ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ಇದೀಗ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಜೊತೆಗೆ ಕೈಜೋಡಿಸಿಕೊಂಡಿದ್ದು, ಗ್ರಾಹಕರಿಗೆ ಹೆಚ್ಪಿ ಗ್ಯಾಸ್ ಸಿಲಿಂಡರ್ ಅನ್ನು ಮರುಪೂರಣ ಮಾಡಲು ಮುಂದಾಗಿದೆ. ಅಮೆಜಾನ್ ವೆಬ್ಸೈಟ್ ಮತ್ತು ಆ್ಯಪ್ಗೆ ತೆರಳುವ ಮೂಲಕ ಅಮೆಜಾನ್ ಪೇ ಟ್ಯಾಬ್ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಆಯ್ಕೆಯನ್ನು ನೀಡಿದೆ. ಯುಪಿಐ, ಡೆಬಿಟ್ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ನೆಟ್ಬ್ಯಾಂಕಿಂಗ್ ಪಾವತಿ ಮೂಲಕ ಸಿಲಿಂಡರ್ ಖರೀದಿಸಬಹುದಾಗಿದೆ.
ಅಮೆಜಾನ್ ಪೇ ಸಿಇಒ ಮಹೇಂದ್ರ ನೆರೂರ್ಕರ್ ಈ ಬಗ್ಗೆ ಮಾತನಾಡಿದ್ದು, ‘ನಮ್ಮ ಗ್ರಾಹಕರಿಗೆ ಡಿಜಿಟಲ್ ಪಾವತಿ ಮಾಡುವ ಮೂಲಕ ಸಿಲಿಂಡರ್ ಬುಕ್ ಮಾಡುವ ಅವಕಾಶವನ್ನು ಮತ್ತು ಹೊಸ ಅನುಭವನ್ನು ನೀಡುತ್ತಿದ್ದೇವೆ. ಹೆಚ್ಚಿನ ಗ್ರಾಹಕರು ಹೆಚ್ಪಿ ಸಿಲಿಂಡರ್ಗಾಗಿ ನಗದು ಪಾವತಿ ಮಾಡಲು ಬಯಸುತ್ತಾರೆ. ಆದರೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಜೊತೆಗೆ ನಾವು ಸಹಭಾಗಿತ್ವವನ್ನು ಹೊಂದಿದ್ದು, ಹೆಚ್ಪಿ ಗ್ಯಾಸ್ ಅನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿ ಖರೀದಿಸುವ ಅವಕಾಶವನ್ನು ನೀಡುತ್ತಿದ್ದೇವೆ. ಇದರಿಂದ ಲಕ್ಷಾಂತರ ಗ್ರಾಹಕರಿಗೆ ಪ್ರಯೋಜನ ಸಿಗಲಿದೆ ಎಂದರು.
ಇನ್ನು ಧ್ವನಿ ಮೂಲಕ ಅಲೆಕ್ಸಾದಲ್ಲೂ ಗ್ಯಾಸ್ ಬುಕ್ ಮಾಡಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ಅಮೆಜಾನ್ ಎಕೋ, ಫೈರ್ ಟಿವಿ ಸ್ಟಿಕ್ ಮೂಲಕವು ಖರೀದಿಸಬಹುದಾಗಿದೆ. ಅಮೆಜಾನ್ ಪೇ ಮೂಲಕ ಹೆಚ್ಪಿ ಗ್ಯಾಸ್ ನಂಬರ್/ ಎಲ್ಪಿಜಿ ಐಡಿ ಲಿಂಕ್ ನಮೂದಿಸಿ ಗ್ಯಾಸ್ ಕಾಯ್ದಿರಿಸುವ ಅವಕಾಶ ಮಾಡಿಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ