ಸಾವಿನ ಸುದ್ದಿ ಹೇಳಿದ ಅಮೆಜಾನ್​ ಅಲೆಕ್ಸಾ, ಭಯ ಬಿದ್ದ ಮನೆ ಒಡೆಯ !


Updated:June 28, 2018, 1:19 PM IST
ಸಾವಿನ ಸುದ್ದಿ ಹೇಳಿದ ಅಮೆಜಾನ್​ ಅಲೆಕ್ಸಾ, ಭಯ ಬಿದ್ದ ಮನೆ ಒಡೆಯ !

Updated: June 28, 2018, 1:19 PM IST
ಖಾಸಗಿ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗೆ ಕಳುಹಿಸಿ ಫೇಮಸ್​ ಆಗಿದ್ದ ಅಮೆಜಾನ್​ನ ಕೃತಕ ಬುದ್ಧಿ ಮತ್ತೆಯಬ ಅಲೆಕ್ಸಾ ಸ್ಪೀಕರ್​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಶಾನ್​ ಕಿನ್ನಿಯರ್​ ಬಳಸುತ್ತಿದ್ದ ಸ್ಮಾರ್ಟ್​ಸ್ಪೀಕರ್​ 'ಪ್ರತೀ ಬಾರಿ ಕಣ್ಣು ತೆರೆದಾಗ ಜನರು ಸಾಯುವುದನ್ನೇ ಕಾಣುತ್ತೇನೆ' ಎಂದು ಹೇಳಲು ಶುರು ಮಾಡಿದೆ.

ಈ ಕುರಿತು ಮೆಟ್ರೋ ಯುಎಸ್​ ವರದಿ ಮಾಡಿದ್ದು, ಶಾನ್​ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಂತೆಯೇ ಇದ್ದಕ್ಕಿಂದತೆ ಅಲೆಕ್ಸಾ ಈ ರೀತಿ ವಿಚಿತ್ರ ಹೇಳಿಕೆಯನ್ನು ನೀಡುತ್ತಿತ್ತಂತೆ. ಕೂಡಲೇ ಹೇಳಿಕೆಯನ್ನು ಮತ್ತೊಮ್ಮೆ ಹೇಳುವಂತೆ ಅಲೆಕ್ಸಾ ಬಳಿ ಶಾನ್​ ಕೇಳಿದ್ದಾನೆ. ಈ ವೇಳೆ ಅಲೆಕ್ಸಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಂತೆ.

ಅದೇನೆ ಇರಲಿ ಕಳೆದ ಕೆಲವು ತಿಂಗಳಿನಿಂದ ಅಲೆಕ್ಸಾ ಪ್ರಾಡಕ್ಟ್​ ವಿರುದ್ಧ ಹಲವಾರು ಆರೋಪಗಳು ಕೇಳಿ ಬರತೊಡಗಿವೆ, ಈ ಹಿಂದೆ ಹಲವಾರು ಅಲೆಕ್ಸಾ ಬಳಕೆದಾರರು ತಮ್ಮ ಸ್ಪೀಕರ್​ ಯಾವುದೇ ಕಾರಣವಿಲ್ಲದೆ ತನ್ನಷ್ಟಕ್ಕೆ ತಾನೆ ನಗುತ್ತಿದೆ ಎಂದು ದೂರು ನೀಡಿದ್ದರು. ಕಳೆದ ವರ್ಷದ ಅಂತ್ಯದ ಸಂದರ್ಭದಲ್ಲಿ ಅಲೆಕ್ಸಾ ಸ್ಪೀಕರ್​ ತನ್ನಷ್ಟೆ ತಾನೆ ಪಾರ್ಟಿ ಹಾಡೊಂದನ್ನು ಹಾಡುತ್ತಿರುವುದು ಕೂಡಾ ವರದಿಯಾಗಿತ್ತು.

ಕೆಲ ದಿನಗಳ ಹಿಂದೆ ಮನೆಯಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕೇಳುತ್ತಿದ್ದ ಅಲೆಕ್ಸಾ ಅದನ್ನೆಲ್ಲಾ ರೆಕಾರ್ಡ್​ ಮಾಡಿ ಮನೆ ಮಾಲೀಕನ ಸಹುದ್ಯೋಗಿಗೆ ಕಳುಹಿಸಿದ ಘಟನೆಯೂ ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...