HOME » NEWS » Tech » AMAZON INDIA HAS ANNOUNCED 50 PERCENT DISCOUNTS ON ITS ECHO RANGE OF SPEAKERS STG HG

ಅಮೆಜಾನ್​​​ನಿಂದ 50% ರಿಯಾಯಿತಿ: Echo ಸಾಧನಗಳ ಖರೀದಿಗೆ ಇದೇ ಬೆಸ್ಟ್ ಟೈಮ್!

Amazon: ಈ ಮೊದಲು 8,999 ರೂ.ಗಳ ಸ್ಟ್ಯಾಂಡರ್ಡ್ ಬೆಲೆ ಹೊಂದಿದ್ದ ಅಮೆಜಾನ್ ಎಕೋ ಶೋ 5 ಸಾಧನದ ಮೇಲೆ ಶೇ.50ರಷ್ಟು ರಿಯಾಯತಿ ನೀಡಲಾಗುತ್ತಿದ್ದು, ಕೇವಲ 4,999 ರೂ.ಗೆ ನೀವು ಇದನ್ನು ಖರೀದಿಸಬಹುದಾಗಿದೆ.

news18-kannada
Updated:February 14, 2021, 11:01 AM IST
ಅಮೆಜಾನ್​​​ನಿಂದ 50% ರಿಯಾಯಿತಿ: Echo ಸಾಧನಗಳ ಖರೀದಿಗೆ ಇದೇ ಬೆಸ್ಟ್ ಟೈಮ್!
ಅಮೆಜಾನ್
  • Share this:
ವರ್ಚುವಲ್ ನೆರವು ನೀಡುವ ಸಾಧನಗಳ ಮೂಲಕ ನಿಮ್ಮ ಮನೆಯನ್ನು ಅಲಂಕರಿಸಲು ಇದು ಸರಿಯಾದ ಸಮಯ. ಏಕೆಂದರೆ ಅಮೆಜಾನ್ ಇಂಡಿಯಾ ತನ್ನ ಗ್ರಾಹಕರಿಗಾಗಿ ವಿವಿಧ ವರ್ಚುವಲ್ ಸಾಧನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. Echo ಶ್ರೇಣಿಯ ಸ್ಪೀಕರ್‌ಗಳು, ಫೈರ್ ಟಿವಿ ಸ್ಟಿಕ್ ಮತ್ತು ಇತರ ಅಲೆಕ್ಸಾ ಚಾಲಿತ ಸಾಧನಗಳಿಗೆ ಭಾರಿ ರಿಯಾಯಿತಿ ನೀಡುತ್ತಿದೆ. ಫೆಬ್ರವರಿ 15 ರಂದು ಮಧ್ಯರಾತ್ರಿ 12 ಗಂಟೆಗೆ ಈ ಆಫರ್ ಗಳು ನಿಮಗೆ ಲಭ್ಯವಾಗಲಿದ್ದು, 24 ಗಂಟೆಗಳ ಕಾಲ ಲೈವ್ ಆಗಿರುತ್ತವೆ. ಈ ಸಾಧನಗಳನ್ನು ಖರೀದಿಸಲು ಬಯಸುವ ಜನರು ನೋ ಕಾಸ್ಟ್ ಇಎಂಐ, ಡೆಬಿಟ್ ಕಾರ್ಡ್ ಇಎಂಐ ಮತ್ತು ಅಮೆಜಾನ್ ಪೇ ಲೇಟರ್ ಸೇರಿ ವಿವಿಧ ಪಾವತಿ ಆಯ್ಕೆಗಳ ಮೂಲಕ ತಮಗಿಷ್ಟವಾದ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.

ಈ ಮೊದಲು 8,999 ರೂ.ಗಳ ಸ್ಟ್ಯಾಂಡರ್ಡ್ ಬೆಲೆ ಹೊಂದಿದ್ದ ಅಮೆಜಾನ್ ಎಕೋ ಶೋ 5 ಸಾಧನದ ಮೇಲೆ ಶೇ.50ರಷ್ಟು ರಿಯಾಯತಿ ನೀಡಲಾಗುತ್ತಿದ್ದು, ಕೇವಲ 4,999 ರೂ.ಗೆ ನೀವು ಇದನ್ನು ಖರೀದಿಸಬಹುದಾಗಿದೆ. ಅದರಂತೆ 4,999 ರೂ. ಮೂಲ ಬೆಲೆ ಹೊಂದಿರುವ ಎಕೋ ಆಟೋ ಸಾಧನದ ಮೇಲೆ ಶೇ.40ರಷ್ಟು ರಿಯಾಯಿತಿ ನೀಡುತ್ತಿದ್ದು, ನೀವು ಕೇವಲ 2,999 ರೂ. ಪಾವತಿಸಿ ಖರೀದಿಸುವ ಅವಕಾಶವಿದೆ.

ಈ ಮೊದಲು 9,999 ರೂ.ಗೆ ಮಾರಾಟವಾಗುತ್ತಿದ್ದ ಹೆಚ್ಚು ಪ್ರೀಮಿಯಂ ಗುಣಮಟ್ಟದ ಆಡಿಯೋ ಹೊಂದಿರುವ 4ನೇ ತಲೆಮಾರಿನ ಎಕೋ ಸ್ಪೀಕರ್ ಸಾಧನದ ಮೇಲೆ ಶೇ.35ರಷ್ಟು ರಿಯಾಯತಿ ಘೋಷಿಸಲಾಗಿದ್ದು, ಕೇವಲ 6,499 ರೂ.ಗೆ ನೀವು ಖರೀದಿಸಬಹುದಾಗಿದೆ. ಎಲ್ಇಡಿ ಕ್ಲಾಕ್ ಡಿಸ್​ಪ್ಲೇ ಹೊಂದಿರುವ ಇತ್ತೀಚಿನ ಎಕೋ ಡಾಟ್ (4 ನೇ ತಲೆಮಾರಿನ) ಸ್ಪೀಕರ್ ಸಾಧನದ ಮೇಲೆಯೂ ಅಮೆಜಾನ್ ಭರ್ಜರಿ ರಿಯಾಯಿತಿ ನೀಡುತ್ತಿದೆ. ಮಾರಾಟದ ಭಾಗವಾಗಿ 5,499 ರೂ. ಮೂಲಬೆಲೆ ಹೊಂದಿರುವ ಗುಣಮಟ್ಟದ ಈ ಎಕೋ ಡಾಟ್ ಸ್ಲೀಕರ್ ಇದೀಗ ಕೇವಲ 4,449 ರೂ.ಗೆ ಸಿಗಲಿದೆ.

ಇ-ಕಾಮರ್ಸ್ ದೈತ್ಯ ಅಮೆಜಾನ್, ಸ್ಮಾರ್ಟ್ ಬಲ್ಬ್ ಗಳ ಜೊತೆಗೆ ಎಕೋ ಸ್ಪೀಕರ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಗ್ರಾಹಕರು 9W ಸ್ಮಾರ್ಟ್ ಬಲ್ಬ್‌ ನೊಂದಿಗೆ ಇತ್ತೀಚಿನ ಎಕೋ ಡಾಟ್ ಅನ್ನು ಕೇವಲ 3,499 ರೂ.ಗೆ ಖರೀದಿಸಬಹುದು. ಕೇವಲ ಸ್ಪೀಕರ್ ಮಾತ್ರ ಖರೀದಿಸಿದರೆ ನಿಮಗೆ ಹೆಚ್ಚು ಲಾಭವಾಗುವುದಿಲ್ಲ, ಇವೆರಡನ್ನೂ ಒಟ್ಟಿಗೆ ಖರೀದಿಸಿದಾಗ ನಿಮಗೆ ಭರ್ಜರಿ ಉಳಿತಾಯವಾಗಲಿದೆ. ಅಮೆಜಾನ್ ಎರಡು ಸ್ಮಾರ್ಟ್ ಬಲ್ಬ್‌ ಗಳೊಂದಿಗೆ ಎಕೋ ಡಾಟ್ (4 ನೇ ತಲೆಮಾರಿನ) ಅನ್ನು ಕೇವಲ 5,499 ರೂ.ಗೆ ಮಾರಾಟ ಮಾಡುತ್ತಿದೆ.

ಫೈರ್ ಟಿವಿ ಸ್ಟಿಕ್ ಲೈಟ್ ಶೇ.43ರಷ್ಟು ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ. ಭಾರಿ ಜನಪ್ರಿಯತೆ ಗಳಿಸಿರುವ ಅಮೆಜಾನ್ ಫೈರ್‌ ಟಿವಿ ಸ್ಟಿಕ್ 4K ಮೇಲೆ 1,200 ರೂ.ಗಳ ಡಿಸ್ಕೌಟ್ ಸಿಗಲಿದೆ. ಫೈರ್ ಟಿವಿ ಸ್ಟಿಕ್ ಲೈಟ್‌ನ ಬೆಲೆ 3,999 ರೂ. ಆಗಿದ್ದು, ಆದರೆ ಸಾಮಾನ್ಯವಾಗಿ ಇದು ಅಮೆಜಾನ್‌ನಲ್ಲಿ 2,999 ರೂ.ಗೆ ಲಭ್ಯವಿರುತ್ತದೆ. ವಾರ್ಷಿಕೋತ್ಸವದ ಅಂಗವಾಗಿ ಈ ಲೈಟ್ ಸಾಧನವು ಅಮೆಜಾನ್‌ನಲ್ಲಿ 2,299 ರೂ.ಗೆ ಮಾರಾಟವಾಗಲಿದೆ. ಇನ್ನು 5,999 ರೂ. ಮೂಲಬೆಲೆಯ ಫೈರ್ ಟಿವಿ ಸ್ಟಿಕ್ 4K ಅಮೆಜಾನ್‌ನಲ್ಲಿ 1,200 ರೂ. ರಿಯಾಯಿತಿಯೊಂದಿಗೆ 4,799 ರೂ.ಗೆ ದೊರೆಯಲಿದೆ

LG 4K UHD ಟಿವಿಗಳ ಮೇಲೆ ಕೂಡ ಅಮೆಜಾನ್ ಶೇ.40ರಷ್ಟು ರಿಯಾಯಿತಿ ನೀಡುತ್ತಿದೆ, ಇದು ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಡಿಫಾಲ್ಟ್ ಆಗಿ ಹೊಂದಿರಲಿದೆ. ಎಕೋ ಸಾಲಿನ ಸ್ಮಾರ್ಟ್ ಸಾಧನಗಳಲ್ಲಿ ಉತ್ತಮ ರಿಯಾಯಿತಿ ಸಿಗುತ್ತಿದೆ.
Published by: Harshith AS
First published: February 14, 2021, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories