ಟಿವಿ ತಂತ್ರಜ್ಞಾನವು ಇತ್ತೀಚಿನ ದಿನಗಳಲ್ಲಿ ಪ್ರಗತಿಯನ್ನು ಕಾಣುತ್ತಿದ್ದು ಅತ್ಯುತ್ತಮ ಚಿತ್ರ ಗುಣಮಟ್ಟ ಒದಗಿಸುವಷ್ಟು ಪ್ರಗತಿ ಕಂಡಿದೆ. ಸ್ಮಾರ್ಟ್ ಟಿವಿ (Smart TVs) ತಂತ್ರಜ್ಞಾನ ರೂಪುಗೊಂಡ ನಂತರ ನೀವು ಇದೀಗ ನೇರವಾಗಿ ಚಲನಚಿತ್ರ ಹಾಗೂ ಟಿವಿ ಸೀರೀಸ್ಗಳನ್ನು ನಿಮ್ಮ ಟಿವಿಯಲ್ಲಿಯೇ ವೀಕ್ಷಿಸಬಹುದಾಗಿದೆ. 4ಕೆ ಟೆಲಿವಿಶನ್ಗಳು ನಿಮಗೆ ಮನೆಯಲ್ಲಿಯೇ ಕುಳಿತು ಥಿಯೇಟರ್ನಲ್ಲಿ ಸಿನಿಮಾ ನೋಡುವಂತಹ ಅನುಭವವನ್ನು ಒದಗಿಸುತ್ತವೆ. 4 ಕೆ ಡಿಸ್ಪ್ಲೇ ಗುಣಮಟ್ಟವು ಮನರಂಜನೆಯನ್ನು ವಿಭಿನ್ನವಾಗಿ ಒದಗಿಸುತ್ತದೆ. ನೀವು 43 ಇಂಚಿನ 4 ಕೆಯನ್ನು ನಿಮ್ಮದಾಗಿಸಿಕೊಳ್ಳಬೇಕೆಂಬ ಇರಾದೆ ಹೊಂದಿದವರಾಗಿದ್ದರೆ ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಖರೀದಿಸಬಹುದಾಗಿದೆ. ಹಾಗಾದರೆ 4 ಕೆಗಿರುವ ವಿಶೇಷತೆಗಳು ಹಾಗೂ ಯಾವ ಟಿವಿಯನ್ನು ನೀವು ಖರೀದಿಸಬಹುದು ಎಂಬ ಮಾಹಿತಿಯನ್ನು ನೀಡುತ್ತಿದ್ದೇವೆ.
ಸ್ಯಾಮ್ಸಂಗ್ 43 ಇಂಚಿನ ಕ್ರಿಸ್ಟಲ್ 4ಕೆ ಪ್ರೊ ಸೀರೀಸ್ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಎಲ್ಇಡಿ ಟಿವಿ:
ಇದು ರೆಸಲ್ಯೂಶನ್ 3840x2160p ಅನ್ನು ಹೊಂದಿದೆ. ಸ್ಮಾರ್ಟ್ ಟಿವಿಯಲ್ಲಿ ಗರಿಷ್ಠ ಮನೋರಂಜನೆಯನ್ನು ಆಸ್ವಾದಿಸಬಹುದು. ಸ್ಯಾಮ್ಸಂಗ್ 43 ಇಂಚಿನ ಕ್ರಿಸ್ಟಲ್ 4 ಕೆ ಪ್ರೊ ಸರಣಿ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಎಲ್ಇಡಿ ಟಿವಿ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡಕ್ಕೂ ಹೊಂದಿಕೊಳ್ಳುತ್ತದೆ. 1.5GB RAM ಮತ್ತು 8GB ಇಂಟರ್ನಲ್ ಸ್ಟೋರೇಜ್ ಹೊಂದಿದೆ
ಎಲ್ಜಿ 43 ಇಂಚುಗಳ 4ಕೆ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಎಲ್ಇಡಿ ಟಿವಿ:
ಈ ಟಿವಿಯಲ್ಲಿ 4ಕೆ ಇಮೇಜ್ಗಳು ಎದ್ದುಗಾಣುವ ರೀತಿಯಲ್ಲಿದೆ. ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು ಇದು ಶಬ್ಧವನ್ನು ನಿವಾರಿಸುತ್ತದೆ. ಪ್ರತಿ ಆಂಗಲ್ನಲ್ಲೂ ಒಂದೇ ರೀತಿಯ ನಿಖರತೆನ್ನು ನೀವು ಪಡೆಯಬಹುದಾಗಿದೆ. ನೆಟ್ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋವನ್ನು ಸುಲಭವಾಗಿ ಈ ಟಿವಿಯಲ್ಲಿ ಸ್ಟ್ರೀಮ್ ಮಾಡಬಹುದಾಗಿದೆ.
ಇದನ್ನೂ ಓದಿ: Flipkartಗೆ ಟಕ್ಕರ್ ಕೊಡಲು ಗ್ರೇಟ್ ಇಂಡಿಯನ್ ಫೆಸ್ಟಿವಲ್ ದಿನಾಂಕ ಬದಲಿಸಿದ Amazon: ಈಗ ಯಾವಗಿನಿಂದ ಶುರು?
ಎಮ್ಐ 43 ಇಂಚುಗಳ 4ಕೆ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಎಲ್ಇಡಿ ಟಿವಿ:
HDR 10 ಬೆಂಬಲದೊಂದಿಗೆ ಟಿವಿ ಬಂದಿದ್ದು ನಿಖರ ಬಣ್ಣಕ್ಕೆ ಸಾಥ್ ನೀಡುತ್ತದೆ. 20W ಸ್ಪೀಕರ್ಗಳೊಂದಿಗೆ ಶಕ್ತಿಯುತ ಧ್ವನಿಯನ್ನು ನೀವು ಆಲಿಸಬಹುದು. ಇದು ಬಳಸಲು ಸುಲಭವಾಗಿರುವ ಸೆಟಪ್ನೊಂದಿಗೆ ಬಂದಿದ್ದು ನಿಮ್ಮ ಮೆಚ್ಚಿನ ಅಪ್ಲಿಕೇಶನ್ಗಳನ್ನು ಸರಳವಾಗಿ ಬಳಸಬಹುದಾಗಿದೆ. 1ಜಿಬಿ RAM ಅನ್ನು ಹೊಂದಿದ್ದು 8ಜಿಬಿ ಸಂಗ್ರಹಣಾ ಸಾಮರ್ಥ್ಯದಿಂದಾಗಿ ಗೂಗಲ್ ಪ್ಲೇಯಿಂದ ಸಾಕಷ್ಟು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಅನುಮತಿಸುತ್ತದೆ.
ಸ್ಯಾಮ್ಸಂಗ್ 43 ಇಂಚಿನ ಕ್ರಿಸ್ಟಲ್ 4K ಸರಣಿ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಎಲ್ಇಡಿ ಟಿವಿ:
ಸ್ಯಾಮ್ಸಂಗ್ 43 ಇಂಚಿನ ಕ್ರಿಸ್ಟಲ್ 4K ಸೀರೀಸ್ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಎಲ್ಇಡಿ ಟಿವಿ 3840x2160 ಪಿ ನ ರೆಸಲ್ಯೂಶನ್ ಹೊಂದಿದೆ. 60Hz ರಿಫ್ರೆಶ್ ರೇಟ್ ಅನ್ನು ಟಿವಿ ಹೊಂದಿದ್ದು 1.5GB RAM ಮತ್ತು 8GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಎರಡಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಟಿವಿ ಹೊಂದಿದೆ. ದೊಡ್ಡ ಸ್ಕ್ರೀನ್ನ ಆನಂದಕ್ಕಾಗಿ ನಿಮ್ಮ ಫೋನ್ನಿಂದ ಟಿವಿಗೆ ಸಂಗೀತ ಹಾಗೂ ವಿಡಿಯೋಗಳನ್ನು ಪ್ಲೇ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ