HOME » NEWS » Tech » AMAZON INDIA PONGAL SHOPPING STORE BRINGS OFFERS DEALS ON SMARTPHONES LAPTOPS SMARTWATCHES AND MORE HG

Amazon; ಪೊಂಗಲ್​ ಶಾಪಿಂಗ್​ ಸ್ಟೋರ್ ಮೂಲಕ ಆಫರ್​ ನೀಡಿದ ಅಮೆಜಾನ್​!; ಕಡಿಮೆ ಬೆಲೆಗೆ ಸಿಗಲಿದೆ ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​

Pongal shopping store: ರೆಡ್​ಮಿ 9 ಪವರ್​ ಸ್ಮಾರ್ಟ್​ಫೋನನ್ನು  10,999 ರೂ.ಗೆ ಮಾರಾಟ ಮಾಡುತ್ತಿದೆ. ಸ್ಯಾಮ್​​ಸಂಗ್​ ಎಮ್​51 ಅನ್ನು 22,999 ರೂ.ಗೆ ಸೇಲ್​ ಮಾಡುತ್ತಿದೆ. ಇನ್ನು ಒನ್​ಪ್ಲಸ್​​ ನೋರ್ಡ್​ 5ಜಿ ಸ್ಮಾರ್ಟ್​ಫೋನ್​​  ಅನ್ನು 27,999 ರೂ.ಗೆ ಅಮೆಜಾನ್​ ಸೇಲ್​ ಮಾಡುತ್ತಿದೆ.

news18-kannada
Updated:January 10, 2021, 5:53 PM IST
Amazon; ಪೊಂಗಲ್​ ಶಾಪಿಂಗ್​ ಸ್ಟೋರ್ ಮೂಲಕ ಆಫರ್​ ನೀಡಿದ ಅಮೆಜಾನ್​!; ಕಡಿಮೆ ಬೆಲೆಗೆ ಸಿಗಲಿದೆ ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​
ಅಮೆಜಾನ್
  • Share this:
ಆನ್​​ಲೈನ್​​ ಮಾರಾಟ ಮಳಿಗೆಯಾದ ಅಮೆಜಾನ್​ ‘ಪೊಂಗಲ್​ ಶಾಪಿಂಗ್​ ಸ್ಟೋರ್’​​ ಮೂಲಕ ಆಫರ್​ ನೀಡುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ಸ್​​, ಸ್ಮಾರ್ಟ್​ಫೋನ್​, ಅಸೆಸ್ಸರೀಸ್​, ಅಮೆಜಾನ್​ ಡಿವೈಸ್​ಗಳನ್ನು ಕಡಿಮೆ​ ಬೆಲೆಗೆ ಮಾರಾಟ ಮಾಡುತ್ತಿದೆ.

ಹೊಸ ವರ್ಷದ ಸಲುವಾಗಿ ಮತ್ತು ಗ್ರಾಹಕರಿಗೆ ಹಲವಾರು ವಸ್ತುಗಳನ್ನು ಆಫರ್​ ಬೆಲೆ ನೀಡುವ ಸಲುವಾಗಿ  ಪೊಂಗಲ್​​ ಶಾಪಿಂಗ್​ ಸ್ಟೋರ್​ ನಡೆಸುತ್ತಿದೆ. ಶಿಯೋಮಿ, ಲೆನೊವೊ, ಸ್ಯಾಮ್​ಸಂಗ್​ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಅಂದಹಾಗೆಯೇ ರೆಡ್​ಮಿ 9 ಪವರ್​ ಸ್ಮಾರ್ಟ್​ಫೋನನ್ನು  10,999 ರೂ.ಗೆ ಮಾರಾಟ ಮಾಡುತ್ತಿದೆ. ಸ್ಯಾಮ್​​ಸಂಗ್​ ಎಮ್​51 ಅನ್ನು 22,999 ರೂ.ಗೆ ಸೇಲ್​ ಮಾಡುತ್ತಿದೆ. ಇನ್ನು ಒನ್​ಪ್ಲಸ್​​ ನೋರ್ಡ್​ 5ಜಿ ಸ್ಮಾರ್ಟ್​ಫೋನ್​​  ಅನ್ನು 27,999 ರೂ.ಗೆ ಅಮೆಜಾನ್​ ಸೇಲ್​ ಮಾಡುತ್ತಿದೆ.

ಅದರ ಜೊತೆಗೆ ಡೆಲ್​, ಹೆಚ್​ಪಿ, ಲೆನೊವೊ ಕಂಪನಿಯ ಲಾಪ್​ಟಾಪ್​ ಅನ್ನು ಸೇಲ್​ ಮಾಡುತ್ತಿದೆ. ಡೆಲ್​ ಇನ್ಫಿರಾನ್​, ಹೆಚ್​ಪಿ 14 ಅಲ್ಟ್ರಾ, ಲೆನೊವೊ ಐಪ್ಯಾಡ್​​ ಎಸ್​145 ಅನ್ನು ಆಫರ್​ ಬೆಲೆಗೆ ಸೇಲ್​ ಮಾಡುತ್ತಿದೆ.

ಇನ್ನು ಅಮೇಜ್​ಫಿಟ್​​ ಜಿಎಸ್​ಟಿ 2 ಮಿನಿ ವಾಚ್​ ಅನ್ನು 6,999 ರೂ.ಗೆ ಸೇಲ್​ ಮಾಡುತ್ತಿದೆ. ಮಿ ಸ್ಮಾರ್ಟ್​ ಬ್ಯಾಂಡ್​ 5 ಅನ್ನು 2,499 ರೂ.ಗೆ ಮಾರಾಟ ಮಾಡುತ್ತಿದೆ. ಅಂತೆಯೇ ಗ್ಯಾಲಕ್ಸಿ ವಾಚ್​ 3 32,990 ರೂ.ಗೆ ಸೇಲ್​ ಮಾಡುತ್ತಿದೆ.
Youtube Video

ಇನ್ನು ಮಿ ಟಿವಿ 4ಎ 108 ಸೆ.ಮೀ, ಒನ್​ಪ್ಲಸ್​​ ವೈ ಸಿರೀಸ್​ 80 ಸೆ.ಮೀ, ಸೋನಿ ಬ್ರೇವಿಯಾ 108 ಸೆ.ಮೀ  ಸ್ಮಾರ್ಟ್​ಟಿವಿಯನ್ನು ಆಫರ್​ ಬೆಲೆಗೆ ಸೇಲ್​ ಮಾಡುತ್ತಿದೆ.
Published by: Harshith AS
First published: January 10, 2021, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories