HOME » NEWS » Tech » AMAZON GREAT REPUBLIC DAY SALE BEST DEALS ON SMARTPHONES LAPTOPS TWS EARBUDS AND MORE HG

ಅಮೆಜಾನ್​ Great Republic Day ಸೇಲ್​: ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​, ಇಯರ್​ಬಡ್ಸ್​

Amazon Great Republic Day Sale: ಅಮೆಜಾನ್​ ಮೊಬೈಲ್​ ಫೋನ್​ ಮತ್ತು ಅಸೆಸ್ಸರಿಸ್​ ಮೇಲೆ ಶೇ.40 ರಷ್ಟು ಡಿಸ್ಕೌಂಟ್​​ ನೀಡಿದೆ. ಇಲೆಕ್ಟ್ರಾನಿಕ್ಸ್​ ಮತ್ತು ಅಸೆಸ್ಸರಿಸ್​  ಮೇಲೆ ಶೇ.60 ರಷ್ಟು ಆಫರ್​ ನೀಡಿದೆ.

news18-kannada
Updated:January 23, 2021, 3:54 PM IST
ಅಮೆಜಾನ್​ Great Republic Day ಸೇಲ್​: ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​, ಇಯರ್​ಬಡ್ಸ್​
ಅಮೆಜಾನ್
  • Share this:
ಜನವರಿ 26 ದೇಶದಾದ್ಯಂತ ಗಣರಾಜೋತ್ಸವ ಸಂಭ್ರಮ. ಹೀಗಿರುವಾಗ ಅನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ಗ್ರೇಟ್ ರಿಪಬ್ಲಿಕ್​ ಡೇ ಸೇಲ್​ ಆಯೋಜಿಸಿದೆ. ಜನವರಿ 20ರಿಂದ ಆರಂಭವಾದ ಈ ಸೇಲ್​ ಜ.23ರವರೆಗೆ ನಡೆಯುತ್ತಿದೆ.

ಅಮೆಜಾನ್​ ಗ್ರೇಟ್​ ರಿಪಬ್ಲಿಕ್​ ಡೇ ಸೇಲ್ ಮೂಲಕ ಕೆಲವು ಉತ್ಪನ್ನಗಳನ್ನು ಡಿಸ್ಕೌಂಟ್​ ಬೆಲೆ ಮತ್ತು ಆಫರ್​ ಬೆಲೆ ಮಾರಾಟ ಮಾಡುತ್ತಿದೆ. ಅಮೆಜಾನ್​ ಪ್ರೈಮ್​ ಗ್ರಾಹಕರು ಒಂದು ದಿನದ ಮುಂಚಿತವಾಗಿ (ಜ.19) ಈ ಸೇಲ್​ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಇನ್ನು ಅಮೆಜಾನ್​ ಹಮ್ಮಿಕೊಂಡಿರುವ ರಿಪಬ್ಲಿಕ್ ಸೇಲ್ ಮೂಲಕ ಗ್ರಾಹಕರಿಗೆ ಅಡಿಷನಲ್​ ಡಿಸ್ಕೌಂಟ್​ ನೀಡುತ್ತಿದೆ. ಅಂತೆಯೇ ಎಸ್​ಬಿಐ ಕ್ರೆಡಿಟ್​ ಕಾರ್ಡ್​ ಮತ್ತು ಇಎಮ್​ಐ, ಬಜಾಜ್ ಫೈನಾನ್ಸ್​ ಇಎಮ್​ಐ, ಅಮೆಜಾನ್​ ಪೇ ಐಸಿಐಸಿಐ ಕ್ರೆಡಿಟ್​ ಕಾರ್ಡ್​, ಅಮೆಜಾನ್​​​ ಪೆ ಲೇಟರ್​​ ಮತ್ತು ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ ಬಳಸಿ ವಸ್ತುಗಳನ್ನು ಖರೀದಿಸಿದರೆ ಶೇ10ರಷ್ಟು ಡಿಸ್ಕೌಂಟ್​ ನೀಡುತ್ತಿದೆ.

ಅಮೆಜಾನ್​ ಮೊಬೈಲ್​ ಫೋನ್​ ಮತ್ತು ಅಸೆಸ್ಸರಿಸ್​ ಮೇಲೆ ಶೇ.40 ರಷ್ಟು ಡಿಸ್ಕೌಂಟ್​​ ನೀಡಿದೆ. ಇಲೆಕ್ಟ್ರಾನಿಕ್ಸ್​ ಮತ್ತು ಅಸೆಸ್ಸರಿಸ್​  ಮೇಲೆ ಶೇ.60 ರಷ್ಟು ಆಫರ್​ ನೀಡಿದೆ. ಅಂತೆಯೇ ಅಮೆಜಾನ್​ ಇಕೊ, ಫೈರ್​ ಟಿವಿ ಮತ್ತು ಕಿಂಡಲ್​​ ಡಿವೈಸ್​  ಮೇಲೆ ಶೇ.40 ರಷ್ಟು ಡಿಸ್ಕೌಂಟ್​​ ನೀಡಿದೆ.

ಸ್ಮಾರ್ಟ್​ಫೋನ್​ಗಳಾದ ಒನ್​ಪ್ಲಸ್​​, ಸ್ಯಾಮ್​ಸಂಗ್​ ಮತ್ತು ಶಿಯೋಮಿ ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡಿಲಿದೆ. ಐಫೋನ್​​ 12 ಮಿನಿ, ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಮ್​51, ರೆಡ್​ಮಿ ನೋಟ್​​ 9 ಪ್ರೊ ಮತ್ತು ಒಪ್ಪೊ ಎ31 ಮೇಲೂ ಈ ಆಫರ್​ ನೀಡುತ್ತಿದೆ.
Youtube Video

ಇನ್ನು ಇಲೆಕ್ಟ್ರಾನಿಕ್ಸ್​ ಬ್ರಾಂಡ್​ಗಳಾದ ಹೆಚ್​​ಪಿ, ಲೆನೊವೊ, ಮಿ, ಜೆಬಿಎಲ್​, ಬೋಟ್​, ಸೋನಿ, ಸ್ಯಾಮ್​ಸಂಗ್​, ಅಮೇಜ್​ಫಿಟ್​, ಕೆನಾನ್​, ಫ್ಯೂಜಿಫಿಲ್ಮಂ ಮೇಲೆ ಡಿಸ್ಕೌಂಟ್​ ನೀಡುತ್ತಿದೆ.ಸೋನಿ ಡಬ್ಲ್ಯುಎಫ್​-ಎಕ್ಸ್​ಬಿ700 ಟಿಡಬ್ಲ್ಯುಎಸ್​ ಇಯರ್​ಬಡ್ಸ್ ಅನ್ನು​ 6,990 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಅಡಿಷನಲ್​ ಶೇ.10ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಅಂತೆಯೇ ಸೆಕೆಂಡ್​ ಜನರೇಶನ್​ ಆ್ಯಪಲ್​ ಏರ್​ಪಾಡ್​ ಅನ್ನು 13,990 ರೂ.ಗೆ ಮಾರಾಟ ಮಾಡುತ್ತಿದೆ. ಇನ್ನು ಜಾಬ್ರಾ ಇಲೈಟ್​ 65ಟಿ ಟಿಡಬ್ಲ್ಯುಎಸ್​​ ಇಯರ್​ಫೋನ್​​ ಅನ್ನು 3,999 ರೂ.ಗೆ ಮಾರಾಟ ಮಾಡುತ್ತಿದೆ.

ಶಿಯೋಮಿ ಮಿ ನೋಟ್​ಬುಕ್​, ಡೆಲ್​ ವಸ್ತ್ರೊ ಲ್ಯಾಪ್​​ಟಾಪ್​ಗಳ ಮೇಲೂ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ.  ಗ್ರಾಹಕರಿಗೆ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡಿದೆ.
Published by: Harshith AS
First published: January 23, 2021, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories