Amazon Great Republic Day sale: ಇಂದೇ ಕೊನೆಯ ದಿನ.. ರಿಯಾಯಿತಿ ಬೆಲೆಗೆ ಉತ್ಪನ್ನಗಳನ್ನು ಖರೀದಿಸಿ!

Amazon Great Republic Day sale: ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ಗಾಗಿ ಅಮೆಜಾನ್‌ನ ಲ್ಯಾಂಡಿಂಗ್ ಪೇಜ್ ಸಲಹೆ ಮಾಡಿರುವಂತೆ ಗ್ರಾಹಕರಿಗೆ ಶೂನ್ಯ ಬಡ್ಡಿದರದಲ್ಲಿ ಮಾಸಿಕ ಇನ್‌ಸ್ಟಾಲ್‌ಮೆಂಟ್‌ಗಳ ಮೂಲಕ (no-cost EMI) 12 ತಿಂಗಳವರೆಗೆ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

Amazon Great Republic Day

Amazon Great Republic Day

  • Share this:
    ಇ-ಕಾಮರ್ಸ್ ಸಂಸ್ಥೆ ಅಮೆಜಾನ್ (Amazon)  ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ (Great Republic Day sale) ನಡೆಸುತ್ತಿದೆ. ಸೇಲ್ ಜನವರಿ 17 ರಿಂದ ಪ್ರಾರಂಭವಾಗಿದ್ದು, ಇಂದು ಕೊನೆಗೊಳ್ಳಲಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಸಮಯದಲ್ಲಿ ಸಂಸ್ಥೆಯು ಸ್ಮಾರ್ಟ್‌ಫೋನ್‌ಗಳು (Smartphone), ಟಿವಿ (Tv), ಎಲೆಕ್ಟ್ರಾನಿಕ್ಸ್ (Electronics) ಉಪಕರಣಗಳು ಹಾಗೂ ಗೃಹೋಪಕರಣಗಳನ್ನೊಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅತ್ಯುತ್ತಮ ಡೀಲ್‌ಗಳು (Deal) ಹಾಗೂ ರಿಯಾಯಿತಿಗಳನ್ನು (Offer) ಒದಗಿಸುತ್ತಾ ಬಂದಿದೆ.

    ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಸ್ಮಾರ್ಟ್‌ಫೋನ್‌ ಮೇಲೆ ಆಫರ್‌ಗಳು

    ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ಗಾಗಿ ಅಮೆಜಾನ್‌ನ ಲ್ಯಾಂಡಿಂಗ್ ಪೇಜ್ ಸಲಹೆ ಮಾಡಿರುವಂತೆ ಗ್ರಾಹಕರಿಗೆ ಶೂನ್ಯ ಬಡ್ಡಿದರದಲ್ಲಿ ಮಾಸಿಕ ಇನ್‌ಸ್ಟಾಲ್‌ಮೆಂಟ್‌ಗಳ ಮೂಲಕ (no-cost EMI) 12 ತಿಂಗಳವರೆಗೆ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಅತ್ಯುನ್ನತ ಸ್ಮಾರ್ಟ್‌ಫೋನ್‌ಗಳ ಮೇಲೆ ಇ - ಕಾಮರ್ಸ್ ದೈತ್ಯ 40% ವರೆಗಿನ ರಿಯಾಯಿತಿಗಳನ್ನು ನೀಡುತ್ತದೆ ಎಂದು ತಿಳಿಸಿದೆ.

    ಅಮೆಜಾನ್ ಡೀಲ್‌ಗಳ ಕುರಿತು ಇನ್ನಷ್ಟು ವಿವರವಾದ ಮಾಹಿತಿಗಳನ್ನು ಬಹಿರಂಗಪಡಿಸದೇ ಇದ್ದರೂ ಆ್ಯಪಲ್, ಒನ್‌ಪ್ಲಸ್, ಸ್ಯಾಮ್‌ಸಂಗ್, ಟೆಕ್ನೋ, ಶಿಯೋಮಿಯಂತಹ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ಬಳಕೆದಾರರು ಪಡೆದುಕೊಳ್ಳಬಹುದು ಎಂಬುದಾಗಿ ಮೂಲಗಳು ತಿಳಿಸಿವೆ.

    ಇನ್ನು ಆ್ಯಪಲ್ ಐಫೋನ್ ಬಳಕೆದಾರರು ಸೇಲ್‌ನ ಅತ್ಯುತ್ತಮ ಪ್ರಯೋಜನ ಪಡೆದುಕೊಳ್ಳಬಹುದಾಗಿದ್ದು ಹಳೆಯ ಉತ್ಪನ್ನಗಳನ್ನು ವಿನಿಮಯ ಮಾಡುವ ಮೂಲಕ ಹೊಸ ಐಫೋನ್‌ಗಳ ಮೇಲೆ ಉತ್ತಮ ಡಿಸ್ಕೌಂಟ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅತ್ಯಾಧುನಿಕ ಐಫೋನ್ 13 ಉತ್ತಮ ವಿನಿಮಯ ಆಫರ್‌ಗಳನ್ನು ಪಡೆದುಕೊಳ್ಳಲಿದ್ದು ಇದರ ಬೆಲೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.

    ಇದನ್ನು ಓದಿ: ATMನಿಂದ ಹಣ ತೆಗೆಯುವಾಗ ಹಸಿರು ಲೈಟ್​ನತ್ತ ಗಮನಹರಿಸಿ.. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕೋದು ಗ್ಯಾರಂಟಿ

    ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಲ್ಯಾಪ್‌ಟಾಪ್‌ಗಳು/ ಆ್ಯಕ್ಸೆಸರಿಗಳ ಮೇಲೆ ಆಫರ್‌ಗಳು

    ಹೆಚ್ಚಿನ ಶ್ರೇಣಿಯ ಲ್ಯಾಪ್‌ಟಾಪ್‌ಗಳ ಮೇಲೆ ಅಮೆಜಾನ್ 40% ವರೆಗೆ ರಿಯಾಯಿತಿ ನೀಡಲಿದ್ದು ಸೇಲ್ ದಿನಗಳಲ್ಲಿ ನೀವು ಹೆಡ್‌ಫೋನ್‌ಗಳನ್ನು ಆರಂಭ ಬೆಲೆ 299 ರೂ.ಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಗ್ರಾಹಕರು ಸ್ಮಾರ್ಟ್‌ವಾಚ್‌ಗಳನ್ನು ಖರೀದಿಸುವಾಗ 60% ರಿಯಾಯಿತಿ ಪಡೆದುಕೊಳ್ಳಲಿದ್ದಾರೆ.

    ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಹೋಮ್ ಫರ್ನಿಶಿಂಗ್ (ಗೃಹೋಪಕರಣಗಳು) ಆಫರ್‌ಗಳು

    ಸೇಲ್ ದಿನಗಳಲ್ಲಿ ಗ್ರಾಹಕರು ತಮ್ಮಿಷ್ಟದ ಅಡುಗೆ ಮನೆಯ ಹಾಗೂ ಡೈನಿಂಗ್ ಐಟಂಗಳನ್ನು ಖರೀದಿಸಬಹುದಾಗಿದ್ದು 18 ತಿಂಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಮಾಸಿಕ ಇನ್‌ಸ್ಟಾಲ್‌ಮೆಂಟ್‌ಗಳಲ್ಲಿ ಉತ್ಪನ್ನಗಳ ಖರೀದಿ ಮಾಡಬಹುದಾಗಿದೆ.

    ಇದನ್ನು ಓದಿ: Amazon Great Republic Day Sale: ಈ ದುಬಾರಿ ಫೋನ್​​ಗಳು ಈಗ ₹10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ

    ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಮೇಲೆ ಆಫರ್‌ಗಳು:

    ಸ್ಟೇಟ್ ಬ್ಯಾಂಕ್ ಇಂಡಿಯಾದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರಿಗೂ ಸೇಲ್ ದಿನಗಳಲ್ಲಿ ಭರ್ಜರಿ ಕೊಡುಗೆಗಳನ್ನು ಸಂಸ್ಥೆ ಒದಗಿಸಿದೆ. ಕಾರ್ಡ್‌ಗಳನ್ನು ಬಳಸಿ ಖರೀದಿ ನಡೆಸುವ ಗ್ರಾಹಕರು 10% ರಿಯಾಯಿತಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅಮೆಜಾನ್ ಪೇ, ಐಸಿಐಸಿಐ ಕ್ರೆಡಿಟ್ ಕಾರ್ಡ್, ಅಮೆಜಾನ್ ಪೇ ಲೇಟರ್, ಹಾಗೂ ಆಯ್ದ ಡೆಬಿಟ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೂನ್ಯ ಬಡ್ಡಿದರದಲ್ಲಿ ಮಾಸಿಕ ಇನ್‌ಸ್ಟಾಲ್‌ಮೆಂಟ್‌ಗಳ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಬ್ಯಾಂಕ್ ಡಿಸ್ಕೌಂಟ್ ಕುರಿತು ಯಾವುದೇ ನಿಯಮಾವಳಿಗಳನ್ನು ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ. ಇನ್ನು ಬಜಾಜ್ ಫಿನ್‌ಸರ್ವ್ ಕಾರ್ಡ್‌ ಬಳಕೆದಾರರು ವೆಚ್ಚರಹಿತ ಇಎಮ್‌ಐಗಳನ್ನು ಉತ್ಪನ್ನಗಳ ಮೇಲೆ ಪಡೆದುಕೊಳ್ಳುವಂತೆ ಖರೀದಿಗಳನ್ನು ಮಾರ್ಪಡಿಸಿಕೊಳ್ಳಬಹುದು ಎಂಬುದಾಗಿ ಸೇಲ್ ಪೇಜ್ ಉಲ್ಲೇಖಿಸಿದೆ. ಹೆಚ್ಚುವರಿ ಡಿಸ್ಕೌಂಟ್‌ಗಳನ್ನು ಪಡೆದುಕೊಳ್ಳಲು ಗ್ರಾಹಕರು ತಮ್ಮ ಪ್ರಾಡಕ್ಟ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು.

    ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಟಿವಿಗಳ ಮೇಲೆ ರಿಯಾಯಿತಿ ಪಡೆದುಕೊಳ್ಳಿ

    ಅಮೆಜಾನ್ ಹೇಳುವಂತೆ ಗ್ರಾಹಕರು ಉತ್ತಮ ಬ್ರ್ಯಾಂಡ್‌ಗಳ ಟಿವಿಗಳ ಮೇಲೆ ಕೂಡ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ರೆಡ್‌ಮಿ, ಒನ್‌ಪ್ಲಸ್, ಸ್ಯಾಮ್‌ಸಂಗ್, ಸೋನಿ, ಎಮ್‌ಐ ಬ್ರ್ಯಾಂಡ್‌ಗಳ ಟೆಲಿವಿಶನ್‌ಗಳ ಮೇಲೆ ಕೂಡ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.
    Published by:Harshith AS
    First published: