ಅಕ್ಟೋಬರ್​ 4 ರಿಂದ Amazon ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್; ಆಕರ್ಷಕ ಆಫರ್​ ನಿಮ್ಮದಾಗಿಸಲು 10 ದಿನ ಬಾಕಿ!

Amazon: ಆನ್​ಲೈನ್​ ಇ- ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಕೂಡ ಬಿಗ್​ ಬಿಲಿಯನ್​ ಡೇಸ್​ ಹಮ್ಮಿಕೊಂಡಿದೆ. ಅಕ್ಟೋಬರ್​ 7 ರಿಂದ ಆರಂಭವಾಗಿ 12 ರವರೆಗೆ ಈ ಸೇಲ್​ ನಡೆಯಲಿದೆ. ಕಡಿಮೆ ಬೆಲೆ ಗ್ಯಾಜೆಟ್​ ವಸ್ತುಗಳನ್ನು ಸೇಲ್​ ಮಾಡಲಿದೆ. ಒಟ್ಟಿನಲ್ಲಿ Fiipkart​ ಮತ್ತು Amazon​ ತನ್ನ ದೊಡ್ಡ ರಿಯಾಯಿತಿ ದರದಲ್ಲಿ ಮತ್ತು ಆಕರ್ಷಕ ಆಫರ್​ ಪರಿಚಯಿಸುವ ಮೂಲಕ ಸೇಲ್​​​ ಅನ್ನು ಆಯೋಜಿಸಲು ಸಿದ್ಧವಾಗಿದೆ.

Amazon Great Indian Festival sale

Amazon Great Indian Festival sale

 • Share this:
  Amazon Great Indian Festival sale: ಅಮೆಜಾನ್​ ಪ್ರತಿ ವರ್ಷದಂತೆ ಈ ವರ್ಷವೂ ಗ್ರೇಟ್​ ಇಂಡಿಯನ್ ಫೆಸ್ಟಿವಲ್​​ ಸೇಲ್​ ನಡೆಸುತ್ತಿದೆ. ಹಾಗಾಗಿ ಮುಂದಿನ ತಿಂಗಳು ಗ್ರಾಹಕರಿಗೆ ಅನುವು ಮಾಡುವಂತೆಯೇ ದಿನಾಂಕವನ್ನು ಅಮೆಜಾನ್​ ಬಹಿರಂಗಪಡಿಸಿದೆ. ಗ್ರೇಟ್​​ ಇಂಡಿಯಾ ಫೆಸ್ಟಿವಲ್ ಸೇಲ್​ ಅಕ್ಟೋಬರ್​ 4 ರಂದು ಪ್ರಾರಂಭವಾಗಲಿದ್ದು, ಹೆಚ್ಚಿನ ಆಫರ್​ ಜೊತೆಗೆ ಭರ್ಜರಿ ರಿಯಾಯಿತಿಯನ್ನು ಒದಗಿಸಲಿದೆ.

  ಆನ್​ಲೈನ್​ ಇ- ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಕೂಡ ಬಿಗ್​ ಬಿಲಿಯನ್​ ಡೇಸ್​ ಹಮ್ಮಿಕೊಂಡಿದೆ. ಅಕ್ಟೋಬರ್​ 7 ರಿಂದ ಆರಂಭವಾಗಿ 12 ರವರೆಗೆ ಈ ಸೇಲ್​ ನಡೆಯಲಿದೆ. ಕಡಿಮೆ ಬೆಲೆ ಗ್ಯಾಜೆಟ್​ ವಸ್ತುಗಳನ್ನು ಸೇಲ್​ ಮಾಡಲಿದೆ. ಒಟ್ಟಿನಲ್ಲಿ Fiipkart​ ಮತ್ತು Amazon​ ತನ್ನ ದೊಡ್ಡ ರಿಯಾಯಿತಿ ದರದಲ್ಲಿ ಮತ್ತು ಆಕರ್ಷಕ ಆಫರ್​ ಪರಿಚಯಿಸುವ ಮೂಲಕ ಸೇಲ್​​​ ಅನ್ನು ಆಯೋಜಿಸಲು ಸಿದ್ಧವಾಗಿದೆ.

  ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ಗೆ ಕೆಲವೇ ದಿನಗಳು ಬಾಕಿ ಇದೆ. ಹೀಗಿರವಾಗ ಗ್ರಾಹಕರಿಗಾಗು ಕೆಲವು ವಸ್ತು್ಳ ಮೇಲಿನ ರಿಯಾಯಿತಿ ಮತ್ತು ಕೊಡುಗೆಗಳನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​, ಆಡಿಯೋ, ಟಿವಿಗಳ ಮೇಲೆ ಆಕರ್ಷಕ ಕೊಡುಗೆ ನೀಡಿದೆ.

  ರಿಯಾಯಿತಿಯ ಹೊರತಾಗಿ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ಸಮಯದಲ್ಲಿ ಆ್ಯಪಲ್​, ಅಸೂಸ್​, ಫಾಸಿಲ್​, ಒನ್​ಪ್ಲಸ್​, ಸ್ಯಾಮ್​ಸಂಗ್​, ಸೋನಿ, ಶಿಯೋಮಿ ಬ್ರಾಂಡ್​ಗಳಿಂದ 1 ಸಾವಿರಕ್ಕೂ ಅಧಿಕ ಉತ್ಪನ್ನಗಳನ್ನು ಮಾರಾಟ ಮಾಡಲಿದೆ.

  ಅಮೆಜಾನ್​​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ 2021 ಮಾರಾಟಕ್ಕಾಗಿ ಮೈಕ್ರೋಸೈಟ್​ ರಚಿಸಿದೆ. ಅದರಲ್ಲಿ ಕಂಪನಿಯು ಮುಂಬರುವ ವಿವಿಧ ಸ್ಮಾರ್ಟ್​ಫೋನ್​ ಮತ್ತು ಎಲೆಕ್ಟ್ರಿಕ್​ ಸಾಧನಗಳ ಮೇಲೆ ಆಫರ್​ ನೀಡಿದೆ. ಅಮೆಜಾನ್​ ಫೆಸ್ಟಿವಲ್​ನಲ್ಲಿ ಏಕೋ ಶ್ರೇಣಿಯ ಸ್ಮಾರ್ಟ್​ ಸ್ಪೀಕರ್​ ಮತ್ತು ಡಿಸ್​ಪ್ಲೇಗಳು, ಫೈರ್ ಟಿವಿ ಮತ್ತು ಕಿಂಡಲ್​ ಇ-ಬುಕ್​ ರೀಡರ್​ಗಳ ಮೇಲೆ ಕೊಡುಗೆ ನೀಡಿದೆ. ಅಂತೆಯೇ ಸೋನಿ ಪ್ಲೇ ಸ್ಟೇಷನ್​ 5 ಮತ್ತು ಮೈಕ್ರೋಸಾಫ್ಟ್​ ಎಕ್ಸ್​ ವಾಕ್ಸ್​ ಕನ್ಸೋಲ್​ ಅನ್ನು ಬಿಡುಗಡೆ ಮಾಡಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸೇಲ್​ ನಡೆಯುತ್ತಿದ್ದು, ಅಮೆಜಾನ್​ ಪ್ರೈಮ್​ ಚಂದಾದಾರಿಗೆ ಮುಂಚಿತವಾಗಿ ಖರೀದಿಸಲು ಸಿಗಲಿದೆ.

  ಅಂದಹಾಗೆಯೇ ಈ ವರ್ಷ ಅಮೆಜಾನ್ HDFC ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಬಳಕೆದಾರರಿಗೆ HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಖರೀದಿಸುವವರಿಗೆ 10% ತ್ವರಿತ ರಿಯಾಯಿತಿ ಹಾಗೂ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ EMI ವಹಿವಾಟುಗಳನ್ನು ನೀಡಲಿದೆ. ಇದಲ್ಲದೆ, ಅಮೆಜಾನ್ ಪೇ ಬಳಕೆದಾರರು ತಮ್ಮ ಯುಟಿಲಿಟಿ ಬಿಲ್‌ಗಳ ಪಾವತಿ, ಟಿಕೆಟ್ ಬುಕಿಂಗ್ ಮತ್ತು ಪೇಮೆಂಟ್​ ಸಮಯದಲ್ಲಿ 5 ಸಾವಿರ ರೂ.ಗಳವರೆಗೆ ಉಳಿತಾಯ ಮಾಡುವ ಅವಕಾಶವಿದೆ.

   Flipkart Big Billion Days 

  ಮೊದಲೇ ಹೇಳಿದಂತೆ Flipkart Big Billion Days ಸೇಲ್ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಗ್ರಾಹಕರು ಎದುರು ನೋಡುತ್ತಿದ್ದ ಇ -ಕಾಮರ್ಸ್​ ಮಳಿಗೆಯ ಆಕರ್ಷಕ ಸೇಲ್​ ಅಕ್ಟೋಬರ್​ 7 ರಿಂದ 12ರವರೆಗೆ ನಡೆಯಲಿದೆ. 6 ದಿನಗಳ ಕಾಲ ಈ ಸೇಲ್​ ನಡೆಯಲಿದ್ದು ಗ್ಯಾಜೆಟ್​ ವಸ್ತುಗಳು ಕಡಿಮೆ ಬೆಲೆಗೆ ದೊರಕಲಿದೆ.

  ಅದರಂತೆ ಫ್ಲಿಪ್​ಕಾರ್ಟ್​ ಸ್ಮಾರ್ಟ್‌ಫೋನ್‌ಗಳ ಮೇಲಿನ ಕೆಲವು ಆಫರ್​​ಗಳ ಕುರಿತಾದ ಮಾಹಿತಿಯನ್ನು ಬಹಿರಂಗ ಪಡಿಸುವ ಮೂಲಕ  ವಾರ್ಷಿಕ ಕಾರ್ಯಕ್ರಮವನ್ನು ಹೈಪ್ ಮಾಡುತ್ತಿದೆ. ಫ್ಲಿಪ್‌ಕಾರ್ಟ್‌ ಬಿಗ್​ ಬಿಲಿಯನ್​​ ಡೇಸ್​ ಸೇಲ್​ ಕೆಲವು ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೆ ಮತ್ತು ಆಕರ್ಷಕ ರಿಯಾಯಿತಿಗೆ ಮಾರಾಟ ಮಾಡಲು ಮುಂದಾಗಿದೆ.  ವಾರ್ಷಿಕ ಮಾರಾಟದಲ್ಲಿ ಫ್ಲಿಪ್‌ಕಾರ್ಟ್ Pixel 4a, Poco X3 Pro, Moto Edge 20 Fusion, Asus ROG Phone 3 ಮತ್ತು Infinix Hot 10s ಮೇಲೆ ಆಫರ್‌ಗಳನ್ನು ಬಹಿರಂಗಪಡಿಸಿದೆ.

  ಇದನ್ನು ಓದಿ⇒ Instagram: ಪ್ರೊಫೆಷನಲ್‌ ಹಾಗೂ ವೈಯಕ್ತಿಕ ಖಾತೆಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೆಡ್ಯೂಲ್‌ ಮಾಡುವುದು ಹೇಗೆ?

  ಪ್ರತಿ ಬಾರಿಯಂತೆಯೇ ಫ್ಲಿಪ್​ಕಾರ್ಟ್​​ ಬಿಗ್ ಬಿಲಿಯನ್ ಡೇಸ್ ಮೂಲಕ ಆಕರ್ಷಕ ಆಫರ್​ ನೀಡಲಿದೆ. ಅದರ ಜೊತೆಗೆ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಿದೆ. ಪಾಲುದಾರ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವುದರ ಜೊತೆಗೆ ರಿಯಾಯಿತಿ ಸಿಗಲಿದೆ. ಕಾರ್ಡ್ ಬಳಸಿದರೆ ಕನಿಷ್ಠ 1,000 ರೂ.ಗಳ ರಿಯಾಯಿತಿ ನೀಡುವ ನಿರೀಕ್ಷೆಯಿದೆ.
  Published by:Harshith AS
  First published: