• Home
  • »
  • News
  • »
  • tech
  • »
  • Amazefit Pop 2: ಕೇವಲ 3299 ರೂಪಾಯಿಗೆ ಅಮೇಜ್​​​ಫಿಟ್​ ಸ್ಮಾರ್ಟ್​ವಾಚ್! ನವೆಂಬರ್​ 22 ರಿಂದ ಬಿಡುಗಡೆ

Amazefit Pop 2: ಕೇವಲ 3299 ರೂಪಾಯಿಗೆ ಅಮೇಜ್​​​ಫಿಟ್​ ಸ್ಮಾರ್ಟ್​ವಾಚ್! ನವೆಂಬರ್​ 22 ರಿಂದ ಬಿಡುಗಡೆ

ಅಮೇಜ್​​ಫಿಟ್​ ಪಾಪ್ 2 ಸ್ಮಾರ್ಟ್​ವಾಚ್

ಅಮೇಜ್​​ಫಿಟ್​ ಪಾಪ್ 2 ಸ್ಮಾರ್ಟ್​ವಾಚ್

ಈ ಸ್ಮಾರ್ಟ್​​​ವಾಚ್ ತನ್ನ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮಮೂಡಿಸಲಿದ್ದು. ಈ ಬಾರಿ ಅಮೇಜ್​​ಫಿಟ್​ ಕಂಪನಿಯಿಂದ ಬಿಡುಗಡೆಯಾಗುತ್ತಿರುವ ಹೊಸ ವರ್ಷನ್​ನ ಸ್ಮಾರ್ಟ್​ವಾಚ್​ ಆಗಿದೆ. ಇದು ಅಮೇಜ್​​​ಫಿಟ್​ ಪಾಪ್ 2 ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ವಾಚ್​​ನ ಬೇಡಿಕೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ  ಅದಕ್ಕೆ ತಕ್ಕಂತೆ ಕಂಪನಿಗಳೂ ಕೂಡ ಕಾಲಕಾಲಕ್ಕೆ ಹೊಸ ಫೀಚರ್ಸ್​​ಗಳೊಂದಿಗೆ ಸ್ಮಾರ್ಟ್​ವಾಚ್​​ಗಳನ್ನು ಲಾಂಚ್ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗೆ ಅಮೇಜ್​​ಫಿಟ್​​ (Amazfit) ಕಂಪನಿಯು ಭಾರತದಲ್ಲಿ ಅಮೇಜ್​ಫಿಟ್​​ ಪಾಪ್ 2 (Amazfit Pop 2) ಹೆಸರಿನ ಮತ್ತೊಂದು ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ತನ್ನ ಪ್ರತಿಸ್ಪರ್ಧಿ ಕಂಪನಿಗಳಾದ ನಾಯ್ಸ್, ಫೈರ್ ಬೋಲ್ಟ್ ಮತ್ತು ಬಾಟ್‌ಗಳಿಂದ ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ವಾಚ್ ಹೊಸ ಮಾದರಿಗಳೊಂದಿಗೆ ಸ್ಪರ್ಧಿಸಲು ಇದು ಮಾರುಕಟ್ಟೆಗೆ ತಂದಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳನ್ನು ನೋಡೋಣ.


    ಈ ಸ್ಮಾರ್ಟ್​​​ವಾಚ್ ತನ್ನ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮಮೂಡಿಸಲಿದ್ದು. ಈ ಬಾರಿ ಅಮೇಜ್​​ಫಿಟ್​ ಕಂಪನಿಯಿಂದ ಬಿಡುಗಡೆಯಾಗುತ್ತಿರುವ ಹೊಸ ವರ್ಷನ್​ನ ಸ್ಮಾರ್ಟ್​ವಾಚ್​ ಆಗಿದೆ. ಇದು ಅಮೇಜ್​​​ಫಿಟ್​ ಪಾಪ್ 2 ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


    ಅಮೇಜ್​ಫಿಟ್​ ಪಾಪ್​ 2 ಬೆಲೆ:


    ಈ ಸ್ಮಾರ್ಟ್ ವಾಚ್ ಅನ್ನು ಭಾರತೀಯ ಮಾರುಕಟ್ಟೆಗಳಲ್ಲಿ 3999 ರೂಪಾಯಿಯ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಆದರೆ ಬಿಡುಗಡೆಯ ಕೊಡುಗೆಯ ಭಾಗವಾಗಿ ಈ ಸ್ಮಾರ್ಟ್ ವಾಚ್ ಅನ್ನು 3299 ರೂಪಾಯಿಗೆ ಖರೀದಿಸಬಹುದು. ಇದು ಕಪ್ಪು ಮತ್ತು ಗುಲಾಬಿಯಂತಹ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಪ್ರಸ್ತುತ, ನೀವು ಸುಮಾರು 700 ರೂಪಾಯಿಯ ರಿಯಾಯಿತಿಯೊಂದಿಗೆ ಈ ಸ್ಮಾರ್ಟ್ ವಾಚ್ ಅನ್ನು ಪಡೆಯಬಹುದಾಗಿದೆ.


    ಇದನ್ನೂ ಓದಿ: RIP ಅಂತ ಟ್ವೀಟ್ ಮಾಡಿದ ಎಲಾನ್ ಮಸ್ಕ್! ಮುಗಿದೇ ಹೋಯ್ತಾ ಟ್ವಿಟರ್ ಕಥೆ?


    ಸ್ಪೆಷಲ್ ಫೀಚರ್ಸ್​:


    ಸ್ಮಾರ್ಟ್ ವಾಚ್ ಅನ್ನು ಮೆಟಾಲಿಕ್ ಮಿಡಲ್ ಫ್ರೇಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು 150 ಕ್ಕೂ ಹೆಚ್ಚು ವಾಚ್‌ಫೇಸ್‌ಗಳೊಂದಿಗೆ 1.78-ಇಂಚಿನ HD AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ರಕ್ತ-ಆಮ್ಲಜನಕ (spO2) ಮಾಪನ, ಹೃದಯ ಬಡಿತ, 100+ ಸ್ಪೋರ್ಟ್ ಮೋಡ್ ಟ್ರ್ಯಾಕಿಂಗ್‌ನಂತಹ ಬಹಳಷ್ಟು ಫೀಚರ್ಸ್​​ ಅನ್ನು  ಹೊಂದಿದೆ. ಇದು 24 ಗಂಟೆಗಳ ಕಾಲ ಹೃದಯ ಬಡಿತದ ಮೇಲ್ವಿಚಾರಣೆಯನ್ನು ಸಹ ಮಾಡುತ್ತಿರುತ್ತದೆ.


    ಅಮೇಜ್​ಫಿಟ್​ ಸ್ಮಾರ್ಟ್​​ವಾಚ್


    ಮೈಕ್, ಸ್ಪೀಕರ್ ಇನ್ ಬಿಲ್ಟ್ ಆಗಿ..


    ಈ ಸ್ಮಾರ್ಟ್‌ವಾಚ್‌ನಲ್ಲಿ ಮೈಕ್ ಮತ್ತು ಸ್ಪೀಕರ್ ಕೂಡ ಆ್ಯಡ್ ಮಾಡಲಾಗಿದೆ. ಇದರೊಂದಿಗೆ, ಬಳಕೆದಾರರು ಸ್ಮಾರ್ಟ್ ವಾಚ್ ಮೂಲಕ ನೇರವಾಗಿ ಕರೆಗಳನ್ನು ಸ್ವೀಕರಿಸಬಹುದು. ನಿರ್ದಿಷ್ಟ ಅಪ್ಲಿಕೇಶನ್‌ಗಳು, SMS ಗೆ ಸಂಬಂಧಿಸಿದ ಸೂಚನೆಗಳನ್ನು ವೈಬ್ರೇಶನ್​ ಫೀಚರ್ ಮೂಲಕ ಪಡೆಯಬಹುದು. ಈ ಸ್ಮಾರ್ಟ್ ವಾಚ್ ರಿಮೋಟ್ ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್‌ಗಳು, ವಾಯ್ಸ್ ಅಸಿಸ್ಟೆಂಟ್‌ನಂತಹ ಎಲ್ಲಾ ಸಾಮಾನ್ಯ ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ.


    IP68 ವಾಟರ್​​ ಪ್ರೂಫ್ ಆಗಿದೆ:


    ಇನ್ನು ಈ ಸ್ಮಾರ್ಟ್​​ವಾಚ್​ನಲ್ಲಿ 270 mAh ಯುನಿಟ್ ಮೂಲಕ ಬಳಕೆದಾರರು 10 ದಿನಗಳ ಬ್ಯಾಟರಿ ಸಾಮರ್ಥ್ಯವನ್ನು ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಮಾರ್ಟ್ ವಾಚ್ IP68 ವಾಟರ್​​ ಪ್ರೂಫ್ ರೇಟಿಂಗ್ ಅನ್ನು ಹೊಂದಿದೆ. ಇದು ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕಿಸಲು ಬ್ಲೂಟೂತ್ 5.2 ಕನೆಕ್ಟಿವಿಟಿ ಸೆಟ್ಟಿಂಗ್ಸ್​ ಅನ್ನು ಕೂಡ ಆ್ಯಡ್​ ಮಅಡಲಾಗಿದೆ.


    ನವೆಂಬರ್ 22 ರಿಂದ ಮಾರಾಟ.


    ಭಾರತದಲ್ಲಿ Amazfit ಸ್ಮಾರ್ಟ್ ವಾಚ್‌ಗಳು ಅಮೆಜಾನ್ ಮೂಲಕ ಮಾರಾಟ ಮಾಡಲಾಗಿದೆ ಕಂಪನಿಯು ಬಿಡುಗಡೆ ಮಾಡುವ ಎಲ್ಲಾ ಮಾದರಿಗಳನ್ನು ಈ ಪೋರ್ಟಲ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ ಇತ್ತೀಚಿನ Amazfit ಪಾಪ್ 2 Amazfit ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಭಾರತದಲ್ಲಿ ಇದರ ಮಾರಾಟ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

    Published by:Prajwal B
    First published: