ಫ್ರೀಡಂ ಸೇಲ್​: ಈ ನಾಲ್ಕು ದಿನ ಭರ್ಜರಿ ಆಫರ್​ಗಳನ್ನು ಪಡೆಯಿರಿ


Updated:August 6, 2018, 11:24 AM IST
ಫ್ರೀಡಂ ಸೇಲ್​: ಈ ನಾಲ್ಕು ದಿನ ಭರ್ಜರಿ ಆಫರ್​ಗಳನ್ನು ಪಡೆಯಿರಿ

Updated: August 6, 2018, 11:24 AM IST
ಅಮೆಜಾನ್​ ಇಂಡಿಯಾ ಸ್ವಾತಂತ್ರ್ಯ ದಿನದ ಅಂಗವಾಗಿ ಭಾರತೀಯ ಗ್ರಾಹಕರಿಗೆ ಭರ್ಜರಿ ಆಫರ್​ ನೀಡಲು ಮುಂದಾಗಿದ್ದು, ಆಗಸ್ಟ್​ 9-12 ವರೆಗೆ ಹಲವಾರು ವಸ್ತುಗಳನ್ನು ಅತ್ಯುತ್ತಮ ಆಫರ್​ನಲ್ಲಿ ಮಾರಾಟ ಮಾಡುತ್ತಿದೆ.

ವಿದ್ಯುನ್ಮಾನ ವಸ್ತುಗಳಿಗೆ, ಫ್ಯಾಷನ್, ಟಿವಿಯಂತಹ ವಸ್ತುಗಳ ಸೇರಿದಂತೆ ಹಲವಾರು ವಸ್ತುಗಳ ಮೇಲೆ ಭಾರೀಯ ಮಟ್ಟದಲ್ಲೇ ರಿಯಾಯಿತಿ ನೀಡಲಾಗುತ್ತದೆ. ಜುಲೈ 16- ಜುಲೈ 18ರ ವರೆಗೆ ಅಮೆಜಾನ್​ ಪ್ರೈಂ ಡೇ ಆಫರ್​ ನೀಡಲಾಗಿತ್ತು. ಇದರಲ್ಲಿ 200 ಕ್ಕೂ ಅಧಿಕ ವಸ್ತುಗಳನ್ನು ಆಫರ್​ ಬೆಲೆಯಲ್ಲಿ ನೀಡಲಾಗಿತ್ತು.

ಈ ಬಾರಿ ಆಗಸ್ಟ್​ 9-12 ರಿಂದ ಅಮೆಜಾನ್​ ಫ್ರೀಡಂ ಸೇಲ್​ ಆಫರ್​ ಬಂದಿದ್ದು, ಇದರಲ್ಲಿ ಒನ್​ಪ್ಲಸ್​ 6, ರಿಯಲ್​ ಮಿ 1, ಹಾನರ್​ 7 ಎಕ್ಸ್​, ಮೊಟೊ ಜಿ6 ಸೇರಿ ದಂತೆ ಹಲವು ಮೊಬೈಲ್​ಗಳ ಮೇಲೆ ಅತಿ ಹೆಚ್ಚು ರಿಯಾಯಿತಿ ನೀಡಲಾಗಿದೆ. ಇನ್ನು ಅಮೆಜಾನ್​ ಪ್ರೈಮ್​ ಮೆಂಬರ್​ಗಳಿಗೂ ಹಲವಾರು ಆಫರ್​ಗಳು ನೀಡಬಹುದು ಎಂದು ಹೇಳಲಾಗಿದೆ.

ಹೊಸ ವಸ್ತುಗಳ ಬಿಡುಗಡೆ, ಸೇರಿದಂತೆ ಇಎಂಐ, ಎಕ್ಸ್​ಚೇಂಜ್​ ಆಫರ್​, ಹೀಗೆ ಹತ್ತು ಹಲವಾರು ಆಫರ್​ಗಳನ್ನು ನೀಡಲು ಅಮೆಜಾನ್​ ಇಂಡಿಯಾ ತೀರ್ಮಾನಿಸಿದೆ. ಅಲ್ಲದೇ ಭಾರತೀಯ ಪ್ರತಿಯೊಂದು ಹಬ್ಬಗಳ ಸಂದರ್ಭದಲ್ಲೂ ನಾವು ಆಫರ್​ಗಳನ್ನು ನೀಡುತ್ತಲೇ ಬರುತ್ತಿದ್ದೇವೆ. ಹೀಗಾಗಿ ಕೋಟಿ ಭಾರತೀಯ ನಂಭಿಕೆಯನ್ನು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಮನೀಶ್ ತಿವಾರಿ.

ಒಟ್ಟಾರೆ ಈ ಆಫರ್​ ಸಂದರ್ಭದಲ್ಲಿ ಎಸ್​ಬಿಐ ಕ್ರೆಡಿಟ್​ ಕಾರ್ಡ್​ ಬಳಕೇದಾರರಿಗೆ ಹೆಚ್ಚಿನ ಆಫರ್​ ನೀಡಲಾಗುತ್ತದೆ ಎಂಬ ಮಾತೂ ಕೇಳಿ ಬಂದಿದೆ. ಮೊಬೈಲ್​ ಫೋನ್​ಗಳ ಮೇಲೆ ಶೇ. 40 ಬೆಲೆ ಕಡಿತದ ಆಫರ್​ ನೀಡಬಹುದು ಎನ್ನಲಾಗಿದೆ. ಬಟ್ಟೆಬರೆಗಳ ಮೇಲೆ 80ರ ವರೆಗೂ ರಿಯಾಯಿತಿ ಇದೆಯಂತೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ