Kindle Books: ಇನ್ಮುಂದೆ ಆಂಡ್ರಾಯ್ಡ್​​​​ನಲ್ಲಿ ಕಿಂಡಲ್ ಪುಸ್ತಕಗಳನ್ನು ಖರೀದಿಸುವುದು ಸಾಧ್ಯವಿಲ್ಲವಂತೆ!

Amazon: ಅಮೆಜಾನ್ ನ ಐಒಎಸ್ ಅಪ್ಲಿಕೇಶನ್ ನಲ್ಲಿ ಕಿಂಡಲ್ ಪುಸ್ತಕಗಳನ್ನು ಖರೀದಿಸಲು ಅಮೆಜಾನ್ ಈಗ ತನ್ನ ಬಳಕೆದಾರರಿಗೆ ಅವಕಾಶ ನೀಡದ ಕಾರಣ, ಇನ್ಮುಂದೆ ಐಒಎಸ್ ಬಳಕೆದಾರರು ಇದನ್ನು ಮಾಡಲು ಸಾಧ್ಯವಾಗುವುದಿಲ್ಲ.

ಕಿಂಡಲ್

ಕಿಂಡಲ್

  • Share this:
    ನೀವು ಅಮೆಜಾನ್ ನಲ್ಲಿ (Amazon) ಇಷ್ಟು ದಿನಗಳ ಕಾಲ ಕಿಂಡಲ್ ಪುಸ್ತಕವನ್ನು (Kindle Books) ಖರೀದಿಸಿ ಓದುತ್ತಿದ್ದರೆ, ಇನ್ಮುಂದೆ ಈ ಅವಕಾಶ ನಿಮ್ಮ ಕೈ ತಪ್ಪಿ ಹೋಗಲಿದೆ ಎಂದು ಈ ಸುದ್ದಿಯಿಂದ ತಿಳಿಯುತ್ತದೆ. ಹೆದರಬೇಡಿ..ಈ ಅವಕಾಶ ಸಂಪೂರ್ಣವಾಗಿ ಕೈ ತಪ್ಪಿ ಹೋಗುವುದಿಲ್ಲ.

    ಇ-ಕಾಮರ್ಸ್ ದೈತ್ಯ ಈ ಹಿಂದೆ ಆಂಡ್ರಾಯ್ಡ್ ಸಾಧನದಲ್ಲಿ (Android Device) ಅಮೆಜಾನ್ ಅಪ್ಲಿಕೇಶನ್ (Amazone Application) ಮೂಲಕ ಕಿಂಡಲ್ ಪುಸ್ತಕಗಳನ್ನು ಖರೀದಿಸಲು ತನ್ನ ಬಳಕೆದಾರರಿಗೆ ಅವಕಾಶ ನೀಡಿತ್ತು. ಆದರೆ ಈಗ ಆ ಐಷಾರಾಮಿಯನ್ನು ಬಳಕೆದಾರರಿಂದ ಕಸಿದು ಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

    ಅಮೆಜಾನ್ ನ ಐಒಎಸ್ ಅಪ್ಲಿಕೇಶನ್ ನಲ್ಲಿ ಕಿಂಡಲ್ ಪುಸ್ತಕಗಳನ್ನು ಖರೀದಿಸಲು ಅಮೆಜಾನ್ ಈಗ ತನ್ನ ಬಳಕೆದಾರರಿಗೆ ಅವಕಾಶ ನೀಡದ ಕಾರಣ, ಇನ್ಮುಂದೆ ಐಒಎಸ್ ಬಳಕೆದಾರರು ಇದನ್ನು ಮಾಡಲು ಸಾಧ್ಯವಾಗುವುದಿಲ್ಲ.

    ಆದ್ದರಿಂದ ಈಗ ನೀವು ಅಮೆಜಾನ್ ನ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಕಿಂಡಲ್ ಪುಸ್ತಕವನ್ನು ಖರೀದಿಸಲು ಪ್ರಯತ್ನಿಸಿದಾಗ, ಖರೀದಿ ಆಯ್ಕೆಯು ಏಕೆ ಲಭ್ಯವಿಲ್ಲ ಎಂದು ವಿವರಿಸುವ ಹೊಸ ಪರದೆಗೆ ನಿಮ್ಮನ್ನು ಮರು ನಿರ್ದೇಶಿಸಲಾಗುತ್ತದೆ.

    ಇದನ್ನೂ ಓದಿ: Mahindra scorpio 2022: ಹೊಸ ಅವತಾರದಲ್ಲಿ ಬರಲಿದೆ ಬಿಗ್​ ಡ್ಯಾಡಿ ಎಂದು ಕರೆಸಿಕೊಂಡಿರುವ ಮಹೀಂದ್ರಾ ಸ್ಕಾರ್ಪಿಯೊ!

    ಅಂತೆಯೇ, ನೀವು ಅಪ್ಲಿಕೇಶನ್ ಅನ್ನು ನವೀಕರಿಸಿದರೆ, ನೀವು ಅದೇ ರೀತಿಯ ಟಿಪ್ಪಣಿಯನ್ನು ಮತ್ತೆ ನಿಮ್ಮ ಪರದೆಯ ಮೇಲೆ ಕಾಣುತ್ತೀರಿ. ಐಒಎಸ್ ಬಳಕೆದಾರರು ಈಗಾಗಲೇ ಅಮೆಜಾನ್ ನ ಐಒಎಸ್ ಅಪ್ಲಿಕೇಶನ್ ನಿಂದ ಕಿಂಡಲ್ ಪುಸ್ತಕವನ್ನು ಇನ್ಮುಂದೆ ಏಕೆ ಖರೀದಿಸಲಾಗುವುದಿಲ್ಲ ಎಂಬುದರ ಬಗ್ಗೆ ಟಿಪ್ಪಣಿಯನ್ನು ನೋಡಬಹುದು. ಈ ಬೆಳವಣಿಗೆಯನ್ನು ಆರ್ಸ್ ಟೆಕ್ನಿಕಾ ಗಮನಿಸಿದೆ.

    "ಗೂಗಲ್ ಪ್ಲೇ ಸ್ಟೋರ್ ನೀತಿಗಳ ಅನುಸರಣೆಯಲ್ಲಿ ಉಳಿಯಲು, ನೀವು ಇನ್ಮುಂದೆ ಅಪ್ಲಿಕೇಶನ್ ನಿಂದ ಹೊಸ ಕಿಂಡಲ್ ಪುಸ್ತಕವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ನೀವು ಅಪ್ಲಿಕೇಶನ್ ನಲ್ಲಿ ಓದುವ ಪಟ್ಟಿಯನ್ನು ನಿರ್ಮಿಸಿಕೊಳ್ಳಬಹುದು ಮತ್ತು ನಿಮ್ಮ ಬ್ರೌಸರ್ ನಿಂದ ಅಮೆಜಾನ್ ವೆಬ್‌ಸೈಟ್ ನಲ್ಲಿ ಖರೀದಿಸಬಹುದು" ಇದು ನೀವು ಅಮೆಜಾನ್ ನಲ್ಲಿ ಕಿಂಡಲ್ ಪುಸ್ತಕವನ್ನು ಖರೀದಿಸಲು ಪ್ರಯತ್ನಿಸಿದಾಗ ನಿಮಗೆ ಸಿಗುವ ಸಂದೇಶವಾಗಿದೆ.

    ಇ-ಕಾಮರ್ಸ್ ದೈತ್ಯ 2011 ರಲ್ಲಿ ಐಒಎಸ್ ಸಾಧನಗಳಿಂದ ಖರೀದಿಸುವ ಡಿಜಿಟಲ್ ಪುಸ್ತಕವನ್ನು ಎಳೆದು ಕೊಂಡಿತು. ತನ್ನ ಬಿಲ್ಲಿಂಗ್ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗುವ ಅಪ್ಲಿಕೇಶನ್ ಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಗೂಗಲ್ ಹೇಳಿದೆ.

    ಇದನ್ನೂ ಓದಿ: Made in India: ಒಂದೇ ಒಂದು ಹನಿ ಪೆಟ್ರೋಲ್​​ ಬಳಸದೆ ಚಲಿಸುತ್ತೆ ಈ ಸೂಪರ್​ ಬೈಕ್​! 3 ಸೆಕೆಂಡ್ಸ್​​ನಲ್ಲಿ 100 Kmph ಸ್ಪೀಡ್​ ತೆಗೆದುಕೊಳ್ಳುತ್ತೆ!

    ಡೆವಲಪರ್ ಗಳು ಕಂಪನಿಯು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದರೆ, ಜೂನ್ 1 ರಿಂದ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಗಳನ್ನು ತೆಗೆದು ಹಾಕಲು ಪ್ರಾರಂಭಿಸುವುದಾಗಿ ಸರ್ಚ್ ದೈತ್ಯ ಘೋಷಿಸಿತ್ತು. ಏಪ್ರಿಲ್ 1 ರಂದು ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಆಡಿಯೋ ಪುಸ್ತಕಗಳನ್ನು ಖರೀದಿಸಲು ಅಮೆಜಾನ್ ತನ್ನ ಬೆಂಬಲವನ್ನು ಕೊನೆಗೊಳಿಸಿತು ಎಂದು ಹೇಳಲಾಗುತ್ತಿದೆ.

    ಇನ್ಮುಂದೆ ಅಮೆಜಾನ್ ನಲ್ಲಿ ಕಿಂಡಲ್ ಪುಸ್ತಕಗಳನ್ನು ಹೇಗೆ ಖರೀದಿಸಬಹುದು?

    ಈಗ ಅಮೆಜಾನ್ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್ ಆದರೂ ಕಿಂಡಲ್ ಪುಸ್ತಕಗಳನ್ನು ಖರೀದಿಸಲು ಬೆಂಬಲವನ್ನು ಕೊನೆಗೊಳಿಸಿದೆ. ಕಿಂಡಲ್ ಪುಸ್ತಕಗಳನ್ನು ನೀವು ಖರೀದಿಸುವ ಏಕೈಕ ಮಾರ್ಗವೆಂದರೆ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಲ್ಲಿರುವ ಬ್ರೌಸರ್ ನಿಂದ ಈ ಪುಸ್ತಕಗಳನ್ನು ಖರೀದಿಸಬಹುದು.

    - ನಿಮ್ಮ ಲ್ಯಾಪ್‌ಟಾಪ್ ನ ಬ್ರೌಸರ್ ನಲ್ಲಿ amazon.com ಎಂದು ಟೈಪ್ ಮಾಡಿ.

    - ಮೇಲಿನ ಎಡ ಕೇಂದ್ರದಲ್ಲಿ, ಅಮೆಜಾನ್ ಬ್ರಾಂಡಿಂಗ್ ನ ಕೆಳಗಿರುವ ಮೂರು ಸಮತಲ ಸಾಲು ಮೆನುವಿನ ಮೇಲೆ ಕ್ಲಿಕ್ ಮಾಡಿ.

    - ನಂತರ "ಕಿಂಡಲ್ ಇ-ರೀಡರ್ಸ್ ಮತ್ತು ಇ-ಬುಕ್ಸ್" ಅನ್ನು ಆಯ್ಕೆ ಮಾಡಿ.

    - ಕಿಂಡಲ್ ಇ-ಬುಕ್ಸ್ ಮೇಲೆ ಕ್ಲಿಕ್ ಮಾಡಿ.

    - ಕಿಂಡಲ್ ಬುಕ್ ಸ್ಟೋರ್ ಅನ್ನು ಬ್ರೌಸ್ ಮಾಡಿ ಮತ್ತು ನಿಮ್ಮ ಆಯ್ಕೆಯ ಪುಸ್ತಕವನ್ನು ಆರಿಸಿಕೊಳ್ಳಿರಿ.

    - 1-ಕ್ಲಿಕ್ ಆಯ್ಕೆಯೊಂದಿಗೆ ‘ಬೈ ನೌ’ ಎಂಬುದರ ಮೇಲೆ ಕ್ಲಿಕ್ ಮಾಡಿ.

    - ಪುಸ್ತಕವನ್ನು ಖರೀದಿಸಲು ನಿಮ್ಮ ಅಮೆಜಾನ್ ಪೇ ಖಾತೆಯಲ್ಲಿ ನೀವು ಬಯಸಿದ ಮೊತ್ತವನ್ನು ಮೊದಲೇ ಹೊಂದಿರಬೇಕು.
    Published by:Harshith AS
    First published: