Fitbit Charge 5: ಆನ್‌ಲೈನ್‌ನಲ್ಲಿ ಫಿಟ್ಬಿಟ್ ಚಾರ್ಜ್ 5 ಮೇಲೆ ಸೂಪರ್ ಆಫರ್; ಈಗ್ಲೇ ನೋಡಿ

ಇಂದಿನ ತಂತ್ರಜ್ಞಾನ ಯುಗ ಕೇವಲ ಕೆಲಸಗಳನ್ನಷ್ಟೇ ಸುಲಭಗೊಳಿಸಿಲ್ಲ, ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಅನೇಕ ಲಾಭದಾಯಕ ಪರಿಕರಗಳು ಅಭಿವೃದ್ಧಿಗೊಳ್ಳುವಂತೆ ಮಾಡಿದೆ. ಉದಾಹರಣೆಗೆ ಫಿಟ್ಬಿಟ್ ಎಂಬ ಫಿಟ್ನೆಸ್ ಪರಿಕರವನ್ನೆ ತೆಗೆದುಕೊಳ್ಳಿ.

ಫಿಟ್ಬಿಟ್ ಚಾರ್ಜ್ 5

ಫಿಟ್ಬಿಟ್ ಚಾರ್ಜ್ 5

  • Share this:
ಇಂದಿನ ತಂತ್ರಜ್ಞಾನ (Technology) ಯುಗ ಕೇವಲ ಕೆಲಸಗಳನ್ನಷ್ಟೇ ಸುಲಭಗೊಳಿಸಿಲ್ಲ ವೈಯಕ್ತಿಕ ಸ್ತರದಲ್ಲಿ ಆರೋಗ್ಯಕ್ಕೆ (Health) ಸಂಬಂಧಿಸಿದಂತೆಯೂ ಅನೇಕ ಲಾಭದಾಯಕ ಪರಿಕರಗಳು ಅಭಿವೃದ್ಧಿಗೊಳ್ಳುವಂತೆ ಮಾಡಿದೆ. ಉದಾಹರಣೆಗೆ ಫಿಟ್ಬಿಟ್ (Fitbit) ಎಂಬ ಫಿಟ್ನೆಸ್ ಪರಿಕರವನ್ನೆ ತೆಗೆದುಕೊಳ್ಳಿ. ಪ್ರತಿನಿತ್ಯ ವ್ಯಾಯಾಮ, ಜಾಗಿಂಗ್, ಕಸರತ್ತು ಇತ್ಯಾದಿಗಳನ್ನು ಮಾಡುತ್ತ ತಮ್ಮ ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳುವ ಜನರಿಗೆ ಫಿಟ್ಬಿಟ್ ವಾಚ್ ನಿಜಕ್ಕೂ ಅದ್ಭುತವಾದ ಸಂಗಾತಿ ಎಂದರೆ ತಪ್ಪಿಲ್ಲ. ಅಮೆಜಾನ್ ಈಗ ಫಿಟ್ಬಿಟ್ ಚಾರ್ಜ್ 5 (Fitbit Charge 5) ಮೇಲೆ ಅಮೋಘ ಎನ್ನಬಹುದಾದ 30% ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ಅಡ್ವಾನ್ಸ್ ಫಿಟ್ನೆಸ್ ಹೆಲ್ತ್ ಟ್ರ್ಯಾಕರ್ ಈಗ ಕೈಗೆಟುಕುವಂತಹ 104.49 (8342.40 ರೂ.) ಯುಎಸ್ ಡಾಲರ್ ಮೌಲ್ಯಕ್ಕೆ ಲಭ್ಯವಿದೆ. ಇದರ ಮಾರುಕಟ್ಟೆ ಮೌಲ್ಯವು 149.95 ಡಾಲರ್ ಆಗಿದೆ.

ಫಿಟ್ಬಿಟ್ ಚಾರ್ಜ್ 5 ಬಗ್ಗೆ ಒಂದಿಷ್ಟು ಮಾಹಿತಿ
24x7 ಹೃದಯದ ಆರೋಗ್ಯದ ಮೇಲೆ ನಿಗಾ ಇಡುತ್ತದೆ
ಫಿಟ್ಬಿಟ್ ಚಾರ್ಜ್ 5 ಅಡ್ವಾನ್ಸಡ್ ಹೆಲ್ತ್ ಟ್ರ್ಯಾಕರ್ ಹಲವು ಉಪಯುಕ್ತ ವೈಶಿಷ್ಟ್ಯಗಳಾದಂತಹ ಜಿಪಿಎಸ್, ಒತ್ತಡ ನಿರ್ವಹಣಾ ಟೂಲುಗಳು, ಸ್ಲೀಪ್ ಟ್ರ್ಯಾಕಿಂಗ್, 24x7 ಹೃದಯದ ಆರೋಗ್ಯದ ಮೇಲೆ ನಿಗಾ ಇಡುವುದನ್ನು ಒಳಗೊಂಡಿದೆ.

ವ್ಯಾಯಾಮ ಹಾಗೂ ವಿಶ್ರಾಂತಿ ಪಡೆಯುವುದನ್ನು ತಿಳಿಸುತ್ತದೆ 
ಚಂದ್ರನಂತಹ ಬಿಳಿ ಹಾಗೂ ಹಗುರವಾದ ಬಂಗಾರದ ಬಣ್ಣಗಳಲ್ಲಿ ಈ ಪರಿಕರ ಉಪಲಬ್ಧವಿದ್ದು ಇದನ್ನು ನಿಮ್ಮ ವರ್ಕೌಟ್ ಮಾಡುವ ಶೆಡ್ಯೂಲಿಗೆ ಅನುಗುಣವಾಗಿ ಹೊಂದಿಸಿಕೊಳ್ಳಬಹುದಾಗಿದೆ. ಇದು ನಿಮ್ಮ ದೇಹದ ಸ್ಥಿತಿಯನ್ನು ಅವಲೋಕಿಸಿ ವಿಶ್ಲೇಷಿಸಿ ನೀವು ಯಾವಾಗ ವ್ಯಾಯಾಮ ಮಾಡಲು ಸಜ್ಜಾಗಿದ್ದೀರಿ ಹಾಗೂ ಯಾವಾಗ ವಿಶ್ರಾಂತಿ ಪಡೆಯಬೇಕು ಎಂಬುದನ್ನು ತಿಳಿಸುತ್ತದೆ.

ಒತ್ತಡ ನಿರ್ವಹಣೆ ಗುಣಾತ್ಮಕ ಬದುಕಿಗೆ ಅವಶ್ಯಕ
ಇದರಲ್ಲಿರುವ ಇನ್ನೊಂದು ವೈಶಿಷ್ಟ್ಯ ಒತ್ತಡ ನಿರ್ವಹಣೆ. ಇಂದಿನ ದಿನಮಾನಗಳಲ್ಲಿ ಸಾಕಷ್ಟು ಜನರು ಒತ್ತಡದಿಂದ ಬಳಲುತ್ತಿರುತ್ತಾರೆ. ಒತ್ತಡವು ಕೇವಲ ಮಾನಸಿಕವಾಗಿಯಲ್ಲದೆ ದೈಹಿಕವಾಗಿಯೂ ಶರೀರ ಬಳಲುವಂತೆ ಮಾಡುತ್ತದೆ. ಹಾಗಾಗಿ ಒತ್ತಡ ನಿರ್ವಹಣೆ ಗುಣಾತ್ಮಕ ಬದುಕಿಗೆ ಅವಶ್ಯಕವಾಗಿದ್ದು ಫಿಟ್ಬಿಟ್ ಮೂಲಕ ಸುಲಲಿತವಾಗಿ ನೀವು ಒತ್ತಡವನ್ನು ನಿರ್ವಹಿಸಬಹುದಾಗಿದೆ. ನಿಮಗೆ ನಿತ್ಯವೂ ಈ ಪರಿಕರದ ಮೂಲಕ ನಿಮ್ಮ ಒತ್ತಡದ ಸ್ಕೋರ್ ಲಭ್ಯವಾಗಲಿದೆ. ಈ ಮೂಲಕ ನೀವು ಒತ್ತಡವನ್ನು ಯಾವಾಗ ನಿರ್ವಹಿಸಬಹುದು ಎಂಬುದರ ಬಗ್ಗೆ ಪ್ರಥಮ ಮಾಹಿತಿ ದೊರಕಲಿದೆ.

ಇದನ್ನೂ ಓದಿ:  Smart Phone: ಡ್ಯುಯೆಲ್ ಕ್ಯಾಮೆರಾ ಸೆಟಪ್, 5 ಸಾವಿರ mAh ಬ್ಯಾಟರಿ; ಒಪ್ಪೊ ಪರಿಚಯಿಸಿದೆ A97 ಸ್ಮಾರ್ಟ್​ಫೋನ್

ಅಲ್ಲದೆ ಇದರೊಳಗೆ ಅಡಕವಾಗಿರುವ ಹೆಲ್ತ್ ಮೆಟ್ರಿಕ್ ಡ್ಯಾಶ್ ಬೋರ್ಡ್ ನಿಮ್ಮ ಹೃದಯ ಬಡಿತದ ದರ, Spo2 ಪ್ರಮಾಣ, ಚರ್ಮದ ತಾಪಮಾನ ಮುಂತಾದ ವಿಷಯಗಳನ್ನು ತೋರಿಸುತ್ತದೆ. ಈ ಮೂಲಕ ನೀವು ನಿಮ್ಮನ್ನು ಇನ್ನಷ್ಟು ಫಿಟ್ ಆಗಿ ಇರಿಸಿಕೊಳ್ಳಲು ಇದು ನೆರವಾಗುವುದರಲ್ಲಿ ಸಂಶಯವೇ ಇಲ್ಲ.

ನಿಮ್ಮ ನಡೆಯುವ ವೇಗ, ನಡೆದ ದೂರ, ಎಲ್ಲವನ್ನೂ ತೋರಿಸುತ್ತದೆ
ಇನ್ನೊಂದು ವಿಚಾರವೆಂದರೆ ಮೊಬೈಲ್ ಹೊಂದಿರುವವರು ಜಿಪಿಎಸ್ ಆನ್ ಮಾಡುವ ಮೂಲಕ ಹಾಗೂ ಕೆಲ ಆಪ್ ಬಳಸಿ ಕೆಲ ಗತಿವಿಧಿಗಳಾದ ನಿಮ್ಮ ಚಲನೆ, ದೂರ ಕ್ರಮಿಸಿರುವ ಬಗ್ಗೆ ಮಾಹಿತಿ ಪಡೆಯುತ್ತಾರೆ. ಆದರೆ ಫಿಟ್ಬಿಟ್ ಅನ್ನು ನೀವು ಕೈಯಲ್ಲೇ ಧರಿಸಿರುವುದರಿಂದ ಯಾವ ರೀತಿಯ ಆಪ್ ಅನ್ನು ಬಳಸದೆ ನಿಮ್ಮ ಚಟುವಟಿಕೆಯ ಮೇಲೆ ಧ್ಯಾನವಿರಿಸಿದರೆ ಸಾಕು. ನಿಮ್ಮ ನಡೆಯುವ ವೇಗ, ನಡೆದ ದೂರ, ಎಲ್ಲವನ್ನೂ ತೋರಿಸುತ್ತದೆ.

ಈ ಟ್ರ್ಯಾಕರ್ ಆರು ತಿಂಗಳುಗಳ ಪ್ರೀಮಿಯಂ ಸದಸ್ಯತ್ವವನ್ನು ಹೊಂದಿದ್ದು ಇದರಡಿಯಲ್ಲಿ ನಿಮಗೆ ಇನ್ನಷ್ಟು ವಿವರವಾದ ವೈಯಕ್ತಿಕ ಸ್ತರದಲ್ಲಿ ಆರೋಗ್ಯ ಸಂಬಂಧಿ ಮಾಹಿತಿಗಳು, ವಿಶ್ಲೇಷಣೆ ಎಲ್ಲವೂ ಸಿಗಲಿದೆ. ಆದರೆ ಇದಕ್ಕಾಗಿ ಅಮೆಜಾನ್ ಹೇಳಿರುವಂತೆ ಇದು ಹೊಸ ಹಾಗೂ ಹಿಂತಿರುಗಿ ಬರುವ ಸದಸ್ಯರು ಹಾಗೂ ಮಾನ್ಯ ಮಾಡಲಾದ ಹಣಪಾವತಿ ವಿಧಾನದ ಮೇಲೆ ಮಾತ್ರ ಲಭ್ಯವಿರುತ್ತದೆ.

ಇದನ್ನೂ ಓದಿ: Flipkart Offer: ಬರೀ 749 ರೂಪಾಯಿಗೆ ಖರೀದಿಸಿ ಈ ಸ್ಮಾರ್ಟ್​ಫೋನ್​! ಮತ್ತೆಂದೂ ಸಿಗದು ಇಂಥಾ ಆಫರ್​!

ಈ ಫಿಟ್ಬಿಟ್ ಟ್ರ್ಯಾಕರ್ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ಚಾರ್ಜ್ ಆದ ಬ್ಯಾಟರಿ ಬಾಳಿಕೆಯು ಏಳು ದಿನಗಳ ಕಾಲ ಬರುತ್ತದೆ.

ಫಿಟ್ಬಿಟ್ ಚಾರ್ಜ್ 5 ಕೊಳ್ಳಬೇಕೆ? ಹೀಗೆ ಮಾಡಿ ಖರೀದಿಸಿ


  • ನಿಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ ಮೂಲಕ ಅಮೆಜಾನ್ ಸೈಟ್ ಪ್ರವೇಶಿಸಿ ಫಿಟ್ಬಿಟ್ ಚಾರ್ಜ್ 5 ಹೆಲ್ತ್ ಟ್ರ್ಯಾಕರ್ ಅನ್ನು ಶೋಧಿಸಿ

  • ಕೊಡುಗೆಯ ವಿವರಗಳ ಪುಟದಲ್ಲಿ ನಮೂದಿಸಿದ ಎಲ್ಲ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ ಹಾಗೂ ನಿಮಗೆ ಪ್ರತಿಯೊಂದು ಮನವರಿಕೆಯಾದ ನಂತರ ಖರೀದಿಗಾಗಿ ಸಾಗಿ.

  • ಬೈ ನವ್ ಮೇಲೆ ಕ್ಲಿಕ್ ಮಾಡಿ ಹಣ ಪಾವತಿಸುವ ಮೂಲಕ ಆರ್ಡರ್ ಪ್ಲೇಸ್ ಮಾಡಿ.

Published by:Ashwini Prabhu
First published: