Amazon Freedom Sale: ಸ್ಮಾರ್ಟ್​ಫೋನ್​ಗಳ ಮೇಲೆ ದರ ಕಡಿತ ಮಾರಾಟ

ಒನ್​ಪ್ಲಸ್​ 7 ಪ್ರೋ ಸ್ಮಾರ್ಟ್​ಫೋನ್​ಗಳ ಮೇಲೆ ಡಿಸ್ಕೌಂಟ್​ ಜೊತೆಗೆ ಎಕ್ಸ್​ಚೇಂಜ್ ಮತ್ತು ನೋ ಕಾಸ್ಟ್​​​ EMI​ ಆಫರ್​ ನೀಡಿದೆ.

news18
Updated:August 7, 2019, 3:30 PM IST
Amazon Freedom Sale: ಸ್ಮಾರ್ಟ್​ಫೋನ್​ಗಳ ಮೇಲೆ ದರ ಕಡಿತ ಮಾರಾಟ
ಅಮೆಜಾನ್
news18
Updated: August 7, 2019, 3:30 PM IST
ಪ್ರತಿಷ್ಠಿತ ಆನ್​ಲೈನ್​ ಮಳಿಗೆಯಾದ ಅಮೆಜಾನ್ ತನ್ನ​ ಗ್ರಾಹಕರಿಗಾಗಿ ‘ಫ್ರೀಡಂ​ ಸೇಲ್ 2019‘ ಅನ್ನು ಆಯೋಜಿಸಿದೆ. ​ಈ ಸೇಲ್​ ಆಗಸ್ಟ್​ 8 ರಿಂದ 11 ರವರೆಗೆ ನಡೆಯಲಿದ್ದು, ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​ ನೀಡಿದೆ.

ಅಮೆಜಾನ್​ ‘ಫ್ರೀಡಂ​ 2019 ಸೇಲ್‘​ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ M​40, ಒಪ್ಪೋ K3 ಸ್ಮಾರ್ಟ್​ಫೋನ್​ಗಳ ಮೇಲೆ ಶೇ.40ರಷ್ಟು ಆಫರ್​ ನೀಡುತ್ತಿದೆ. ಜೊತೆಗೆ ಎಕ್ಸ್​ಜೇಂಜ್​ ಡಿಸ್ಕೌಂಟ್​ ಆಫರ್​ ಒದಗಿಸುತ್ತಿದೆ.  SBI ಬ್ಯಾಂಕ್​​ ಕ್ರೆಡಿಟ್​ ಕಾರ್ಡ್​ಗಳ ಮೂಲಕ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುವ ಗ್ರಾಹಕರಿಗಾಗಿ ಶೇ.10 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಅಮೆಜಾನ್​ ಪ್ರೈಮ್​ ಮೆಂಬರ್​ಶಿಪ್​ ಪಡೆದ ಗ್ರಾಹಕರು ಈ ಆಫರ್​ ಅನ್ನು ಆ.7 ರಂದು ಮಧ್ಯಾಹ್ನ 12 ಗಂಟೆಗೆ ಪಡೆಯಬಹುದಾಗಿದೆ.

ಒನ್​ಪ್ಲಸ್​ 7 ಪ್ರೋ ಸ್ಮಾರ್ಟ್​ಫೋನ್​ಗಳ ಮೇಲೆ ಡಿಸ್ಕೌಂಟ್​ ಜೊತೆಗೆ ಎಕ್ಸ್​ಚೇಂಜ್ ಮತ್ತು ನೋ ಕಾಸ್ಟ್​​​ EMI​ ಆಫರ್​ ನೀಡಿದೆ. ಈ ಸ್ಮಾರ್ಟ್​ಫೋನ್ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಸ್ನಾಪ್​​ಡ್ರ್ಯಾಗನ್​​ 855 Socಯಿಂದ ಕಾರ್ಯ ನಿರ್ವಹಿಸುತ್ತಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಂತೆಯೇ, ದೀರ್ಘಕಾಲದ ಬಳಕೆಗಾಗಿ 4,000mAh​ ಬ್ಯಾಟರಿಯನ್ನು ನೀಡಲಾಗಿದೆ. ಈ ಸ್ಮಾರ್ಟ್​ಫೋನ್​ 48,999 ರೂಗೆ ಸಿಗಲಿದೆ.

ಇದನ್ನೂ ಓದಿ: 2020ರಲ್ಲಿ ಬಿಡುಗಡೆಯಾಗಲಿದೆ ಬುಲೆರೋ ಪವರ್​ ಪ್ಲಸ್​: ಏನಿದೆ ವಿಶೇಷತೆ?

ಇನ್ನು ಒನ್​ಪ್ಲಸ್​ 7, ಒಪ್ಪೋ ರೆನೊ, ವಿವೋ V15, ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್​ 9 ಮತ್ತು ಒಪ್ಪೋ F​11 ಪ್ರೊ ಸ್ಮಾರ್ಟ್​ಫೋನ್​ಗಳ ಮೇಲೆ ಎಕ್ಸ್ಟ್ರಾ ಎಕ್ಸ್​​ಚೇಂಜ್​ ಆಫರ್​ ನೀಡಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ, ಸ್ಯಾಮ್​ಸಂಗ್​ ಗ್ಯಾಲಕ್ಸಿ M​40, ಸ್ಯಾಮ್​ಸಂಗ್​ ಗ್ಯಾಲಕ್ಸಿ M​30, ಸ್ಯಾಮ್​ಸಂಗ್​ ಗ್ಯಾಲಕ್ಸಿ M​20, ರೆಡ್​ಮಿ Y3, ಒಪ್ಪೋ A7, ಹಾನರ್​ ವೀವ್​ 20, ಒಪ್ಪೊ K3 ಸ್ಮಾರ್ಟ್​ಗಳ ಮೇಲೆ ದರಕಡಿತ ಮಾರಾಟ ಮಾಡುತ್ತಿದೆ.

ಹೊಸ 'ಹುವಾಯ್​ Y9 ಪ್ರೈಮ್​ 2019' ಸ್ಮಾರ್ಟ್​ಫೋನ್​​​ ಕೂಡ ‘ಫ್ರೀಡಂ​ ಸೇಲ್​‘ನಲ್ಲಿ ಮಾರಾಟವಾಗುತ್ತಿದೆ. ಆ.​​ 1 ರಂದು ಬಿಡುಗಡೆಯಾಗುವ ಈ ಸ್ಮಾರ್ಟ್​ಪೋನ್​ ಮೇಲೆ ಆಕರ್ಷಕ ಆಫರ್​ ಅನ್ನು ನೀಡುತ್ತಿದೆ. ಜೊತೆಗೆ ಪವರ್​ಬ್ಯಾಂಕ್​, ಚಾರ್ಜರ್​ ಮತ್ತ ಕೇಬಲ್​, ಬ್ಲೂಟೂತ್​ ಹೆಡ್​ಸೆಟ್ ಮೇಲೆ​ ಡಿಸ್ಕೌಂಟ್​ ನೀಡಿದೆ.

ಅಮೆಜಾನ್​ ‘ಫ್ರೀಡಂ​​​ ಸೇಲ್‘​ನಲ್ಲಿ ಎಲೆಕ್ಟ್ರಾನಿಕ್ಸ್​​, ಸ್ಮಾರ್ಟ್​ವಾಚ್​, ಕ್ಯಾಮೆರಾಗಳ ಮೇಲೆ ಶೇ.50ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಹೆಡ್​ಫೋನ್​ ಮತ್ತು ಸ್ಪೀಕರ್​ ಮೇಲೆ ಶೇ.60 ಡಿಸ್ಕೌಂಟ್​ ನೀಡಿದೆ. ಟಿವಿ, ಏರ್​ ಕಂಡೀಷನರ್​, ಲ್ಯಾಪ್​ಟಾಪ್​, ರೆಫ್ರಿಜರೇಟರ್​ಗಳ ಮೇಲೂ ಭರ್ಜರಿ ಆಫರ್​ ನೀಡಿದೆ.
Loading...

First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...