ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಮೊದಲ ಬಾರಿಗೆ ಡ್ರೋನ್ (Drone) ಮೂಲಕ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಪ್ಲ್ಯಾನ್ ಮಾಡಿರುವುದಾಗಿ ಆನ್ಲೈನ್ ಶಾಪಿಂಗ್ ನ (Online shopping) ಬೃಹತ್ ವೇದಿಕೆ ಅಮೆಜಾನ್ ಹೇಳಿಕೊಂಡಿದೆ. ಅಂತಿಮ ನಿಯಂತ್ರಕ ಅನುಮೋದನೆಗೆ ಬಾಕಿ ಉಳಿದಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷದ ನಂತರ ಮೊದಲ ಬಾರಿಗೆ ಡ್ರೋನ್ ಮೂಲಕ ಪಾರ್ಸೆಲ್‌ಗಳನ್ನು ತಲುಪಿಸಲು ಪ್ರಾರಂಭಿಸುವುದಾಗಿ ಅಮೆಜಾನ್ ತಿಳಿಸಿದೆ. ಕ್ಯಾಲಿಫೋರ್ನಿಯಾದ (California) ಲಾಕ್‌ಫೋರ್ಡ್ ಪಟ್ಟಣದ ಬಳಕೆದಾರರು ಸಾವಿರಾರು ಸರಕುಗಳನ್ನು ತಮ್ಮ ಮನೆಗಳಿಗೆ ಗಾಳಿಯ ಮೂಲಕ ತಲುಪಿಸಲು ಸೈನ್ ಅಪ್ ಮಾಡಲು ಸಾಧ್ಯವಾಗುತ್ತದೆ ಎಂದು ಅಮೆಜಾನ್ ಸಂಸ್ಥೆ ಹೇಳಿದೆ.
ಡ್ರೋನ್ ಮೂಲಕ ವಸ್ತುಗಳ ಡೆಲಿವರಿ
ಶಾಪಿಂಗ್ ದೈತ್ಯ ಅಮೆಜಾನ್ ಡ್ರೋನ್ ಮೂಲಕ ವಸ್ತುಗಳನ್ನು ಡೆಲಿವರಿ ಮಾಡುವ ಪ್ರಸ್ತಾಪವನ್ನು ಕೆಲವು ವರ್ಷಗಳಿಂದ ಮುಂದಿಡುತ್ತಿದೆ. ಆದರೆ ಗ್ರಾಹಕರಿಗೆ ನೀಡಿದ ಭರವಸೆ ಹಲವಾರು ವಿಳಂಬಗಳನ್ನು ಎದುರಿಸುತ್ತಿದ್ದು ಹಿನ್ನಡೆಗಳನ್ನು ಅನುಭವಿಸುತ್ತಲೇ ಇದೆ. ಆದರೆ ಈ ವರ್ಷ ಲಾಕ್‌ಫೋರ್ಡ್ ಪಟ್ಟಣದಲ್ಲಿ ಡ್ರೋನ್ ಸೇವೆಯನ್ನು ಹೆಚ್ಚು ವ್ಯಾಪಕವಾಗಿ ಹೊರತರಲು ಯೋಜಿಸಲಾಗಿದೆ ಎಂದು ಕಂಪನಿ ಹೇಳಿದೆ.
"ಡ್ರೋನ್ ವಿತರಣೆಯ ಭರವಸೆಯು ವೈಜ್ಞಾನಿಕ ಕಾದಂಬರಿಯಂತೆ ಭಾಸವಾಗುತ್ತಿದೆ" ಎಂದು ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದೆ. "ಆದರೆ ಈ ವರ್ಷದ ನಂತರ, ಖಂಡಿತ ಯೋಜನೆ ಸಾಧ್ಯವಾಗುತ್ತದೆ. ಕ್ಯಾಲಿಫೋರ್ನಿಯಾದ ಲಾಕ್‌ಫೋರ್ಡ್‌ನಲ್ಲಿ ಇರುವ ಅಮೆಜಾನ್ ಗ್ರಾಹಕರು ಪ್ರೈಮ್ ಏರ್ ವಿತರಣೆಗಳನ್ನು ಸ್ವೀಕರಿಸುವವರಲ್ಲಿ ಮೊದಲಿಗರಾಗುತ್ತಾರೆ” ಎಂದು ತಿಳಿಸಿದೆ. ಲಾಕ್‌ಫೋರ್ಡ್‌ನಲ್ಲಿ ಯೋಜಿಸುತ್ತಿರುವ ಪ್ರೈಮ್ ಏರ್ ಬಗ್ಗೆ ಗ್ರಾಹಕರ ಪ್ರತಿಕ್ರಿಯೆ ಬಂದ ಬಳಿಕ ನಮಗೆ ಬೇರೆ ಕಡೆಯೂ ಡ್ರೋನ್ ಸೇವೆಯನ್ನು ಸುರಕ್ಷಿತವಾಗಿ ಪೂರೈಸಲು ಸಹಾಯವಾಗುತ್ತದೆ." ಎಂದು ಕಂಪನಿ ಹೇಳಿದೆ.
ಹೇಗೆ ಕಾರ್ಯನಿರ್ವಹಿಸಲಿದೆ ‘ಡ್ರೋನ್’ ಡೆಲಿವರಿ?
ಸುಮಾರು 4,000 ಜನಸಂಖ್ಯೆಯನ್ನು ಹೊಂದಿರುವ ಲಾಕ್‌ಫೋರ್ಡ್‌ನಲ್ಲಿ ಗ್ರಾಹಕರ ಹಿತ್ತಲಿನಲ್ಲಿ ಪಾರ್ಸೆಲ್‌ಗಳನ್ನು ಬಿಡಲು ಡ್ರೋನ್‌ಗಳನ್ನು ಪ್ರೋಗ್ರಾಮ್ ಮಾಡಲಾಗುತ್ತದೆ ಎಂದು ಅಮೆಜಾನ್ ಹೇಳಿದೆ. ಡ್ರೋನ್ ಸಾರಾಗವಾಗಿ ನಿಯಮಿತ ಚೌಕಟ್ಟಿನ ಆಚೆಯು ಹಾರಬಲ್ಲದು, ಇದು ದೃಷ್ಟಿಗೋಚರ ವೀಕ್ಷಕರಿಂದ ನಿಯಂತ್ರಿಸುವುದಿಲ್ಲ ಮತ್ತು ಇತರ ವಿಮಾನಗಳು, ಜನರು, ಸಾಕುಪ್ರಾಣಿಗಳು ಮತ್ತು ಅಡೆತಡೆಗಳನ್ನು ತಪ್ಪಿಸಲು ಸಂವೇದಕಗಳನ್ನು ಡ್ರೋನ್ ನಲ್ಲಿ ಬಳಸಲಾಗುತ್ತಿದೆ. ಒಂದು ಗಂಟೆಯೊಳಗೆ ಸುರಕ್ಷಿತವಾಗಿ ಗ್ರಾಹಕರಿಗೆ ಪ್ಯಾಕೇಜ್‌ಗಳನ್ನು ತಲುಪಿಸುವುದು ಇದರ ಗುರಿಯಾಗಿದೆ ಎಂದು ಚಿಲ್ಲರೆ ವ್ಯಾಪಾರಿಗಳು ಹೇಳಿದರು.
ಇದನ್ನೂ ಓದಿ: 5G in India: 5ಜಿ ತರಂಗ ಹರಾಜಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್: ಕೆಲವೇ ದಿನಗಳಲ್ಲಿ ಹೈಸ್ಪೀಡ್ ಇಂಟರ್ನೆಟ್
ಪ್ರೈಮ್ ಏರ್ ಡೆಲಿವರಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸುತ್ತಾ, ಅಮೆಜಾನ್ ಹೀಗೆ ಹೇಳಿದೆ: "ಒಮ್ಮೆ ಆನ್‌ಬೋರ್ಡ್ ಮಾಡಿದ ನಂತರ, ಲಾಕ್‌ಫೋರ್ಡ್‌ನಲ್ಲಿರುವ ಗ್ರಾಹಕರು ಅಮೆಜಾನ್ ನಲ್ಲಿ ಪ್ರೈಮ್ ಏರ್ ನಲ್ಲಿ ಅವರ ಐಟಂಗಳನ್ನು ನೋಡುತ್ತಾರೆ. ಆ್ಯಪ್ ನಲ್ಲಿ ಆರ್ಡರ್ ಮಾಡುವ ಪ್ರಕ್ರಿಯೆ ಎಂದಿನಂತೆ ಇರುತ್ತದೆ. ಮತ್ತು ಅವರ ಆರ್ಡರ್ ಸಮಯ, ದಿನವನ್ನು ಟ್ರ್ಯಾಕರ್‌ನೊಂದಿಗೆ ಸ್ವೀಕರಿಸುತ್ತಾರೆ ಎಂದಿದೆ.
"ಈ ವಿತರಣೆಗಳಿಗಾಗಿ, ಡ್ರೋನ್ ಗೊತ್ತುಪಡಿಸಿದ ವಿತರಣಾ ಸ್ಥಳಕ್ಕೆ ಹಾರಿಹೋಗುತ್ತದೆ, ಗ್ರಾಹಕರ ಹಿತ್ತಲಿನಲ್ಲಿ ಸುರಕ್ಷಿತವಾಗಿ ಪ್ಯಾಕೇಜ್ ಅನ್ನು ತಲುಪಿಸಿ ಮತ್ತೆ ಹಾರುತ್ತದೆ” ಎಂದು ತಿಳಿಸಿದೆ.
ಈ ಹಿಂದೆಯೂ ಭರವಸೆ ನೀಡಿದ್ದ ಅಮೆಜಾನ್
ಹಿಂದೆ, ಅಮೆಜಾನ್ ತನ್ನ ಪ್ರೈಮ್ ಸದಸ್ಯತ್ವ ಸೇವೆಯ ಸುತ್ತ ತನ್ನ ಪ್ರಚಾರವನ್ನು ಮಾಡಲು ಡ್ರೋನ್ ವಿತರಣೆಯ ಭರವಸೆಯನ್ನು ದಾಳವಾಗಿಸಿಕೊಂಡಿದೆ ಎಂದು ಆರೋಪಗಳು ಕೇಳಿಬಂದಿದ್ದವು. 2013ರಲ್ಲಿ, ಮಾಜಿ ಬಾಸ್ ಮತ್ತು ಸಂಸ್ಥಾಪಕ ಜೆಫ್ ಬೆಜೋಸ್ ಐದು ವರ್ಷಗಳಲ್ಲಿ ಡೆಲಿವರಿ ಡ್ರೋನ್‌ಗಳನ್ನು ಜಾರಿಗೆ ತರುವುದಾಗಿ ವಾಗ್ದಾನ ಮಾಡಿದರು. ಮತ್ತು 2019ರಲ್ಲಿ, ತಿಂಗಳೊಳಗೆ ಗ್ರಾಹಕರಿಗೆ ಡ್ರೋನ್ ಮೂಲಕ ತಲುಪಿಸುವುದಾಗಿ ಅಮೆಜಾನ್ ಹೇಳಿತ್ತು.
ಇದನ್ನೂ ಓದಿ: Prosthetic Leg: ವಿಶಿಷ್ಟವಾದ ಕೃತಕ ಕಾಲುಗಳ ಸಂಶೋಧನೆ ಮಾಡಿದ ಐಐಟಿ ಗುವಾಹಟಿ ಸಂಶೋಧಕರು
ಏಪ್ರಿಲ್‌ನಲ್ಲಿ, ನ್ಯೂಸ್ ಸೈಟ್ ಬ್ಲೂಮ್‌ಬರ್ಗ್‌ನ ವರದಿಯು ಡ್ರೋನ್‌ಗಳ ಮೇಲೆ ಸುರಕ್ಷತಾ ಕಾಳಜಿ ಬಗ್ಗೆ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿ "ಅನ್ವಯವಾಗುವ ಎಲ್ಲಾ ನಿಯಮಗಳಿಗೆ ಅನುಸಾರವಾಗಿ ಡ್ರೋನ್ ಗಳನ್ನು ಪರೀಕ್ಷಿಸಲಾಗಿದೆ” ಎಂದು ಶಾಪಿಂಗ್ ದೈತ್ಯ ತಿಳಿಸಿದೆ.
ಡಿಸೆಂಬರ್ 2016ರಲ್ಲಿ, ಕಂಪನಿಯು ಯುಕೆ ಕೇಂಬ್ರಿಡ್ಜ್ ನಲ್ಲಿ ಯಶಸ್ವಿ ಪ್ರಯೋಗವನ್ನು ನಡೆಸಿತು. ಪ್ರಯೋಗದಲ್ಲಿ 13 ನಿಮಿಷಗಳಲ್ಲಿ ಡ್ರೋನ್ ಮೂಲಕ ಪ್ಯಾಕೇಜ್ ಅನ್ನು ನಿರ್ದಿಷ್ಟ ಸ್ಥಳಕ್ಕೆ ತಲುಪಿಸಲಾಗಿದೆ. ಅಂದಿನಿಂದ ಅಮೆಜಾನ್ ಯುಎಸ್ ಚಿಲ್ಲರೆ ವ್ಯಾಪಾರಿ ವಾಲ್‌ಮಾರ್ಟ್ ಮತ್ತು ಕೊರಿಯರ್ ಸಂಸ್ಥೆಗಳಾದ ಫೆಡ್‌ಎಕ್ಸ್ ಮತ್ತು ಯುಪಿಎಸ್‌ನೊಂದಿಗೆ ಡ್ರೋನ್ ವಿತರಣಾ ಪಾಲುದಾರಿಕೆಯನ್ನು ಪ್ರಯೋಗಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ