋನ್​ ತಯಾರಕ ಕಂಪನಿಗಳಲ್ಲಿ ಒಂದು. ಇದೀಗ ಅಮೆಜಾನ್​ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗಬೇಕು ಎಂಬ ಕಾರಣಕ್ಕೆ  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ ಅನ್ನು ರಿಯಾಯಿತಿ ದರಕ್ಕೆ ಮಾರಾಟ ಮಾಡುತ್ತಿದೆ. 16 ಸಾವಿರ ಮುಖ ಬೆಲೆಯ ಫೋನನ್ನು ಕೇವಲ 399 ರೂ.ಗೆ ಸೇಲ್​ ಮಾಡುತ್ತಿದೆ.

  ಇದನ್ನು ಓದಿ: Google Meet: ಗೂಗಲ್ ಮೀಟ್‌ನಲ್ಲಿ ವಿಡಿಯೋ ಕರೆ ರೆಕಾರ್ಡ್ ಮಾಡಬೇಕೇ..? ಈ ಹಂತಗಳನ್ನು ಫಾಲೋ ಮಾಡಿ

  ಅಮೆಜಾನ್​ ಸದಾ ಎನಾದರೊಂದು ಆಫರ್​ ತೆರೆದಿಟ್ಟಿರುತ್ತದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಆಫರ್​ ಬಿಟ್ಟಿರುತ್ತದೆ. ಅದರಂತೆ ಇದೀಗ ಸ್ಮಾರ್ಟ್​ಫೋನ್​ಗಳ ಮೇಲೂ ಆಫರ್​ ನೀಡಿದೆ. ಕಡಿಮೆ ಬೆಲೆಗೆ ಖರೀದಿಸಲು ಅನುಕೂಲವಾಗುವಂತೆ ಮಾಡಿದೆ. ಎಕ್ಸ್​ಚೇಂಜ್​ ಆಫರ್​ ಮೂಲಕ ಬಹಳ ಕಡಿಮೆ ಬೆಲೆ ಖರೀದಿಸಬಹುದಾಗಿದೆ.

  ಸ್ಯಾಮ್​ಸಂಗ್​ ಖರೀದಿಸುವವರಿಗೆ ಇದೊಂದು ಸೂಪರ್​ ಅವಕಾಶವಾಗಿದೆ. ಕಡಿಮೆ ಬೆಲೆ ಸ್ಮಾರ್ಟ್​ಫೋನ್​ ಖರೀದಿಸಬೇಕು ಎಂದುಕೊಂಡವರಿಗೆ ಈ ಆಫರ್​ ಮೂಲಕ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ12 ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ.
  Published by:Harshith AS
  First published: