Amazon Great Indian Festival Sale 2020: ಅಂತು..ಇಂತು..ಬಂತು ಅಮೆಜಾನ್ ಗ್ರೇಟ್​​​​ ಇಂಡಿಯನ್ ಫೆಸ್ಟಿವಲ್​; ಯಾವಾಗ ಪ್ರಾರಂಭ?

Amazon: ಈ ಬಾರಿಯೂ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ ಮತ್ತು ಇಲೆಕ್ಟ್ರಾನಿಕ್ಸ್​ ಉತ್ಪನ್ನಗಳ ಮಾರಾಟದತ್ತ ಹೆಚ್ಚಿನ ಚಿತ್ತ ಹರಿಸಿದೆ

ಅಮೆಜಾನ್ ಗ್ರೇಟ್​​​​ ಇಂಡಿಯನ್ ಫೆಸ್ಟಿವಲ್ 2020

ಅಮೆಜಾನ್ ಗ್ರೇಟ್​​​​ ಇಂಡಿಯನ್ ಫೆಸ್ಟಿವಲ್ 2020

 • Share this:
  ಅಮೆಜಾನ್​ ಪ್ರತಿಬಾರಿ ಗ್ರಾಹಕರಿಗಾಗಿ ಗೇಟ್​ ಇಂಡಿಯನ್​ ಫೆಸ್ಟಿವಲ್​ ಆಯೋಜಿಸುತ್ತಾ ಬಂದಿದೆ. ಅದರಂತೆ ಈ ಬಾರಿ ಕೂಡ ಫೆಸ್ಟಿವಲ್ ಸೇಲ್​​ ಹಮ್ಮಿಕೊಂಡಿದೆ. ಅಕ್ಟೋಬರ್​ 17ರಿಂದ ಈ ಸೇಲ್​ ಪ್ರಾರಂಭವಾಗುವ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​ ನೀಡಲಿದೆ. ಕಳೆದ ಬಾರಿಯೇ ಅಮೆಜಾನ್​ ಗೇಟ್​ ಇಂಡಿಯನ್​ ಸೇಲ್​ ಆಯೋಜಿಸುವುದಾಗಿ ಹೇಳಿಕೊಂಡಿತ್ತು. ಮಾತ್ರವಲ್ಲದೆ,  ಸಾಕಷ್ಟು ಆಫರ್​ಗಳನ್ನು ಗ್ರಾಹಕರಿಗಾಗಿ ಹೊತ್ತು ತರಲಿದೆ ಎಂದಿತ್ತು. ಅದರಂತೆ 2020ನೇ ಸಾಲಿನ ಗ್ರೇಟ್​ ಇಂಡಿಯನ್​ ಫೆಸ್ಟಿವಲ್ ಸೇಲ್​ ದಿನಾಂಕವನ್ನು ಪ್ರಕಟಿಸಿದೆ. ಹಲವಾರು ಆಫರ್​ಗಳನ್ನು ಈ ಸೇಲ್​ ಮೂಲಕ ಗ್ರಾಹಕರಿಗೆ ನೀಡಲಿದೆ.

  ಅಮೆಜಾನ್​​ ಪ್ರೈಮ್​ ಗ್ರಾಹಕರು 24 ಗಂಟೆಗಳ ಮುಂಚಿತವಾಗಿ ಈ ಸೇವೆಯನ್ನು ಪಡೆಯಲಿದ್ದಾರೆ. ಜೊತೆಗೆ ಉಳಿದ ಗ್ರಾಹಕರಿಗಿಂತ ಬೆಸ್ಟ್​ ಡೀಲ್​ ಮತ್ತು ಡಿಸ್ಕೌಂಟ್​ ಆಫರ್​ಗಳನ್ನು ಪಡೆಯಲಿದ್ದಾರೆ.

  ಈ ಬಾರಿಯೂ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ ಮತ್ತು ಇಲೆಕ್ಟ್ರಾನಿಕ್ಸ್​ ಉತ್ಪನ್ನಗಳ ಮಾರಾಟದತ್ತ ಹೆಚ್ಚಿನ ಚಿತ್ತ ಹರಿಸಿದೆ. ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

  ಅಮೆಜಾನ್​ ಗ್ರೇಟ್​​ ಇಂಡಿಯನ್​​​ ಫೆಸ್ಟಿವಲ್​ ಸೇಲ್​​ನಲ್ಲಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗಾಗಿ ಹೆಚ್​ಡಿಏಪ್​ಸಿ ಬ್ಯಾಂಕ್​​ ಮೂಲಕ ಶೇ 10 ಡಿಸ್ಕೌಂಟ್​ ಸಿಗಲಿದೆ. ಅಂದರೆ, ಹೆಚ್​ಡಿಎಫ್​ಸಿ ಬ್ಯಾಂಕ್​ ಕಾರ್ಡ್​ ಬಳಸಿ ಮತ್ತು ಇಎಮ್​ಐ ಮೂಲಕ ಉತ್ಪನ್ನಗಳನ್ನು ಕೊಂಡುಕೊಂಡರೆ ಈ ಸೌಲಭ್ಯ ಪಡೆಯಲಿದ್ದಾರೆ.

  ಇನ್ನು ಗ್ರಾಹಕರಿಗಾಗಿ ಅಡಿಷನಲ್​​​​ ಕ್ಯಾಶ್​​ಬ್ಯಾಕ್​​ ಆಫರ್​​ ಸಿಗಲಿದೆ, ಪ್ರತಿ 1 ಸಾವಿರ ಬೆಲೆಯ ವಸ್ತುಗಳನ್ನು ಖರೀದಿಸಿದರೆ ಅದರ ಮೇಲೆ ಈ ಸೌಲಭ್ಯ ದೊರಕಲಿದೆ.



  ಇತ್ತೀಚೆಗೆ ಬಿಡುಗಡೆಗೊಂಡ ಒನ್​ಪ್ಲಸ್​​, ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​20 ಎಫ್​ಇ ಸ್ಮಾರ್ಟ್​ಫೋನ್​ಗಳು ಕೂಡ ಡಿಸ್ಕೌಂಟ್ ಬೆಲೆಗೆ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ನಲ್ಲಿ ಗ್ರಾಹಕರ ಕೈಸೇರಲಿದೆ.
  Published by:Harshith AS
  First published: