ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಅಮಿತಾಭ್ ನಟನೆ ಮಾತ್ರವಲ್ಲದೆ, ಅವರ ಧ್ವನಿ ಕೂಡ ಅಷ್ಟೇ ಜನಪ್ರಿಯ. ಖಾಸಗಿ ಜಾಹೀರಾತು, ಸರ್ಕಾರಿ ಜಾಹೀರಾತು, ಸಿನಿಮಾ ಹೀಗೆ ಅನೇಕ ಸಂಸ್ಥೆಗಳು ಅಮಿತಾಭ್ ಅವರ ಧ್ವನಿಗಾಗಿ ಹಿಂದೆ ಬೀಳುತ್ತಾರೆ. ಕಳೆದ ಜೂನ್ ತಿಂಗಳಿನಲ್ಲಿ ಟೈಕ್ ದೈತ್ಯ ಗೂಗಲ್ ಕೂಡ ಅವರ ಧ್ವನಿಯ ಹಿಂದೆ ಬಿದ್ದಿತ್ತು. ಗೂಗಲ್ ಮ್ಯಾಪ್ನಲ್ಲಿ ಅಮಿತಾಭ್ ಧ್ವನಿಯ ಪರಿಚಯಿಸಲು ಮುಂದಾಗಿದೆ. ಅದರಂತೆ ಇದೀಗ ಅಮೆಜಾನ್ ಅಲೆಕ್ಸಾ ಕೂಡ ಬಿಗ್ ಬಿ ಧ್ವನಿಯ ಹಿಂದೆ ಬಿದ್ದಿದೆ.
ಹೌದು. ಅಲೆಕ್ಸಾ ಸಂಸ್ಥೆ ಅಮಿತಾಬ್ ಬಚ್ಚನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅವರ ಧ್ವನಿಯನ್ನು ಅಲೆಕ್ಸಾದಲ್ಲಿ ಅಳವಡಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ಅಮಿತಾಭ್ ಬಚ್ಚನ್ ಅವರು ಅಲೆಕ್ಸಾಗೆ ಧ್ವನಿ ನೀಡಿದ ಮೊದಲ ಭಾರತಯ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜೋಕ್ಸ್, ಹವಾಮಾನ, ಸಲಹೆ. ಶಾಯರಿ (ಉರ್ದು) ಪ್ರೇರಣ ಮಾತುಗಳಿಗಾಗಿ ಅಮಿತಾಭ್ ಧ್ವನಿಯನ್ನು ಅಲೆಕ್ಸಾ ಬಳಸಿಕೊಂಡಿದೆ. 2021ಕ್ಕೆ ಅಲೆಕ್ಸಾದಲ್ಲಿ ಬಿಗ್ಬಿ ಧ್ವನಿ ಕೇಳಿಬರಲಿದೆ .
ಈ ಬಗ್ಗೆ ಮೇಲ್ ಮೂಲಕ ಹೇಳಿಕೆ ನೀಡಿರುವ ಅಮಿತಾಭ್ ಬಚ್ಚನ್ ‘ಚಲನಚಿತ್ರ, ಟಿವಿ ಕಾರ್ಯಕ್ರಮ, ಪಾಡ್ಕಾಸ್ಟ್ ಮುಂತಾದವುಗಳಲ್ಲಿ ಧ್ವನಿ ನೀಡಿದ್ದೇನೆ. ಇದೀಗ ಅಮೆಜಾನ್ ಅಲೆಕ್ಸಾದಲ್ಲಿ ಧ್ವನಿ ನೀಡುತ್ತಿದ್ದೇನೆ. ಅದನ್ನು ಕೇಳಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.
ಅಮೆಜಾನ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುವ ಪುನೀರ್ಶ್ ಕುಮಾರ್ ‘ ಬಾಲಿವುಡ್ನಲ್ಲಿ ಅಮಿತಾಭ್ ಅವರ ಧ್ವನಿ ಭಾರೀ ಜನಪ್ರಿಯತೆ ಪಡೆದಿದೆ. ಅಲೆಕ್ಸಾ ಅವರ ಧ್ವನಿಯನ್ನು ಬಳಸುವುದರಿಂದ ಗ್ರಾಹಕರಿಗೆ ಆನಂದ ಸಿಗಬಗಲಿದೆ’ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ