HOME » NEWS » Tech » AMAZON APPLE DAYS SALE BEGINS MIDNIGHT TONIGHT HG

Amazon Apple Days Sale: ಐಫೋನ್​ ಪ್ರಿಯರಿಗೆ ಸಿಹಿಸುದ್ದಿ!; ಅಮೆಜಾನ್​​ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್!

Amazon Apple Days Sale: ಆ್ಯಪಲ್​ ಡೇಸ್​​​ ಸೇಲ್​ನಲ್ಲಿ ಐಪ್ಯಾಡ್​ ಸಿರೀಸ್​​ ಮತ್ತು ಆ್ಯಪಲ್​ ವಾಚ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುವ ಮೂಲಕ ಮಾರಾಟ ನಡೆಸಲು ಮುಂದಾಗಿದೆ. ಹಾಗಾಗಿ ಆ್ಯಪಲ್​ ಕಂಪನಿಯ ಉತ್ಪನ್ನಗಳನ್ನು ಖರೀದಿಸಬೇಕೆಂದುಕೊಂಡಿದ್ದ ಗ್ರಾಹಕರಿಗೆ ಅಮೆಜಾನ್​ ಈ ಸೇಲ್​ ಅನ್ನು ಆಯೋಜಿಸುತ್ತಿದೆ.

news18-kannada
Updated:July 18, 2020, 4:57 PM IST
Amazon Apple Days Sale: ಐಫೋನ್​ ಪ್ರಿಯರಿಗೆ ಸಿಹಿಸುದ್ದಿ!; ಅಮೆಜಾನ್​​ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್!
ಐಫೋನ್​
  • Share this:
ಐಫೋನ್​ ಪ್ರಿಯರಿಗಾಗಿ ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ಸಿಹಿ ಸುದ್ದಿಯೊಂದನ್ನು ಹೊತ್ತು ತಂದಿದೆ. ಅಮೆಜಾನ್​ ಗ್ರಾಹಕರಿಗಾಗಿ ‘ಆ್ಯಪಲ್​ ಡೇಸ್​​ ಸೇಲ್’​ ನಡೆಸಲು ಮುಂದಾಗಿದ್ದು, ಐಫೋನ್​ 11 ಸಿರೀಸ್​ ಮತ್ತು ಐಫೋನ್​ 8 ಪ್ಲಸ್​ ಅನ್ನು ಕಡಿಮೆ ಬೆಲೆಗೆ ಮಾರಾಟ ನಡೆಸಲಿದೆ. ಜುಲೈ 25ರ ಮಧ್ಯರಾತ್ರಿಯಿಂದ ಈ ಸೇಲ್​ ಪ್ರಾರಂಭಗೊಳ್ಳಲಿದೆ ಎಂದು ಅಮೆಜಾನ್​ ತಿಳಿಸಿದೆ.

ಆ್ಯಪಲ್​ ಡೇಸ್​​​ ಸೇಲ್​ನಲ್ಲಿ ಐಪ್ಯಾಡ್​ ಸಿರೀಸ್​​ ಮತ್ತು ಆ್ಯಪಲ್​ ವಾಚ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುವ ಮೂಲಕ ಮಾರಾಟ ನಡೆಸಲು ಮುಂದಾಗಿದೆ. ಹಾಗಾಗಿ ಆ್ಯಪಲ್​ ಕಂಪನಿಯ ಉತ್ಪನ್ನಗಳನ್ನು ಖರೀದಿಸಬೇಕೆಂದುಕೊಂಡಿದ್ದ ಗ್ರಾಹಕರಿಗೆ ಅಮೆಜಾನ್​ ಈ ಸೇಲ್​ ಅನ್ನು ಆಯೋಜಿಸುತ್ತಿದೆ.

ಆ್ಯಪಲ್​ ಡೇಸ್​​ ಸೇಲ್​​ ಆಫರ್​:

ಆ್ಯಪಲ್​ ಡೇಸ್​​ ಸೇಲ್​ನಲ್ಲಿ ಐಫೋನ್​ 11 ಮೇಲೆ 5,400 ರೂ ಕಡಿತ ಮಾಡಿ ಮಾರಾಟ ಮಾಡಲಿದೆ. 68,300 ರೂವಿನ ಐಫೋನ್​ 11 ಅನ್ನು 62,900 ರೂ.ಗೆ ಸಿಗಲಿದೆ.

ಐಫೋನ್​​​ 11 ಪ್ರೊ ಮೇಲೆ 4 ಸಾವಿರ ರೂ ಡಿಸ್ಕೌಂಟ್​ ನೀಡುತ್ತಿದೆ. ಎಚ್​ಡಿಎಫ್​ಸಿ ಬ್ಯಾಂಕ್​ ಡೆಬಿಟ್​ ಮತ್ತು ಕ್ರೆಡಿಟ್​​  ಕಾರ್ಡ್​ ಬಳಕೆದಾರರಿಗೆ ಈ ಆಫರ್​ ಸಿಗಲಿದೆ. 1,17,100 ರೂ.ವಿನ ಐಫೋನ್​ 11 ಪ್ರೊ 1,06,600 ರೂ.ಗೆ ಗ್ರಾಹಕರಿಗೆ ಸಿಗಲಿದೆ.

ಐಫೋನ್​​ 8 ಪ್ಲಸ್​ ಮೇಲೆ 500 ರೂ. ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. 41,999 ರೂ.ವಿನ 8 ಪ್ಲಸ್​​ 41,500 ರೂ.ಗೆ ಗ್ರಾಹಕರ ಖರೀದಿಗೆ ಸಿಗಲಿದೆ. ಇದರ ಜೊತೆಗೆ ಐಫೋನ್​ 7 ಕೂಡ ಕಡಿಮೆ ಬೆಲೆಗೆ ಸಿಗಲಿದೆ.

ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಕನ್ನಡದ ಈ ಬಿಗ್​ ಬಾಸ್​ ನಟಿ!
Youtube Video

ಕ್ರೆಡಿಟ್​ ಕಾರ್ಡ್​ ಬಳಕೆದಾರರೇ ಎಚ್ಚರ! ಈ ಮಾಲ್​ವೇರ್​ ನಿಮಗೆ ಗೊತ್ತಿಲ್ಲದೆ ಪಂಗನಾಮ ಹಾಕಬಹುದು!

ಗ್ರಾಹಕರಿಗಾಗಿ ಅಮೆಜಾನ್​​ ನೋ ಕಾಸ್ಟ್​ ಇಎಮ್​ಐ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಎಚ್​ಡಿಎಫ್​ಸಿ ಬ್ಯಾಂಕ್​ ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡು ಬಳಕೆದಾರರಿಗೆ ಹೆಚ್ಚಿನ ಅನುಕೂಲಗಳು ದೊರೆಯಲಿದೆ.
Published by: Harshith AS
First published: July 18, 2020, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories