HOME » NEWS » Tech » AMAZFIT BIP U PRO LAUNCHED COULD BE YOUR NEXT AFFORDABLE SMARTWATCH STG HG

ನಿಮ್ಮ ಮುಂದಿನ ಸ್ಮಾರ್ಟ್​ವಾಚ್​ ಕಲೆಕ್ಷನ್​ನಲ್ಲಿರಲಿ ಅಮೇಜ್​ಫಿಟ್​ ಬಿಪ್​ ಯೂ ಪ್ರೊ: ಬೆಲೆ ಕೇವಲ 4,999 ರೂ!

ಅಮೇಜ್​ಫಿಟ್​ ಬಿಪ್ ಯೂ ಪ್ರೊ ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ಅಮೆಜಾನ್​ನಲ್ಲಿ ಈಗಾಗಲೇ ಲಭ್ಯವಿದೆ. ಅಮೇಜ್​ಫಿಟ್​ ಬಿಪ್​ ಯೂ ನ ಡಿಸೈನ್​ನ ಹೋಲಿಕೆಯೂ ಅಮೇಜ್​ಫಿಟ್ ಬಿಪ್​ ಯೂ ಪ್ರೊ ನಲ್ಲಿ ಕಂಡು ಬರುತ್ತದೆ. ಡಿವೈಸ್​ನ ಬಲಭಾಗದಲ್ಲಿ ಡಿಜಿಟಲ್ ಡಯಲ್ ಆಯ್ಕೆ ಇದೆ.

news18-kannada
Updated:April 9, 2021, 8:44 AM IST
ನಿಮ್ಮ ಮುಂದಿನ ಸ್ಮಾರ್ಟ್​ವಾಚ್​ ಕಲೆಕ್ಷನ್​ನಲ್ಲಿರಲಿ ಅಮೇಜ್​ಫಿಟ್​ ಬಿಪ್​ ಯೂ ಪ್ರೊ: ಬೆಲೆ ಕೇವಲ 4,999 ರೂ!
ಅಮೇಜ್​ಫಿಟ್​ ವಾಚ್​
  • Share this:
ಅಮೇಜ್​ಫಿಟ್​ ಬಿಪ್​ ಯೂ ಕಡಿಮೆ ಬೆಲೆಯಲ್ಲಿ ಕೈಗೆಟಕುವ ವಾಚ್​ ಪ್ರಿಯರ ಆಯ್ಕೆಯಾಗಿದೆ. ಆದರೆ ಕೆಲವೊಂದು ಫೀಚರ್​ಗಳ ಕೊರತೆಯಿಂದ ಹೊರ ಬರುವ ಉದ್ದೇಶದಿಂದ ಈಗ ಅಮೇಜ್​ಫಿಟ್​ ಬಿಪ್ ಯೂ ಪ್ರೊ ವರ್ಷನ್ ಮಾರುಕಟ್ಟೆಗೆ ಬಂದಿದೆ. ಉತ್ಕೃಷ್ಟ ದರ್ಜೆಯ ಸ್ಕ್ರೀನ್​ ಇದ್ದು, ಇನ್​ ಕಮಿಂಗ್ ಕಾಲ್ಸ್, ಮೆಸೆಜ್ ಮತ್ತು ರಿಮೈಂಡರ್​ಗಳ ಸ್ಪಷ್ಟ ಫೀಚರ್​ ಇದೆ. ಅಮೇಜ್​ಫಿಟ್​ ಬಜೆಟ್ ಸ್ಮಾರ್ಟ್​ ವಾಚ್​ ಬಿಪ್​ ಸರಣಿಯ ಹೊಸ ವಾಚ್ ಆಗಿದೆ. ಬಿಪ್​ ಪ್ರೊ ಸಾಕಷ್ಟು ಹೊಸ ಫೀಚರ್​ಗಳನ್ನು ಒಳಗೊಂಡಿದ್ದು, ಇದರ ಹಿಂದಿನ ವರ್ಷನ್ ಬಿಪ್ ಯೂ ಗಿಂತ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಅಮೇಜ್​​ಫಿಟ್ ಬಿಪ್​ ಯೂ ಪ್ರೊ ಸ್ಮಾರ್ಟ್​ ವಾಚ್​ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಕಳೆದ ವರ್ಷ ಲಾಂಚ್​ ಆದ ಅಮೇಜ್​​ಫಿಟ್ ಬಿಪ್ ಯೂ ಕೇವಲ 3,499 ರೂ ಗೆ ಲಭ್ಯವಿತ್ತು. ಈಗ ಅಮೇಜ್​ಫಿಟ್​ ಬಿಪ್ ಯೂ ಪ್ರೊ ಲಾಂಚ್​ ಆಗಿದ್ದು ಎಲ್ಲರ ಗಮನ ಸೆಳೆದಿದೆ.

ಹ್ಯುಯಾಮಿ ಅವರ ಅಮೇಜ್​ಫಿಟ್ ಬಿಪ್ ಯೂ ಪ್ರೊ ಫೀಚರ್ಸ್ ಈ ರೀತಿ ಇದೆ. 1.43 ಡಿಸ್ಪ್ಲೇ, 230mAh ಬ್ಯಾಟರಿ, ಜಿಪಿಎಸ್, ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್​ ಮತ್ತು 5 ATM ವಾಟರ್ ರೆಸಿಸ್ಟೆನ್ಸಿ ಪವರ್ ಇದೆ. ಅಮೇಜ್​ಫಿಟ್​ ಬಿಪ್ ಯೂ ಪ್ರೊ ಭಾರತದಲ್ಲಿ 4,999 ರೂಗಳಿಗೆ ಲಭ್ಯವಿದೆ. ಅಮೇಜ್​ಫಿಟ್ ಬಿಪ್ ಯು ಪ್ರೊ ಹ್ಯುಯಾಮಿ ಅವರ ಮಿಡ್​ ರೇಂಜ್ ವಾಚ್ ಆಗಿದೆ. ರಿಯಲ್​ ಮಿ ವಾಚ್ ಎಸ್, ಹಾನರ್ ವಾಚ್ ಇಎಸ್ ಮತ್ತು ಎಂಐ ಬ್ಯಾಂಡ್​ 6 ವಾಚ್​ಗಳೊಂದಿಗೆ ಸ್ಪರ್ಧೆಯಲ್ಲಿದೆ.

ಅಮೇಜ್​ಫಿಟ್​ ಬಿಪ್ ಯೂ ಪ್ರೊ ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ಅಮೆಜಾನ್​ನಲ್ಲಿ ಈಗಾಗಲೇ ಲಭ್ಯವಿದೆ. ಅಮೇಜ್​ಫಿಟ್​ ಬಿಪ್​ ಯೂ ನ ಡಿಸೈನ್​ನ ಹೋಲಿಕೆಯೂ ಅಮೇಜ್​ಫಿಟ್ ಬಿಪ್​ ಯೂ ಪ್ರೊ ನಲ್ಲಿ ಕಂಡು ಬರುತ್ತದೆ. ಡಿವೈಸ್​ನ ಬಲಭಾಗದಲ್ಲಿ ಡಿಜಿಟಲ್ ಡಯಲ್ ಆಯ್ಕೆ ಇದೆ.

ಅಮೇಜ್​ಫಿಟ್​ ಬಿಪ್ ಯೂ ಪ್ರೊ ನಲ್ಲಿ 1.43 ಇಂಚಿನ ಐಪಿಎಸ್​​ LCD ಡಿಸ್ಪ್ಲೇ ಇದೆ. 2.5 ಗ್ಲಾಸ್ ಮತ್ತು ಆ್ಯಂಟಿ ಫಿಂಗರ್​ ಪ್ರಿಂಟ್ ಕೋಟಿಂಗ್ ಇದೆ. 320 x 302 ಪಿಕ್ಸೆಲ್​ನಷ್ಟು ಎಲ್​ಸಿಡಿ ಪ್ಯಾನಿಂಗ್ ಅತ್ಯುತ್ತಮ ರೆಸಲ್ಯೂಷನ್ ಹೊಂದಿದೆ. ಹಾರ್ಟ್​ ರೇಟ್​ ಮಾನಿಟರಿಂಗ್​ಗಾಗಿ ಆಪ್ಟಿಕಲ್ ಹಾರ್ಟ್​ ರೇಟ್ ಸೆನ್ಸಾರ್​, ಬ್ಲಡ್ ಆಕ್ಸಿಜನ್(SpO2) ಸೆನ್ಸಾರ್, ಟ್ರೈ-ಆಕ್ಸಿಸ್ ಆಕ್ಸಿಲರೊಮೀಟರ್, ಟ್ರೈ-ಆಕ್ಸಿಸ್ ಗೈರೊ ಮತ್ತು ಜಿಯೋಮಿಟ್ರಿಕ್ ಸೆನ್ಸಾರ್ ಒಳಗೊಂಡಿದೆ. ನಾರ್ವೆಯ ಪೈ ಆರೋಗ್ಯ ಸಂಶೋಧನೆಯ ಆಧಾರದ ಮೇಲೆ ಪಿಎಐ ಮೌಲ್ಯಮಾಪನ ವ್ಯವಸ್ಥೆ ಜೊತೆಗೆ ವಿಶೇಷ ಅಲ್ಗಾರಿದಮ್ ಬಳಸಿ ಸಿದ್ಧ ಮಾಡಲಾಗಿದೆ.

ಅಮೇಜ್​ಫಿಟ್​ ಬಿಪ್​ ಪ್ರೊ ನ ಪ್ರಮುಖ ಬದಲಾವಣೆ ಎಂದರೆ, ಜಿಪಿಎಸ್ ಮತ್ತು ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್. ಈ ಕಾರಣದಿಂದ ನೀವು ವಾಕಿಂಗ್ ಅಥವಾ ಜಾಗಿಂಗ್ ಹೋಗುವಾಗ ನಿಮ್ಮ ಸ್ಮಾರ್ಟ್​ ಫೋನ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.

ಇದಿಷ್ಟೇ ಅಲ್ಲದೇ ಅಮೇಜ್​ಫಿಟ್​ ಬಿಪ್​ ಪ್ರೊ ನಿಮ್ಮ ನಿದ್ದೆಯನ್ನು ಮಾನಿಟರ್ ಮಾಡುತ್ತದೆ, ಒತ್ತಡವನ್ನು ಟ್ರ್ಯಾಕ್ ಮಾಡುತ್ತದೆ, ಉಸಿರಾಟದ ವ್ಯಾಯಾಮ ಮತ್ತು ಹೆಣ್ಣು ಮಕ್ಕಳಿಗೆ ಪೀರಿಯಡ್ಸ್ ಸೈಕಲ್ ಟ್ರ್ಯಾಕ್​ ಮಾಡಲು ನೆರವಾಗುತ್ತದೆ. ಇದಿಷ್ಟೇ ಅಲ್ಲದೇ 60 ಕ್ಕೂ ಹೆಚ್ಚು ಕ್ರೀಡಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ.

ಇದರ ಜೊತೆಗೆ ಸ್ಮಾರ್ಟ್​ ವಾಚ್​ 50 ಕ್ಕೂ ಅಧಿಕ ಸೈಡ್​ಲೋಡ್​ ಫೋಟೋಸ್​ ಜೊತೆಗೆ ವಾಚ್​ ಫೇಸ್ ಆಗಿ ಬಳಸುವ ಸೌಲಭ್ಯ ಹೊಂದಿದೆ. ಅಷ್ಟೇ ಅಲ್ಲದೇ ಈ ವಾಚ್ ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು 5ATM ರೆಸಿಸ್ಟೆನ್ಸ್ ಪವರ್ ಹೊಂದಿದೆ.ಅಮೇಜ್​ಫಿಟ್​ ಬಿಪ್ ಪ್ರೊ ಜೊತೆಗೆ ನಿಮ್ಮ ಫೋನ್ ನೋಟಿಫಿಕೇಷನ್, ಮ್ಯೂಸಿಕ್ ಕಂಟ್ರೋಲ್, ದೂರದಿಂದಲೇ ಪಿಕ್ಚರ್ ಕ್ಲಿಕ್ ಮಾಡಬಹುದು. ಜೊತೆಗೆ ನಿಮ್ಮ ಫೋನ್ ಕೂಡ ಹುಡುಕಬಹುದು. ಇಂತಹ ಹತ್ತಾರು ಆಯ್ಕೆಗಳು ಈ ವಾಚ್​ನಲ್ಲಿದೆ.

ಅಮೇಜ್​ಫಿಟ್​ ಬಿಪ್​ ಯೂ ಪ್ರೊ ನಲ್ಲಿ 5.0 ಬ್ಲೂ ಟೂತ್ ಮತ್ತು 230 mAh ಬ್ಯಾಟರಿಯೂ ಇದೆ. 2 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕು. ಸಾಮಾನ್ಯ ಬಳಕೆಯಲ್ಲಿ 9 ದಿನಗಳವರೆಗೂ ಬ್ಯಾಟರಿ ಸಾಮರ್ಥ್ಯವಿದ್ದು, ಹೆಚ್ಚಿನ ಬಳಕೆಯಲ್ಲಿ 5 ದಿನ ಬ್ಯಾಟರಿ ಸಾಮರ್ಥ್ಯವಿದೆ ಎಂದು ಫೀಚರ್ಸ್​ನಲ್ಲಿ ತಿಳಿಸಲಾಗಿದೆ.
Published by: Harshith AS
First published: April 9, 2021, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories