ಯಾವುದೇ ಟೆಕ್ ಡಿವೈಸ್ಗಳನ್ನು (Tech Device) ಖರೀದಿ ಮಾಡಬೇಕೆಂದರು ಕೆಲವರಿಗೆ ಅದರ ಬೆಲೆ ದುಬಾರಿಯಾಗಿರುವುದರಿಂದ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಜನಪ್ರಿಯ ಇಕಾಮರ್ಸ್ ತಾಣಗಳು ವಿಶೇಷ ಆಫರ್ ಸೇಲ್ ಅನ್ನು ಆರಂಭಿಸುತ್ತದೆ. ಈ ಮೂಲಕ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಭಾರೀ ಅಗ್ಗದ ಬೆಲೆಯಲ್ಲಿ ಈ ವೆಬ್ಸೈಟ್ನಲ್ಲಿ ಪಡೆಯಬಹುದು. ಪ್ರಮುಖವಾಗಿ ಅಮೆಜಾನ್ , ಫ್ಲಿಪ್ಕಾರ್ಟ್ (Flipkart) ವೆಬ್ಸೈಟ್ಗಳಲ್ಲಿ ಏನಾದರು ವಿಶೇಷ ದಿನಗಳು, ಸಂಭ್ರಮದ ದಿನಗಳು ಬಂದಾಗ ಆಫರ್ ಸೇಲ್ ಆರಂಭಿಸುತ್ತದೆ. ಈ ಸಂದರ್ಭದಲ್ಲಂತೂ ಕೆಲವೊಂದು ಪ್ರೊಡಕ್ಟ್ಗಳಿಗೆ ಭಾರೀ ಬೇಡಿಕೆಯಿರುತ್ತದೆ. ಇದೀಗ ಅಮೆಜಾನ್ ಇಂಡಿಯಾ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ (Amazon Mega Electronics Days Sale) ಅನ್ನು ಆರಂಭಿಸಿದೆ.
ಅಮೆಜಾನ್ ವೆಬ್ಸೈಟ್ನಲ್ಲಿ ಸದ್ಯ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಆರಂಭಿಸಿದ್ದು, ಈ ಸೇಲ್‌ನಲ್ಲಿ ಹಲವಾರು ಟೆಕ್ ಡಿವೈಸ್ಗಳ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಹಾಗಿದ್ರೆ ಯಾವೆಲ್ಲಾ ಸಾಧನಗಳಿಗೆ, ಹೇಗೆಲ್ಲಾ ಆಫರ್ಸ್ ಲಭ್ಯವಿದೆ ಎಂದು ಈ ಲೇಖನದ ಮೂಲಕ ತಿಳಿಯಿರಿ.
ಸ್ಮಾರ್ಟ್ವಾಚ್ಗಳ ಮೇಲೆ ಭರ್ಜರಿ ಆಫರ್ಸ್
ಸ್ಮಾರ್ಟ್ವಾಚ್ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಅನ್ನೇ ಸೃಷ್ಟಿ ಮಾಡಿದೆ. ಏಕೆಂದರೆ ಟೆಕ್ ಮಾರುಕಟ್ಟೆಯಲ್ಲಿ ಈಗ ಸ್ಮಾರ್ಟ್ವಾಚ್ಗಳಿಗೆ ಬೇಡಿಕೆಯಿದ್ದಂತೆ ಬೇರೆ ಯಾವುದಕ್ಕೂ ಬೇಡಿಕೆಯಿಲ್ಲ. ಇದೀಗ ಅಮೆಜಾನ್ನ ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರು ಆ್ಯಪಲ್ ವಾಚ್ ಎಸ್‌ಇ ಯನ್ನು 26,400 ರೂಪಾಯಿಗಳ ಬೆಲೆಗೆ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹಾನರ್ ಕಂಪೆನಿಯ ಹೊಸ ಸ್ಮಾರ್ಟ್ಫೋನ್! ಫೀಚರ್ಸ್ ಮಾಹಿತಿ ಇಲ್ಲಿದೆ
ನಾಯ್ಸ್ ಪಲ್ಸ್ 2 ವಾಚ್ ಅನ್ನು 1,999 ರೂಪಾಯಿಗಳ ಬಜೆಟ್ ಬೆಲೆಗೆ ಖರೀದಿ ಮಾಡಬಹುದು. ಇದರೊಂದಿಗೆ ಬೋಟ್ ವೇವ್ ಎಡ್ಜ್ ಸ್ಮಾರ್ಟ್‌ವಾಚ್ ಗೆ 2,199 ರೂಪಾಯಿಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಸ್ಮಾರ್ಟ್‌ವಾಚ್ ಖರೀದಿ ಮಾಜಡುವ ಪ್ಲ್ಯಾನ್ನಲ್ಲಿದ್ದವರಿಗೆ ಈ ಸೇಲ್ ಉತ್ತಮ ಆಯ್ಕೆಯಾಗಿದೆ
ಲ್ಯಾಪ್ಟಾಪ್ಗಳ ಮೇಲೂ ಭರ್ಜರಿ ಆಫರ್
ಲ್ಯಾಪ್ಟಾಪ್ಗಳು ಯಾವುದೇ ಕೆಲಸವನ್ನು ಮಾಡಬೇಕೆಂದರೂ ಉತ್ತಮವಾಗಿ ಕಾರ್ಯನಿರ್ವಹಿಸುವಂತಹ ಒಂದು ಸಾಧನವಾಗಿದೆ. ಇನ್ನೂ ಕೆಲವರು ಗೇಮಿಂಗ್ ಉದ್ದೇಶಕ್ಕಾಗಿ ಲ್ಯಾಪ್ಟಾಪ್ಗಳನ್ನು ಖರೀದಿ ಮಾಡ್ತಾರೆ. ಇಂತಹ ಗ್ರಾಹಕರು ಅಸುಸ್ TUF ಗೇಮಿಂಗ್ A15 ಲ್ಯಾಪ್‌ಟಾಪ್ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್ AMD ರೈಜೆನ್ 5 4600H ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಸಹ ಹೊಂದಿದೆ. ಅಂತೆಯೇ ಇದನ್ನು ಈ ವಿಶೇಷ ಸೇಲ್‌ನಲ್ಲಿ 49,990 ರೂಪಾಯಿಗಳಿಗೆ ಖರೀದಿ ಮಾಡಬಹುದು. ಇದರೊಂದಿಗೆ ಹೆಚ್‌ಪಿ ವಿಕ್ಟಸ್ ಗೇಮಿಂಗ್ ರೈಜೆನ್ 5 ಲ್ಯಾಪ್‌ಟಾಪ್ ಅನ್ನು 53,990 ರೂಪಾಯಿಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಲೆನೋವೋ ಲ್ಯಾಪ್‌ಟಾಪ್
ಲೆನೋವೋ ಐಡಿಯಾ ಪ್ಯಾಡ್ ಗೇಮಿಂಗ್ i5 ಲ್ಯಾಪ್‌ಟಾಪ್ ಸಹ ಆಕರ್ಷಕ ರಿಯಾಯಿತಿ ಪಡೆದಿಕೊಂಡಿದ್ದು, ಈ ಲ್ಯಾಪ್‌ಟಾಪ್ 67,990 ರೂಪಾಯಿಗಳ ಆಫರ್ ಬೆಲೆಗೆ ಲಭ್ಯವಾಗಲಿದೆ.
ಏಸರ್ ನೈಟ್ರೋ ಗೇಮಿಂಗ್ i5 ಲ್ಯಾಪ್‌ಟಾಪ್ ಅನ್ನು ನೀವು 59,990 ರೂಪಾಯಿಗಳಿಗೆ ಖರೀದಿ ಮಾಡಬಹುದು. ಈ ಲ್ಯಾಪ್‌ಟಾಪ್ ಖರೀದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಮ್‌ಐ ವಹಿವಾಟುಗಳ ಸೌಲಭ್ಯ ಪಡೆದರೆ 10 ಪ್ರತಿಶತದಷ್ಟು ತ್ವರಿತ ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಾಗಲಿದೆ.
ಇಯರ್ಬಡ್ಸ್ ಆಫರ್ಸ್
ಇನ್ನುಳಿದಂತೆ ಈ ವಿಶೇಷ ಸೇಲ್ ಮೂಲಕ ಗ್ರಾಹಕರು ಬೋಟ್ 170 ವೈರ್ಲೆಸ್ ಇಯರ್‌ಬಡ್ ಅನ್ನು 1,299 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ನಾಯ್ಸ್ ಬಡ್ಸ್ ಕನೆಕ್ಟ್ ಅನ್ನು 1,499 ರೂಪಾಯಿಗಳಿಗೆ ಪಡೆಯಬಹುದಾಗಿದೆ. ಇದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ