Amazon Great Indian Festival: ಅಬ್ಬಾ...ಈ ಬಾರಿ ಇಷ್ಟೆಲ್ಲಾ ಡಿಸ್ಕೌಂಟ್​ ಇದೆಯಾ!

Amazon Great Indian Festival ಸೇಲ್ ಸಮಯದಲ್ಲಿ ಅಮೆಜಾನ್ ಸ್ಮಾರ್ಟ್ ಫೋನ್ (Smartphone), ಸ್ಮಾರ್ಟ್ ಟಿವಿ(Smarttv) , ಲ್ಯಾಪ್ ಟಾಪ್ (Laptop), ಸ್ಮಾರ್ಟ್ ವಾಚ್(Smartwatch), ವೈರ್ ಲೆಸ್ ಇಯರ್ ಬಡ್ಸ್ (Earbvuds) ಮತ್ತು ಇತರ ಎಲ್ಲ ಎಲೆಕ್ಟ್ರಾನಿಕ್ಸ್ ಮೇಲೆ ದೊಡ್ಡ ರಿಯಾಯಿತಿ ಕೊಡುಗೆಗಳನ್ನು ನೀಡಲಿದೆ ಎಂದು ಸದ್ಯ ಹರಿದಾಡುತ್ತಿರುವ ಅಧಿಕೃತ ಟೀಸರ್​ನಲ್ಲಿ ಉಲ್ಲೇಖಿಸಲಾಗಿದೆ.

Amazon Great Indian Festival

Amazon Great Indian Festival

  • Share this:
    ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​​ಕಾರ್ಟ್​​ (Flipkart) ಬಿಗ್​ ಬಿಲಿಯನ್ ಡೇ ಸೇಲ್​ ನಡೆಸಲು ಚಿಂತಿಸಿದೆ. ಮುಂದಿನ ತಿಂಗಳು ಸೇಲ್​ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಇದೀಗ ಅಮೆಜಾನ್‌ (Amazon )ಕೂಡ ವಾರ್ಷಿಕ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟಕ್ಕೆ ಸಿದ್ಧತೆ ಮಾಡಿದ್ದು, ಆದರೆ ಮಾರಾಟದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಮೆಜಾನ್​ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಅಮೆಜಾನ್ ಸ್ಮಾರ್ಟ್ ಫೋನ್ (Smartphone), ಸ್ಮಾರ್ಟ್ ಟಿವಿ(Smarttv) , ಲ್ಯಾಪ್ ಟಾಪ್ (Laptop), ಸ್ಮಾರ್ಟ್ ವಾಚ್(Smartwatch), ವೈರ್ ಲೆಸ್ ಇಯರ್ ಬಡ್ಸ್ (Earbvuds) ಮತ್ತು ಇತರ ಎಲ್ಲ ಎಲೆಕ್ಟ್ರಾನಿಕ್ಸ್ ಮೇಲೆ ದೊಡ್ಡ ರಿಯಾಯಿತಿ ಕೊಡುಗೆಗಳನ್ನು ನೀಡಲಿದೆ ಎಂದು ಸದ್ಯ ಹರಿದಾಡುತ್ತಿರುವ ಅಧಿಕೃತ ಟೀಸರ್​ನಲ್ಲಿ ಉಲ್ಲೇಖಿಸಲಾಗಿದೆ.

    ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021 ದಿನಾಂಕಗಳನ್ನು ಇನ್ನೂ ದೃಢಪಡಿಸಿಲ್ಲ, ಆದರೆ ಸಂಭವನೀಯ ಟೈಮ್‌ಲೈನ್ ಅಕ್ಟೋಬರ್ ಆರಂಭದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಗ್ರೇಟ್ ಇಂಡಿಯನ್ ಸೇಲ್ 2021 ರ ಜೊತೆಗೆ ಕೆಲವು ಬ್ಯಾಂಕ್​​ಗಳು ಕೂಡ ಕೈಜೋಡಿಸಿದ್ದು, ಅದರಲ್ಲಿ HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಹೆಚ್ಚುವರಿ 10 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲು ಅಮೆಜಾನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

    ಅಷ್ಟು ಮಾತ್ರವಲ್ಲದೆ ಉಳಿತಾಯವನ್ನು ಹೆಚ್ಚಿಸುವ ಸಲುವಾಗಿ ಅಮೆಜಾನ್ ಬಳಕೆದಾರರಿಗೆ ‘‘ಅಮೆಜಾನ್ ಪೇ‘‘ ಅವಕಾಶದ ಜೊತೆಗೆ  ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತಿದೆ. ಇದರ ಮೂಲಕ  5% ಕ್ಯಾಶ್ ಬ್ಯಾಕ್ ಮತ್ತು 750 ರೂ. ಬೋನಸ್​ ಸಿಗಲಿದೆ.

    ಬಜಾಜ್ ಫಿನ್‌ಸರ್ವ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬಳಕೆದಾರರಿಗೆ 1 ಲಕ್ಷ ರೂ ವರೆಗಿನ ಕ್ರೆಡಿಟ್ ಮಿತಿಯೊಂದಿಗೆ ನೋ ಕಾಸ್ಟ್ ಇಎಂಐ ಆಯ್ಕೆ ನೀಡಲಿದೆ. ಜೊತೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಭಾಗವಾಗಿ 25 ಸಾವಿರ ರೂ  ವರೆಗಿನ ವಿನಿಮಯ ಕೊಡುಗೆಗಳನ್ನು ನೀಡಲಿದೆ.

    ಪ್ರತಿ ವರ್ಷದಂತೆ, ಅಮೆಜಾನ್ ಪ್ರೈಮ್ ಸದಸ್ಯರು ಒಂದು ದಿನ ಮೊದಲು ಮಾರಾಟಕ್ಕೆ ಪ್ರವೇಶ ಪಡೆಯುತ್ತಾರೆ. ಆದರೆ ಇದೀಗ ಪ್ರೈಮ್​​ ಬಳಕೆದಾರರು ಮೂರು ತಿಂಗಳುಗಳಿಗೆ ರೂ 329 ಮತ್ತು ಒಂದು ವರ್ಷಕ್ಕೆ ರೂ 999 ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

    ಇದನ್ನು ಓದಿ: Katrina Kaif ಫಿಟ್ ಆಗಿರಲು ಜಿಮ್‌ನಲ್ಲಿ ಏನೆಲ್ಲಾ ಕಸರತ್ತು ಮಾಡುತ್ತಾರೆ ನೋಡಿ..

    ಅಮೆಜಾನ್‌ನಲ್ಲಿ ವಿವಿಧ ಎಲೆಕ್ಟ್ರಾನಿಕ್ಸ್ ಪರಿಕರಗಳು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸೇಲ್ ಮಾಡುತ್ತಿದೆ. ಶೇ. 40  ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿರುತ್ತವೆ. ಅಮೆಜಾನ್ ಮಾರಾಟದ ಸಮಯದಲ್ಲಿ ವಿಶೇಷ ಬಿಡುಗಡೆಗಳೊಂದಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ನಲ್ಲಿ ಎಕೋ, ಕಿಂಡಲ್ ಮತ್ತು ಫೈರ್ ಟಿವಿಯಂತಹ ಸಂಪೂರ್ಣ ಶ್ರೇಣಿಯ ಮೇಲೆ ದರ ಕಡಿತ ಮಾರಾಟ ಮತ್ತು ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಕಲ್ಪಿಸಲಿದೆ.

    ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಸ್ಮಾರ್ಟ್ ಟಿವಿಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳಂತಹ ಉತ್ಪನ್ನಗಳು ಭಾರೀ ರಿಯಾಯಿತಿಯೊಂದಿಗೆ ಸಿಗಲಿದೆ.

    ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇಸ್ ಸೇಲ್

    ಬಿಗ್ ಬಿಲಿಯನ್ ಡೇಸ್ ಸೇಲ್​ಗಾಗಿ ಫ್ಲಿಪ್‌ಕಾರ್ಟ್ (Flipkart) ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರರ್ಥ ಗ್ರಾಹಕರು ಈ ಸಮಯದಲ್ಲಿ ತ್ವರಿತ ರಿಯಾಯಿತಿ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ನಿರೀಕ್ಷಿಸಬಹುದು. ಹೆಚ್ಚುವರಿಯಾಗಿ, ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಪೇಟಿಎಂ ವಾಲೆಟ್ ಅಥವಾ ಯುಪಿಐ ವಹಿವಾಟುಗಳ ಮೂಲಕ ಪಾವತಿಸುವಾಗ ಗ್ರಾಹಕರು ಕ್ಯಾಶ್​ಬ್ಯಾಕ್ ಪಡೆಯಬಹುದು ಎಂದು ಫ್ಲಿಪ್ ಕಾರ್ಟ್ ದೃಢಪಡಿಸಿದೆ.

    ಕೆಲವು ಉತ್ಪನ್ನಗಳಲ್ಲಿ ಬಿಗ್ ಬಿಲಿಯನ್ ಡೇಸ್‌ನಲ್ಲಿ ಲಭ್ಯವಿರಲಿದೆ. ಅದರಲ್ಲಿ ರಿಯಲ್​ಮಿ 4K ಗೂಗಲ್ ಟಿವಿ ಸ್ಟಿಕ್, ವಿದ್ಯಾರ್ಥಿಗಳಿಗೆ ಹೊಸ ಲೆನೊವೊ ಕ್ರೋಮ್‌ಬುಕ್‌ಗಳು, ಆಂಡ್ರಾಯ್ಡ್ 11, ನೋಕಿಯಾ ಸ್ಮಾರ್ಟ್ ಟಿವಿಗಳು, ಹೊಸ ಏಸರ್ ಪ್ರಿಡೇಟರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳು, ಹೊಸ ಬೌಲ್ಟ್ TWS, ಫೈರ್ ಬೋಲ್ಟ್, ಹೊಸ ಸ್ಮಾರ್ಟ್ ವಾಚ್‌ಗಳು ಖರೀದಿಗೆ ಇಗಲಿದೆ.

    ಈ ಉತ್ಪನ್ನಗಳ ಹೊರತಾಗಿ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಸೌಂಡ್‌ಬಾರ್‌ಗಳು, ವೈರ್‌ಲೆಸ್ ಹೆಡ್‌ಸೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳ ಮೇಲಿನ ರಿಯಾಯಿತಿ ನೀಡಲಿದೆ. ಇದರ ಜೊತೆಯಲ್ಲಿ, ಫ್ಲಿಪ್‌ಕಾರ್ಟ್ ಆಪಲ್, ಒಪ್ಪೋ ಮತ್ತು ವಿವೋ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆ ನೀಡಲಿದೆ ಎಂದು ಹೇಳಲಾಗುತ್ತಿದೆ.

    ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ಸಮಯದಲ್ಲಿ ಸೌಂಡ್‌ಬಾರ್‌ಗಳು ಶೇಕಡಾ 80 ರಷ್ಟು ರಿಯಾಯಿತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ, ಇಂಟೆಲ್-ಚಾಲಿತ ಲ್ಯಾಪ್‌ಟಾಪ್‌ಗಳು ಶೇಕಡಾ 40 ರಷ್ಟು ರಿಯಾಯಿತಿ, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ವೇರಬಲ್‌ಗಳು ಮತ್ತು ಹೆಚ್ಚಿನವುಗಳ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ನೀಡಲಿದೆ. ಫ್ಲಿಪ್‌ಕಾರ್ಟ್ ಮಾರಾಟವು ಬಿಗ್ ಬಿಲಿಯನ್ ಡೇಸ್ ಸಮಯದಲ್ಲಿ ಕ್ರೇಜಿ ಡೀಲ್‌ಗಳು, ರಶ್ ಅವರ್ ಮತ್ತು ಫ್ಲ್ಯಾಶ್ ಮಾರಾಟಗಳನ್ನು ಗ್ರಾಹಕರಿಗಾಗಿ ನೀಡಲಿದೆ

    ಒಟ್ಟಿನಲ್ಲಿ ಅಕ್ಟೋಬರ್​ ತಿಂಗಳಿನಲ್ಲಿ ಫ್ಲಿಪ್​ಕಾರ್ಡ್​ ಬಿಲಿಯನ್ ಡೇಸ್ ಆಯೋಜಿಸುವ ಸಾಧ್ಯತೆಯಿದೆ. ಸಾಕಷ್ಟು ಗ್ಯಾಜೆಟ್​ಗಳ ಮೇಲೆ ಆಕರ್ಷಕ ರಿಯಾಯಿತಿ ಒದಗಿಸಲಿದೆ. ಸ್ಮಾರ್ಟ್​ಫೋನ್​, ಟಿವಿ, ರೆಫ್ರಿಜರೇಟರ್​, ಫ್ಯಾನ್​, ಗೇಮಿಂಗ್​ ಪ್ಯಾಡ್​, ಲ್ಯಾಪ್​ಟಾಪ್​, ಅಡುಗೆ ಸಾಮಾಗ್ರಿ, ಲೈಫ್​ಸ್ಟೈಲ್​, ಬಟ್ಟೆ ಹೀಗೆ ನಾನಾ ವಸ್ತುಗಳನ್ನು ಕಡಿಮೆ ಬೆಲೆ ಮಾರಾಟ ಮಾಡುವ ಸಾಧ್ತೆಯಿದೆ.
    ಅಷ್ಟು ಮಾತ್ರವಲ್ಲದೆ, ಖರೀದಿಗಾರರಿಗಾಗಿ ಬ್ಯಾಂಕ್​ ಆಫರ್​, ಎಕ್ಸ್​ಚೇಂಜ್, ಬೋನಸ್​, ಸೇರಿದಂತೆ ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ಒದಗಿಸಲಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಬಾರಿ ಫ್ಲಿಪ್​ಕಾರ್ಟ್​ ಈ ಬಾರಿಯೂ ಆಕರ್ಷಕ ಕೊಡುಗೆ ನೀಡುವಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.


    Published by:Harshith AS
    First published: