ಆ್ಯಪಲ್​ ಬೆನ್ನು ಬಿದ್ದ ಅಮೆಜಾನ್​, 1 ಟ್ರಿಲಿಯನ್​ ಡಾಲರ್​ ಮೌಲ್ಯದತ್ತ ದಾಪುಗಾಲು

nataraj karanth
Updated:August 30, 2018, 1:49 PM IST
ಆ್ಯಪಲ್​ ಬೆನ್ನು ಬಿದ್ದ ಅಮೆಜಾನ್​, 1 ಟ್ರಿಲಿಯನ್​ ಡಾಲರ್​ ಮೌಲ್ಯದತ್ತ ದಾಪುಗಾಲು
  • Share this:
ಐಫೋನ್​ ನಿರ್ಮಾತೃ ಆ್ಯಪಲ್​ ಕಂಪನಿ ಅಮೆರಿಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಟ್ರಿಲಿಯನ್​ ಮುಖಬೆಲೆಯ ಕಂಪನಿ ಎಂದು ಗುರುತಿಸಿಕೊಂಡ ಬೆನ್ನಲ್ಲೇ ಆನ್​ಲೈನ್​ ಧಿಗ್ಗಜ ಅಮೆಜಾನ್​ ಇದೀಗ ಒಂದು ಟ್ರಿಲಿಯನ್​ ತಲುಪುವ ಮತ್ತೊಂದಿ ಕಂಪನಿ ಎಂದು ಗುರುತಿಸಿಕೊಳ್ಳಲು ಉತ್ಸುಕವಾಗಿದೆ.

ಬಂಡವಾಳ ಹೂಡಿಕೆ ಸಂಸ್ಥೆ ಮೋರ್ಗನ್​ ಸ್ಟಾನ್ಲಿ ಪ್ರಕಾರ, ಅಮೇಜಾನ್​.ಕಾಂ ಐಎನ್​ಸಿ ಸಂಸ್ಥೆಯ ಷೇರುಗಳ ಬೆಲೆ ಈಗಾಗಲೇ 1,850 ಡಾಲರ್​ನಿಂದ 2,500 ಡಾಲರ್​ ತಲುಪುವ ಸಾಧ್ಯತೆಗಳಿವೆಯಂತೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಸಂಸ್ಥೆಯ ಷೇರುಗಳ ಮಾರುಕಟ್ಟೆ ಬೆಲೆ 1,998.10 ತಲುಪಿದ್ದು, ಈಗಾಲೇ 971.96 ಬಿಲಿಯನ್​ ಡಾಲಲ್​ ಮುಖಬೆಲೆ ಹೊಂದಿದೆ.  ಹೀಗಾಗಿ ಕೆಲವೇ ದಿನಗಳಲ್ಲಿ ಅಮೆಜಾನ್​ ಕೂಡಾ ಒಂದು ಟ್ರಿಲಿಯನ್​ ಮೌಲ್ಯ ಹೊಂದಿರುವ ಎರಡನೇ ಸಂಸ್ಥೆ ಎಂದು ಅಮೆಜಾನ್​ ಗುರುತಿಸಿಕೊಳ್ಳಲಿದೆ.

ಮೋರ್ಗನ್​ ಸ್ಟಾನ್ಲಿ ಪ್ರಕಾರ ಈಗಿರುವ ಅಂಕಿ ಅಂಶಗಳಿಗೆ ಹೋಲಿಸಿದರೆ ಅಮೆಜಾನ್​ ಅತ್ಯಂತ ವೇಗದಲ್ಲಿ ಮೌಲ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಹೆಚ್ಚಿನ ಆದಾಯ ಮುಂದಿನ ದಿನಗಳಲ್ಲಿ ಗಳಿಸುವ ಅಲ್ಲಾ ಧನಾತ್ಮಕ ರೂಪದಲ್ಲಿ ಅಮೆಜಾನ್ ಸಾಗುತ್ತಿದೆ ಎಂದು ಸ್ಟಾನ್ಲಿ ತನ್ನ ಶೇರುದಾರರಿಗೆ ತಿಳಿಸಿರುವುದನ್ನು ಸಿಎನ್​ಬಿಸಿ ವರದಿ ಮಾಡಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 25 ಬಿಲಿಯನ್​ ಡಾಲರ್​ ಲಾಭದಲ್ಲಿರುವ ಅಮೆಜಾನ್​, ತನ್ನ ಕ್ಲೌಡ್​ ಕಂಪ್ಯೂಟಿಂಗ್​, ಸಬ್​ಸ್ಕ್ರಿಪ್ಷನ್​ ಮತ್ತು ಜಾಹೀರಾತಿನ ಸೇವೆಯಿಂದ 2020ರ ಒಳಗೆ 45 ಬಿಲಿಯನ್​ ಡಾಲರ್​ ಲಾಭ ಗಳಿಸುವ ಸೂಚನೆಯಿದೆ. ಒಂದು ವೇಲೆ ಮಾರ್ಗನ್​ ಸ್ಟಾನ್ಲಿ ಶೇರಿನ ಊಹೆ ನಿಜವಾದರೆ ಅಮೆಜಾನ್​ ತನ್ನ ಮೌಲ್ಯವನ್ನು 1.2 ಟ್ರಿಲಿಯನ್​ ಡಾಲರ್​ಗೆ ತಲುಪಬಹುದು.

ಈ ತಿಂಗಳ ಆರಂಭದಲ್ಲಿ ಆ್ಯಪಲ್​ ಸಂಸ್ಥೆಯ ಮೌಲ್ಯ 1.07 ಟ್ರಿಲಿಯನ್​ ಡಾಲರ್​ ತಲುಪಿತ್ತು, ಐಫೋನ್​ ಸೇರಿದಂತೆ ಸಾಕಷ್ಟು ಆ್ಯಪಲ್​ ಸಾಧನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ವರ್ಷಾರಂಭದಲ್ಲಿ ಬಿಡುಗಡೆಯಾಗಿದ್ದ ಐಫೋನ್​ ಎಕ್ಸ್​ ಮೊಬೈಲ್​ ಅತ್ಯಂತ ಹೆಚ್ಚು ಮಾರಾಟವಾದ ಸಾಧನಗಳಲ್ಲಿ ಒಂದಾಗಿದೆ. ಸ್ಟೀವ್ ಜಾಬ್ಸ್ ಹಾಗೂ iತರೇ ಸಂಗಡಿಗರಿಂದ 1976ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ಆ್ಯಪಲ್​ ಸಂಸ್ಥೆ 1997ರಲ್ಲಿ ದಿವಾಳಿ ಹಂತಕ್ಕೆ ತಲುಪಿತ್ತು. ಆದರೆ ಇದರಿಂದ ಕೆಲವೇ ವರ್ಷಗಳಲ್ಲಿ ಹೊರ ಬಂದ ಸಂಸ್ಥೆ 2011ರ ವೇಳೆಗೆ ಅಮೆರಿಕದಲ್ಲಿ ಅತಿದೊಡ್ಡ ಸಂಸ್ಥೆ ಎನಿಸಿಕೊಂಡಿತು. ಇದೀಗ ಅಮೆರಿಕದ ಮಾರುಕಟ್ಟೆ ಇತಿಹಾಸದಲ್ಲೇ 1 ಟ್ರಿಲಿಯನ್​ ಮೌಲ್ಯ ಹೊಂದಿದ ಸಂಸ್ಥೆ ಎಂದು ಗುರುತಿಸಿಕೊಂಡಿದೆ.
First published: August 30, 2018, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading