news18-kannada Updated:February 21, 2021, 2:57 PM IST
ಅಮೆಜಾನ್
ಇ-ಕಾಮರ್ಸ್ ಮಳಿಗೆಯಾದ ಫ್ಲಿಪ್ಕಾರ್ಟ್ ‘ಕೂಲಿಂಗ್ ಡೇಸ್ ಸೇಲ್’ ಹಮ್ಮಿಕೊಂಡರೆ, ಇತ್ತ ಅಮೆಜಾನ್ ‘ಫ್ಯಾಬ್ ಫೋನ್ಸ್ ಫೆಸ್ಟ್ 2021’ ಹಮ್ಮಿಕೊಂಡಿದೆ. ಫೆಬ್ರವರಿ 22 ರಂದು ಲೈವ್ ಆಗಿ ಸೇಲ್ ನಡೆಸಲಿದೆ. ಟಾಪ್ ಸೆಲ್ಲಿಂಗ್ ಬ್ರಾಂಡ್ಗಳಾದ ಶಿಯೋಮಿ, ರೆಡ್ಮಿ, ಸ್ಯಾಮ್ಸಂಗ್, ಒಪ್ಪೊ ಫೋನ್ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಿದೆ.
ಅಮೆಜಾನ್ ಫ್ಯಾಬ್ ಫೋನ್ ಪೆಸ್ಟ್ 2021 ಮೂಲಕ ಕೆಲವು ಸ್ಮಾರ್ಟ್ಫೋನ್ಗಳ ಮೇಲಿನ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಅಂತೆಯೇ ರೆಡ್ಮಿ ನೋಟ್ 9, ರೆಡ್ಮಿ ನೋಟ್ 9 ಪ್ರೊ, ರೆಡ್ಮಿ 9 ಮೇಲೆ ಡಿಸ್ಕೌಂಟ್ ನೀಡಿದೆ.ಅಮೆಜಾನ್ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5ಜಿ ಮೇಲೆ ಶೇ.9 ರಷ್ಟು ಡಿಸ್ಕೌಂಟ್ ನೀಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಏಪ್ಇ ಮೇಲೆ ಶೇ.38 ರಷ್ಟು ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಇನ್ನು ಗ್ಯಾಲಕ್ಸಿ ಎಸ್21 ಪ್ಲಸ್ 5ಜಿ ಮೇಲೆ ಶೇ.18 ರಷ್ಟು ಡಿಸ್ಕೌಂಟ್ ನೀಡಿದೆ.
ಒಪ್ಪೊ ಸ್ಮಾರ್ಟ್ಫೋನ್ಗಳನ್ನು ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್ನಲ್ಲಿ ಬೆಲೆ ಕಡಿತಗೊಳಿಸಿ ಮಾರಾಟ ಮಾಡಲಿದೆ. ಅಂದಹಾಗೆಯೇ ಒಪ್ಪೊ ಎ31 , ಒಪ್ಪೊ ಎಫ್17 ಪ್ರೊ ಅನ್ನು ಡಿಸ್ಕೌಂಟ್ ಬೆಲೆಗೆ ಸೇಲ್ ಮಾಡಲಿದೆ. ಅಂತೆಯೇ ಐಫೋನ್ 12 ಮಿನಿ ಕೂಡ ಡಿಸ್ಕೌಂಟ್ ಬೆಲೆಗೆ ಗ್ರಾಹಕರ ಕೈಸರಿಲಿದೆ.
ಇತ್ತೀಚೆಗೆ ಅಮೆಜಾನ್ ಆ್ಯಪಲ್ ಡೇ ಸೇಲ್ ಹಮ್ಮಿಕೊಂಡಿತ್ತು. ಹೊಸ ವರ್ಷದಂದು ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್ ಬೆಲೆ ಸ್ಮಾಟ್ಫೋನ್ಗಳನ್ನು ಮಾರಾಟ ಮಾಡಿತ್ತು. ಇದೀಗ ಮತ್ತೆ ಫೆಬ್ರವರಿ ತಿಂಗಳಿನಲ್ಲಿ ಫ್ಯಾಬ್ ಫೋನ್ ಫೆಸ್ಟ್ ಹಮ್ಮಿಕೊಂಡಿದೆ. ಮತ್ತೊಮ್ಮೆ ಗ್ರಾಹಕರಿಗೆ ಸ್ಮಾರ್ಟ್ಫೋನ್ ಕೊಂಡುಕೊಳ್ಳುವ ಅವಕಾಶ ನೀಡುತ್ತಿದೆ
Published by:
Harshith AS
First published:
February 21, 2021, 2:52 PM IST