ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿದೆ. ಆಂತರಿಕ ಮತ್ತು ಬಾಹ್ಯ ಭದ್ರತೆಯ ದೃಷ್ಠಿಯಿಂದ ಭಾರತ ಸರ್ಕಾರ ಈ ಕೆಲಸವನ್ನು ಮಾಡಿದೆ. ಹಾಗಾಗಿ ಭಾರತದಲ್ಲಿ ಜನಪ್ರಿಯತೆಗಳಿಸಿದ್ದ ಚೀನಾ ಮೂಲಕ ಹಲವಾರು ಆ್ಯಪ್ಗಳ ಮೇಲೆ ನಿಷೇಧ ಹೇರಿದೆ. ಆದರೆ ಇದೀಗ ಚೀನಾದ ಅಲಿಬಾಬ ಒಡೆತನದ ಯುಸಿ ಬ್ರೌಸರ್ ಭಾರತ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಭಾರತೀಯ ಉದ್ಯೋಗಿಗಳಿಗೆ ಅಲಿಬಾಬ ಕಂಪನಿ ಇ-ಮೇಲ್ ಕಳುಹಿಸಿದ್ದು, ಕೇಂದ್ರ ಸರ್ಕಾರದ ನಿಯಮದಂತೆ ಯುಸಿ ಬ್ರೌಸರ್ ಆ್ಯಪ್ ತನ್ನ ಕಾರ್ಯವನ್ನು ಸ್ಥಗಿತ ಮಾಡಿದೆ. ಹಾಗಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಹೇಳಿದೆ.
ಭಾರತದಲ್ಲಿ ಅನೇಕ ಉದ್ಯೋಗಿಗಳು ಯುಸಿ ಬ್ರೌಸರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಆ್ಯಪ್ ನಿಷೇಧವಾದ ಹಿನ್ನಲೆಯಲ್ಲಿ ಕೆಲಸಗಾರರನ್ನು ವಜಾ ಮಾಡಿದೆ.
ಉದ್ಯೋಗಿಗಳಿಗೆ ಪತ್ರ ಬರೆದ ಕ್ಲಬ್ ಫ್ಯಾಕ್ಟರಿ:
ಕ್ಲಬ್ ಫ್ಯಾಕ್ಟರಿ ಆನ್ಲೈನ್ ಇ ಕಾಮರ್ಸ್ ಮಳಿಗೆಯಾಗಿದ್ದು, ದೇಶದಲ್ಲಿ ಹಲವು ಉತ್ಪನ್ನಗಳನ್ನು ತನ್ನ ವೆಬ್ಸೈಟ್ ಮೂಲಕ ಮಾರಾಟ ಮಾಡುತ್ತಿತ್ತು. ಆದರೀಗ ಕ್ಲಬ್ ಫ್ಯಾಕ್ಟರಿ ಆ್ಯಪ್ ನಿಷೇಧವಾದ ಕಾರಣ ದೇಶದಲ್ಲಿನ ವಿವಿಧ ರಿಟೇಲ್, ಹೋಲ್ಸೇಲ್ ಮಾರಾಟಗಾರರಿಗೆ ಕೊಡಬೇಕಾಗಿದ್ದ ಬಾಕಿ ಮೊತ್ತವನ್ನು ನೀಡದೆ ಸುಮ್ಮನಾಗಿದೆ.
ಈ ಬಗ್ಗೆ ಭಾರತದಲ್ಲಿನ ಸುಮಾರು 30 ಸಾವಿರ ಮಾರಾಟಗಾರರಿಗೆ ಪತ್ರವನ್ನು ಬರೆದಿದ್ದು, ದೇಶದಲ್ಲಿ ಕ್ಲಬ್ ಫ್ಯಾಕ್ಟರಿ ಆ್ಯಪ್ ಮತ್ತು ವೆಬ್ಸೈಟ್ ಮೇಲಿನ ನಿರ್ಬಂಧ ತೆಗೆಯುವವರೆಗೆ ಯಾವುದೇ ಬಾಕಿ ಪಾವತಿ ಮಾಡುವುದಿಲ್ಲ ಎಂದು ಹೇಳಿದೆ.
ಭಾರತದ ಚೀನಾದ 59 ಆ್ಯಪ್ಗಳ ಕಿತ್ತೆಸೆದ ನಂತರ ತಂತ್ರಜ್ಞಾನ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಚೀನಾದ ಕೆಲವು ಆ್ಯಪ್ಗಳನ್ನು ತೆಗೆದು ಹಾಕಿದೆ. ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತಿದೆ ಎಂಬ ಕಾರಣಕ್ಕೆ ಈ ಕೆಲಸವನ್ನು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ