ಅಮೆಜಾನ್ ‘ಗ್ರೇಟ್​​​​​​​​​ ಇಂಡಿಯನ್​​ ಫೆಸ್ಟಿವಲ್​​​ ಸೇಲ್​ 2019‘; ಸದ್ಯದಲ್ಲೇ ಭರ್ಜರಿ ಆಫರ್​ಗಳ ಸುರಿಮಳೆ ಪ್ರಾರಂಭ​

ಗ್ರಾಹಕರಿಗಾಗಿ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್‘​ನಲ್ಲಿ ಗ್ಯಾಜೆಟ್​​ಗಳ ಮೇಲೆ ವಿಶೇಷ ಆಫರ್​ ಸೇರಿದಂತೆ, ಎಕ್ಸ್​ಚೇಂಜ್​ ಆಫರ್​, ಕ್ಯಾಶ್​ಬ್ಯಾಕ್​ ಆಫರ್​ ಅನ್ನು ನೀಡಲಿದೆ

news18-kannada
Updated:September 9, 2019, 4:56 PM IST
ಅಮೆಜಾನ್ ‘ಗ್ರೇಟ್​​​​​​​​​ ಇಂಡಿಯನ್​​ ಫೆಸ್ಟಿವಲ್​​​ ಸೇಲ್​ 2019‘; ಸದ್ಯದಲ್ಲೇ ಭರ್ಜರಿ ಆಫರ್​ಗಳ ಸುರಿಮಳೆ ಪ್ರಾರಂಭ​
ಅಮೆಜಾನ್ ‘ಗ್ರೇಡ್​​ ಇಂಡಿಯನ್​​ ಫೆಸ್ಟಿವಲ್​​​ ಸೇಲ್​ 2019
  • Share this:
ಇ-ಕಾಮರ್ಸ್​ ದೈತ್ಯ ಅಮೆಜಾನ್​ ತನ್ನ ಗ್ರಾಹಕರಿಗಾಗಿ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ 2019‘ ಅನ್ನು ಆಯೋಜಿಸಲು ಸಿದ್ಧತೆ ಮಾಡಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಗ್ಯಾಜೆಟ್​, ಎಲೆಕ್ಟ್ರಾನಿಕ್ಸ್​, ಗೃಹ ಉಪಯೋಗಿ ಮುಂತಾದ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿದೆ.

ಅಮೆಜಾನ್ ತನ್ನ ವೆಬ್​ಸೈಟ್​ನಲ್ಲಿ ​ ‘ಅಮೆಜಾನ್​​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​‘ ಪೋಸ್ಟರ್​ ಅನ್ನು ಈಗಾಗಲೇ ಹಾಕಿಕೊಂಡಿದ್ದು, ಸೇಲ್​ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಗ್ರಾಹಕರಿಗಾಗಿ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್‘​ನಲ್ಲಿ ಗ್ಯಾಜೆಟ್​​ಗಳ ಮೇಲೆ ವಿಶೇಷ ಆಫರ್​ ಸೇರಿದಂತೆ, ಎಕ್ಸ್​ಚೇಂಜ್​ ಆಫರ್​, ಕ್ಯಾಶ್​ಬ್ಯಾಕ್​ ಆಫರ್​ ಅನ್ನು ನೀಡಲಿದೆ. ಅದರ ಜೊತೆಗೆ ಬ್ಯಾಂಕ್​ ಕೊಡುಗೆ, ನೋ-ಕಾಸ್ಟ್​ ಇಎಮ್​ಐ ಆಫರ್​ ಅನ್ನು ಸಿಗಲಿದೆ.

ಅಮೆಜಾನ್​ ಪ್ರೈಮ್​ ಮೆಂಬರ್​ಶಿಪ್​​  ವಿಶೇಷ ಆಫರ್​​

ಅಮೆಜಾನ್​ ಮೆಂಬರ್​ಶಿಪ್​ ಪಡೆದ ಗ್ರಾಹಕರಿಗಾಗಿ ‘ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್‘​ನಲ್ಲಿ ಕಿಕ್​ ಆಫ್​ ಆಫರ್​ ಸಿಗಲಿದೆ. ಜೊತೆಗೆ ‘ರಾಕ್​-ಬಾಟಂ‘ ಆಫರ್​ ನೀಡಲಿದೆ. ಸ್ಟೇಟ್​ ಬ್ಯಾಂಕ್​ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ ಹೊಂದಿದ ಗ್ರಾಹಕರಿಗಾಗಿ ಶೇ. 10 ರಷ್ಟು ಡಿಸ್ಕೌಂಟ್​ ದೊರೆಯಲಿದೆ.

ಸ್ಮಾರ್ಟ್​ಫೋನ್​ ಮೇಲೆ ವಿಶೇಷ ಆಫರ್​

ಅಮೆಜಾನ್​ ಹಮ್ಮಿಕೊಂಡಿರುವ ಈ ಫೆಸ್ಟಿವಲ್​ನಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ವಿಶೇಷ ರಿಯಾಯಿತಿ ಸಿಗಲಿದೆ..ಮೋಟೋರೊಲಾ, ಒನ್​ಪ್ಲಸ್​​, ಶಿಯೋಮಿ ಸ್ಮಾರ್ಟ್​ಫೋನ್​​ಗಳನ್ನು ಕಡಿಮೆ ಬೆಲೆ ಗ್ರಾಹಕರ ಕೈ ಸೇರಲಿದೆ.
First published:September 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...