ಅಮೆಜಾನ್ ಪ್ರೈಮ್ ಸದಸ್ಯರಿಗೆ ಹೊಸ ಮ್ಯೂಸಿಕ್ ಸೇವೆ

news18
Updated:March 1, 2018, 4:14 PM IST
ಅಮೆಜಾನ್ ಪ್ರೈಮ್ ಸದಸ್ಯರಿಗೆ ಹೊಸ ಮ್ಯೂಸಿಕ್ ಸೇವೆ
news18
Updated: March 1, 2018, 4:14 PM IST
- ನ್ಯೂಸ್ 18 ಕನ್ನಡ

ನವದೆಹಲಿ,(ಮಾ.1): ಅಮೆಜಾನ್  ಬುಧವಾರ ತನ್ನ ಪ್ರೈಮ್ ಸದಸ್ಯರಿಗೆ ಹೊಸ ಸೇವೆಯೊಂದನ್ನು ಪರಿಚಯಿಸಿದೆ. ಅಮೆಜಾನ್ ಪ್ರೈಮ್ ಮ್ಯೂಸಿಕ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಸಂಗೀತ ಪ್ರಿಯರಿಗೆ ಹೊಸ ಹೊಸ ಹಾಡುಗಳನ್ನು ನೀಡಲಿದೆ.

ಅಮೆಜಾನ್​ ಪ್ರೈಮ್ ಮ್ಯೂಸಿಕ್​ ಸೇವೆ ಜಾಹೀರಾತು ಮುಕ್ತವಾಗಿರಲಿದ್ದು, ತನ್ನ ಪ್ರೈಮ್ ಸದಸ್ಯರಿಗೆ ಸೇವೆ ನೀಡಲಿದೆ.  ಪ್ರೈಮ್ ಮ್ಯೂಸಿಕ್​ನ  ವಾರ್ಷಿಕ ಶುಲ್ಕ 999 ರೂ. ಆಗಿದೆ.

ಅಮೆಜಾನ್ ಪ್ರೈಮ್ ಮ್ಯೂಸಿಕ್​ನಲ್ಲಿ ಕನ್ನಡ ಸೇರಿದಂತೆ ಹಿಂದಿ, ಪಂಜಾಬಿ, ತೆಲುಗು, ತಮಿಳು,  ಮರಾಠಿ, ಮಲಯಾಳಂ, ಬೆಂಗಾಲಿ, ಗುಜರಾತಿ ಮತ್ತು ರಾಜಸ್ತಾನಿ ಭಾಷೆಗಳ ಹಾಡುಗಳನ್ನು ಪ್ರಸಾರ ಮಾಡಲಿದೆ.

ಇದಲ್ಲದೇ ಅಮೆಜಾನ್ ಪ್ರೈಮ್ ಮ್ಯೂಸಿಕ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಕಾಣಿಸಿಕೊಂಡಿದ್ದು, ನೀವು ಹಾಡುಗಳನ್ನು ವಾಯ್ಸ್ ಕಾಮೆಂಡಿಗ್ ಮೂಲಕವೇ ಕಾರ್ಯನಿರ್ವಹಿಸಬಹುದಾಗಿದೆ. ನೀವು ಕೇಳಿದ ಹಾಡುಗಳನ್ನು ಪ್ರಸಾರ ಮಾಡಲಿದೆ.


Loading...

ಅಮೆಜಾನ್ ಪ್ರೈಮ್ ಮ್ಯೂಸಿಕ್ ಆಪ್ ಮತ್ತು ವೆಬ್ ಎರಡು ಸೇವೆಯನ್ನು ನೀಡಲಿದೆ. ಆಂಡ್ರಾಯ್ಡ್ ಮತ್ತು ಆಪಲ್ ನಲ್ಲಿ ಆಪ್ ಸಪೋರ್ಟ್ ಮಾಡಲಿದ್ದು, ಇದರೊಂದಿಗೆ ವೆಬ್‌ನಲ್ಲಿಯೂ ಹಾಡುಗಳನ್ನು ಪ್ರೈಮ್ ಸದಸ್ಯರು ಕೇಳಬಹುದಾಗಿದೆ.

ಅಮೆಜಾನ್ ಪ್ರೈಮ್ ಮ್ಯೂಸಿಕ್​ನಲ್ಲಿ ಅನಿಯಮಿತ ಆಫ್ ಲೈನ್ ​​ಮ್ಯೂಸಿಕ್  ಡೌನ್ಲೋಡ್ ಮಾಡಲು ಸಹ ಒಂದು ಆಯ್ಕೆ ಇರುತ್ತದೆ.ಅಮೆಜಾನ್ ಪ್ರೈಮ್ ಮ್ಯೂಸಿಕ್​ನಲ್ಲಿ  ಅಂತರರಾಷ್ಟ್ರೀಯ ಕಲಾವಿದರ ಲಕ್ಷಾಂತರ ಹಾಡುಗಳು ಇರುತ್ತವೆ ಎನ್ನಲಾಗಿದೆ.

 

 

 

 
First published:March 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...