ಇತ್ತೀಚೆಗೆ ಗ್ರಾಹಕರು ಯಾವುದೇ ಸ್ಮಾರ್ಟ್ಫೋನ್ಗಳನ್ನು (Smartphones) ಖರೀದಿಸಬೇಕಾದರೂ ಅದಕ್ಕೆ ರಿಯಾಯಿತಿಗಳನ್ನು ಬಯಸುತ್ತಾರೆ. ಆದರೆ ಎಷ್ಟೇ ಗುಣಮಟ್ಟದ ಫೋನ್ ಅಗಿರಲಿ ಆಫರ್ಸ್ ಇದೆಯಾ ಎಂದು ಕೇಳುವುದು ಸಾಮಾನ್ಯವಾಗಿದೆ. ಅಮೆಜಾನ್ ಇ ಕಾಮರ್ಸ್ ತಾಣವು ತನ್ನ ಬಹುನಿರೀಕ್ಷಿತ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ (Amazon Great Republic Day 2023) ಸೇಲ್ ಅನ್ನು ಪ್ರಾರಂಭಿಸುವುದಾಗಿ ಹೇಳಿದೆ. ಅಮೆಜಾನ್ ಪ್ರೈಮ್ (Amazon Prime) ಬಳಕೆದಾರರಿಗೆ ಇದೇ ಜನವರಿ 14 ರಂದು ಗ್ರೇಟ್ ರಿಪಬ್ಲಿಕ್ ಡೇ ಸೇಲ್ ತೆರೆಯುತ್ತದೆ. ಹಾಗೆಯೇ ಇನ್ನುಳಿದ ಎಲ್ಲ ಗ್ರಾಹಕರಿಗೆ ಜನವರಿ 15 ರಂದು ಗ್ರೇಟ್ ರಿಪಬ್ಲಿಕ್ ಡೇ ರಿಯಾಯಿತಿ ಕೊಡುಗೆಗಳನ್ನು ಪಡೆಯಬಹುದಾಗಿದೆ. ಈ ಸೇಲ್ನಲ್ಲಿ ಅಮೆಜಾನ್ ಗ್ರಾಹಕರಿಗೆ ಸ್ಮಾರ್ಟ್ಫೋನ್ಗಳ ಮೇಲೆ, ಗ್ಯಾಜೆಟ್ಸ್ಗಳ ಮೇಲೆ ಭಾರೀ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಇದೀಗ ಅಮೆಜಾನ್ ರಿಪಬ್ಲಿಕ್ ಡೇ ಅಂಗವಾಗಿ ತನ್ನ ವೆಬ್ಸೈಟ್ನಲ್ಲಿ ಮುಂಚಿತವಾಗಿಯೇ ಅಮೆಜಾನ್ ರಿಪಬ್ಲಿಕ್ ಡೇ2023 ಸೇಲ್ನ ಆರಂಭದ ದಿನಾಂಕವನ್ನು ಪ್ರಕಟಿಸಿದೆ. ಈ ಮೂಲಕ ಆ್ಯಪಲ್, ಸ್ಯಾಮ್ಸಂಗ್, ಒನ್ಪ್ಲಸ್, ಪೋಕೋ, ರೆಡ್ಮಿ ಸ್ಮಾರ್ಟ್ಫೋನ್ಗಳನ್ನು ಭಾರೀ ಅಗ್ಗದಲ್ಲಿ ಪಡೆಯಬಹುದು. ಇನ್ನು ಈ ಸೇಲ್ನಲ್ಲಿ ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡುವವರು ಶೇಕಡಾ 10ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಯಾವೆಲ್ಲಾ ಸ್ಮಾರ್ಟ್ಫೋನ್ಗಳ ಮೇಲೆ ಆಫರ್ಸ್?
ಒನ್ಪ್ಲಸ್ 10ಟಿ ಸ್ಮಾರ್ಟ್ಫೋನ್ ಫೀಚರ್ಸ್
ಒನ್ಪ್ಲಸ್ 10ಟಿ ಸ್ಮಾರ್ಟ್ಫೋನ್ 6.7 ಇಂಚಿನ ಹೆಚ್ಡಿ ಪ್ಲಸ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನಾಪ್ಡ್ರಾಗನ್ 8+ Gen 1 ಎಸ್ಓಸಿ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ 16ಜಿಬಿ ರ್ಯಾಮ್ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಸಹ ಇದು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ನಲ್ಲಿದೆ. ಇದಲ್ಲದೆ, 4800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 150W ಸೂಪರ್ವೂಕ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
ಇದನ್ನೂ ಓದಿ: ಫೆಬ್ರವರಿ 1 ರಿಂದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಲಗ್ಗೆ!
ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್
ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ 6.43 ಇಂಚಿನ ಪೂರ್ಣ ಹೆಚ್ಡಿ + ಡಿಸ್ಪ್ಲೇ ಹೊಂದಿದ್ದು, 90 Hz 1080p ಎಲ್ಸಿಡಿ ಡಿಸ್ಪ್ಲೇಯನ್ನುಹೊಂದಿದೆ. ಈ ಫೋನ್ ಸ್ನಾಪ್ಡ್ರಾಗನ್ 680 ಚಿಪ್ಸೆಟ್ ಪ್ರೊಸೆಸರ್ ಹೊಂದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಜೊತೆಗೆ ಈ ಫೋನ್ 5,000 mAh ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದ್ದು, 33W ನಷ್ಟು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂ ಡಿದೆ.
ಐಫೋನ್ 14 ಸ್ಮಾರ್ಟ್ಫೋನ್
ಐಫೋನ್ 14 ಸ್ಮಾರ್ಟ್ಫೋನ್ 6.1 ಇಂಚಿನ ಫುಲ್ಹೆಚ್ಡಿ+ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಡಿಸ್ಪ್ಲೇಯು 1200nits ಬ್ರೈಟ್ನೆಸ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಕ್ಸೆಲ್ನ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು 128ಜಿಬಿ, 256ಜಿಬಿ ಮತ್ತು 512ಜಿಬಿ ಮಾದರಿಗಳಲ್ಲಿ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್ 14 ಫೋನ್ 5ಜಿ ಕನೆಕ್ಟಿವಿಟಿ ಫೀಚರ್ ಅನ್ನು ಒಳಗೊಂಡಿದ್ದು, ಇದರಲ್ಲಿ ಇ-ಸಿಮ್ ಅನ್ನು ಕೂಡ ಅಳವಡಿಸಬಹುದಾಗಿದೆ.
ಐಫೋನ್ 13 ಸ್ಮಾರ್ಟ್ಫೋನ್
ಐಫೋನ್ 13 ಸ್ಮಾರ್ಟ್ಫೋನ್ 6.1 ಇಂಚಿನ ಡಿಸ್ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ನ ಡಿಸ್ಪ್ಲೇಯು 1200nits ಬ್ರೈಟ್ನೆಸ್ ಸಾಮರ್ತ್ಯವನ್ನು ಹೊಂದಿದೆ. ಹಾಗೆಯೇ ಈ ಫೋನ್ ಎ15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಕೂಡ 5ಜಿ ನೆಟ್ವರ್ಕ್ ಅನ್ನು ಹೊಂದಿದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ