ಅಮೆಜಾನ್​ ಹಮ್ಮಿಕೊಂಡಿದೆ ಸೋನಿ ಆಡಿಯೋ ಫೆಸ್ಟ್​​; ಇಯರ್​ಫೋನ್​, ಸ್ಪೀಕರ್​ ಮೇಲೆ ಆಕರ್ಷಕ ಡಿಸ್ಕೌಂಟ್​

Amazon Sony Audio Fest: ಸೋನಿ ಆಡಿಯೋ ಫೆಸ್ಟ್​ನಲ್ಲಿ ಹೆಡ್​ಫೋನ್​ಗಳ ಮೇಲೆ ಶೇ.40 ಡಿಸ್ಕೌಂಟ್​ ನೀಡಿದೆ. ಸ್ಪೀಕರ್​ಗಳ ಮೇಲೆ ಶೇ.25 ರಷ್ಟು ಡಿಸ್ಕೌಂಟ್​ ನೀಡಿದೆ.

ಅಮೆಜಾನ್

ಅಮೆಜಾನ್

 • Share this:
  ಅಮೆಜಾನ್​​ ಸೋನಿ ಆಡಿಯೋ ಫೆಸ್ಟ್​​​ ಹಮ್ಮಿಕೊಂಡಿದೆ. ಇಂದಿನಿಂದ ಪ್ರಾರಂಭವಾಗಿ ಡಿಸೆಂಬರ್​ 18ರವರೆಗೆ ಈ ಸೇಲ್​ ಅನ್ನು ನಡೆಸುತ್ತಿದೆ. ಅಮೆಜಾನ್​ ಸೋನಿ ಆಡಿಯೋ ಫೆಸ್ಟ್​ನಲ್ಲಿ ಆಡಿಯೋ ಪ್ರಾಡಕ್ಟ್​ಗಳ ಮೇಲೆ ಆಕರ್ಷಕ ಆಫರ್​ ನೀಡಿದೆ.

  ಸೋನಿ ಆಡಿಯೋ ಫೆಸ್ಟ್​ನಲ್ಲಿ ಹೆಡ್​ಫೋನ್​ಗಳ ಮೇಲೆ ಶೇ.40 ಡಿಸ್ಕೌಂಟ್​ ನೀಡಿದೆ. ಸ್ಪೀಕರ್​ಗಳ ಮೇಲೆ ಶೇ.25 ರಷ್ಟು ಡಿಸ್ಕೌಂಟ್​ ನೀಡಿದೆ. ಅಂತೆಯೇ ಶೇ.20 ರಷ್ಟು ಸೌಂಡ್​ ಬಾರ್​ಗಳ ಮೇಲೆ ಆಫರ್​ ನೀಡಿದೆ. ಅದರ ಜೊತೆಗೆ  ಬ್ಯಾಂಕ್​ ಆಫರ್​ ಬರೋಡಾ ಮತ್ತು ಯೆಸ್​ ಬ್ಯಾಂಕ್​ ಕ್ರೆಡಿಟ್​​ ಕಾರ್ಡ್​ ಮೂಲಕ ಖರೀದಿಸುವ ಆಯ್ಕೆಯನ್ನು ನೀಡಿದೆ. ಅಷ್ಟು ಮಾತ್ರವಲ್ಲದೆ ಇಎಮ್​ಐ ಆಯ್ಕೆಯಲ್ಲೂ ಖರೀದಿಸಬಹುದಾಗಿದೆ.

  ಅಮೆಜಾನ್​​ ಸೋನಿ ಆಡಿಯೋ ಫೆಸ್ಟ್​:

  - ಸೋನಿ WH-1000XM4 ನಾಯ್ಸ್​​- ಕ್ಯಾನ್ಸಲಿಂಗ್​ ಹೆಡ್​ಫೋನ್​ ಅನ್ನು 24,990 ರೂ.ಗೆ ಮಾರಾಟ ಮಾಡುತ್ತಿದೆ.

  - ಸೋನಿ WH-1000XM3 ಇಯರ್​ಬಡ್ಸ್​ ಮೇಲೆ ಆಫರ್​ ನೀಡಿದೆ. 24 ಬ್ಯಾಟರಿ ಲೈಪ್​ ಇರುವ ಮೈಕ್ರೊಫೋನ್​ ಮತ್ತು ಹೆಡ್​ಡಿ ನಾಯ್ಸ್​ ಕ್ಯಾನ್ಸಲಿಂಗ್​ ಪ್ರೊಸೆಸರ್​  ಕ್ಯೂಎನ್​1ಎ ಇಯರ್​ಬಡ್ಸ್​ ಅನ್ನು 14,990 ರೂ.ಗೆ ಮಾರಾಟ ಮಾಡುತ್ತಿದೆ.

  - ಸೋನಿ WF-XB700 ಇಯರ್​ಬಡ್ಸ್​​ 18 ಗಂಟೆಗಳ ಕಾಲ ಬಳಸಬಹುದಾಗಿದೆ. ಐಪಿಎಕ್ಸ್​​4 ನೀರಿನಿಂದ ರಕ್ಷಿಸಬಹುದಾದ ಆಯ್ಕೆ ಇದರಲ್ಲಿದೆ. ಇದರ ಬೆಲೆ 7,990 ರೂ. ಆಗಿದೆ.

  -  ಸೋನಿ SRS-XB23 ಸ್ಪೀಕರ್​ ಅನ್ನು 7,990 ರೂ.ಗೆ ಮಾರಾಟ ಮಾಡುತ್ತಿದೆ.

  - ಸೋನಿ GTK-PG10 ಸ್ಪೀಕರ್​ ಅನ್ನು 13,990 ರೂ.ಗೆ ಮಾರಾಟ ಮಾಡುತ್ತಿದೆ.

  - ಸೋನಿ HT-X8500 ಸೌಂಡ್​ಬಾರ್​​  ಬೆಲೆ 24,990 ರೂ.ಗೆ ಮಾರಾಟ ಮಾಡುತ್ತಿದೆ.

  - ಸೋನಿ Sony HT-RT3 ಸಬ್​ಊಪರ್​ ಜೊತೆಗೆ 3 ಚಾನೆಲ್​ ಅನ್ನು ಅಮೆಜಾನ್​ ಸೋನಿ ಆಡಿಯೋ ಫೆಸ್ಟ್​ನಲ್ಲಿ 19,990 ರೂ.ಗೆ ಮಾರಾಟ ಮಾಡುತ್ತಿದೆ.
  Published by:Harshith AS
  First published: